ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟ: ಬೆಲೆ ಕೇಳಿದ್ರೆ ಶಾಕ್ ಆಗ್ರೀರಾ
ಬಾಲಿವುಡ್ ಸ್ಟಾರ್‍ಗಳಿಗೆ ರೀಲ್ ಲೈಫ್ ನಲ್ಲಿ ಮಾತ್ರವಲ್ಲದೇ, ರಿಯಲ್ ಲೈಫ್‍ನಲ್ಲೂ ಕಾರು ಕ್ರೇಜ್ ಹೆಚ್ಚಿದೆ. ಈ ಸ್ಟಾರ್‍ಗಳಿಗೆ ಕಾರ್ ಕ್ರೇಜ್ ಅನ್ನುವುದು ಇತ್ತೀಚೆಗೆ ಟ್ರೆಂಡ್ ಆಗಿ ಬಿಟ್ಟಿದೆ. ಯಾರ ಬಳಿಯೂ ಇಲ್ಲದಂಥ ಕಾರು ಅಥವಾ ದುಬಾರಿ ಕಾರನ್ನು ಹೊಂದಬೇಕೆಂಬ ಅಂಬಲ ಹಲವು ಸೆಲೆಬ್ರಿಟಿಗಳಿಗಿದೆ. ಇದಕ್ಕಾಗಿ ಅತಿ ದುಬಾರಿ ಕಾರುಗಳನ್ನು ಖರೀದಿಸುತ್ತಾರೆ.
ಅತಿ ದುಬಾರಿ ಕಾರುಗಳನ್ನು ಹೊಂದಿರುವ ಬಾಲಿವುಡ್ ನಟರ ಪೈಕಿ ಅಜಯ್ ದೇವಗನ್ ಕೂಡ ಒಬ್ಬರು. ಕಾರುಗಳು ಎಂದರೆ ಅಜಯ್ ದೇವಗನ್‍ಗೆ ಎಲ್ಲಿಲ್ಲದ ಪ್ರೀತಿ. ಇತ್ತೀಚೆಗೆ ನಟ ತಮ್ಮ ಮೊದಲ ಎಲೆಕ್ಟ್ರಿಕ್ ಕಾರನ್ನು ಪಡೆದುಕೊಂಡಿದ್ದಾರೆ. ನಟ ಅಜಯ್ ದೇವಗನ್ ಖರೀದಿಸಿದ ಹೊಸ ಎಲೆಕ್ಟ್ರಿಕ್ ಕಾರ್ BMW i7 ಆಗಿದೆ. ಇದು ಬ್ರ್ಯಾಂಡ್‌ನ ಪ್ರಮುಖ ಇವಿ ಸೆಡಾನ್ ಆಗಿದೆ.

ನಟ ಅಜಯ್ ದೇವಗನ್ ಅವರ ಹೊಸ ಕಾರಿನ ವೀಡಿಯೊವನ್ನು ಯೂಟ್ಯೂಬ್‌ನಲ್ಲಿ CS12 Vlogs ತಮ್ಮ ಚಾನಲ್‌ನಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ, ಕಾರು ಟ್ರಾಫಿಕ್ ಸಿಗ್ನಲ್ ಅನ್ನು ಎರಡು ಬಾರಿ ದಾಟುತ್ತಿರುವುದನ್ನು ಕಾಣಬಹುದು. ಅಜಯ್ ದೇವಗನ್ ಅವರು ಟ್ವಿಲೈಟ್ ಪರ್ಪಲ್ ಪರ್ಲ್ ಮೆಟಾಲಿಕ್‌ನ ಕ್ಲಾಸಿ ಶೇಡ್ ಮಾದರಿಯನ್ನು ಆರಿಸಿಕೊಂಡಿದ್ದಾರೆ. ಇದು BMW ಕಂಪನಿಯ ಕಸ್ಟಮೈಸೇಶನ್ ವಿಭಾಗದಿಂದ ಹೇಳಿ ಮಾಡಿಸಿದ ಬಣ್ಣವಾಗಿದೆ.
ಈ BMW i7 ಕಂಪನಿಯ ಆಲ್-ಎಲೆಕ್ಟ್ರಿಕ್ ಐಷಾರಾಮಿ ಫ್ಲ್ಯಾಗ್‌ಶಿಪ್ ಸೆಡಾನ್ ಆಗಿದೆ. ಈ ಎಲೆಕ್ಟ್ರಿಕ್ ಕಾರುಗಳ ಐ-ಸೀರಿಸ್ ಸರಣಿಯಲ್ಲಿ ಇದು ಅತ್ಯಂತ ದುಬಾರಿ ಮಾದರಿಯಾಗಿದೆ. ಈ ಹೊಸ ಬಿಎಂಡಬ್ಲ್ಯು ಕಾರು ಗಣನೀಯವಾದ ಗ್ರಿಲ್‌ನೊಂದಿಗೆ ನಯವಾದ, ಭವಿಷ್ಯದ ನೋಟವನ್ನು ಹೊಂದಿದೆ. ಇದು ನೋಟದಲ್ಲಿ ತೀರಾ ಇತ್ತೀಚಿನ ಜನರೇಷನ್ ICE 7 ಸರಣಿಯನ್ನು ಹೋಲುತ್ತದೆ.
ಇದನ್ನು ಪ್ರತ್ಯೇಕಿಸಲು, ಇದು ಬ್ಲ್ಯೂ ಹೈಲೈಟ್ಸ್, ಹೊಸ ಅಲಾಯ್ ವ್ಹೀಲ್ ಗಳು ಮತ್ತು "i" ಸಿಗ್ನೇಚರ್ ಅನ್ನು ಒಳಗೊಂಡಿದೆ. i7 ನ ಒಳಭಾಗವು 7 ಸರಣಿಯ ಇತ್ತೀಚಿನ ಜನರೇಷನ್ ಪ್ರಮುಖ ಕಾರ್‌ಗೆ ಹೋಲುತ್ತದೆ. ಇನ್ಫೋಟೈನ್‌ಮೆಂಟ್ ಸಿಸ್ಟಂ ಮತ್ತು ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಎರಡೂ ಡಿಸ್ ಪ್ಲೇಯನ್ನು ಹೊಂದಿದೆ. ಇನ್ನು ಈ ಕಾರಿನಲ್ಲಿ ಇನ್ಫೋಟೈನ್‌ಮೆಂಟ್ ಸಿಸ್ಟಂ 14.9 ಇಂಚುಗಳು ಮತ್ತು ಇನ್‌ಸ್ಟ್ರುಮೆಂಟ್ ಕ್ಲಸ್ಟರ್ 14.9 ಇಂಚುಗಳನ್ನು ಹೊಂದಿವೆ
ಇನ್ನು ಹೆಚ್ಚುವರಿಯಾಗಿ, Amazon Fire TV ಮೂಲಕ ವೀಡಿಯೊ ಸ್ಟ್ರೀಮಿಂಗ್‌ಗಾಗಿ 31.3-ಇಂಚಿನ, 8K ಸಿನಿಮಾ ಡಿಸ್ ಪ್ಲೇಯನ್ನು ರೂಫ್ ಮೇಲೆ ಜೋಡಿಸಲಾಗಿದ್ದು, ಇದನ್ನು ಮಡಚಬಹುದು. ಇನ್ನು ಈ ಕಾರಿನ ಹಿಂಬದಿಯಲ್ಲಿ 5.5-ಇಂಚಿನ ಟಚ್‌ಸ್ಕ್ರೀನ್ ಅನ್ನು ಒಳಗೊಂಡಿದ್ದು ಅದು ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದ್ದು, ಇದು ಕ್ಲೈಮೆಂಟ್ ಕಂಟ್ರೋಳ್ ಮತ್ತು ಸೀಟುಗಳನ್ನು ನಿಯಂತ್ರಿಸುತ್ತದೆ.
ಹೊಚ್ಚಹೊಸ BMW i7 ಎಲೆಕ್ಟ್ರಿಕ್ ಕಾರಿನಲ್ಲಿ i7 xDrive 60 ರೂಪಾಂತರದಲ್ಲಿ ಎರಡು ಎಲೆಕ್ಟ್ರಿಕ್ ಮೋಟರ್‌ಗಳನ್ನು ಬಳಸಲಾಗುತ್ತದೆ. ಅವು 544 ಪವರ್ ಮತ್ತು 745 Nm ಟಾರ್ಕ್ ಅನ್ನು ಉತ್ಪಾದಿಸುತ್ತವೆ. i7 101.7kWh ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದ್ದು, 591 ರಿಂದ 625km ರೇಂಜ್ ಅನ್ನು ನೀಡುತ್ತದೆ. ಇನ್ನು 239 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.
ಇನ್ನು ಈ ಕಾರು 4.7 ಸೆಕೆಂಡ್‌ಗಳಲ್ಲಿ 0 ರಿಂದ 100 ಕಿಲೋಮೀಟರ್ ವೇಗವನ್ನು ಪಡೆದುಕೊಳ್ಳುತ್ತದೆ. ಈ ಎಲೆಕ್ಟ್ರಿಕ್ ಕಾರು 195kW DC ಪವರ್ ಅಥವಾ 11kW AC ಪವರ್ ಬಳಸಿ ಚಾರ್ಜ್ ಮಾಡಬಹುದು. i7 ನ ಬ್ಯಾಟರಿಗಳು ನಂತರದ ವಿಧಾನವನ್ನು ಬಳಸಿಕೊಂಡು 10% ರಿಂದ 80% ವರೆಗೆ ಚಾರ್ಜ್ ಮಾಡಲು ಸುಮಾರು 34 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಎಂದು ಅಂದಾಜಿಸಲಾಗಿದೆ. BMW i7 ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.95 ಕೋಟಿಯಾಗಿದೆ.


Click it and Unblock the Notifications








