ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ದರ್ಶನ್: ಟ್ರ್ಯಾಕ್ಟರ್ ಗಿಫ್ಟ್ ಕೊಟ್ಟ ಅಭಿಮಾನಿ.. ವಿಶೇಷತೆ ಏನು?

ಅಭಿಮಾನಿಗಳಿಂದ ಪ್ರೀತಿಯಿಂದ ಡಿಬಾಸ್ ಎಂದು ಕರೆಸಿಕೊಳ್ಳುವ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ (Actor Darshan), 47ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರ ಬೆಂಗಳೂರಿನ ಆರ್‌.ಆರ್‌ ನಗರದಲ್ಲಿರುವ ನಿವಾಸದಲ್ಲಿ ಸಂಭ್ರಮ ಮನೆ ಮಾಡಿದ್ದು, ಸೆಲೆಬ್ರಿಟಿಗಳು, ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಇತ್ತೀಚೆಗೆ ನಮ್ಮ ನೆಲದ ಕಥೆಯೊಂದಿಗೆ ತೆರೆಕಂಡಿದ್ದ ಕಾಟೇರ (Kaatera) ಸಿನಿಮಾ ಭರ್ಜರಿ ಯಶಸ್ಸು ಕಂಡಿದ್ದು, ಬಾಕ್ಸ್ ಆಫೀಸ್​ನಲ್ಲಿ ದೂಡ್ಡಮಟ್ಟದಲ್ಲಿ ಕಲೆಕ್ಷನ್ ಮಾಡಿತ್ತು. ತರುಣ್ ಸುಧೀರ್ ಆಕ್ಷನ್ ಕಟ್ ಹೇಳಿದ್ದ ಈ ಚಿತ್ರದಲ್ಲಿ ನಟ ದರ್ಶನ್ ಅವರು ರೈತರ ಬೆನ್ನಿಗೆ ನಿಲ್ಲುವ ಪಾತ್ರದಲ್ಲಿ ಅಭಿನಯಿಸಿದ್ದರು. ಆ ಬಳಿಕ, ಕರ್ನಾಟಕ ರಾಜ್ಯ ರೈತ ಸಂಘ ದರ್ಶನ್ ಅವರಿಗೆ 'ಭೂಮಿಪುತ್ರ' ಎಂಬ ಬಿರುದನ್ನು ಕೊಟ್ಟಿತ್ತು.

Actor Darshan Birthday: A Fan Gifted Tractor Details

ಗುರುವಾರ ಅಭಿಮಾನಿಯೊಬ್ಬರು ನಟ ದರ್ಶನ್ ಅವರಿಗೆ ಟ್ರ್ಯಾಕ್ಟರ್‌ವೊಂದನ್ನು ಜನ್ಮದಿನದ ಉಡುಗೊರೆಯಾಗಿ ಕೊಟ್ಟಿದ್ದಾರೆ ಎಂದು ಫಿಲ್ಮಿಬೀಟ್ ಕನ್ನಡ ವರದಿ ಮಾಡಿದೆ. ದರ್ಶನ್ ಅವರು ಹಸಿರು ಶಾಲು ಧರಿಸಿ, ತಮ್ಮ ನಿವಾಸದ ಮುಂಭಾಗ ಅಭಿಮಾನಿಗಳೊಂದಿಗೆ ಟ್ರ್ಯಾಕ್ಟರ್‌ ಚಲಾಯಿಸಿದ್ದು, ಆ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಕಂಡುಬಂದಿದ್ದು, ಭಾರೀ ವೈರಲ್ ಆಗಿವೆ. ಜೊತೆಗೆ 'ಡೆವಿಲ್' ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದ್ದು, ಅಭಿಮಾನಿಗಳ ಸಡಗರ ಹಿಮ್ಮಡಿಯಾಗಿದೆ.

ಈ ಟ್ರ್ಯಾಕ್ಟರ್‌ ವಿಚಾರಕ್ಕೆ ಬರುವುದಾದರೆ, ಇದು ಎಸಿಇ (ACE) ಕಂಪನಿಯ ಡಿಐ 550 ಸ್ಟಾರ್ (DI-550 STAR) ಮಾದರಿಯಾಗಿದೆ. ಭಾರತದಲ್ಲಿ ರೂ.6.70 ಲಕ್ಷದಿಂದ ರೂ.7.10 ಲಕ್ಷ ಬೆಲೆಯನ್ನು ಹೊಂದಿದೆ. 50 ಹೆಚ್‌ಪಿ ಸಾಮರ್ಥ್ಯದ 3 ಸಿಲಿಂಡರ್ ಡೈರೆಕ್ಟ್ ಇಂಜೆಕ್ಷನ್ ಎಂಜಿನ್ ಪಡೆದಿದ್ದು, 8 ಫಾರ್ವರ್ಡ್, 2 ರಿವರ್ಸ್ ಗೇರ್ ಬಾಕ್ಸ್ ಆಯ್ಕೆಯನ್ನು ಒಳಗೊಂಡಿದೆ.

Actor Darshan Birthday: A Fan Gifted Tractor Details

ಈ ಎಸಿಇ ಡಿಐ 550 ಸ್ಟಾರ್ (ACE DI-550 STAR) ಟ್ರ್ಯಾಕ್ಟರ್‌, ಫಾರ್ವರ್ಡ್ 34.0 ಕೆಎಂಪಿಹೆಚ್, ರಿವರ್ಸ್ 14.3 ಕೆಎಂಪಿಹೆಚ್ ಸ್ವೀಡ್ ಪಡೆಯಲಿದೆ. 1800 ಕೆಜಿ ತೂಕವನ್ನು ಸಾಗಿಸುವ ಸಾಮರ್ಥ್ಯವನ್ನು ಒಳಗೊಂಡಿದ್ದು, 2140 ಎಂಎಂ ಅಳತೆಯ ವೀಲ್ ಬೇಸ್ ಹೊಂದಿದೆ. ಡ್ರೈ ಡಿಸ್ಕ್ ಬ್ರೇಕ್‌/ ಆಯಿಲ್ ಇಮ್ಮೆರ್ಸೆಡ್ ಬ್ರೇಕ್‌ ಮತ್ತು ಡುಯಲ್ ಕ್ಲಚ್ ಆಯ್ಕೆಯನ್ನು ಪಡೆದಿದೆ.

ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ನಟ ದರ್ಶನ್ ಅವರು, ಹೊಸ ಚಿತ್ರದ (ಡೆವಿಲ್) ಮಹೂರ್ತಕ್ಕಾಗಿ ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನಕ್ಕೆ ದುಬಾರಿ ಬೆಲೆಯ ಐಷಾರಾಮಿ ಟೊಯೊಟಾ ವೆಲ್‌ಫೈರ್ (Toyota Vellfire) ಕಾರಿನಲ್ಲಿ ಆಗಮಿಸಿದ್ದರು. ಈ ಕಾರು ರೂ.1.20 ರಿಂದ ರೂ.1.30 ಕೋಟಿ ಬೆಲೆಯನ್ನು ಹೊಂದಿದ್ದು, ಸಾಕಷ್ಟು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದಿದೆ.

ಇನ್ನು, ನಟ ದರ್ಶನ್ (Actor Darshan) ಅವರ ಗ್ಯಾರೇಜ್ ನಲ್ಲಿ ಟೊಯೊಟಾ ವೆಲ್‌ಫೈರ್ ಮಾತ್ರವಲ್ಲದೇ ಭಾರೀ ಮೌಲ್ಯದ ದೊಡ್ಡ ಕಾರುಗಳ ಸಂಗ್ರಹವೇ ಇದೆ. ಲ್ಯಾಂಡ್ ರೋವರ್ ಡಿಫೆಂಡರ್, ಜಾಗ್ವಾರ್, ಪೋರ್ಶೆ, ಆಡಿ ಕ್ಯೂ 7, ರೇಂಜ್ ರೋವರ್, ಮಿನಿ ಕೂಪರ್, ಹಮ್ಮರ್, ಲಂಬೋರ್ಗಿನಿ, ಫಾರ್ಚೂನರ್ ಹಾಗೂ ಬಿಎಂಡಬ್ಲ್ಯೂ ಕಾರುಗಳ ಮಾಲೀಕರಾಗಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, February 16, 2024, 10:35 [IST]
English summary
Actor darshan birthday a fan gifted tractor details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+