Chiranjeevi Car: ಹೊಸ ಟೊಯೊಟಾ ಕಾರು ಖರೀದಿಸಿ ಫ್ಯಾನ್ಸಿ ನಂಬರ್‌ಗಾಗಿ ಲಕ್ಷಗಟ್ಟಲೆ ಖರ್ಚು ಮಾಡಿದ ನಟ ಚಿರಂಜೀವಿ

ಸಿನಿಮಾ ಸೆಲೆಬ್ರಿಟಿಗಳಿಗೆ ಕಾರುಗಳ ಬಗ್ಗೆ ಹೆಚ್ಚು ಕ್ರೇಜ್ ಹೊಂದಿರುತ್ತಾರೆ. ಕೆಲವು ಸಿನಿಮಾ ನಟ-ನಟಿಯರು ತಮ್ಮ ಸ್ಟೇಟಸ್‌ಗೆ ತಕ್ಕಂತೆ ದುಬಾರಿ ಬೆಲೆಯ ಐಷಾರಾಮಿ ಕಾರುಗಳನ್ನು ಖರೀದಿಸುತ್ತಾರೆ. ಇತ್ತೀಚೆಗೆ ಟಾಲಿವುಡ್ ಸೂಫರ್ ಸ್ಟಾರ್, ಮೆಗಾಸ್ಟಾರ್ ಚಿರಂಜೀವಿ ಹೊಸ ಐಷಾರಾಮಿ ಟೊಯೊಟಾ ವೆಲ್‌ಫೈರ್ ಕಾರನ್ನು ಖರೀದಿಸಿದ್ದಾರೆ.

ಇತ್ತೀಚೆಗೆ ಟೊಯೊಟಾ ವೆಲ್‌ಫೈರ್ ಕಾರು ಹಲವಾರು ಸೆಲೆಬ್ರಿಟಿಗಳ ಮೆಚ್ಚಿನ ಕಾರ್ ಆಗಿದೆ. ಈ ಕಾರಿನ ಆನ್ ರೋಡ್ ಬೆಲೆಯು ಸುಮಾರು ರೂ.1.2 ಕೋಟಿಯಾಗಿದೆ. ಮೆಗಾಸ್ಟಾರ್ ಚಿರಂಜೀವಿ ಅವರ ಕಾರು ಹೈದರಾಬಾದ್​ನ ಖೈರತಾಬಾದ್ RTO ಕಚೇರಿಯಲ್ಲಿ ನೋಂದಣಿ ಮಾಡಲಾಗಿದೆ. ಈ ದುಬಾರಿ ಕಾರಿನ ನೋಂದಣಿಗಾಗಿ ಖೈರತಾಬಾದ್ RTA ಕಚೇರಿಗೆ ಭೇಟಿ ನೀಡದ್ದರು. ಈ ಈ ಕಾರಿನ ಫ್ಯಾನ್ಸಿ ನಂಬರ್​ಗೆ ಸುಮಾರು ರೂ. 4.7 ಲಕ್ಷ ಪಾವತಿಸಲಾಗಿದೆ ಎಂದು ವರದಿಯಾಗಿದೆ.

Chiranjeevi Car

ಅವರು ಇಷ್ಟು ದೊಡ್ಡ ಮೊತ್ತ ಖರ್ಚು ಮಾಡಿರುವುದು 'TS09GB1111' ಎಂಬ ಫಾನ್ಸಿ ನಂಬರ್ ಗಾಗಿ ಆಗಿದೆ. ಚಿರಂಜೀವಿ ಅವರು ಟೊಯೊಟಾ ಲ್ಯಾಂಡ್ ಕ್ರೂಸರ್ ಅನ್ನು ಹೊಂದುವುದರ ಜೊತೆಗೆ ಅವರ ಮಗ ರಾಮ್ ಚರಣ್ ಉಡುಗೊರೆಯಾಗಿ ನೀಡಿದ ರೋಲ್ಸ್ ರಾಯ್ಸ್‌ನಂತಹ ಒಂದೆರಡು ಅತ್ಯಾಧುನಿಕ ಕಾರುಗಳನ್ನು ಹೊಂದಿದ್ದಾರೆ. ಜೂ.ಎನ್.ಟಿ.ಆರ್ ಮತ್ತು ನಾಗಬಾಬು ಸೇರಿದಂತೆ ಈ ಕಾರನ್ನು ಇತರ ಸೆಲೆಬ್ರಿಟಿಗಳು ಕೂಡ ಹೊಂದಿದ್ದಾರೆ.

ಮೆಗಾಸ್ಟಾರ್ ಚಿರಂಜೀವಿ ಖರೀದಿಸಿದ ಟೊಯೊಟಾ ವೆಲ್‌ಫೈರ್ ಬಗ್ಗೆ ಹೇಳುವುದಾದರೆ, ಅತ್ಯಾಧುನಿಕ ಫೀಚರ್ಸ್ ಮತ್ತು ತಂತ್ರಜ್ಙಾನವನ್ನು ಒಳಗೊಂಡಿರುವ ವೆಲ್‌ಫೈರ್ ಪ್ರೀಮಿಯಂ ಕಾರು ಹೆಚ್ಚಿನ ಜನರನ್ನು ಆಕರ್ಷಿಸುತ್ತಿದೆ. ಐಷಾರಾಮಿ ಟೊಯೊಟಾ ವೆಲ್‌ಫೈರ್ ಮಾದರಿಯು ಎಕ್ಸಿಕ್ಯುಟಿವ್ ಲೌಂಜ್ ಎಂಬ ಒಂದೇ ರೂಪಾಂತರದಲ್ಲಿ ಲಭ್ಯವಿದೆ. ಈ ಟೊಯೊಟಾ ವೆಲ್‌ಫೈರ್‌ ಕಾರಿನಲ್ಲಿ 2.5 ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.

Chiranjeevi Car

ಇದು ಎರಡು ಎಲೆಕ್ಟ್ರಿಕ್ ಮೋಟರ್‌ಗಳೊಂದಿಗೆ ಜೋಡಿಸಲ್ಪಟ್ಟಿದೆ, ಇದು ಎಂಜಿನ್ ಒಟ್ಟಾಗಿ 198 ಬಿಹೆಚ್‍ಪಿ ಪವರ್ ಮತ್ತು 235 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ಸಿವಿಟಿ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಈ ಪ್ರೀಮಿಯಂ ವೆಲ್‌ಫೈರ್‌ ಕಾರಿನ ಒಳಭಾಗದಲ್ಲಿ ಎರಡನೇ ಸಾಲಿನಲ್ಲಿ ಎರಡು ಬೆಲೆಬಾಳುವ ಎಲೆಕ್ಟ್ರಿಕ್ ಆಗಿ ಅಡೆಜೆಸ್ಟ್ ಮಾಡುವ ವಿಐಪಿ ಸೀಟುಗಳನು ಒಳಗೊಂಡಿವೆ.

ಇನ್ನು ಇದರಲ್ಲಿ ಕೂಲಿಂಗ್ ಫಂಕ್ಷನ್ ಅನ್ನು ಕೂಡ ಒಳಗೊಂಡಿದೆ. ಜೊತೆಗೆ ಲೆಗ್ ರೆಸ್ಟ್ ಮತ್ತು ರೆಕ್ಲೈನಬಲ್ ಬ್ಯಾಕ್‌ರೆಸ್ಟ್ ಮತ್ತು ಮೆಮೊರಿ ಫಂಕ್ಷನ್ ಅನ್ನು ಒಳಗೊಂಡಿದೆ. ಈ ಐಷಾರಾಮಿ ವೆಲ್‌ಫೈರ್‌ ಎಂಪಿವಿಯಲ್ಲಿ 10 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ನೊಂದಿಗೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇಯೊಂದಿಗೆ 13 ಇಂಚಿನ ಹಿಂಭಾಗದ ಡಿಸ್ ಪ್ಲೇಯನ್ನು ರೂಫ್ ಮೇಲೆ ನೀಡಲಾಗಿದೆ.

ಇದರೊಂದಿಗೆ ಈ ಎಂಪಿವಿಯಲ್ಲಿ ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಂ, ಎರಡನೇ ಮತ್ತು ಮೂರನೇ ಸಾಲುಗಳಿಗೆ ಸನ್ ಬ್ಲೈಂಡ್ಸ್, 16-ಬಣ್ಣದ ಆಂಬಿಯೆಂಟ್ ಲೈಟಿಂಗ್, ಮೂರು ಹಂತಹ ಆಟೋ ಕ್ಲೈಮೇಟ್ ಕಂಟ್ರೋಲ್, ಆಟೋಮ್ಯಾಟಿಕ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳುನ್ನು ಒಳಗೊಂಡಿದೆ. ಈ ಐಷಾರಾಮಿ ವೆಲ್‌ಫೈರ್‌ ಎಂಪಿವಿಯಲ್ಲಿ 10 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ನೊಂದಿಗೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇಯೊಂದಿಗೆ 13 ಇಂಚಿನ ಹಿಂಭಾಗದ ಡಿಸ್ ಪ್ಲೇಯನ್ನು ರೂಫ್ ಮೇಲೆ ನೀಡಲಾಗಿದೆ.

ಸುರಕ್ಷತೆಗಾಗಿ ಈ ವೆಲ್‌ಫೈರ್‌ ಕಾರಿನಲ್ಲಿ, 7 ಏರ್‌ಬ್ಯಾಗ್‌ಗಳು, ಪನೋರಮಿಕ್ ವ್ಯೂ ಮಾನಿಟರ್, ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್‌ಗಳನ್ನು ಹೊಂದಿವೆ. ಇದರ ಜೊತೆಗೆ ಎಬಿಎಸ್ ವಿಥ್ ಇಬಿಡಿ ಮತ್ತು ಬ್ರೇಕ್ ಅಸಿಸ್ಟ್, ವೆಹಿಕಲ್ ಡೈನಾಮಿಕ್ ಇಂಟಿಗ್ರೇಟೆಡ್ ಮ್ಯಾನೇಜ್‌ಮೆಂಟ್, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್, ಬ್ರೇಕ್ ಹೋಲ್ಡ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ಇನ್ನಷ್ಟು ಅತ್ಯಾಧುನಿಕ ಸುರಕ್ಷತಾ ಫೀಚರ್ಸ್ ಗಳನ್ನು ನೀಡಿದೆ.

More from DriveSpark

Article Published On: Thursday, April 13, 2023, 19:21 [IST]
English summary
Actor chiranjeevi spends 4 7 lakhs to fancy car number details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+