ಮಗಳ ಹುಟ್ಟುಹಬ್ಬಕ್ಕೆ ಮಹೀಂದ್ರಾ ಥಾರ್ ಗಿಫ್ಟ್ ಕೊಟ್ಟ ದುನಿಯಾ ವಿಜಯ್

ಸ್ಯಾಂಡಲ್‌ವುಡ್‌ನ ಕರಿಚಿರತೆ, ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿರುವ ಅವರು ಈಗ ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ನಟನಾಗಿ ಫೇಮಸ್​ ಆಗಿದ್ದ ಅವರು 'ಸಲಗ' ಸಿನಿಮಾ ಮೂಲಕ ನಿರ್ದೇಶಕನಾಗಿಯೂ ಯಶಸ್ಸು ಕಂಡರು.

ಮಗಳ ಹುಟ್ಟುಹಬ್ಬಕ್ಕೆ ಮಹೀಂದ್ರಾ ಥಾರ್ ಗಿಫ್ಟ್ ಕೊಟ್ಟ ದುನಿಯಾ ವಿಜಯ್

ಸಲಗ ಚಿತ್ರದ ಸಕ್ಸಸ್ ನಂತರ ಮತ್ತೆ ಕೌಟುಂಬಿಕ ವಿಚಾರವಾಗಿ ಸುದ್ದಿಯಾಗಿದ್ದಾರೆ. ತಮ್ಮ ಮುದ್ದು ಮಗಳು ಮೋನಿಕಾ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್ ನೀಡಿ, ನೆಟ್ಟಿಗರ ಗಮನ ಸೆಳೆದಿದ್ದಾರೆ‌. ಈ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಅಪ್ಪ ಮತ್ತು ಕಾರಿನ ಜೊತೆಗೆ ಫೋಟೊ ಕ್ಲಿಕ್ಕಿಸಿಕೊಂಡು, ಲವ್ ಯು ಅಪ್ಪ ಎಂದು ಬರೆದು ಮೋನಿಕಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ದುನಿಯಾ ವಿಜಯ್ ಮಗಳಿಗೆ ಗಿಫ್ಟ್ ನೀಡಿದ ಕಾರು ಮಹೀಂದ್ರಾ ಥಾರ್ ಎಸ್‍ಯುವಿ ಮಾದರಿಯಾಗಿದೆ.

ಮಗಳ ಹುಟ್ಟುಹಬ್ಬಕ್ಕೆ ಮಹೀಂದ್ರಾ ಥಾರ್ ಗಿಫ್ಟ್ ಕೊಟ್ಟ ದುನಿಯಾ ವಿಜಯ್

ದುನಿಯಾ ವಿಜಯ್ ಅವರು ವೈಯಕ್ತಿಕ ಜೀವನದಲ್ಲಿ ವಿವಾದಗಳೊಂದಿಗೆ ಸಾಕಷ್ಟು ಏಳು ಬೀಳುಗಳನ್ನು ಕಂಡವರು. ನಟ ವಿಜಯ್ ಪುತ್ರ ಸಾಮ್ರಾಟ್‌ ವಿಜಯ್‌ ಈಗಾಗಲೇ ಸಿನಿಮಾಗೆ ಎಂಟ್ರಿ ಕೊಡಲು ತಯಾರಿ ನಡೆಸುತ್ತಿದ್ದರೆ, ಪುತ್ರಿಯರು ಫ್ಯಾಷನ್‌ ಲೋಕದಲ್ಲಿ ಬ್ಯುಸ್ನೆಸ್‌ ಆರಂಭಿಸಿದ್ದಾರೆ.

ಮಗಳ ಹುಟ್ಟುಹಬ್ಬಕ್ಕೆ ಮಹೀಂದ್ರಾ ಥಾರ್ ಗಿಫ್ಟ್ ಕೊಟ್ಟ ದುನಿಯಾ ವಿಜಯ್

ಕಳೆದ ವರ್ಷ ತೆರೆಗೆ ಬಂದ ದುನಿಯಾ ವಿಜಯ್ ನಟನೆಯ 'ಸಲಗ' ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿತು. ಈ ಚಿತ್ರದಲ್ಲಿ ದುನಿಯಾ ವಿಜಯ್​ ನಟಿಸೋದು ಮಾತ್ರವಲ್ಲ, ಆ್ಯಕ್ಷನ್​-ಕಟ್​ ಕೂಡ ಹೇಳಿದ್ದರು. ನಟ ವಿಜಯ್ ಮೊದಲ ನಿರ್ದೇಶನದಲ್ಲೇ ಅವರು ಗೆದ್ದು ಬೀಗಿದ್ದರು. 'ಸಲಗ' ಬಳಿಕ ಚಿತ್ರಕ್ಕೆ 'ಭೀಮ' ಚಿತ್ರಕ್ಕೆ ಆ್ಯಕ್ಷನ್​-ಕಟ್ ಹೇಳುತ್ತಿದ್ದಾರೆ.

ಮಗಳ ಹುಟ್ಟುಹಬ್ಬಕ್ಕೆ ಮಹೀಂದ್ರಾ ಥಾರ್ ಗಿಫ್ಟ್ ಕೊಟ್ಟ ದುನಿಯಾ ವಿಜಯ್

ಮಹಾಶಿವರಾತ್ರಿಯಂದು ವಿಜಯ್ ತಮ್ಮ ಹೊಸ ಚಿತ್ರದ ಪೋಸ್ಟರ್ ರಿವೀಲ್ ಮಾಡಿದ್ದರು. ಈ ಚಿತ್ರಕ್ಕೆ ಭೀಮ ಎಂದು ವಿಜಯ್ ಹೆಸರಿಟ್ಟಿದ್ದರು. ಇದು ವಿಜಯ್ ಅಭಿನಯದ 28ನೇ ಸಿನಿಮಾವಾಗಿದ್ದು ಅವರು ನಿರ್ದೇಶಿಸುತ್ತಿರುವ ಎರಡನೇ ಚಿತ್ರವಾಗಿದೆ.

ಮಗಳ ಹುಟ್ಟುಹಬ್ಬಕ್ಕೆ ಮಹೀಂದ್ರಾ ಥಾರ್ ಗಿಫ್ಟ್ ಕೊಟ್ಟ ದುನಿಯಾ ವಿಜಯ್

ಟಾಲಿವುಡ್ ಅಖಾಡದಲ್ಲೂ ದುನಿಯಾ ವಿಜಯ್ ಸೌಂಡ್ ಮಾಡ್ತಿದ್ದಾರೆ. ಎನ್​ಬಿಕೆ 107' ಎಂಬ ನಂದಮೂರಿ ಬಾಲಕೃಷ್ಣ ಚಿತ್ರದಲ್ಲಿ ದುನಿಯಾ ವಿಜಯ್​ ಕೂಡ ನಟಿಸುತ್ತಿದ್ದಾರೆ. ದುನಿಯಾ ವಿಜಯ್​ ಅವರಿಗೆ ಇದು ಮೊದಲ ತೆಲುಗು ಸಿನಿಮಾ ಆದ್ದರಿಂದ ಅವರ ಅಭಿಮಾನಿಗಳ ವಲಯದಲ್ಲೂ ನಿರೀಕ್ಷೆ ಹೆಚ್ಚಿದೆ. ಈ ಚಿತ್ರದಲ್ಲಿ ವಿಜಯ್, ಬಾಲಕೃಷ್ಣ ಎದುರು ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಮಗಳ ಹುಟ್ಟುಹಬ್ಬಕ್ಕೆ ಮಹೀಂದ್ರಾ ಥಾರ್ ಗಿಫ್ಟ್ ಕೊಟ್ಟ ದುನಿಯಾ ವಿಜಯ್

ದುನಿಯಾ ವಿಜಯ್ ಮಗಳಿಗೆ ಗಿಫ್ಟ್ ಕೊಟ್ಟ ಮಹೀಂದ್ರಾ ಥಾರ್ ಬಗ್ಗೆ ಹೇಳುವುದಾದರೆ, ಪ್ರಸ್ತುತ ತಲೆಮಾರಿನ ಮಹೀಂದ್ರಾ ಥಾರ್ ಎಸ್‍ಯುವಿಯನ್ನು 2020ರಲ್ಲಿ ಬಿಡುಗಡೆಗೊಳಿಸಿತ್ತು. ಈ ಮಹೀಂದ್ರಾ ಥಾರ್ ಎಸ್‍ಯುವಿಯು ಕಡಿಮೆ ಅವಧಿಯಲ್ಲಿ ಹೆಚ್ಚಿನ ಜನರನ್ನು ಸೆಳೆಯುವಲ್ಲಿ ಯಶ್ವಸಿಯಾಗಿದೆ. ಈ ಜನಪ್ರಿಯ ಥಾರ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿದೆ.

ಮಗಳ ಹುಟ್ಟುಹಬ್ಬಕ್ಕೆ ಮಹೀಂದ್ರಾ ಥಾರ್ ಗಿಫ್ಟ್ ಕೊಟ್ಟ ದುನಿಯಾ ವಿಜಯ್

ಭಾರತೀಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಥಾರ್ ಎಸ್‍ಯುವಿಯು ಬಿಡುಗಡೆಗಡೆಯಾದ ದಿನದಿಂದ ಅದೇ ರೀತಿಯ ಪ್ರಬಲ ಬೇಡಿಕೆಯನ್ನು ಹೊಂದಿದೆ. ಮಹೀಂದ್ರಾ ಥಾರ್ ಎಸ್‍ಯುವಿಯು ಕಡಿಮೆ ಬಜೆಟ್‌ನಲ್ಲಿ ಖರೀದಿಸಬಹುದಾದ ಅತ್ಯುತ್ತಮ ಎಸ್‍ಯುವಿಯಾಗಿದೆ. ಅದಕ್ಕಾಗಿಯೇ ವಾಹನ ಉತ್ಸಾಹಿಗಳು ಒಂದನ್ನು ಖರೀದಿಸಲು ನಿರಂತರವಾಗಿ ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಇದು ಕೆಲವು ಪ್ರಭಾವಶಾಲಿ ಸ್ಪೆಕ್ಸ್‌ಗಳನ್ನು ಹೊಂದಿದೆ:

ಮಗಳ ಹುಟ್ಟುಹಬ್ಬಕ್ಕೆ ಮಹೀಂದ್ರಾ ಥಾರ್ ಗಿಫ್ಟ್ ಕೊಟ್ಟ ದುನಿಯಾ ವಿಜಯ್

ಈ ಮಹೀಂದ್ರಾ ಥಾರ್ ಎಸ್‍ಯುವಿಯ ಬಗ್ಗೆ ಹೇಳುವುದಾದರೆ, ಇದು ಎರಡು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಇದರಲ್ಲಿ ಮೊದಲೈಗೆ 2.0 ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಆಗಿದೆ. ಈ ಎಂಜಿನ್ 150 ಬಿಹೆಚ್‍ಪಿ ಪವರ್ ಮತ್ತು 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಮಗಳ ಹುಟ್ಟುಹಬ್ಬಕ್ಕೆ ಮಹೀಂದ್ರಾ ಥಾರ್ ಗಿಫ್ಟ್ ಕೊಟ್ಟ ದುನಿಯಾ ವಿಜಯ್

ಇನ್ನು 2.2 ಲೀಟರ್ ಟರ್ಬೊ-ಡೀಸೆಲ್ ಎಂಜಿನ್ 130 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎರಡು ಎಂಜಿನ್ ಗಳೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಗ್ಲೊಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 4 ಸ್ಟಾರ್ ಸೇಫ್ಚಿ ರೇಟಿಂಗ್ ಪಡೆದುಕೊಳ್ಳುವ ಮೂಲಕ ಸುರಕ್ಷಿತ ಕಾರು ಮಾದರಿಯಾಗಿ ಗುರುತಿಸಿಕೊಂಡ ನಂತರ ಹೊಸ ಥಾರ್ ಕಾರಿಗೆ ಮತ್ತಷ್ಟು ಬೇಡಿಕೆ ಪಡೆದುಕೊಂಡಿದೆ. ಈ ಎಸ್‍ಯುವಿಯ ವೈಟಿಂಗ್ ಪಿರೇಡ್ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ನಿರ್ಧಾರವಾಗಲಿದೆ.

ಮಗಳ ಹುಟ್ಟುಹಬ್ಬಕ್ಕೆ ಮಹೀಂದ್ರಾ ಥಾರ್ ಗಿಫ್ಟ್ ಕೊಟ್ಟ ದುನಿಯಾ ವಿಜಯ್

ಈ ಹೊಸ ಮಹೀಂದ್ರಾ ಥಾರ್ ಎಸ್‍ಯುವಿಯ ಒಳಭಾಗದಲ್ಲಿ ಆ್ಯಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿಯನ್ನು ಹೊಂದಿರುವ 7-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ,ರೂಫ್ ಮೌಂಟೆಡ್ ಆಡಿಯೋ ಸ್ಪಿಕರ್ಸ್, ಮಲ್ಟಿ ಕಲರ್ ಇನ್ಪೋಟೈನ್ ಮೆಂಟ್ ಸಿಸ್ಟಂ ಮತ್ತು ಸ್ಟೀರಿಂಗ್ ಮೌಟೆಂಟ್ ಕಂಟ್ರೋಲ್ ಅನ್ನು ಒಳಗೊಂಡಿದೆ. ಥಾರ್ ಎಸ್‍ಯುವಿಯಲ್ಲಿ ಸುರಕ್ಷತೆಗಾಗಿ ಹಲವಾರು ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಮಗಳ ಹುಟ್ಟುಹಬ್ಬಕ್ಕೆ ಮಹೀಂದ್ರಾ ಥಾರ್ ಗಿಫ್ಟ್ ಕೊಟ್ಟ ದುನಿಯಾ ವಿಜಯ್

ಎರಡು ಎಂಜಿನ್ ಆಯ್ಕೆಗಳಲ್ಲೂ 4x4 ಡ್ರೈವ್ ಸಿಸ್ಟಂ, ಕ್ರೂಸ್ ಕಂಟ್ರೋಲ್, 255/65 18-ಇಂಚಿನ ಆಲ್ ಟೆರೆನ್ ಟೈರ್ಸ್, ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್, ಹಿಲ್ ಸ್ಟಾರ್ಟ್ ಅಸಿಸ್ಟ್, ರೋಲ್ ಓವರ್ ಮಿಟಿಗೆಷನ್, ತ್ರೀ ಪಾಯಿಂಟ್ ಸಿಲ್ಟ್ ಬೆಲ್ಟ್ ಮತ್ತು ರಿಯರ್ ವ್ಯೂ ಕ್ಯಾಮೆರಾವನ್ನು ಕೂಡ ಹೊಂದಿದೆ. ಈ ಥಾರ್ ಮಾದರಿಯಲ್ಲಿ ಮೊದಲ ಬಾರಿಗೆ ಡೀಸೆಲ್ ಎಂಜಿನ್ ಜೊತೆಗೆ ಪೆಟ್ರೋಲ್ ಕಾರಿನ ಆಯ್ಕೆಯನ್ನು ಸಹ ನೀಡಿರುವುದು ಆಫ್-ರೋಡ್ ಕಾರು ಮಾದರಿಯ ಮಾರಾಟದಲ್ಲಿ ಮತ್ತೊಂದು ಹಂತದ ಬದಲಾವಣೆಗೆ ಕಾರಣವಾಗಿದ್ದು, ಲ್ಯಾಡರ್-ಫ್ರೇಮ್ ಚಾರ್ಸಿ ಜೊತೆಗೆ ಹೊಸ ಸಸ್ಪೆಂಷನ್‌ ಸೌಲಭ್ಯವು ಹೊಸ ಥಾರ್ ಕಾರಿನ ಗುಣಮಟ್ಟ ಮತ್ತು ಕಾರ್ಯಕ್ಷಮತೆ ಹೆಚ್ಚಿಸಿದೆ.

ಮಗಳ ಹುಟ್ಟುಹಬ್ಬಕ್ಕೆ ಮಹೀಂದ್ರಾ ಥಾರ್ ಗಿಫ್ಟ್ ಕೊಟ್ಟ ದುನಿಯಾ ವಿಜಯ್

ಒಟ್ಟಾರೆಯಾಗಿ ಮಹೀಂದ್ರಾ ಥಾರ್ ಭಾರತೀಯ ಮಾರುಕಟ್ಟೆಯಲ್ಲಿ ಬಹುದೀರ್ಘ ಕಾಲದಿಂದ ಮಾರಾಟವಾಗುತ್ತಿರುವ ಜನಪ್ರಿಯ ಆಫ್-ರೋಡ್ ಎಸ್‍ಯುವಿ ಮಾದರಿಯಾಗಿದೆ. ಆಫ್-ರೋಡ್ ವಾಹನ ಎಂದಾಗ ಭಾರತೀಯರಿಗೆ ಮೊದಲಿಗೆ ಥಾರ್ ಎಸ್‍ಯುವಿಯು ಮನಸ್ಸಿಗೆ ಬರುತ್ತದೆ. ಅಷ್ಟು ಜನಪ್ರಿಯತೆಯನ್ನು ಹೊಂದಿರುವ ಆಫ್-ರೋಡರ್ ಮಾದರಿಯಾಗಿದೆ.

Article Published On: Wednesday, August 17, 2022, 16:18 [IST]
English summary
Actor duniya vijay gifted mahindra thar to daughter monica details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+