ಅಪ್ಪ ಮಗನ ಬಾಂಧವ್ಯ: ತಂದೆಯ ಹುಟ್ಟುಹಬ್ಬಕ್ಕೆ 'ಮಹೀಂದ್ರಾ ಎಕ್ಸ್‌ಯುವಿ700' ಉಡೊಗೊರೆ ಕೊಟ್ಟ ಖ್ಯಾತ ನಟ

ಜಗತ್ತಿಗೆ ನಮ್ಮನ್ನು ಪರಿಚಯಿಸುವುದು ತಾಯಿ. ಜಗತ್ತನ್ನೇ ನಮಗೆ ಪರಿಚಯಿಸುವವನು ತಂದೆ.. ಜೀವನದ ಪ್ರತಿಯೊಂದು ಹಂತದಲ್ಲೂ ಬೆನ್ನೆಲುಬಾಗಿ ನಿಲ್ಲುವ ಅಪ್ಪನಿಗೆ ಹುಟ್ಟುಹಬ್ಬದ ಪ್ರಯುಕ್ತ ಮರಾಠಿ ಕಿರುತೆರೆಯ ಜನಪ್ರಿಯ ನಟ ಹರ್ದೀಕ್ ಜೋಶಿ, ಮಹೀಂದ್ರಾ ಎಕ್ಸ್‌ಯುವಿ700 ಕಾರನ್ನು ಉಡೊಗೊರೆಯಾಗಿ ನೀಡಿದ್ದಾರೆ. ಸದ್ಯ ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಹರ್ದೀಕ್ ಜೋಶಿ (Hardeek Joshi) ಮರಾಠಿ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಖ್ಯಾತಿ ಗಳಿಸಿದ್ದು, ಶುಕ್ರವಾರ ತಮ್ಮ ತಂದೆಗೆ ಹೊಚ್ಚ ಹೊಸ ಮಹೀಂದ್ರಾ ಎಕ್ಸ್‌ಯುವಿ700 (Mahindra XUV700) ಎಸ್‌ಯುವಿಯನ್ನು ಗಿಫ್ಟ್ ನೀಡಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಕಾರನ್ನು ಕುಟುಂಬದೊಂದಿಗೆ ವಿತರಣೆ ಪಡೆಯುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿರುವ ಹರ್ದೀಕ್, 'ವಿಶೇಷವಾದವರಿಗೆ ಜನ್ಮದಿನದ ಉಡುಗೊರೆ. ಹುಟ್ಟುಹಬ್ಬದ ಶುಭಾಶಯಗಳು ಪಪ್ಪಾ' ಎಂದು ಶೀರ್ಷಿಕೆ ಬರೆದಿದ್ದಾರೆ.

Actor Hardeek Joshi Gifted His Father New Mahindra Xuv700 Car

ನಟ ಹರ್ದೀಕ್ ಜೋಶಿ ಮಹೀಂದ್ರಾ ಎಕ್ಸ್‌ಯುವಿ700 ಕಾರಿನ ಯಾವ ರೂಪಾಂತರವನ್ನು ಖರೀದಿಸಿದ್ದಾರೆ ಎನ್ನುವುದರ ಕುರಿತು ಮಾಹಿತಿಯಿಲ್ಲ. ಭಾರತದ ಮಾರುಕಟ್ಟೆಯಲ್ಲಿ ಈ ಕಾರು ರೂ.13.99 ಲಕ್ಷದಿಂದ ರೂ.26.99 ಲಕ್ಷ ಎಕ್ಸ್ ಶೋರೂಂ ದರದಲ್ಲಿ ದೊರೆಯುತ್ತದೆ. ಎಎಕ್ಸ್3, ಎಎಕ್ಸ್5, ಎಎಕ್ಸ್7 ಒಳಗೊಂಡಂತೆ ವಿವಿಧ ರೂಪಾಂತರ ಹಾಗೂ ಎವರೆಸ್ಟ್ ವೈಟ್, ಮಿಡ್ನೈಟ್ ಬ್ಲಾಕ್, ನಪೋಲಿ ಬ್ಲಾಕ್ ಸೇರಿದಂತೆ ಆಕರ್ಷಕ ಬಣ್ಣಗಳೊಂದಿಗೂ ಲಭ್ಯವಿದೆ.

ಈ ಕಾರು ಎರಡು ಪವರ್ ಟ್ರೈನ್ ಆಯ್ಕೆಯಲ್ಲಿ ಲಭ್ಯವಿದೆ. ಇದರ 2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 200 ಪಿಎಸ್ ಗರಿಷ್ಠ ಪವರ್ (ಶಕ್ತಿ) ಮತ್ತು 380 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 2.2-ಲೀಟರ್ ಡೀಸೆಲ್ ಎಂಜಿನ್ 185 ಪಿಎಸ್ ಪವರ್ ಹಾಗೂ 450 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ.

Actor Hardeek Joshi Gifted His Father New Mahindra Xuv700 Car

ರೂಪಾಂತರಗಳಿಗೆ ಅನುಗುಣವಾಗಿ ಮಹೀಂದ್ರಾ ಎಕ್ಸ್‌ಯುವಿ700, 6-ಸ್ವೀಡ್ ಮ್ಯಾನುವಲ್ ಅಥವಾ 6-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ನೊಂದಿಗೆ ಸಿಗುತ್ತದೆ. FWD (ಫ್ರಂಟ್ ವೀಲ್ ಡ್ರೈವ್) ಮತ್ತು AWD (ಆಲ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದ್ದು, 17 ಕೆಎಂಪಿಎಲ್ ಮೈಲೇಜ್ ಕೊಡುತ್ತದೆ. ಈ ಕಾರು 5, 6 ಮತ್ತು 7 ಆಸನ ಆಯ್ಕೆ ವ್ಯವಸ್ಥೆಯಲ್ಲಿಯೂ ಲಭ್ಯವಿದೆ.

ಮಹೀಂದ್ರಾ ಎಕ್ಸ್‌ಯುವಿ700 ಎಸ್‌ಯುವಿಯು ಸಾಕಷ್ಟು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 6-ವೇ ಪವರ್ ಡ್ರೈವರ್ ಸೀಟ್, 12 ಸ್ಪೀಕರ್‌, ದೊಡ್ಡದಾದ ಸನ್‌ರೂಫ್, ಡುಯಲ್ ಝೋನ್ ಕ್ಲೇಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್ಸ್, ಇನ್-ಬಿಲ್ಟ್ ಅಲೆಕ್ಸಾ ಕನೆಕ್ಟಿವಿಟಿಯನ್ನು ಪಡೆದಿದೆ.

ಸುರಕ್ಷತೆಯ ದೃಷ್ಟಿಯಿಂದ ಎಕ್ಸ್‌ಯುವಿ700 ಎಸ್‌ಯುವಿ, 7 ಏರ್‌ಬ್ಯಾಗ್‌, ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), TPMS (ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), 360 ಡಿಗ್ರಿ ಕ್ಯಾಮೆರಾ, ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಅನ್ನು ಒಳಗೊಂಡಿದೆ. ಈ ಕಾರಿಗೆ ಹ್ಯುಂಡೈ ಅಲ್ಕಾಜರ್, ಎಂಜಿ ಹೆಕ್ಟರ್ ಪ್ಲಸ್, ಟಾಟಾ ಸಫಾರಿ, ಟಾಟಾ ಹ್ಯಾರಿಯರ್, ಹ್ಯುಂಡೈ ಕ್ರೆಟಾಗಳು ಪ್ರಬಲ ಪ್ರತಿಸ್ಪರ್ಧಿಯಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, March 30, 2024, 16:09 [IST]
English summary
Actor hardeek joshi gifted his father new mahindra xuv700 car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+