Ultraviolette F77: ಬೆಂಗಳೂರು ಮೂಲದ ಬೈಕ್‌ಗಾಗಿ ತಿಂಗಳುಗಳ ಕಾಲ ಕಾದು ವಿತರಣೆ ಪಡೆದುಕೊಂಡ ಸ್ಟಾರ್ ನಟ

ಮಲಯಾಳಂ ನಟನಾದ ದುಲ್ಕರ್ ಸಲ್ಮಾನ್ ಇದೀಗ ಬಹುಭಾಷೆಯಲ್ಲಿ ಸ್ಟಾರ್​ ಆಗಿದ್ದಾರೆ. ಈ ಹ್ಯಾಂಡ್‌ಸಮ್ ನಟ ತಮಿಳು, ಹಿಂದಿ, ತೆಲುಗು ಚಿತ್ರರಂಗದಲ್ಲೂ ಹವಾ ಸೃಷ್ಟಿಸುತ್ತಿದ್ದಾರೆ. ಇವರು ನಟಿಸಿರುವ 'ಸೀತಾ ರಾಮಂ' ಸಿನಿಮಾ ಸೂಪರ್​ ಹಿಟ್​ ಆಗಿದೆ. ಚಿತ್ರಮಂದಿರದಲ್ಲಿ ಮಾತ್ರವಲ್ಲದೇ ಒಟಿಟಿಯಲ್ಲೂ ಈ ಚಿತ್ರ ಧೂಳೆಬ್ಬಿಸಿತು.

ಮೆಗಾಸ್ಟಾರ್ ಮಮ್ಮುಟ್ಟಿ ಮತ್ತು ಅವರ ಮಗ ದುಲ್ಕರ್ ಸಲ್ಮಾನ್ ಮಲಯಾಳಂ ಚಿತ್ರರಂಗದಲ್ಲಿ ಹೆಚ್ಚು ಕಾರ್ ಕ್ರೇಜ್ ಹೊಂದಿರುವ ನಟರಾಗಿದ್ದಾರೆ. ಇತ್ತೀಚೆಗೆ, ದುಲ್ಕರ್ ಬಿಬಿಸಿಯ ಟಾಪ್ ಗೇರ್ ಮ್ಯಾಗಜೀನ್‌ನ ಕವರ್ ಪೇಜ್‌ನಲ್ಲಿ ಕಾಣಿಸಿಕೊಂಡ ಮೊದಲ ದಕ್ಷಿಣ ಭಾರತದ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ನಟ ಗ್ಯಾರೇಜ್‌ನಲ್ಲಿ ಹಲವಾರು ಐಷಾರಾಮಿ, ಸ್ಪೋಟ್ಸ್ ಕಾರುಗಳು ಮತ್ತು ಎಸ್‍ಯುವಿಗಳ ಸಂಗ್ರಹವಿದೆ. ಇನ್ನು ಇತ್ತೀಚೆಗೆ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚಾಗುತ್ತಿದೆ.

Ultraviolette F77

ಸೆಲಬ್ರಿಟಿಗಳು ಕೂಡ ಎಲೆಕ್ಟ್ರಿಕ್ ವಾಹನಗಳ ಕಡೆ ಮುಖ ಮಾಡುತ್ತಿದ್ದಾರೆ. ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಅನೇಕ ಹೊಸ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ಕ್ಷೇತ್ರಕ್ಕೆ ಕಾಲಿಟ್ಟಿದೆ. ಅಂತಹ ತಯಾರಕರಲ್ಲಿ ಒಬ್ಬರು ಅಲ್ಟ್ರಾವೈಲೆಟ್ ಆಟೋಮೋಟಿವ್. ಕಳೆದ ವರ್ಷದ ಅಕ್ಟೋಬರ್‌ ತಿಂಗಳಿನಲ್ಲಿ ದುಲ್ಕರ್​ ಸಲ್ಮಾನ್ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ವೀಡಿಯೊವೊಂದರಲ್ಲಿ ಅವರು ಅಲ್ಟ್ರಾವೈಲೆಟ್ ಎಫ್ 77 ಹೈ-ಪರ್ಫಾರ್ಮೆನ್ಸ್ ಎಲೆಕ್ಟ್ರಿಕ್ ಬೈಕ್ ಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.

ಇದು ಅವರ ಮೊದಲ ಇವಿ ಆಗಲಿದೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಬ್ರ್ಯಾಂಡ್ ಕಳೆದ ತಿಂಗಳು ಬೈಕ್‌ಗಳನ್ನು ವಿತರಿಸಲು ಪ್ರಾರಂಭಿಸಿತು ಮತ್ತು ದುಲ್ಕರ್ ಇತ್ತೀಚೆಗೆ ತನ್ನ ಸೀಮಿತ ಆವೃತ್ತಿಯ F77 ಎಲೆಕ್ಟ್ರಿಕ್ ಸ್ಪೋರ್ಟ್ಸ್‌ಬೈಕ್ ಅನ್ನು ವಿತರಣೆ ಪಡೆದುಕೊಂಡಿದ್ದಾರೆ. ಅಲ್ಟ್ರಾವೈಲೆಟ್ ಆಟೋಮೊಟಿವ್ ಇತ್ತೀಚೆಗೆ ಬೆಂಗಳೂರಿನಲ್ಲಿ ತನ್ನ ಮೊದಲ ಡೀಲರ್‌ಶಿಪ್ ಅನ್ನು ಉದ್ಘಾಟಿಸಿದೆ, ಅದನ್ನು ಅವರು UVH-01 ಎಂದು ಕರೆಯುತ್ತಾರೆ.

Ultraviolette F77

ನಟ ಶೋರೂಮ್‌ನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದರು ಮತ್ತು 001 ಸಂಖ್ಯೆಯನ್ನು ಹೊಂದಿರುವ ಸೀಮಿತ ಆವೃತ್ತಿಯ ಮೋಟಾರ್‌ಸೈಕಲ್‌ನ ಮೊದಲ ಬೈಕ್ ಅನ್ನು ವಿತರಣೆ ಪಡೆದುಕೊಂಡರು. ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಇನ್‌ಸ್ಟಾಗ್ರಾಂ ರೀಲ್‌ನಲ್ಲಿ ದುಲ್ಕರ್ ಬೈಕ್‌ನ ಪಕ್ಕದಲ್ಲಿ ನಿಂತಿರುವುದನ್ನು ತೋರಿಸುತ್ತದೆ. ನಂತರ ಅವರು ಸ್ಪೋರ್ಟ್ಸ್ ಬೈಕ್ ಅನ್ನು ಅನಾವರಣಗೊಳಿಸುತ್ತಾರೆ ಮತ್ತು ನೆರೆದಿದ್ದ ಜನರೊಂದಿಗೆ ಮಾತನಾಡಲು ಪ್ರಾರಂಭಿಸುತ್ತಾರೆ.

ಮೊದಲಿನಿಂದಲೂ ಬ್ರಾಂಡ್‌ನೊಂದಿಗೆ ಸಂಬಂಧ ಹೊಂದಿರುವುದರಿಂದ ಮತ್ತು ಮೊದಲಿನಿಂದಲೂ ಮೋಟಾರ್‌ಸೈಕಲ್ ಅನ್ನು ಹೇಗೆ ಅಭಿವೃದ್ಧಿಪಡಿಸಲಾಗಿದೆ ಎಂಬುದನ್ನು ನೋಡಿದ್ದರಿಂದ ನಟನು ತುಂಬಾ ಉತ್ಸುಕರಾಗಿದ್ದಾರೆ. ದುಲ್ಕರ್ ಜೊತೆಗೆ, ಅನೇಕ ಇತರ ಗ್ರಾಹಕರು ತಮ್ಮ ಅಲ್ಟ್ರಾವಯೊಲೆಟ್ F77 ಮೋಟಾರ್‌ಸೈಕಲ್ ಅನ್ನು ವಿತರಿಸಿದರು. ಅಲ್ಟ್ರಾವೈಲೆಟ್ ತನ್ನ ಮೊದಲ ವಾಹನವಾದ F77 ಎಲೆಕ್ಟ್ರಿಕ್ ಬೈಕ್ ಅನ್ನು ಕಳೆದ ವರ್ಷ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತು.

Ultraviolette F77

ಟಿವಿಎಸ್ ಬೆಂಬಲಿತ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ತಯಾರಕರು ತನ್ನ ಮೊದಲ ಬೈಕ್ ಅನ್ನು ರೂ.3.8 ಲಕ್ಷದ ಆರಂಭಿಕ ಬೆಲೆಯೊಂದಿಗೆ ಬಿಡುಗಡೆ ಮಾಡಿದರು. ಅಲ್ಟ್ರಾವೈಲೆಟ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳು ಒಂದಕ್ಕಿಂತ ಹೆಚ್ಚು ರೀತಿಯಲ್ಲಿ ವಿಶೇಷವಾಗಿವೆ. ಸ್ಪೋರ್ಟ್ಸ್‌ಬೈಕ್‌ನಲ್ಲಿ ಮೊದಲನೆಯದು ಅದರ ವಿನ್ಯಾಸವಾಗಿದೆ. ಇದು ಅತ್ಯಂತ ಅಗ್ರೇಸಿವ್, ಫ್ಯೂಚರಿಸ್ಟಿಕ್ ಮತ್ತು ರೇಸಿಂಗ್ ಬೈಕ್‌ನಂತೆ ಕಾಣುತ್ತದೆ.

ಇದನ್ನು ಎಲೆಕ್ಟ್ರಿಕ್ ಸ್ಪೋರ್ಟ್ಸ್ ಬೈಕ್ ಎಂದೂ ಕರೆಯಲಾಗುತ್ತದೆ. ಸಂಪೂರ್ಣ ಚಾರ್ಜ್ ಮಾಡಲಾದ ಬ್ಯಾಟರಿಗಳೊಂದಿಗೆ 307 ಕಿಮೀ ರೈಡಿಂಗ್ ರೇಂಜ್ ಅನ್ನು ನೀಡುತ್ತದೆ. ಅಲ್ಟ್ರಾವೈಲೆಟ್ F77 ಟಾಪ್-ಸ್ಪೆಕ್ ಆದ ಏರ್‌ಸ್ಟ್ರೈಕ್ ರೂಪಾಂತರವು 40.4 Bhp ಪವರ್ ಮತ್ತು 100 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು 7.8 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

More from DriveSpark

Article Published On: Tuesday, April 18, 2023, 11:50 [IST]
English summary
Actor dulquer salmaan takes ultraviolette f77 limited edition delivery
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+