ಮುಂದಿನ ವರ್ಷ ಇಲ್ಲೇ ಸಿಗೋಣ ಬೈ... ಸೀರೆ ಧರಿಸಿ ಬೈಕ್‌ನಲ್ಲಿ ವಿಶ್ವ ಸುತ್ತಲು ಹೊರಟ ಮಹಿಳೆ
ಪುಣೆ ಮೂಲದ ಮಹಿಳೆಯೊಬ್ಬರು ದೇಶ ಸಂಸ್ಕೃತಿಯನ್ನು ಸಾರುತ್ತಾ ದೊಡ್ಡ ಮಹತ್ವಾಕಾಂಕ್ಷೆಯೊಂದಿಗೆ ವಿಶ್ವ ಪರ್ಯಟಣೆಗೆ ಹೊರಟಿದ್ದಾರೆ. ಪುಣೆಯ ಚಿಂಚ್‌ವಾಡ್‌ನ ಸಾಮಾಜಿಕ ಉದ್ಯಮಿ ರಮಿಲಾ ಲಟ್ಪ್ಟೆ ಎಂಬಾಕೆ ಭಾರತದಿಂದ ತನ್ನ ಮೋಟಾರ್‌ಸೈಕಲ್‌ನಲ್ಲಿ 20 ರಿಂದ 30 ದೇಶಗಳನ್ನು ಸಂಚರಿಸುವ ಮೂಲಕ 1,00,000 ಕಿ.ಮೀ ಪ್ರಯಾಣಿಸಲಿದ್ದಾರೆ ಎಂದು ಇತ್ತೀಚೆಗೆ ವರದಿಯಾಗಿದೆ.
ಇದು ಸ್ವತಃ ಒಂದು ದೊಡ್ಡ ಪ್ರಯಾಣವಾಗಿದ್ದು, ಅವರು ಸಾಂಪ್ರದಾಯಿಕ ಮರಾಠಿ ಸೀರೆಯನ್ನು ಧರಿಸುವ ಮೂಲಕ ಈ ಪರ್ಯಟಣೆ ಮಾಡಲು ಯೋಜಿಸಿದ್ದಾರೆ. ಮಾರ್ಚ್ 9, 2023 ರಂದು ಸಂಜೆ 4:30 ಕ್ಕೆ ಮುಂಬೈನ ಗೇಟ್‌ವೇ ಆಫ್ ಇಂಡಿಯಾದಿಂದ ನಿರ್ಗಮಿಸುವುದಾಗಿ ಲತ್ಪ್ಟೆ ಬಹಿರಂಗಪಡಿಸಿದ್ದಾರೆ. ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಶಾಸಕರಾದ ಮಹೇಶ್ ಲಾಂಜೆಯಂತಹ ಪ್ರಮುಖರು ಧ್ವಜಾರೋಹಣದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಒಂದು ವರ್ಷದ ನಂತರ ನಿಖರವಾಗಿ ಮಾರ್ಚ್ 8, 2024 ರಂದು ಭಾರತಕ್ಕೆ ಮರಳುವುದಾಗಿ ಅವರು ಹೇಳಿದ್ದಾರೆ.

ಲಟ್ಪ್ಟೆ ಅವರ ಪ್ರಕಾರ ಈ ಪ್ರವಾಸದ ಹಿಂದಿನ ಕಾರಣವೆಂದರೆ ಅವರು ರಾಜ್ಯದ ವಿಶಿಷ್ಟ ಉತ್ಪನ್ನಗಳು ಮತ್ತು ಕೊಡುಗೆಗಳನ್ನು ಹೈಲೈಟ್ ಮಾಡುವ ಮೂಲಕ ಮಹಾರಾಷ್ಟ್ರ ಸಂಸ್ಕೃತಿಯ ವಿವಿಧ ಅಂಶಗಳನ್ನು ಉತ್ತೇಜಿಸಲು ಯೋಜಿಸಿದ್ದಾರೆ. ಪ್ರಯಾಣದ ಜೊತೆಗೆ, ಅವರು ಭೇಟಿ ನೀಡುವ ಪ್ರತಿಯೊಂದು ಸ್ಥಳದಲ್ಲಿ ಭಾರತೀಯ ಸಂಸ್ಕೃತಿಯನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಗುರಿಯನ್ನು ಹೊಂದಿದ್ದಾರೆ. ಈ ಪ್ರವಾಸದ ಪ್ರಮುಖ ಹೈಲೈಟ್ ಅವರು ಸೀರೆಯನ್ನು ಧರಿಸಿ ದೇಶಗಳಾದ್ಯಂತ ತನ್ನ ಮೋಟಾರ್‌ಸೈಕಲ್ ಅನ್ನು ಓಡಿಸಲಿದ್ದಾರೆ.
ಮೋಟಾರು ಸೈಕಲ್‌ಗಳನ್ನು ಸತತವಾಗಿ ಓಡಿಸುವುದು ಅಪಾಯಕಾರಿ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಅದರಲ್ಲೂ ಸರಿಯಾದ ರೈಡಿಂಗ್ ಸೂಟ್ ಧರಿಸದೆ ಸೀರೆಯಲ್ಲಿ ಸವಾರಿ ಮಾಡುವುದರಿಂದ ಜೀವಕ್ಕೆ ಹಾನಿ ಉಂಟುಮಾಡುವ ಸಾಧ್ಯೆತೆಯಿದೆ. ರೈಡಿಂಗ್ ಸೂಟ್‌ಗಳು ನಮ್ಮ ದೇಹಕ್ಕೆ ಉತ್ತಮ ಸಾಧ್ಯವಾದ ರಕ್ಷಣೆಯನ್ನು ಒದಗಿಸುತ್ತವೆ. ಅಪಘಾತ ಯಾವಾಗ ಸಂಭವಿಸುತ್ತದೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ. ಹಾಗಾಗಿ ಸೀರೆಯ ಬದಲು ಅನುಕೂಲಕರವಾದ ರೈಡಿಂಗ್ ಸೂಟ್‌ನೊಂದಿಗೆ ಇಲ್ಲಿಂದ ತೆರಳುವುದು ಉತ್ತಮ.

ಅತಿವೇಗದ ಚಾಲನೆ, ಪ್ರಜ್ಞಾಹೀನತೆ ಅಥವಾ ಕೆಟ್ಟ ಸಂದರ್ಭದಲ್ಲಿ ನಿಯಂತ್ರಣವನ್ನು ಕಳೆದುಕೊಂಡು ಬೀಳುವ ಸಂದರ್ಭಗಳಲ್ಲಿ ರೈಡಿಂಗ್ ಸೂಟ್‌ಗಳು ಹೆಚ್ಚು ರಕ್ಷಣೆ ನೀಡುತ್ತವೆ. ರಕ್ಷಣಾತ್ಮಕ ಸೂಟ್ ಬಳಸುವುದರಿಂದ ನೀವು ಪಾರಾಗಿ ಮನೆಗೆ ಹೋಗುತ್ತೀರಿ ಎಂದು ಹೇಳುತ್ತಿಲ್ಲ, ಆದರೆ ಇದು ಅಪಘಾತದ ತೀವ್ರತೆಯನ್ನು ಕಡಿಮೆ ಮಾಡುತ್ತದೆ. ಭಾರತೀಯ ಸಂಸ್ಕೃತಿಯನ್ನು ಪ್ರಚಾರ ಮಾಡುವುದು ಮಹತ್ವಾಕಾಂಕ್ಷೆಯ ಕೆಲಸವಾಗಿದೆ. ಆದರೆ ನಿಮ್ಮ ಜೀವದ ಬಗ್ಗೆಯೂ ಕಾಳಜಿ ವಹಿಸುವುದು ಪ್ರಮುಖ ಆಧ್ಯೆತೆಯಾಗಿದೆ.
ಸಾಮಾನ್ಯವಾಗಿ ನಮ್ಮ ಭಾರತದಿಂದ ಬೈಕ್ ಮೂಲಕ ವಿಶ್ವ ಪರ್ಯಟಣೆ ಮಾಡಿದವರು ಕೆಲವರೇ ಇದ್ದರೇ, ವಿದೇಶಿಗರು ಹಲವು ಬಾರಿ ವಿಶ್ವ ಪರ್ಯಟಣೆ ಮೂಲಕ ಈ ಹಿಂದೆ ಭಾರತಕ್ಕೂ ಭೇಟಿ ನೀಡಿದ್ದಾರೆ. ಆದರೆ ಮಹಿಳೆಯರು ಈ ರೀತಿ ಬೈಕಿನಲ್ಲಿ ವಿಶ್ವ ಪರ್ಯಟಣೆ ಮಾಡಿರುವವರು ಕಡಿಮೆ. ಒಂದು ಲೆಕ್ಕದಲ್ಲಿ ಯಾರೂ ಮಾಡಿಲ್ಲ ಅಂತಲೂ ಹೇಳಬಹುದು. ಆದರೆ ಲಟ್ಪ್ಟೆ ಅವರ ಈ ಸವಾರಿ ಯಶಸ್ವಿಯಾಗಿ ಮುಗಿದು ಭಾರತಕ್ಕೆ ಹಿಂದಿರುಗಲಿ ಎಂದು ಆಶಿಸೋಣ.
ಉಳಿದಂತೆ ನಮ್ಮ ಸಣ್ಣ ಪುಟ್ಟ ಪ್ರಯಾಣಗಳಿಗೆ ನಾವು ರೈಡಿಂಗ್ ಸೂಟ್ ಧರಿಸುತ್ತೇವೆ. ಆದರೆ ಈ ಮಹಿಳೆ ವಿಶ್ವ ಪರ್ಯಟಣೆ ಮಾಡುತ್ತಿರುವುದರಿಂದ ಎಲ್ಲಾ ಮುನ್ನೆಚ್ಚರಿಕೆಗಳ ಬಗ್ಗೆ ಅರಿವಿರಬೇಕು. ದೇಶದ K2K (ಕಾಶ್ಮೀರದಿಂದ ಕನ್ಯಾಕುಮಾರಿ) ಯಂತಹ ದ್ವಿಚಕ್ರ ವಾಹಣ ಪ್ರಯಾಣಗಳನ್ನು ಕೇಳಿದ್ದೇವೆ. ಮಳೆ, ಗಾಳಿ, ಮರಳು ಗಾಳಿಯಾಂತಹ ಎಷ್ಟೋ ಸವಾಲುಗಳು ಎದುರಾಗುವುದನ್ನು ರೈಡರ್‌ಗಳು ಈ ಹಿಂದೆ ಹಂಚಿಕೊಂಡಿದ್ದಾರೆ. ಇಂತಹ ಸವಾಲುಗಳನ್ನು ಎದುರಿಸಲು ಲಟ್ಪ್ಟೆ ಅವರು ಮಾನಸಿಕ ಹಾಗೂ ಶಾರೀರಿಕವಾಗಿ ಸಿದ್ಧರಾಗಿದ್ದಾರೆ ಎಂದು ಹೇಳೀಕೊಂಡಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications