ಭದ್ರತೆಗಾಗಿ ಬುಲೆಟ್ ಪ್ರೂಫ್ 'ನಿಸ್ಸಾನ್' ಕಾರು ಖರೀದಿಸಿದ ನಟ ಸಲ್ಮಾನ್‌ ಖಾನ್‌: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!

ಬಾಲಿವುಡ್ ಸೂಪರ್ ಸ್ಟಾರ್ ನಟ ಸಲ್ಮಾನ್‌ ಖಾನ್‌ ಯಾರಿಗೆ ಗೊತ್ತಿಲ್ಲ ಹೇಳಿ. ಸಿನಿಮಾ ಅಥವಾ ವಿವಾದಗಳಿಂದ ಸುದ್ದಿಯಾಗುತ್ತಲೇ ಇರುತ್ತಾರೆ. ಕೆಲವೊಮ್ಮೆ ಅವರ ಕಾರುಗಳ ಕಲೆಕ್ಷನ್ ದೊಡ್ಡ ಸದ್ದನ್ನೇ ಮಾಡುತ್ತವೆ. ಸದ್ಯ, ದಿನನಿತ್ಯದ ಓಡಾಟಕ್ಕೆ ಸಲ್ಮಾನ್‌ ಯಾವ ಕಾರನ್ನು ಬಳಸುತ್ತಾರೆಂದು ಕೆಲವರಿಗೆ ಕುತೂಹಲವಿರುತ್ತದೆ. ಆ ಬಗ್ಗೆ ತಿಳಿಯೋಣ.

ಇತ್ತೀಚೆಗೆ ನೂತನ ಬುಲೆಟ್ ಪ್ರೂಫ್ 'ನಿಸ್ಸಾನ್ ಪೆಟ್ರೋಲ್' ಎಸ್‌ಯುವಿಯನ್ನು ನಟ ಸಲ್ಮಾನ್‌ ಖಾನ್‌ ಖರೀದಿಸಿದ್ದು, ಸ್ಟೈಲಿಶ್ ವೈಟ್ ಕಲರ್ ಹೊಂದಿರುವ ಈ ಕಾರಿನಲ್ಲಿ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಆ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಅವರ ವೈಯಕ್ತಿಕ ಭದ್ರತೆಯ ವಾಹನ ಟೊಯೊಟಾ ಫಾರ್ಚುನರ್ ಹಾಗೂ ಪೊಲೀಸ್ ಪೈಲೆಟ್ ವಾಹನ ಮಹೀಂದ್ರಾ ಬೊಲೆರೊ ನಿಯೋ ಮಧ್ಯದಲ್ಲಿ ನಿಸ್ಸಾನ್ ಪೆಟ್ರೋಲ್ ಸಾಗಿದೆ.

Actor Sanman Khan Buy a new bullet proof Nissan car

'ನಿಸ್ಸಾನ್' ಬ್ರ್ಯಾಂಡ್ ಭಾರತದಲ್ಲೂ ಹೆಚ್ಚು ಜನಪ್ರಿಯವಾಗುತ್ತಿದೆ. ಆದರೆ, ಬಹುತೇಕರಿಗೆ ಈ ಕಂಪನಿಯ ಬಹುಬೇಡಿಕೆಯ 'ಪೆಟ್ರೋಲ್ ಎಸ್‌ಯುವಿ' ಬಗ್ಗೆ ತಿಳಿದಿಲ್ಲ. ಇದು ಬುಲೆಟ್ ಪ್ರೂಫ್ ಕಾರಾಗಿದ್ದು, ಮಧ್ಯಪ್ರಾಚ್ಯ ಹಾಗೂ ಆಗ್ನೇಯ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಖ್ಯಾತಿಗಳಿಸಿದೆ. ಭಾರತದಲ್ಲಿ ಈ ಎಸ್‌ಯುವಿಯನ್ನು ಮಾರಾಟ ಮಾಡುವುದಿಲ್ಲ. ಸಲ್ಮಾನ್‌, ಇದನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖರೀದಿಸಿ, ದೇಶಕ್ಕೆ ಆಮದು ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ನಟ ಸಲ್ಮಾನ್‌ ಖಾನ್‌ ಬಳಿಯಿರುವ 'ನಿಸ್ಸಾನ್ ಪೆಟ್ರೋಲ್' ಎಸ್‌ಯುವಿಯ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು 5.6 ಲೀಟರ್ ವಿ8 ಪೆಟ್ರೋಲ್ ಎಂಜಿನ್ ಹೊಂದಿದ್ದು, 405 hp ಪವರ್ ಹಾಗೂ 560 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 7 ಸ್ವೀಡ್ ಅಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆ ಹೊಂದಿದೆ. ಜೊತೆಗೆ ಫೋರ್ ವೀಲ್ ಡ್ರೈವ್ ತಂತ್ರಜ್ಞಾನವನ್ನು ಪಡೆದಿದ್ದು, ಸರಿ ಸುಮಾರು ರೂ.80 ಲಕ್ಷದಿಂದ 1 ಕೋಟಿ ಬೆಲೆಯಲ್ಲಿ ಸಿಗಬಹುದು.

'ನಿಸ್ಸಾನ್ ಪೆಟ್ರೋಲ್' ಮಾದರಿ 1951ರಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿತ್ತು. ಅಂದಿನಿಂದಲ್ಲೂ ಭಾರೀ ಫೇಮಸ್ ಆಗಿದ್ಧ ಇದರ 6ನೇ ಜನರೇಷನ್ ಆವೃತ್ತಿ, ಪ್ರಸ್ತುತ ಖರೀದಿಗೆ ಲಭ್ಯವಿದೆ. ಇನ್ನು, ಸಲ್ಮಾನ್‌ ಖಾನ್‌ ಮುಂಬೈನಲ್ಲಿ ಸಂಚರಿಸಲು ಈ ಮೊದಲು ಬುಲೆಟ್ ಪ್ರೂಫ್ ಟೊಯೋಟಾ ಲ್ಯಾಂಡ್ ಕ್ರೂಸರ್ ಅನ್ನು ಬಳಕೆ ಮಾಡುತ್ತಿದ್ದರು. ಅದು ಹತ್ತು ಹಲವು ಆತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿತ್ತು.

ಇಷ್ಟೇ ಅಲ್ಲದೆ, ಸಲ್ಮಾನ್‌ ಖಾನ್‌ ಗ್ಯಾರೇಜ್‌ನಲ್ಲಿ ಲ್ಯಾಂಡ್ ರೋವರ್ ರೇಂಜ್ ರೋವರ್ ಆಟೋಬಯೋಗ್ರಫಿ ಕಾರಿದ್ದು, ಸುಮಾರು ರೂ.1.87 ಕೋಟಿ ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದರ 3.0-ಲೀಟರ್ ವಿ6 ಡೀಸೆಲ್ ಎಂಜಿನ್, 254 Bhp ಪವರ್ ಹಾಗೂ 600 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಜೊತೆಗೆ 'ಆಡಿ' ಕಾರಿನ ರಾಯಭಾರಿಯೂ ಆಗಿದ್ದ ಸಲ್ಮಾನ್‌ ಅವರ ಬಳಿ, ಅದೇ ಕಂಪನಿಯ ಐಷಾರಾಮಿ 'RS7' ಕಾರಿದೆ.

ನಟ ಸಲ್ಮಾನ್‌ ಖಾನ್‌ ಅವರಿಗೆ ತುಂಬಾ ಬೈಕ್ಸ್ ಕ್ರೇಜ್ ಇದೆಯೆಂದರೇ ತಪ್ಪಾಗುವುದಿಲ್ಲ. ಅವರು, ದುಬಾರಿ ಹಾಗೂ ಐಷಾರಾಮಿ ಬೈಕುಗಳ ದೊಡ್ಡ ಸಂಗ್ರಹವನ್ನೇ ಹೊಂದಿದ್ದಾರೆ. ಸುಜುಕಿ ಇಂಡಿಯಾದ ರಾಯಭಾರಿಯಾಗಿರುವ ಸಲ್ಮಾನ್‌, ಅದೇ ಕಂಪನಿಯ ದುಬಾರಿ ಬೆಲೆಯ 'ಹಯಾಬುಸಾ' ಬೈಕ್ ಮಾಲೀಕರೂ ಆಗಿದ್ದಾರೆ. ಇದು ಬರೋಬ್ಬರಿ ರೂ.20,59,295 ಲಕ್ಷ ಬೆಲೆಯನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Thursday, April 6, 2023, 10:45 [IST]
English summary
Actor sanman khan buy new bullet proof nissan car for security details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+