ಬಾಲಿವುಡ್ ಸ್ಟಾರ್‌ಗಳೂ ತಿರುಗಿ ನೋಡುವಂತಹ ದುಬಾರಿ ಕಾರುಗಳ ಒಡೆಯ 'ಡಿ ಬಾಸ್ ದರ್ಶನ್'!
ದಕ್ಷಿಣ ಭಾರತದ ನಟ ದರ್ಶನ್ ತೂಗುದೀಪ ಅವರ ದುಬಾರಿ ಕಾರುಗಳನ್ನು ಕಂಡರೆ ಎಂಥವರು ಒಂದು ಕ್ಷಣ ದಂಗಾಗ್ತಾರೆ. ಎಲ್ಲಾ ನಟರಂತಲ್ಲದೇ ಅವರೇ ಸ್ವತಃ ಕಾರುಗಳನ್ನು ಓಡಿಸುವ ಮೋಜನ್ನು ಹೊಂದಿದ್ದಾರೆ. ಈಗಾಗಲೇ ಹಲವು ಬಾರಿ ಅವರೇ ದುಬಾರಿ ಕಾರುಗಳನ್ನು ಓಡಿಸುತ್ತಾ ಕಾಣಿಸಿಕೊಂಡಿರುವ ವೈರಲ್ ವಿಡಿಯೋಗಳು ಲೆಕ್ಕವಿಲ್ಲದಷ್ಟಿವೆ.
ಅಂತಹ ವಿಡಿಯೋಗಳಲ್ಲಿ ಅವರೊಂದಿಗೆ ಕಾಣಿಸಿಕೊಂಡಿರುವ ಹಲವು ಕಾರುಗಳನ್ನು ಇಲ್ಲಿ ನೋಡೋಣ. ಇತ್ತೀಚೆಗೆ ಅವರು ಕಸ್ಟಮೈಸ್ ಮಾಡಿದ ಜೀಪ್ ರಾಂಗ್ಲರ್ ರೂಬಿಕಾನ್ SUV ಯಲ್ಲಿ ಸ್ನೇಹಿತರೊಂದಿಗೆ ಆಫ್-ರೋಡಿಂಗ್ ಮಾಡುವ ವೇಳೆ ಕಾಣಿಸಿಕೊಂಡಿದ್ದರು. ಮತ್ತೊಂದು ವೀಡಿಯೊದಲ್ಲಿ, XKR-S ಸ್ಪೋರ್ಟ್ಸ್ ಕೂಪ್‌ನಲ್ಲಿ ಓಡಾಡುವ ವಿಡಿಯೋಗಳು ವೈರಲ್ ಆಗಿದ್ದವು.

ಇವಿಷ್ಟೇ ಅಲ್ಲದೇ ಇತ್ತಚೆಗಷ್ಟೇ ಬೆಂಗಳೂರಿನ ಐಷಾರಾಮಿ ಹೋಟೆಲ್‌ನ ಹೊರಗೆ ನೀಲಿ ಬಣ್ಣದ ಜಾಗ್ವಾರ್ ಎಕ್ಸ್‌ಕೆಆರ್-ಎಸ್ ಸ್ಪೋರ್ಟ್ಸ್ ಕೂಪ್ ಜೊತೆಗೆ ಕಾಣಿಸಿಕೊಂಡಿದ್ದಾರೆ. ತಮ್ಮ ಪತ್ನಿಯೊಂದಿಗೆ ಪಾರ್ಟಿಗಾಗಿ ಹೋಟೆಲ್ ವೊಂದಕ್ಕೆಗೆ ಆಗಮಿಸಿದ್ದರು. ತಮ್ಮ ಸ್ಪೋರ್ಟ್ ಕೂಪ್‌ನಲ್ಲಿ ಹೋಟೆಲ್‌ನಿಂದ ನಿರ್ಗಮಿಸುತ್ತಿರುವುದನ್ನು ಈ ವೈರಲ್ ವಿಡಿಯೋದಲ್ಲಿ ನೋಡಬಹುದು.
ಈ XKR-S 2-ಬಾಗಿಲು, 4-ಆಸನಗಳ ಕೂಪ್ ವಿನ್ಯಾಸವನ್ನು ಹೊಂದಿದ್ದು, ಇದು ಹೆಚ್ಚು ಸ್ಪೋರ್ಟಿ ವೈಬ್ ಅನ್ನು ಹೊಂದಿದೆ. ದರ್ಶನ್ ಹೋಟಲ್‌ನಿಂದ ಹೊರಬಂದ ಮೇಲೆ ತಮ್ಮ ಕಾರಿನಲ್ಲಿ ಕುಲಿತು ಕಾರ್ಉ ಸ್ಟಾರ್ಟ್ ಮಾಡುತ್ತಿದ್ದಂತೆ ತನ್ನ ಸ್ಪೋರ್ಟಿ ಎಕ್ಸಾಸ್ಟ್ ನೋಟ್ ನೋಡುಗರಿಗೆ ರೋಮಾಂಚನಗೊಳಿಸಿದೆ. ನಿಮಗೂ ಆ ಅನುಭವ ಆಗಬೇಕಾದ್ರೆ ಕೆಳಗಿನ ವಿಡಿಯೋದಲ್ಲಿ ನೋಡಬಹುದು.

2011 ರಲ್ಲಿ ಪರಿಚಯಿಸಲಾದ XKR-S 5.0-ಲೀಟರ್ ಸೂಪರ್ಚಾರ್ಜ್ಡ್ V8 ಎಂಜಿನ್ ಅನ್ನು ಹೊಂದಿದೆ. ಜಾಗ್ವಾರ್ ಆರಂಭದಲ್ಲಿ XKR ಕೂಪೆಯನ್ನು ಭಾರತೀಯ ಕಾರು ಮಾರುಕಟ್ಟೆಯಲ್ಲಿ ಮಾರಾಟ ಮಾಡಿತು, ಈ ಎಂಜಿನ್‌ನೊಂದಿಗೆ 510 PS ಗರಿಷ್ಠ ಪವರ್ ಮತ್ತು 625 Nm ಟಾರ್ಕ್ ಅನ್ನು ಇದು ಉತ್ಪಾದಿಸುತ್ತದೆ, ಜೊತೆಗೆ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಪ್ರಮಾಣಿತವಾಗಿ ಸೇರಿಸಲಾಗಿದೆ.
XKR-S, ಮತ್ತೊಂದೆಡೆ, 542 Bhp ಉತ್ಪಾದಿಸುವ ಟ್ಯೂನ್ಡ್ 5.0-ಲೀಟರ್ ಸೂಪರ್ಚಾರ್ಜ್ಡ್ V8 ಎಂಜಿನ್ ಅನ್ನು ಸಹ ಹೊಮಿಂದೆ. ಈ ಪರ್ಫಾಮೆನ್ಸ್ ರೂಪಾಂತರದ ಎಂಜಿನ್ ಅನ್ನು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಮೂಲಕ ಹಿಂದಿನ ಚಕ್ರಗಳಿಗೆ ಪ್ರತ್ಯೇಕವಾಗಿ ವಿತರಿಸಲಾಗುತ್ತದೆ. ಗಮನಾರ್ಹವಾಗಿ, XKR-S 2013 ರಲ್ಲಿ ನ್ಯೂಯಾರ್ಕ್ ಮೋಟಾರ್ ಶೋನಲ್ಲಿ ಪ್ರದರ್ಶಿಸಲಾದ GT ರೂಪಾಂತರ ಆವೃತ್ತಿಯಾಗಿದೆ.

ಇದೊಂದೆ ಅಲ್ಲದೇ 2022 ರಲ್ಲಿ ದರ್ಶನ್ ತಮ್ಮ ಲಂಬೋರ್ಗಿನಿ ಅವೆಂಟಡಾರ್ ಸ್ಪೈಡರ್‌ಗೆ ಹೆಜ್ಜೆ ಇಡುತ್ತಿರುವ ವಿಡಿಯೋ ಕೂಡ ಆ ಕಾಲದಲ್ಲಿ ಸಖತ್ ಸದ್ದು ಮಾಡಿತ್ತು. Aventador Spyder ನಲ್ಲಿ ಕಾಣಿಸಿಕೊಂಡಿರುವ ಬೂದು ಬಣ್ಣವು ಅದರ ಮೂಲ ಬಣ್ಣದ್ದಾಗಿತ್ತು. ಇದು ಆರಂಭದಲ್ಲಿ ಬಿಳಿದಲ್ಲಿತ್ತು. ನಂತರ ದರ್ಶನ್ ಅವರು ಕಾರನ್ನು ಈಗಿರುವ ಬಣ್ಣಕ್ಕೆ ಮಾಡಿಫೈಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಇವರ ಬೃಹತ್ ಸಂಗ್ರಹವನ್ನು ನೋಡುವುದಾದರೆ, ಲ್ಯಾಂಡ್ ರೋವರ್ ಡಿಫೆಂಡರ್, ಆಡಿ ಕ್ಯೂ 7, ಫೋರ್ಡ್ ಮಸ್ಟಾಂಗ್, ಲ್ಯಾಂಡ್ ರೋವರ್ ರೇಂಜ್ ರೋವರ್ ಆಟೋಬಯೋಗ್ರಫಿ, ಪೋರ್ಷೆ ಕಯೆನ್ನೆ, ಟೊಯೊಟಾ ವೆಲ್‌ಫೈರ್, ಮಿನಿ ಕೂಪರ್ ಕಂಟ್ರಿಮ್ಯಾನ್, ಟೊಯೊಟಾ ಫಾರ್ಚೂನರ್, ಜೀಪ್ ರಾಂಗ್ಲರ್, ಬಿಎಂ ಡಬ್ಲ್ಯೂ 5, ಲ್ಯಾಂಡ್ ರೋವರ್ ಡಿಫೆಂಡರ್, ಲ್ಯಾಂಡ್ ರೋವರ್ ರೇಂಜ್ ರೋವರ್ ಆಟೋಬಯೋಗ್ರಫಿ ಮುಂತಾದ ವಾಹನಗಳನ್ನು ಹೊಂದಿದ್ದಾರೆ.
ನಿಜವಾದ ವಾಹನ ಉತ್ಸಾಹಿ ದರ್ಶನ್ ಅವರು ಎಂದು ಹೇಳಬಹದು, ಆಕರ್ಷಕ ಸಂಗ್ರಹವನ್ನು ಹೊಂದಿದ್ದಾರೆ. ಹೆಚ್ಚು ಕಸ್ಟಮೈಸ್ ಮಾಡಿದ ಫೋರ್ಡ್ ಎಂಡೀವರ್ ಹಾಗೂ ಹೆಚ್ಚುವರಿಯಾಗಿ ಅವರು ಹಳದಿ ಲಂಬೋರ್ಗಿನಿ ಉರಸ್ SUV ಯ ಹೆಮ್ಮೆಯ ಮಾಲೀಕರಾಗಿದ್ದಾರೆ. ಹೀಗೆ ಸ್ಯಾಂಡಲ್‌ವುಡ್‌ನಲ್ಲಿ ಅತ್ಯಂತ ದುಬಾರಿ ಕಾರು ಸಂಗ್ರಹದಲ್ಲಿ ಹೊಂದಿರುವ ಟಾಪ್ ನಟರಲ್ಲಿ ಡಿ ಬಾಸ್ ಟಾಪ್‌ನಲ್ಲಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.


Click it and Unblock the Notifications








