ಆಮ್ ಆದ್ಮಿ ನೇತಾರರಿಗೆ ಸಿಕ್ತು ಟೊಯೊಟಾ ಇನ್ನೋವಾ ಕಾರು

Written By:

ವಾಸಕ್ಕಾಗಿ ಸರಕಾರಿ ಬಂಗಲೆ, ಅಧಿಕೃತ ಕಾರು ಬೇಡ ಹೀಗೆಲ್ಲ ಪ್ರಭಾವಿ ಮಾತುಗಳನ್ನು ಆಡುತ್ತಿದ್ದ ಆಮ್ ಆದ್ಮಿ ಪಕ್ಷ ನೇತಾರರ ಸರಳ ಧೋರಣೆ ಈಗ ಎಲ್ಲಿ ಹಳ್ಳ ಹಿಡಿದಿದೆ ನೋಡಿ? ಅಧಿಕಾರ ಗದ್ದುಗೇರಿದರೆ ತಾವು ಕಾಂಗ್ರೆಸ್‌ಗಿಂತ ಭಿನ್ನವೇನಲ್ಲ ಎಂಬುದನ್ನು ಸಾಬೀತುಪಡಿಸಿರುವ ಆಮ್ ಆದ್ಮಿ ಪಕ್ಷದ ನಾಯಕರೂ ಸಹ ಇದೀಗ ಸರಕಾರಿ ನಿವಾಸ ಹಾಗೂ ಕಾರು ಬಳಕೆಗೆ ಒಪ್ಪಿಗೆ ಸೂಚಿಸಿದ್ದಾರೆ.

ಪ್ರತಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿರುವುದರ ಹಿನ್ನಲೆಯಲ್ಲಿ ಐದು ಬೆಡ್ ರೂಂಗಳ ಮನೆಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರೋಧ ವ್ಯಕ್ತಪಡಿಸಿರಬಹುದು. ಆದರೆ ಅಧಿಕೃತ ಪ್ರವಾಸಕ್ಕಾಗಿ ಸಚಿವರುಗಳು ಟೊಯೊಟಾ ಇನ್ನೋವಾ ಕಾರುಗಳನ್ನು ಬಳಕೆ ಮಾಡಲಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಅರವಿಂದ್ ಕೇಜ್ರಿವಾಲ್, ನಾವು ಯಾವತ್ತೂ ಅಧಿಕೃತ ಕಾರು ಬಳಕೆ ಮಾಡಲ್ಲ ಎಂದು ಹೇಳಿಲ್ಲ. ಬದಲಾಗಿ ಕಾರಿನಲ್ಲಿ ಕೆಂಪು ದೀಪಗಳನ್ನು ಉರಿಸಲ್ಲ ಎಂದಿದ್ದಾರೆ. ದೆಹಲಿ ವಿಧಾನಸಭೆಯಲ್ಲಿ ವಿಶ್ವಾಸಮತ ಗಳಿಸಿದ ಒಂದು ದಿನದ ಬೆನ್ನಲ್ಲೇ ಆಮ್ ಆದ್ಮಿಯಿಂದ ಇಂತಹದೊಂದು ನಿಲುವು ಕಂಡುಬಂದಿದೆ.

ದೆಹಲಿ ವಿಧಾನಸಭೆಯ ಮೊದಲ ದಿನದಲ್ಲಿ ಮೆಟ್ರೋ ರೈಲು, ಆಟೋ ರಿಕ್ಷಾಗಳಂತಹ ಸಾರ್ವಜನಿಕ ಸಾರಿಗೆಗಳನ್ನು ಬಳಕೆ ಮಾಡಿದ್ದ ಶಾಸಕರು ಮಾಧ್ಯಮಗಳನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದರು. ಇನ್ನೊಬ್ಬರು ಸಚಿವರ ಪ್ರಕಾರ ನಾವು ವಿಐಪಿ ಸಂಪ್ರಾದಾಯಕ್ಕೆ ಕೊನೆ ಹಾಡಿದ್ದೇವೆ. ಆದರೆ ಕಾರುಗಳನ್ನು ಬಳಕೆ ಮಾಡುವುದರಲ್ಲಿ ಯಾವುದೇ ತಪ್ಪೇನಿಲ್ಲ ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

ಆಮ್ ಆದ್ಮಿಗೆ ಸಿಕ್ತು ಟೊಯೊಟಾ ಇನ್ನೋವಾ ಕಾರು

ಒಟ್ಟಿನಲ್ಲಿ ಭ್ರಷ್ಟಾಚಾರ ವಿರೋಧಿ ಪಕ್ಷವೆಂಬ ಹೆಸರಿನಲ್ಲಿ ರೂಪುಗೊಂಡಿರುವ ಆಮ್ ಆದ್ಮಿ ನಿಲುವಿನಲ್ಲಿ ಕೊಂಚ ಬದಲಾವಣೆಯುಂಟಾಗಿರುವುದು ಬೆಂಬಲಿಗರಿರಲ್ಲಿ ಬೇಸರ ತರಿಸಿದೆ. ಮುಂದಿನ ದಿನಗಳಲ್ಲಿ ಇಂತಹುದೇ ನೀತಿ ಮುಂದುವರಿದ್ದಲ್ಲಿ ಕಾಂಗ್ರೆಸ್‌ನ ಅದೇ ಪರಿಸ್ಥಿತಿ ಎದುರಿಸಬೇಕಾಗಿತ್ತು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

ಆಮ್ ಆದ್ಮಿಗೆ ಸಿಕ್ತು ಟೊಯೊಟಾ ಇನ್ನೋವಾ ಕಾರು

ಅಷ್ಟಕ್ಕೂ ಸಚಿವರು ತಮ್ಮ ಅಧಿಕೃತ ಪ್ರವಾಸಕ್ಕಾಗಿ ಇನ್ನೋವಾ ಕಾರನ್ನು ಬಳಸುವುದರಲ್ಲಿ ಯಾವುದೇ ತಪ್ಪೇನಿಲ್ಲ ಎಂದು ಪಕ್ಷದ ನೇತಾರರು ಸಮರ್ಥಿಸಿಕೊಂಡಿದ್ದಾರೆ. ಇದು ಇತರ ರಾಜ್ಯಗಳನ್ನು ಗಮನಿಸಿದರೆ ಖರ್ಚು ವೆಚ್ಚಗಳಲ್ಲಿ ಸ್ವಲ್ಪ ಕಡಿಮೆಯೇ ಆಗಿದೆ.

ಆಮ್ ಆದ್ಮಿಗೆ ಸಿಕ್ತು ಟೊಯೊಟಾ ಇನ್ನೋವಾ ಕಾರು

ಟೊಯೊಟಾ ಪಾಲಿಗೆ ಅತಿ ಹೆಚ್ಚು ಯಶಸ್ಸನ್ನು ತಂದಿತ್ತಿರುವ ಇನ್ನೋವಾ ಮಲ್ಟಿ ಪರ್ಪಸ್ ವೆಹಿಕಲ್ ಬೆಂಗಳೂರು ಎಕ್ಸ್ ಶೋ ರೂಂ ದರ 12.68 ಲಕ್ಷ ರು.ಗಳಿಂದ 15.26 ಲಕ್ಷ ರು.ಗಳ ವರೆಗಿದೆ. ಇದು ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳಲ್ಲಿ ದೊರಕುತ್ತದೆ.

ಆಮ್ ಆದ್ಮಿಗೆ ಸಿಕ್ತು ಟೊಯೊಟಾ ಇನ್ನೋವಾ ಕಾರು

ಹೊರಂಗಿಣ ವಿನ್ಯಾಸ, ಒಳಮೈ ಸ್ಥಳಾವಕಾಶ ಹಾಗೂ ಫಿಟ್ ಆಂಡ್ ಫಿನಿಶ್‌ಗೆ ಹೆಸರುವಾಸಿಯಾಗಿರುವ ಇನ್ನೋವಾ ರಾಜಕಾರಣಿಗಳ ನೆಚ್ಚಿನ ಕಾರಾಗಿದೆ. ಇದು ಇಂಡಿಯನ್ ಫ್ಯಾಮಿಲಿ ಕಾರೆಂದೇ ಪ್ರಖ್ಯಾತಿ ಗಿಟ್ಟಿಸಿಕೊಂಡಿದೆ.

ಆಮ್ ಆದ್ಮಿಗೆ ಸಿಕ್ತು ಟೊಯೊಟಾ ಇನ್ನೋವಾ ಕಾರು

ನಿಮ್ಮ ಮಾಹಿತಿಗಾಗಿ, ಟೊಯೊಟಾ ಇನ್ನೋವಾ ದೇಶದ ಮಾರುಕಟ್ಟೆಗೆ ಮೊದಲ ಬಾರಿಗೆ 2005ನೇ ಇಸವಿಯಲ್ಲಿ ಪರಿಚಯವಾಗಿತ್ತು. ಇದರ ಪೆಟ್ರೋಲ್ ವೆರಿಯಂಟ್ ವಿವಿಟಿ-I ಮತ್ತು ಡೀಸೆಲ್ ಎಂಜಿನ್ ಡಿ4ಡಿ ಎಂಜಿನ್ ಪಡೆದುಕೊಂಡಿದೆ.

ಆಮ್ ಆದ್ಮಿಗೆ ಸಿಕ್ತು ಟೊಯೊಟಾ ಇನ್ನೋವಾ ಕಾರು

ಟೊಯೊಟಾ ಇನ್ನೋವಾ ಅತ್ಯುತ್ತಮ ಚಾಲನಾ ಅನುಭವದೊಂದಿಗೆ ಹಿಂದುಗಡೆ ಪ್ರಯಾಣಿಕರಿಗೂ ಆರಾಮದಾಯಕ ಪ್ರಯಾಣ ಖಾತ್ರಿಪಡಿಸುತ್ತದೆ. ಗರಿಷ್ಠ ಗ್ರೌಂಡ್ ಕ್ಲಿಯರನ್ಸ್ ಇದರ ಯಶಸ್ಸಿಗೆ ಕಾರಣವಾಗಿತ್ತು.

ಆಮ್ ಆದ್ಮಿಗೆ ಸಿಕ್ತು ಟೊಯೊಟಾ ಇನ್ನೋವಾ ಕಾರು

ಇನ್ನು ಎಬಿಎಸ್‌ಗಳಂತಹ ಸುರಕ್ಷಾ ವೈಶಿಷ್ಟ್ಯಗಳನ್ನು ಹೊಂದಿದೆ. ಹಾಗೆಯೇ ಲೋಡ್ ಸೆನ್ಸಿಂಗ್ ಪ್ರೊಪೋರ್ಷನ್ ವಾಲ್ವೆ, ಆಂಟಿ ಲಾಂಕ್ ಬ್ರೇಕಿಂಗ್ ಸಿಸ್ಟಂ, ಡ್ಯುಯಲ್ ಫ್ರಂಟ್ ಎಸ್‌ಆರ್‌ಎಸ್ ಏರ್‌ಬ್ಯಾಗ್, ಸೈಡ್ ಡೋರ್ ಇಂಪಾಕ್ಟ್ ಬೀಮ್ಸ್, ಪ್ರತಿ ಸಾಲಿನಲ್ಲೂ 3 ಪಾಯಿಂಟ್ ಸೀಟ್ ಬೆಲ್ಟ್, ಚೈಲ್ಡ್ ಪ್ರೊಟೆಕ್ಟರ್ ಲಾಕ್‌ಗಳಂತಹ ಸುರಕ್ಷತೆಯನ್ನು ಪಡಿದಿದೆ.

ಆಮ್ ಆದ್ಮಿಗೆ ಸಿಕ್ತು ಟೊಯೊಟಾ ಇನ್ನೋವಾ ಕಾರು

ಇ, ಜಿ,ವಿ ಮತ್ತು ವಿಎಂ ವೆರಿಯಂಟ್‌ಗಳಲ್ಲಿ ಇನ್ನೋವಾ ಲಭ್ಯವಿದೆ. ಲಾಂಚ್ ಸಮಯದಲ್ಲಿ ಇದರ ದರ 6.82 ಲಕ್ಷ ರು.ಗಳಾಗಿದ್ದವು. ಹಾಗೆಯೇ ವೈಟ್, ಸೂಪರ್ ವೈಟ್ II, ಸಿಲ್ವರ್ ಮೆಟ್ಯಾಲಿಕ್, ಬೀಜ್ ಮೈಕಾ ಮೆಟ್ಯಾಲಿಕ್, ಬ್ಲ್ಯಾಕ್ ಮೈಕಾ, ಡಾರ್ಕ್ ರೆಡ್ ಮೈಕಾ ಮೆಟ್ಯಾಲಿಕ್, ಲೈಟ್ ಗ್ರೀನ್ ಮೈಕಾ ಮೆಟ್ಯಾಲಿಕ್ ಮತ್ತು ಮೆಟಾ ಮೆಟ್ಯಾಲಿಕ್ ಬಣ್ಣಗಳಲ್ಲಿ ಲಭ್ಯವಿದೆ.

ಎಂಜಿನ್

ಎಂಜಿನ್

1998 ಸಿಸಿ ಪೆಟ್ರೋಲ್ (130 ಬಿಎಚ್‌ಪಿ @ 5600 ಆರ್‌ಪಿಎಂ ಪವರ್) ಹಾಗೂ 2494 ಸಿಸಿ ಡೀಸೆಲ್ (100 ಬಿಎಚ್‌ಪಿ @ 3600 ಆರ್‌ಪಿಎಂ ಪವರ್)

ಗೇರ್ ಬಾಕ್ಸ್

ಗೇರ್ ಬಾಕ್ಸ್

5 ಸ್ಪೀಡ್, ಮ್ಯಾನುವಲ್, ಆರ್‌ಡಬ್ಲ್ಯುಡಿ

ಸಿಟ್ಟಿಂಗ್ ವ್ಯವಸ್ಥೆ, ಸ್ಟೀರಿಂಗ್

ಸಿಟ್ಟಿಂಗ್ ವ್ಯವಸ್ಥೆ, ಸ್ಟೀರಿಂಗ್

7 ಹಾಗೂ 8 ಸೀಟು, ಪವರ್ ಸ್ಟೀರಿಂಗ್

English summary
Aam Aadmi Party Ministers of Delhi, except Chief Minister Arvind Kejriwal, were given Toyota Innova cars as official perks.
Story first published: Saturday, January 4, 2014, 16:03 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark