ದುಬಾರಿ ಬೆಲೆಯ ಮರ್ಸಿಡಿಸ್ ಬೆಂಝ್ ಕಾರು ಖರೀದಿಸಿದ ಚಿತ್ರದ ನಟ ಫಹಾದ್ ಫಾಸಿಲ್

ಫಹಾದ್ ಫಾಸಿಲ್ (Fahadh Faasil) ಸದ್ಯ ಸೌತ್ ಇಂಡಿಯಾ ಸಿನಿಮಾಗಳಲ್ಲಿ ಮಿಂಚುತ್ತಿರುವ ಜನಪ್ರಿಯ ನಟರಲ್ಲಿ ಒಬ್ಬರು. ಸಾಧಾರಣ ಪ್ರಾದೇಶಿಕ ಸಿನಿಮಾ ನಾಯಕನಾಗಿ ಅಭಿಯನ ರಂಗಕ್ಕೆ ಕಾಲಿಟ್ಟ ಫಹಾದ್'ಗೆ ಈಗ ಕಾಲಿವುಡ್, ಟಾಲಿವುಡ್ ಸೇರಿದಂತೆ ಎಲ್ಲೆಡೆಯಿಂದ ಉತ್ತಮ ಆಫರ್​ಗಳು ಬರುತ್ತಿವೆ. ನಟ ಫಹಾದ್ ಫಾಸಿಲ್ ಪತ್ನಿ ನಜ್ರಿಯಾ ಕೂಡ ಜನಪ್ರಿಯ ದಕ್ಷಿಣ ಭಾರತದ ನಟಿ.

ಈ ಜನಪ್ರಿಯ ನಟ ಫಹಾದ್ ಫಾಸಿಲ್ ಅವರು ಮರ್ಸಿಡಿಸ್ ಬೆಂಝ್ GLS 450 ಐಷಾರಾಮಿ ಎಸ್‍ಯುವಿಯನ್ನು ಖರೀದಿಸಿದ್ದಾರೆ. ಕಾರು ಪ್ರೇಮಿ ಎಂದೇ ಖ್ಯಾತಿಯಾಗಿರುವ ಅವರ ಸೂಪರ್ ಕಾರುಗಳ ಗ್ಯಾರೇಜ್ ತುಂಬಿದೆ ಎಂದೇ ಹೇಳಬೇಕು.ನಟ ಫಹಾದ್ ಖರೀದಿಸಿದ ಹೊಸ ಐಷಾರಾಮಿ ಮರ್ಸಿಡಿಸ್ ಬೆಂಝ್ GLS 450 ಕಾರಿನ ಚಿತ್ರವನ್ನು ಕೊಚ್ಚಿಯ ಪ್ರಮುಖ ಮರ್ಸಿಡಿಸ್ ಬೆಂಜ್ ಕೋಸ್ಟಲ್ ಸ್ಟಾರ್ ಡೀಲರ್‌ ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿದ್ದಾರೆ.

Actor Fahadh Faasil

ಆಲಪ್ಪುಳದಲ್ಲಿರುವ ಫಾಜಿಲ್ ಅವರ ಮನೆಯಲ್ಲಿ ಎಸ್ ಯುವಿಯನ್ನು ಹಸ್ತಾಂತರಿಸಲಾಗಿದೆ ಎಂದು ವರದಿಯಾಗಿದೆ. ನಟ ಫಹಾದ್ ಅವರು ಹೆಚ್ಚು ಕಾರು ಕ್ರೇಜ್ ಅನ್ನು ಹೊಂದಿದ್ದಾರೆ. ಇವರು ಪೈಥಾನ್ ಗ್ರೀನ್ ಪೋರ್ಷೆ 911 ಕ್ಯಾರೆರಾ ಎಸ್, ಐಷಾರಾಮಿ ಟೊಯೊಟಾ ವೆಲ್‌ಫೈರ, ಲ್ಯಾಂಬೋರ್ಗಿನಿ ಉರಸ್ ಮತ್ತು ರೇಂಜ್ ರೋವರ್ ನಂತಹ ಕಾರುಗಳಿವೆ. ಇತ್ತೀಚೆಗೆ ಅವರ ಗ್ಯಾರೇಜ್‌ಗೆ ಹೊಸ BMW 740i ಕಾರು ಸೇರಿಕೊಂಡಿತು.

ಇದೀಗ ಅವರ ಗ್ಯಾರೇಜ್‌ಗೆ ಮರ್ಸಿಡಿಸ್ ಬೆಂಝ್ GLS 450 ಹೊಸ ಸೇರ್ಪಡೆಯಾಗಿದೆ. ನಟ ಫಹಾದ್ ಫಾಸಿಲ್ ಬಗ್ಗೆ ಹೇಳುವುದಾದರೆ, ಇವರು ಚಾಕ್ಲೆಟ್ ಹೀರೋ ಆಗಿ ಸಿನಿಮಾ ರಂಗಕ್ಕೆ ಕಾಲಿಟ್ಟ ಫಹಾದ್ ಸಿನಿಮಾಗಳು ತಕ್ಕಮಟ್ಟಿಗೆ ಹಿಟ್ ಆದರೂ ನಟನ ಈಗಿನ ಸಿನಿಮಾ ಪ್ರಸಿದ್ಧಿಗೆ ಹೋಲಿಸಿದರೆ ಹಿಂದಿನ ಸಿನಿಮಾಗಳು ಏನೇನು ಆಗಿರಲಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಫಹಾದ್​ಗೆ ಅತ್ಯುತ್ತಮ ಸಿನಿಮಾ ಆಫರ್​ಗಳು ಬರುತ್ತಿವೆ.

Actor Fahadh Faasil

ಬಹಳ ಸ್ಪೆಷಲ್ ಎನ್ನುವ ಪಾತ್ರಗಳನ್ನು ಮಾಡಿ ನಟ ಈಗ ಸೌತ್ ಮತ್ತು ನಾರ್ತ್ ನಲ್ಲಿಯೂ ಪ್ರಸಿದ್ಧಿ ಗಳಿಸುತ್ತಿದ್ದಾರೆ. ತೆಲುಗಿನ ಪುಷ್ಪ ಸಿನಿಮಾ ಹಾಗೂ ಕಾಲಿವುಡ್​ನ ವಿಕ್ರಮ್ ಸಿನಿಮಾದಲ್ಲಂತೂ ಫಹಾದ್ ನಟನೆಗೆ ಸಾಟಿಯೇ ಇಲ್ಲ. ಮೊದಲು ಬೆಂಗಳೂರು ಡೇಸ್ ಸಿನಿಮಾ ಬರುವ ತನಕ ಬಹಳಷ್ಟು ಜನರಿಗೆ ಫಹಾದ್ ಪರಿಚಯವೇ ಇರಲಿಲ್ಲ. ಆದರೆ ಆ ಸಿನಿಮಾದಿಂದ ನಟನ ಎರಡನೇ ಇನ್ನಿಂಗ್ಸ್ ಶುರುವಾಯ್ತು.

ನಂತರದಲ್ಲಿ ಜೋಜಿ, ಕುಂಬಳಂಗಿ ನೈಟ್ಸ್, ಸಿ ಯೂ ಸೂನ್, ತೊಂಡಿಮುದಲುಂ ದೃಕ್ಷಾಕ್ಷಿಯುಂ ಸೇರಿ ಹಲವು ಸಿನಿಮಾಗಳ ಮೂಲಕ ಫಹಾದ್ ಹೆಚ್ಚಿನ ಜನಪ್ರಿಯತೆ ಗಳಿಸಿದರು. ನಂತರದಲ್ಲಿ ನಟನಿಗೆ ಪುಷ್ಪಾ, ವಿಕ್ರಮ್​ನಂತಹ ದೊಡ್ಡ ದೊಡ್ಡ ಹಿಟ್ ಸಿನಿಮಾಗಳಲ್ಲಿ ಆಭಿನಯಿಸಿದ್ದಾರೆ. ಇನ್ನು ಜನಪ್ರಿಯ ನಟ ಫಹಾದ್ ಫಾಸಿಲ್ ಖರೀದಿಸಿದ ಮರ್ಸಿಡಿಸ್ GLS 450 ಕಾರಿನ ಬಗ್ಗೆ ಹೇಳುವುದಾದರೆ, GLS ಎಂಬುದು ಜರ್ಮನ್ ಐಷಾರಾಮಿ ಕಾರು ತಯಾರಕ ಮರ್ಸಿಡಿಸ್-ಬೆಂಝ್ ಎಸ್-ಕ್ಲಾಸ್ ಸೆಡಾನ್‌ಗೆ ಹೋಲುವ ಎಸ್‍ಯುವಿಯಾಗಿದೆ.

Actor Fahadh Faasil

ಈ ಐಷಾರಾಮಿ ವಾಹನದ ಕೇರಳದಲ್ಲಿ ಎಕ್ಸ್ ಶೋ ರೂಂ ಬೆಲೆ ಸುಮಾರು 1.23 ಕೋಟಿ ರೂ. ಅದೇ ಸಮಯದಲ್ಲಿ, ಆನ್ ರೋಡ್ ಬೆಲೆ ಸುಮಾರು 1.60 ಕೋಟಿ ರೂ. GLS 450 ರೂಪಾಂತರವು 3.0-ಲೀಟರ್ ಟರ್ಬೊ-ಚಾರ್ಜ್ಡ್ ಇನ್‌ಲೈನ್ 6-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದೆ. ಈ ಎಂಜಿನ್ 367 bhp ಪವರ್ ಮತ್ತು 500 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಎಂಜಿನ್ ಅನ್ನು ಸ್ಟ್ಯಾಂಡರ್ಡ್ ಆಗಿ 9-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ. ಈ ಎಸ್‍ಯುವಿ 48V ಮೈಲ್ಡ್ ಹೈಬ್ರಿಡ್ ಸಿಸ್ಟಂ ಅನ್ನು ಸಹ ಹೊಂದಿದೆ. 5 ಮೀಟರ್‌ಗಿಂತಲೂ ಹೆಚ್ಚು ಉದ್ದವಿರುವ GLS ಜರ್ಮನ್ ಬ್ರಾಂಡ್‌ನ ಸರಣಿಯಲ್ಲಿನ ಅತಿ ದೊಡ್ಡ ಎಸ್‍ಯುವಿಯಾಗಿದೆ. ಹೊಸ-ಯುಗದ ಸ್ಟೈಲಿಂಗ್ ಮತ್ತು ದೊಡ್ಡ ಮುಂಭಾಗದ ಗ್ರಿಲ್ ಅನ್ನು ನೋಟದಲ್ಲಿ ಹೈಲೈಟ್ ಮಾಡಬಹುದು.

ಕಪ್ಪು ಬಣ್ಣದಲ್ಲಿ ಪೂರ್ಣಗೊಂಡಿದ್ದರೂ, ಮುಂಭಾಗ ಮತ್ತು ಹಿಂಭಾಗದ ಸ್ಕೀಡ್ ಪ್ಲೇಟ್‌ಗಳು, ಮುಂಭಾಗದ ಗ್ರಿಲ್ ಅಪ್ಲಿಕೇಶನ್‌ಗಳು, ಎಕ್ಸಾಸ್ಟ್ ಸರೌಂಡ್ ಮತ್ತು ಟೈಲ್‌ಗೇಟ್ ಬಾರ್‌ಗಳಂತಹ ಇತರ ಭಾಗಗಳಲ್ಲಿ ಕ್ರೋಮ್‌ನಲ್ಲಿ ಫಿನಿಶಿಂಗ್ ಹೊಂದಿದೆ. ಇನ್ನೊಂದು ವಿಶೇಷವೆಂದರೆ 21-ಇಂಚಿನ 5-ಟ್ರಿಪಲ್ ಸ್ಪೋಕ್ ಲೈಟ್-ಅಲಾಯ್ ವ್ಹೀಲ್ ಗಳು. ಒಳಗೆ ಸಹ, ಎಸ್ಯುವಿ ಐಷಾರಾಮಿ ಸವಾರಿ ಅನುಭವನ್ನು ನೀಡುತ್ತದೆ.

ಈ ಎಸ್‍ಯುವಿಯ ಒಳಭಾಗವು 12.3-ಇಂಚಿನ ಡಿಜಿಟಲ್ ಉಪಕರಣ ಡಿಸ್ಪ್ಲೇ, 12.3-ಇಂಚಿನ ಟಚ್‌ಸ್ಕ್ರೀನ್ ಇಂಟರ್ಫೇಸ್‌ನೊಂದಿಗೆ ಮರ್ಸಿಡಿಸ್‌ನ ಹೊಸ MBUX ಇನ್ಫೋಟೈನ್‌ಮೆಂಟ್ ಸಿಸ್ಟಮ್, ಟಚ್‌ಪ್ಯಾಡ್‌ಗಳೊಂದಿಗೆ ಹೊಸ ಸ್ಟೀರಿಂಗ್ ವೀಲ್ ಮತ್ತು ಸೆಂಟರ್ ಕನ್ಸೋಲ್‌ನಲ್ಲಿ ಟಚ್‌ಪ್ಯಾಡ್ ಅನ್ನು ಪಡೆಯುತ್ತದೆ. ಹೊಂದಾಣಿಕೆ ಮಾಡಬಹುದಾದ ಏರ್ ಸಸ್ಪೆನ್ಷನ್ ಮತ್ತು ಆಟೋ ಪಾರ್ಕಿಂಗ್ ಬೋರ್ಡ್‌ನಲ್ಲಿರುವ ಇತರ ತಾಂತ್ರಿಕ ಲಕ್ಷಣಗಳಾಗಿವೆ. ಸದ್ಯದಲ್ಲೇ ಫಾಜಿಲ್ ಗ್ಯಾರೇಜ್ ಗೆ ಹೊಸ ಆಸ್ಟನ್ ಮಾರ್ಟಿನ್ ಬರಲಿದೆ ಎಂದು ವರದಿಯಾಗಿದೆ.

More from DriveSpark

Article Published On: Wednesday, November 8, 2023, 17:04 [IST]
English summary
Actor fahadh faasil buys new mercedes benz gls 450 suv details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+