'ಕಾಟೇರ' ಯಶಸ್ಸಿನ ಬಳಿಕ ಐಷಾರಾಮಿ ಕಾರು ಖರೀದಿಸಿದ ತರುಣ್ ಸುಧೀರ್: ಡ್ರೈವ್ ಮಾಡಿದ ಡಿ ಬಾಸ್

ಸ್ಯಾಂಡಲ್‌ವುಡ್‌ನ ಜನಪ್ರಿಯ ನಿರ್ದೇಶಕ ತರುಣ್ ಸುಧೀರ್ (Tharun Sudhir) ಅವರು ಹೊಸ ಐಷಾರಾಮಿ ಕಾರನ್ನು ಖರೀದಿಸಿದ್ದಾರೆ. ನಿರ್ದೇಶಕ ತರುಣ್ ಕಿಶೋರ್ ಅವರು ಬಿಎಂಡಬ್ಲ್ಯು ಎಕ್ಸ್1 (BMW X1) ಕಾರನ್ನು ಖರೀದಿ ಮಾಡಿದ್ದಾರೆ. ಇದೀಗ ದರ್ಶನ್ ಅವರು ಈ ಹೊಸ ಬಿಎಂಡಬ್ಲ್ಯು ಕಾರನ್ನು ಡ್ರೈವ್ ಮಾಡಿರುವ ವೀಡಿಯೋ ವೈರಲ್ ಆಗಿದೆ.

ತರುಣ್ ಸುಧೀರ್ ಅವರು ಸ್ಯಾಂಡಲ್‌ವುಡ್‌ ಚಿತ್ರರಂಗದ ಖ್ಯಾತ ನಿರ್ದೇಶಕರಾಗಿದ್ದಾರೆ. ತರುಣ್ ಸುಧೀರ್ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅವರು ನಾಯಕರಾಗಿ ನಟಿಸಿದ 'ಕಾಟೇರ' ಸಿನಿಮಾ ಭರ್ಜರಿ ಹಿಟ್ ಆಗಿದೆ. ಸ್ನೇಹಿತರೂ ಆಗಿರುವ ನಟ ದರ್ಶನ್ ಅವರಿಗೆ ತಮ್ಮ ಹೊಸ‌ ಕಾರನ್ನು ತೋರಿಸಿದ್ದಾರೆ. ಈ ಹೊಸ ಐಷಾರಾಮಿ ಬಿಎಂಡಬ್ಲ್ಯು ಎಕ್ಸ್1 ಕಾರನ್ನು ದರ್ಶನ್ ಅವರು ಒಂದು ರೌಂಡ್ ಡ್ರೈವ್ ಮಾಡಿದ್ದಾರೆ.

Darshan Drives car

ಖ್ಯಾತ ಖಳನಟರಾದ ತೂಗುದೀಪ್​ ಶ್ರೀನಿವಾಸ್ ಹಾಗೂ ಸುಧೀರ್ ಸ್ನೇಹಿತರಾಗಿದ್ದರು. ಅವರ ಮಕ್ಕಳು ದರ್ಶನ್ ಹಾಗೂ ತರುಣ್ ಕೂಡ ಸ್ನೇಹಿತರಾಗಿದ್ದಾರೆ. ತರುಣ್ ಅವರು ಮೊದಲ ನಿರ್ದೇಶನ ಮಾಡಿದ ಸಿನಿಮಾ 'ಚೌಕ' ಆಗಿದೆ. ತರುಣ್ ಸುಧೀರ್ ಅವರು ಖರೀದಿಸಿದ ಬಿಎಂಡಬ್ಲ್ಯು ಎಕ್ಸ್1 ಕಾರಿನ ಆನ್ ರೋಡ್ ಬೆಲೆಯು ರೂ.62,26,744 ಆಗಿದೆ.

ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಅವರು ಜನಪ್ರಿಯ ಬಿಎಂಡಬ್ಲ್ಯು ಎಕ್ಸ್1 ಕಾರನ್ನು ಖರೀದಿಸಿದ್ದಾರೆ. ತರುಣ್ ಅವರು ತಾಯಿ ಮಾಲತಿ ಸುಧೀರ್ ಜೊತೆ ತಮ್ಮ ಹೊಸ ಐಷಾರಾಮಿ ಕಾರಿನ ವಿತರಣೆಯನ್ನು ಪಡೆದುಕೊಂಡಿದ್ದಾರೆ. ಇನ್ನು ತರುಣ್ ಸುಧಿರ್ ಅವರು ಇದೇ ಮೊದಲ ಬಾರಿಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆರಂಭಿಸಿರುವ 'ಮಹಾನಟಿ' ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ತರುಣ್ ಕಿಶೋರ್ ಸುಧೀರ್ ಕಾಣಿಸಿಕೊಳ್ಳಲಿದ್ದಾರೆ.

Darshan Drives car

ತರುಣ್ ಸುಧೀರ್ ಖರೀದಿಸಿದ ಬಿಎಂಡಬ್ಲ್ಯು ಎಕ್ಸ್1 ಕಾರಿನ ಬಗ್ಗೆ ಹೇಳುವುದಾದರೆ, ಬಿಎಂಡಬ್ಲ್ಯು X1 ಎಸ್‍ಯುವಿಯು 4,500 mm ಉದ್ದ, 1,845 mm ಅಗಲ ಮತ್ತು 1,642 mm ಎತ್ತರವನ್ನು ಹೊಂದಿದ್ದರೆ, ಇದರ ವ್ಹೀಲ್ ಬೇಸ್ 2,692 mm ಆಗಿದೆ.ಇದು ಅದರ ಹಿಂದಿನ ಮಾದರಿಗಿಂತ 61 mm ಉದ್ದವಾಗಿದೆ, 24 mm ಅಗಲ ಮತ್ತು 30mm ಎತ್ತರವಾಗಿದೆ ಮತ್ತು 22 mm ಹೆಚ್ಚು ಉದ್ದದ ವೀಲ್‌ಬೇಸ್ ಹೊಂದಿದೆ.

ಈ ಬಿಎಂಡಬ್ಲ್ಯು X1 ಎಸ್‍ಯುವಿಯು sDrive18i xLine (ಪೆಟ್ರೋಲ್) ಮತ್ತು sDrive18d M ಸ್ಪೋರ್ಟ್ ಎಂಬ ರೂಪಾಂತರಗಳಲ್ಲಿ ಲಭ್ಯವಿದೆ. ಈ ಎಸ್‍ಯುವಿಯ sDrive18i xLine ರೂಪಾಂತರದಲ್ಲಿ 134 ಬಿಹೆಚ್‍ಪಿ ಪವರ್ ಮತ್ತು 230 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ 1,499cc ಮೂರು-ಸಿಲಿಂಡರ್ ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿದೆ.

Darshan Drives car

ಈ ಎಂಜಿನ್ ಅನ್ನು 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಈ X1 ಎಸ್‍ಯುವಿಯಲ್ಲಿ 9.2 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ರೂಪಾಂತರವು 208 ಕಿ.ಮೀ ಟಾಪ್ ಸ್ಫೀಡ್ ಅನ್ನು ಹೊಂದಿದೆ. ಈ ಹೊಸ ಬಿಎಂಡಬ್ಲ್ಯು X1 ಎಸ್‍ಯುವಿಯ ಪೆಟ್ರೋಲ್ ಎಂಜಿನ್ 16.3 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಇನ್ನು ಈ ಹೊಸ ಬಿಎಂಡಬ್ಲ್ಯು X1 ಎಸ್‍ಯುವಿಯ sDrive18d M ಸ್ಪೋರ್ಟ್ ರೂಪಾಂತರದಲ್ಲಿ, 2.0-ಲೀಟರ್ ಟರ್ಬೋಚಾರ್ಜ್ಡ್ ಇನ್‌ಲೈನ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 147.5 ಬಿಹೆಚ್‍ಪಿ ಪವರ್ ಮತ್ತು 360 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, April 4, 2024, 13:39 [IST]
English summary
Actor darshan drives director tarun sudhirs new bmw x1 car details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+