ನೆಚ್ಚಿನ ಕಾರನ್ನು ಎನ್‌ಜಿಒಗೆ ದಾನ ಮಾಡಿದ ಬಾಲಿವುಡ್ ನಟ

ಬಾಲಿವುಡ್ ನಟ ಜಾನ್ ಅಬ್ರಹಾಂ ಸಿನಿಮಾ ಜೊತೆಗೆ ಫಿಟ್ನೆಸ್ ಹಾಗೂ ಕಾರು, ಬೈಕುಗಳ ಬಗೆಗೂ ಕ್ರೇಜ್ ಹೊಂದಿದ್ದಾರೆ. ಜಾನ್ ಅಬ್ರಹಾಂ ದಿನ ನಿತ್ಯ ಬಳಸುವ ಕಾರುಗಳಿಂದ ಹಿಡಿದು ಐಷಾರಾಮಿ ಎಸ್‌ಯುವಿಗಳವರೆಗೆ ಹಲವು ಕಾರುಗಳನ್ನು ಹೊಂದಿದ್ದಾರೆ.

ನೆಚ್ಚಿನ ಕಾರನ್ನು ಎನ್‌ಜಿಒಗೆ ದಾನ ಮಾಡಿದ ಬಾಲಿವುಡ್ ನಟ

ಈಗ ಜಾನ್‌ ಅಬ್ರಹಾಂರವರ ಗ್ಯಾರೇಜ್‌ನಲ್ಲಿ ಒಂದು ಕಾರು ಕಡಿಮೆಯಾಗಿದೆ. ಜಾನ್ ಅಬ್ರಹಾಂ ತಮ್ಮ ನೆಚ್ಚಿನ ತನ್ನ ಮಾರುತಿ ಜಿಪ್ಸಿ ಕಾರನ್ನು ಪ್ರಾಣಿ ದಯಾ ಸಂಸ್ಥೆಗೆ ದಾನ ಮಾಡಿದ್ದಾರೆ. ಜಾನ್ ಅಬ್ರಹಾಂ ತಮ್ಮ ಬಳಿಯಿದ್ದ ಬಿಳಿ ಬಣ್ಣದ ಮಾರುತಿ ಜಿಪ್ಸಿ ಕಾರನ್ನು ಮುಂಬೈ ಮೂಲದ ಎನ್‌ಜಿಒ ಅನಿಮಲ್ ಮ್ಯಾಟರ್ ಟು ಮಿ ಸಂಸ್ಥೆಗೆ ನೀಡಿದ್ದಾರೆ.

ನೆಚ್ಚಿನ ಕಾರನ್ನು ಎನ್‌ಜಿಒಗೆ ದಾನ ಮಾಡಿದ ಬಾಲಿವುಡ್ ನಟ

ಈ ಎನ್‌ಜಿಒ ತನ್ನ ಎಎಂಟಿಎಂ ಇಂಡಿಯಾ ಇನ್ಸ್​ಟಾಗ್ರಾಂ ಮೂಲಕ ಈ ಮಾಹಿತಿಯನ್ನು ಬಹಿರಂಗಪಡಿಸಿದೆ. ಈ ಸಂಸ್ಥೆಯು ಕೊಲ್ಲಾಡ್ ಪ್ರಾಣಿಧಾಮದಲ್ಲಿ ಪ್ರಾಣಿಗಳನ್ನು ಉಳಿಸಲು, ಅವುಗಳನ್ನು ಎಲ್ಲಿಗಾದರೂ ಕರೆದೊಯ್ಯಲು, ಅವುಗಳಿಗೆ ಔಷಧಿಗಳನ್ನು ತರಲು ಜಾನ್‌ ಅಬ್ರಹಾಂರವರ ಜಿಪ್ಸಿಯನ್ನು ಬಳಸಿಕೊಳ್ಳಲಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ನೆಚ್ಚಿನ ಕಾರನ್ನು ಎನ್‌ಜಿಒಗೆ ದಾನ ಮಾಡಿದ ಬಾಲಿವುಡ್ ನಟ

ಕಳೆದ ಐದು ವರ್ಷಗಳಿಂದ ಜಾನ್ ಅಬ್ರಹಾಂ ಈ ಸಂಸ್ಥೆಯೊಂದಿಗೆ ಸಂಬಂಧ ಹೊಂದಿದ್ದಾರೆಂದು ಈ ಎನ್‌ಜಿಒ ಮಾಹಿತಿ ನೀಡಿದೆ. ಜಾನ್ ಅಬ್ರಹಾಂರವರು ಮಾರುತಿ ಸುಜುಕಿ ಕಂಪನಿಯ ಜಿಪ್ಸಿ ಕಾರನ್ನು ಹಲವಾರು ವರ್ಷಗಳಿಂದ ಹೊಂದಿದ್ದರೂ ಅದರೊಂದಿಗೆ ಹೆಚ್ಚು ಕಾಣಿಸಿಕೊಂಡಿಲ್ಲ.

ನೆಚ್ಚಿನ ಕಾರನ್ನು ಎನ್‌ಜಿಒಗೆ ದಾನ ಮಾಡಿದ ಬಾಲಿವುಡ್ ನಟ

ಜಿಪ್ಸಿಯನ್ನು ದಾನ ಮಾಡಿದ್ದಕ್ಕಾಗಿ ಜಾನ್ ಅಬ್ರಹಾಂ ಅವರಿಗೆ ಧನ್ಯವಾದ ಅರ್ಪಿಸಿರುವ ಎನ್‌ಜಿಒ, ಈ ಕಾರನ್ನು ಉತ್ತಮವಾಗಿ ಬಳಸಿಕೊಳ್ಳುವುದಾಗಿ ಹೇಳಿದೆ. ಜಾನ್ ಅಬ್ರಹಾಂ ತಾವು ಮಾಡೆಲಿಂಗ್‌ ಮಾಡುತ್ತಿದ್ದ ದಿನಗಳಲ್ಲಿ ಈ ಜಿಪ್ಸಿಯನ್ನು ಖರೀದಿಸಿದ್ದರು.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ನೆಚ್ಚಿನ ಕಾರನ್ನು ಎನ್‌ಜಿಒಗೆ ದಾನ ಮಾಡಿದ ಬಾಲಿವುಡ್ ನಟ

ಮಾರುತಿ ಜಿಪ್ಸಿ ಜೊತೆಗೆ ಜಾನ್ ಅಬ್ರಹಾಂ ನಿಸ್ಸಾನ್ ಜಿಟಿ-ಆರ್, ಆಡಿ ಕ್ಯೂ 7, ಲ್ಯಾಂಬೊರ್ಗಿನಿ ಗ್ಲಾರ್ಡೊ, ಇಸುಝು ವಿ-ಮ್ಯಾಕ್ಸ್ ಡಿ-ಕ್ರಾಸ್ ಕಾರುಗಳನ್ನು ಹೊಂದಿದ್ದಾರೆ. ಅವರು ತಮ್ಮ ಎಲ್ಲಾ ವಾಹನಗಳನ್ನು ಜೋಪಾನವಾಗಿಟ್ಟು ಕೊಂಡಿರುವ ಚಿತ್ರಗಳು ಹಲವು ಬಾರಿ ಬಹಿರಂಗವಾಗಿವೆ.

ನೆಚ್ಚಿನ ಕಾರನ್ನು ಎನ್‌ಜಿಒಗೆ ದಾನ ಮಾಡಿದ ಬಾಲಿವುಡ್ ನಟ

ಜಾನ್ ಅಬ್ರಹಾಂ ಹಲವಾರು ಬೈಕುಗಳನ್ನು ಸಹ ಹೊಂದಿದ್ದಾರೆ. ಇವುಗಳಲ್ಲಿ ಎಪ್ರಿಲಿಯಾ ಆರ್ ಎಸ್ ವಿ 4, ಯಮಹಾ ಆರ್ ಡಿ 350, ಯಮಹಾ ವೈಝಡ್ಎಫ್ ಆರ್ 1, ಯಮಹಾ ವಿಇ-ಮ್ಯಾಕ್ಸ್, ಕವಾಸಕಿ ನಿಂಜಾ ಝಡ್ಎಕ್ಸ್ -14 ಆರ್, ಡುಕಾಟಿ ಪಾನಿಗಲ್ ವಿ4 ಹಾಗೂ ಎಂವಿ ಅಗಸ್ಟಾ ಬ್ರೂಟೇಲ್ 800ಗಳು ಸೇರಿವೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ನೆಚ್ಚಿನ ಕಾರನ್ನು ಎನ್‌ಜಿಒಗೆ ದಾನ ಮಾಡಿದ ಬಾಲಿವುಡ್ ನಟ

ಜಾನ್ ಅಬ್ರಹಾಂ ಅವರಂತೆಯೇ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸಹ ಕಾರು ಹಾಗೂ ಬೈಕುಗಳ ಕ್ರೇಜ್ ಹೊಂದಿದ್ದಾರೆ. ಇತ್ತೀಚೆಗೆ ಧೋನಿ 1960ರ ದಶಕದ ವಿಂಟೇಜ್ ಕಾರನ್ನು ಮುಂಬೈನಲ್ಲಿ ನಡೆದ ಹರಾಜಿನಲ್ಲಿ ಖರೀದಿಸಿದ್ದರು.

Most Read Articles

Kannada
English summary
Actor John Abraham donates his Maruti Gypsy car to Mumbai based NGO. Read in Kannada.
Story first published: Wednesday, September 9, 2020, 19:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X