ಕಿಚ್ಚ ಸುದೀಪ್ ಹುಟ್ಟುಹಬ್ಬದಂದು ಕಿಚ್ಚನ ಕೈಯಿಂದ ದುಬಾರಿ ಬೈಕ್ ಗಿಫ್ಟ್ ಪಡೆದುಕೊಂಡ ಅಕುಲ್ ಬಾಲಾಜಿ

ಸ್ಯಾಂಡಲ್‌ವುಡ್‌ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ (Kichcha Sudeep) ಇಂದು (ಸೆಪ್ಟೆಂಬರ್ 2) 49ನೇ ವಸಂತಕ್ಕೆ ಸುದೀಪ್​ ಕಾಲಿಟ್ಟಿದ್ದಾರೆ. ಕಳೆದ ಎರಡು ವರ್ಷಗಳಿಂದ ಕರೋನಾ ಮಹಾಮಾರಿಯಿಂದ ಹುಟ್ಟು ಹಬ್ಬ ಆಚರಿಸಲು ಸಾಧ್ಯವಾಗಿರಲಿಲ್ಲ.

ಆದರೆ, ಈ ವರ್ಷ ನಟ ಸುದೀಪ್​ ಹುಟ್ಟುಹಬ್ಬವನ್ನು ಅಭಿಮಾನಿಗಳು ಹಬ್ಬದಂತೆ ಆಚರಿಸುತ್ತಿದ್ದಾರೆ. ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಕಿಚ್ಚನಿಗೆ ಸ್ನೇಹಿತರು, ಆಪ್ತರು ಮತ್ತು ಅಭಿಮಾನಿಗಳು ಪ್ರೀತಿಯಿಂದ ಶುಭಕೋರಿದ್ದಾರೆ.

ಕಿಚ್ಚ ಸುದೀಪ್ ಹುಟ್ಟುಹಬ್ಬದಂದು ಕಿಚ್ಚನ ಕೈಯಿಂದ ದುಬಾರಿ ಬೈಕ್ ಗಿಫ್ಟ್ ಪಡೆದುಕೊಂಡ ಅಕುಲ್ ಬಾಲಾಜಿ

ಬಾದ್​ಷಾ ಕಿಚ್ಚ ಸುದೀಪ್ ಹುಟ್ಟುಹಬ್ಬದಂದು ಸೆಲ್ಫಿ ತೆಗೆಸಿ, ಕೇಕ್ ಕಟ್​ ಮಾಡಿಸಿ ಅಭಿಮಾನಿಗಳು ಸಂಭ್ರಮಿಸಿದರು. ಇಂದು ಕಿಚ್ಚ ಸುದೀಪ್​ ಅವರು ತಮ್ಮ ಹುಟ್ಟುಹಬ್ಬದಂದು ನಟ, ನಿರೂಪಕ ಅಕುಲ್ ಬಾಲಾಜಿಗೆ ಉಡುಗೊರೆಯೊಂದನ್ನು ನೀಡಿದ್ದಾರೆ. ನಿರೂಪಕ ಅಕುಲ್ ಬಾಲಾಜಿಗೆ ಸುದೀಪ್ ಅವರು ತಮ್ಮ ಹುಟ್ಟುಹಬ್ಬದ ದಿನದಂದೇ ದುಬಾರಿ ಬಿಎಂಡಬ್ಲ್ಯು ಜಿ 310 ಆರ್ ಬೈಕ್ ಅನ್ನು ಗಿಫ್ಟ್ ನೀಡಿದ್ದಾರೆ. ಕಿಚ್ಚ ಸುದೀಪ್​​ ತಮಗೆ ಉಡುಗೊರೆ ನೀಡಿದ ಬೈಕ್ ಜೊತೆ ವಿಡೀಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಕಿಚ್ಚ ಸುದೀಪ್ ಹುಟ್ಟುಹಬ್ಬದಂದು ಕಿಚ್ಚನ ಕೈಯಿಂದ ದುಬಾರಿ ಬೈಕ್ ಗಿಫ್ಟ್ ಪಡೆದುಕೊಂಡ ಅಕುಲ್ ಬಾಲಾಜಿ

ವಿಡಿಯೋದಲ್ಲಿ ಇವತ್ತು ಕಿಚ್ಚೋತ್ಸವ, ಅಂದರೆ ನಿನ್ನೆ ಮೊನ್ನೆ ಗಣೇಶೋತ್ಸವವಾಯ್ತು. ಅದೇ ರೀತಿ ಇವತ್ತು ಕಿಚ್ಚ ಸುದೀಪ್ ಅವರ ಬರ್ತ್ ಡೇ ಅದಕ್ಕೆ ಇವತ್ತು ಕಿಚ್ಚೋತ್ಸವ. ಅವರ ಹುಟ್ಟುಹಬ್ಬದಂದು ನಾವು ಅವರಿಗೆ ಉಡುಗೊರೆ ನೀಡುತ್ತೇವೆ. ಆದರೆ ಇಂದು ಅವರೇ ನನಗೆ ಉಡುಗೊರೆ ನೀಡಿದ್ದಾರೆ. ಈ ಬೈಕ್ ಉಡುಗೊರೆ ನೀಡಿದ್ದಕ್ಕೆ ನಾನು ಬಹಳ ಆಭಾರಿಯಾಗಿದ್ದೇನೆ, ಅನಂತರ ಸುದೀಪ್ ಅವರನ್ನು ತಬ್ಬಿಕೊಂಡು ಧನ್ಯವಾದ ಹೇಳಿದ್ದಾರೆ.

ಕಿಚ್ಚ ಸುದೀಪ್ ಹುಟ್ಟುಹಬ್ಬದಂದು ಕಿಚ್ಚನ ಕೈಯಿಂದ ದುಬಾರಿ ಬೈಕ್ ಗಿಫ್ಟ್ ಪಡೆದುಕೊಂಡ ಅಕುಲ್ ಬಾಲಾಜಿ

ಬಿಎಂಡಬ್ಲುನ ಜಿ 310 ಆರ್ ಬೈಕ್ ಅನ್ನು ಕಿಚ್ಚ ಅಕುಲ್‌ ಬಾಲಾಜಿಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ಬಿಎಂಡಬ್ಲು ಜಿ 310 ಆರ್ ಬೈಕಿನ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ,2.70 ಲಕ್ಷವಾಗಿದೆ, ಈ ಬೈಕ್ KA 05 KR 3666 ನೊಂದಣಿ ಸಂಖ್ಯೆಯನ್ನು ಹೊಂದಿದೆ.

ಕಿಚ್ಚ ಸುದೀಪ್ ಹುಟ್ಟುಹಬ್ಬದಂದು ಕಿಚ್ಚನ ಕೈಯಿಂದ ದುಬಾರಿ ಬೈಕ್ ಗಿಫ್ಟ್ ಪಡೆದುಕೊಂಡ ಅಕುಲ್ ಬಾಲಾಜಿ

ಸಿನಿ ಜರ್ನಿಯಲ್ಲಿ ಸಾಕಷ್ಟು ಸೋಲು, ಗೆಲುವು ಎಲ್ಲಾವನ್ನು ಕಂಡಿರುವ ಸುದೀಪ್ ಸಾಲು ಸಾಲು ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆಗಿದೆ. ಕನ್ನಡ ಮಾತ್ರವಲ್ಲ ತೆಲುಗು, ಹಿಂದಿ, ಹಾಗೂ ತಮಿಳು ಸೇರಿದಂತೆ 70ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಕಿಚ್ಚ ಇಂದು ಪ್ಯಾನ್ ಇಂಡಿಯಾ ಸ್ಟಾರ್ ಅಗಿ ಮಿಂಚುತ್ತಿದ್ದಾರೆ.

ಕಿಚ್ಚ ಸುದೀಪ್ ಹುಟ್ಟುಹಬ್ಬದಂದು ಕಿಚ್ಚನ ಕೈಯಿಂದ ದುಬಾರಿ ಬೈಕ್ ಗಿಫ್ಟ್ ಪಡೆದುಕೊಂಡ ಅಕುಲ್ ಬಾಲಾಜಿ

ಈ ಹಿಂದೆ ಕಿಚ್ಚ ಸುದೀಪ್ ಅವರು ತಮ್ಮ ಬಾಡಿಗಾರ್ಡ್ 'ಕಿಚ್ಚ ಕಿರಣ್' ಎಂಬುವರಿಗೆ ಬುಲೆಟ್ ಬೈಕ್‌ಅನ್ನು ಉಡುಗೊರೆಯಾಗಿ ನೀಡಿದ್ದರು. ಹಲವು ವರ್ಷಗಳಿಂದ ಸುದೀಪ್‌ಗೆ ಬಾಡಿಗಾರ್ಡ್‌ ಆಗಿ ಕೆಲಸ ಮಾಡುತ್ತಿರುವ ಸಾಯಿ ಕಿರಣ್‌ಗೆ ಕಪ್ಪು ಬಣ್ಣದ ರಾಯಲ್‌ ಎನ್‌ಫೀಲ್ಡ್‌ ಬುಲೆಟ್‌ ಬೈಕ್ ಅನ್ನು ನೀಡಿದ್ದರು.

ಕಿಚ್ಚ ಸುದೀಪ್ ಅವರು ಅಕುಲ್ ಬಾಲಾಜಿಗೆ ಗಿಫ್ಟ್ ನೀಡಿದ ಬಿಎಂಡಬ್ಲ್ಯು ಜಿ 310 ಆರ್ ಬೈಕಿನ ಬಗ್ಗೆ ಹೇಳುವುದಾದರೆ, ಈ ಬೈಕ್ ಹೆಡ್‌ಲ್ಯಾಂಪ್, ಟರ್ನ್ ಸಿಗ್ನಲ್‌ಗಳು ಮತ್ತು ಟೈಲ್ ಲ್ಯಾಂಪ್‌ಗಾಗಿ ಎಲ್ಇಡಿ ಲೈಟಿಂಗ್ ಅನ್ನು ನವೀಕರಿಸಲಾಗಿದೆ. ಕಳೆದ ಭಾರೀ ನವೀಕರಣದ ಭಾಗವಾಗಿ, ಜಿ 310 ಆರ್ ಪ್ಯಾಲೆಟ್‌ಗೆ ಬಿಎಂಡಬ್ಲ್ಯು ಹೊಸ ಬಣ್ಣಗಳನ್ನು ಕೂಡ ಸೇರಿಸಿದೆ.

ಕಿಚ್ಚ ಸುದೀಪ್ ಹುಟ್ಟುಹಬ್ಬದಂದು ಕಿಚ್ಚನ ಕೈಯಿಂದ ದುಬಾರಿ ಬೈಕ್ ಗಿಫ್ಟ್ ಪಡೆದುಕೊಂಡ ಅಕುಲ್ ಬಾಲಾಜಿ

ಈ ಬಿಎಂಡಬ್ಲ್ಯು ಜಿ 310 ಆರ್ ಬೈಕಿನಲ್ಲಿ 313 ಸಿಸಿ ಸಿಂಗಲ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 9,700 ಆರ್‌ಪಿಎಂನಲ್ಲಿ 34 ಬಿಹೆಚ್ಪಿ ಮತ್ತು 7,700 ಆರ್‌ಪಿಎಂನಲ್ಲಿ 28 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಕಿಚ್ಚ ಸುದೀಪ್ ಹುಟ್ಟುಹಬ್ಬದಂದು ಕಿಚ್ಚನ ಕೈಯಿಂದ ದುಬಾರಿ ಬೈಕ್ ಗಿಫ್ಟ್ ಪಡೆದುಕೊಂಡ ಅಕುಲ್ ಬಾಲಾಜಿ

ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ. ತನ್ನ ಪ್ರತಿಸ್ಪರ್ಧಿಗ ಬೈಕುಗಳಗಿಂತ ಹೆಚ್ಚಿನ ಪವರ್ ಮತ್ತು ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಬಿಎಂಡಬ್ಲ್ಯು ಜಿ 310 ಆರ್ ಭಾರತೀಯ ಮಾರುಕಟ್ಟೆಯಲ್ಲಿ ಕೆಟಿಎಂ ಡ್ಯೂಕ್ 390, ಬಜಾಜ್ ಡೊಮಿನಾರ್ 400 ಮತ್ತು ಟಿವಿಎಸ್ ಅಪಾಚೆ ಆರ್‌ಆರ್‌310 ಬೈಕುಗಳಿಗೆ ಪೈಪೋಟಿ ನೀಡುತದೆ.

ಕಿಚ್ಚ ಸುದೀಪ್ ಹುಟ್ಟುಹಬ್ಬದಂದು ಕಿಚ್ಚನ ಕೈಯಿಂದ ದುಬಾರಿ ಬೈಕ್ ಗಿಫ್ಟ್ ಪಡೆದುಕೊಂಡ ಅಕುಲ್ ಬಾಲಾಜಿ

ಇನ್ನು ಪ್ರೀಮಿಯಂ ಟೂರಿಂಗ್ ದ್ವಿಚಕ್ರ ವಾಹನಗಳ ಉತ್ಪಾದನಾ ಕಂಪನಿಯಾಗಿರುವ ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ಭಾರತದಲ್ಲಿ ಹೊಸ ಟೂರಿಂಗ್ ಬೈಕ್ ಸರಣಿಯನ್ನು ಕಳೆದ ತಿಂಗಳು ಬಿಡುಗಡೆ ಮಾಡಿತ್ತು. ಗ್ರಾಹಕರ ಬೇಡಿಕೆಯೆಂತೆ ಕಂಪನಿಯು ಆರ್ 1250 ಆರ್‌ಟಿ, ಕೆ 1600 ಜಿಟಿಎಲ್, ಕೆ 1600 ಬ್ಯಾಗರ್ ಮತ್ತು ಕೆ 1600 ಗ್ಲ್ಯಾಂಡ್ ಅಮೆರಿಕಾ ಮಾದರಿಗಳನ್ನು ಪರಿಚಯಿಸಲಾಗಿದೆ. ಆರ್ 1250 ಆರ್‌ಟಿ, ಕೆ 1600 ಜಿಟಿಎಲ್, ಕೆ 1600 ಬ್ಯಾಗರ್ ಮತ್ತು ಕೆ 1600 ಗ್ಲ್ಯಾಂಡ್ ಅಮೆರಿಕಾ ಮಾದರಿಗಳು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 23.95 ಲಕ್ಷ ಬೆಲೆ ಹೊಂದಿದ್ದು, ಹೊಸ ಟೂರಿಂಗ್ ಬೈಕ್ ಮಾದರಿಗಳಲ್ಲಿ ಆರ್ 1250 ಮಾದರಿಯು ಆರಂಭಿಕ ಆವೃತ್ತಿಯಾಗಿದೆ.

ಕಿಚ್ಚ ಸುದೀಪ್ ಹುಟ್ಟುಹಬ್ಬದಂದು ಕಿಚ್ಚನ ಕೈಯಿಂದ ದುಬಾರಿ ಬೈಕ್ ಗಿಫ್ಟ್ ಪಡೆದುಕೊಂಡ ಅಕುಲ್ ಬಾಲಾಜಿ

ಹೊಸ ಟೂರಿಂಗ್ ಬೈಕ್‌ಗಳಲ್ಲಿ ಆರ್ 1250 ಆರ್‌ಟಿ ಮಾದರಿಯು ರೂ. 23.95 ಲಕ್ಷ ಬೆಲೆ ಹೊಂದಿದ್ದರೆ ಕೆ 1600 ಬ್ಯಾಗರ್ ಮಾದರಿಯು ರೂ. 29.90 ಲಕ್ಷ, ಕೆ 1600 ಜಿಟಿಎಲ್ ಮಾದರಿಯು ರೂ. 32 ಲಕ್ಷ ಮತ್ತು ಕೆ 1600 ಗ್ಲ್ಯಾಂಡ್ ಅಮೆರಿಕಾ ಮಾದರಿಯು ರೂ. 33 ಲಕ್ಷ ಬೆಲೆ ಹೊಂದಿದೆ.ಹೊಸ ಮಾದರಿಗಳಲ್ಲಿ ಈ ಬಾರಿ ಹಲವಾರುವ ಸುಧಾರಿತ ತಂತ್ರಜ್ಞಾನ ಮತ್ತು ತಾಂತ್ರಿಕ ಸೌಲಭ್ಯಗಳನ್ನು ನೀಡಲಾಗಿದೆ.

Most Read Articles

Kannada
English summary
Actor kichcha sudeep gifts bmw g 31 r bike to akul balaji details
Story first published: Friday, September 2, 2022, 19:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X