600 ಕೋಟಿ ಆದಿಪುರುಷ್ ಚಿತ್ರದ ನಟ ಪ್ರಭಾಸ್‌ನ ಕೋಟಿ ಬೆಲೆಯ ಕಾರುಗಳು: ಲ್ಯಾಂಬೋರ್ಗಿನಿಯಿಂದ ಜಾಗ್ವಾರ್‌ವರೆಗೆ
ಸದ್ಯಕ್ಕೆ ಭಾರತದಲ್ಲಿ ಆದಿ ಪುರುಷ್ (Adipurush) ತೀರಾ ಟ್ರೆಂಡಿಂಗ್‌ನಲ್ಲಿದೆ. ರಾಮಾಯಣ ಮಹಾ ಕಾವ್ಯವನ್ನು ತೆಗೆದುಕೊಂಡು 600 ಕೋಟಿ ಖರ್ಚಿನಲ್ಲಿ ಸಿನೆಮಾ ಮಾಡಿ ವಿಮರ್ಷಕರ ತೀವ್ರ ಟೀಕೆಗೆ ಗುರಿಯಾಗಿದೆ. ಅದರಲ್ಲಿನ ನಾಯಕ ನಟ ಪ್ರಭಾಸ್ ಸಹ ಸುದ್ದಿಯಲ್ಲಿದ್ದು ನಾವಿಂದು ಅವರ ಬಳಿ ಇರುವ ಕಾರು ಕಲೆಕ್ಷನ್‌ಗಳು ಯಾವುದೆಂದು ನೋಡೋಣ.
ಲ್ಯಾಂಬೋರ್ಗಿನಿ ಅವೆಂಟಡಾರ್: ಐಷಾರಾಮಿ ಕಾರು ತಯಾರಿಕಾ ಕಂಪನಿಯಾದ ಲ್ಯಾಂಬೋರ್ಗಿನಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಪ್ರಭಾಸ್ ಅವರ ಬಳಿ ಇರುವ ಕಾರ್ ಕಲೆಕ್ಷನ್‌ನಲ್ಲಿ ಮೊದಲಿಗೆ ಗಮನ ಸೆಳೆಯುವ ಕಾರೆಂದರೆ ಅದು ಲ್ಯಾಂಬೋರ್ಗಿನಿ ಅವೆಂಟಡಾರ್ ಎಸ್ ರೋಡ್‌ಸ್ಟರ್. 6.5 ಲೀಟರ್ ಎಂಜಿನ್ ಇರುವ ಈ ಕಾರು 770 ಪಿಎಸ್ ಪವರನ್ನು ಉತ್ಪಾದಿಸುತ್ತದೆ.

ರೇಂಜ್ ರೋವರ್: ರೇಂಜ್ ರೋವರ್ ಎಸ್‌ಯುವಿಗಳು ಸೆಲೆಬ್ರಿಟಿಗಳ ನೆಚ್ಚಿನ ಆಯ್ಕೆಯಲ್ಲಿ ಒಂದು. ತಮ್ಮ ಕಾರು ಕಲೆಕ್ಷನ್‌ನಲ್ಲಿ ರೇಂಜ್ ರೋವರ್ ಎಸ್‌ಯುವಿಗಳು ಇಲ್ಲ ಎಂದರೆ ಅದು ಅಪೂರ್ಣವೇ ಸರಿ. ಪ್ರಭಾಸ್ ಅವರ ಬಳಿಯೂ ರೇಂಜ್ ರೋವರ್‌ನ ಕಪ್ಪು ಬಣ್ಣದ ಸ್ಯಾಂಟೋರಿನಿ ಫೋರ್ತ್ ಜನರೇಷನ್ ಲಾಂಗ್ ವ್ಹೀಲ್ ಬೇಸ್ ರೇಂಜ್ ರೋವರ್ ಕಾರಿದೆ. 4.4-liter V8 ಎಂಜಿನ್ 340 ಪಿಎಸ್ ಪವರನ್ನು ಉತ್ಪಾದಿಸುತ್ತದೆ.
ರೋಲ್ಸ್ ರೋಯ್ಸ್ ಫ್ಯಾಂಟಮ್: ವಿಶ್ವದ ಲಕ್ಷುರಿ ಕಾರುಗಳಲ್ಲೇ ಹೆಸರುವಾಸಿ ಈ ರೋಲ್ಸ್ ರಾಯ್ಸ್. ರೋಲ್ಸ್ ರೋಯ್ಸ್ ಫ್ಯಾಂಟಂ ಪ್ರಭಾಸ್ ಅವರ ಬಳಿ ಇರುವ ಲಕ್ಷುರಿ ಕಾರು. ಸೆಲೆಬ್ರಿಟಿಗಳ ನೆಚ್ಚಿನ ಕಾರುಗಳಲ್ಲಿ ಇದೂ ಒಂದು. 6.75-liter ಲೀಟರ್ ವಿ12 ಎಂಜಿನ್ ಅನ್ನು ಹೊಂದಿರುವ ಈ ಕಾರು 8 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮೆಷಿನ್ ಅನ್ನು ಹೊಂದಿದೆ.

ಜಾಗ್ವಾರ್ ಎಕ್ಸ್‌ಜೆ: ಸಿಲ್ವರ್ ಬಣ್ಣದ ಜಾಗ್ವಾರ್ ಎಕ್ಸ್‌ಜೆ ಪ್ರಭಾಸ್ ಅವರ ಕಾರು ಕಲೆಕ್ಷನ್‌ನಲ್ಲಿ ವಿಶೇಷವಾಗಿರುವುದು. ಇವರು ಸ್ಟಾರ್ ಆಗುವ ಅರಂಭದಲ್ಲಿ ಖರೀದಿಸಿದ ಮೊದಲ ಲಕ್ಷುರಿ ಕಾರು ಇದು. ಖರೀದಿಸಿ ಸುಮಾರು ಹತ್ತು ವರ್ಷಗಳು ಕಳೆದರೂ ಇನ್ನೂ ಸಹ ಪ್ರಭಾಸ್ ಇದನ್ನು ಜೋಪಾನ ಮಾಡುತ್ತಿದ್ದಾರೆ.
ಬಿಎಂಡಬ್ಲ್ಯೂ X5: ವರದಿಗಳ ಪ್ರಕಾರ ಪ್ರಭಾಸ್ ಬಿಎಂಡಬ್ಲ್ಯೂ X5 ಯನ್ನು ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ತೀರಾ ವಿರಳವಾಗಿ ಪ್ರಭಾಸ್ ಅವರು ಈ ಕಾರಿನಲ್ಲಿ ಕಾಣಿಸಿಕೊಳ್ಳುವುದು. 5 ಸೀಟರ್ ಎಸ್‌ಯುವಿ ಯಾದ ಈ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ.
ಇಷ್ಟು ಮಾತ್ರವಲ್ಲದೇ ಅವರಲ್ಲಿ ಇನ್ನೂ ಕಾರುಗಳಿದ್ದು, ಈ ಮೇಲೆ ತಿಳಿಸಿದ ಕಾರುಗಳು ಪ್ರಭಾಸ್ ಬಳಿ ಇರುವ ಐಷಾರಾಮಿ ಕಾರು ಕಲೆಕ್ಷನ್‌ನಲ್ಲಿ ಪ್ರಮುಖವಾದವು. ಇನ್ನು ಕೆಲವೇ ದಿನಗಳಲ್ಲಿ ಪ್ರಭಾಸ್ ಅವರ ಸಾಲಾರ್ ಚಿತ್ರ ತೆರೆಗೆ ಬರಲಿದ್ದು, ಸದ್ಯಕ್ಕೆ ಡೋಲಾಯಾಮಾನ ಸ್ಥಿತಿಯಲ್ಲಿರುವ ಅವರ ಸಿನಿಮಾ ಕೆರಿಯರ್ ಮತ್ತೆ ಟ್ರ್ಯಾಕ್ ಗೆ ಬರಲಿ ಎಂಬುದೇ ಎಲ್ಲರ ಹಾರೈಕೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








