ಅಂಬಾನಿಯಷ್ಟೇ ಐಷಾರಾಮಿ ಕಾರುಗಳ ಒಡೆಯ ಸರವಣನ್... ಟ್ರೋಲ್ ಮಾಡಿದವರೇ ಮೆಚ್ಚಿದ್ರು!

ಕಳೆದ ವರ್ಷ ಸಿನಿಮಾವೊಂದನ್ನು ಮಾಡಿ ಇಡೀ ದೇಶಾದ್ಯಂತ ಗುರ್ತಿಸಿಕೊಂಡಿದ್ದ ತಮಿಳುನಾಡು ಮೂಲದ ಉದ್ಯಮಿ 'ಸರವಣನ್ ಅರುಲ್' ಅವರ ಬಗ್ಗೆ ಯಾರಿಗೂ ಸರಿಯಾಗಿ ತಿಳಿದಿಲ್ಲ. ಇವರು ಲೆಜೆಂಡ್ ಸರವಣ ಸಿನಿಮಾ ಮಾಡಿದ ಸಣ್ಣ ಉದ್ಯಮಿ ಎಂದುಕೊಂಡಿರುವವರೇ ಹೆಚ್ಚು. ಆದರೆ ಈಗ ಟ್ರೋಲರ್‌ಗಳ ಹುಬ್ಬೇರಿಸುವಂತೆ ಮಾಡಿದ್ದಾರೆ.

ಈ ಉದ್ಯಮಿಯ ಕಾರ್ ಕಲೆಕ್ಷನ್ ಹಾಗೂ ಗ್ಯಾರೆಜ್ ಬಗ್ಗೆ ಒಂದಷ್ಟು ಮಾಧ್ಯಮಗಳು ವರದಿ ಮಾಡಿದ್ದವು. ಇದೇ ಕಾರ್‌ ಕಲೆಕ್ಷನ್ ಫೋಟೋಗಳನ್ನು ಹಂಚಿಕೊಳ್ಳುತ್ತಾ ತಮಿಳುನಾಡಿನ ಕೆಲ ಮೀಮ್ಸ್ ಪೇಜ್‌ಗಳು ಅವರ ಬಗ್ಗೆ ಹೆಮ್ಮೆಯಾಗಿ ಬರೆದಿರುವುದು ಇತ್ತೀಚೆಗೆ ವೈರಲ್ ಆಗಿತ್ತು. ಈ ಹಿಂದೆ ಕೂಡ ಸರವಣನ್ ಅವರು ಟ್ರೋಲ್‌ಗಳೇ ನನಗೆ ಯಶಸ್ಸು ತಂದುಕೊಡಲಿವೆ ಎಂದು ಹೇಳಿದ್ದರು.

actor-saravanan-car-collection-luxury-cars-as-ambani

ಅದರಂತೆ ಟ್ರೋಲ್ ಮಾಡಿದವರೇ ಅವರ ಕಾರ್ ಕಲೆಕ್ಷನ್ ಬಗ್ಗೆ ಬರೆಯುವಂತಾಗಿದೆ. ಚೆನ್ನೈನ ಜನಪ್ರಿಯ '3666 ಗ್ಯಾರೇಜ್' ಸರವಣನ್ ಅವರದ್ದು. ಅವರ ಗ್ಯಾರೇಜ್‌ನಲ್ಲಿರುವ ಎಲ್ಲಾ ಕಾರುಗಳು ವಿಭಿನ್ನ ಬಣ್ಣಗಳಾಗಿದ್ದರೂ ಸಹ ಪ್ರತಿಯೊಂದು ಕಾರು 3666 ಸಂಖ್ಯೆಯನ್ನು ಹೊಂದಿವೆ. ಅದಕ್ಕಾಗಿಯೇ ಈ ಗ್ಯಾರೇಜ್‌ಗೆ 3666 ಗ್ಯಾರೇಜ್ ಎಂದು ಕರೆಯಲಾಗುತ್ತದೆ. ಒಮ್ಮೆ ಅವರ ಕಾರುಗಳ ಮೇಲೆ ಕಣ್ಣಾಯಿಸೋಣ.

ಲಂಬೋರ್ಗಿನಿ ಹುರಾಕನ್: ಲಂಬೋರ್ಗಿನಿ Huracan LP 610-4 ಎಕ್ಸ್ ಶೋ ರೂಂ ಬೆಲೆ ಸರಿಸುಮಾರು 3.7 ಕೋಟಿ ರೂ.ಗಳಾಗಿದ್ದು, ಬೆಂಗಳೂರಿನಲ್ಲಿ ಆನ್ ರೋಡ್ ಬೆಲೆ ಸುಮಾರು 4.8 ಕೋಟಿ ರೂ. ಇದೆ. ಇದು ಹೈ ಪರ್ಫಾಮೆನ್ಸ್ ರೂಪಾಂತರವಾಗಿದ್ದು, ಎಲ್ಲಾ ನಾಲ್ಕು ಚಕ್ರಗಳಿಗೆ ಪವರ್ ಸಪ್ಲೈ ಮಾಡುತ್ತದೆ, ಇದರ ಬೇಸ್ ಹುರಾಕನ್ ಮಾದರಿಯು ಹಿಂಬದಿ-ಚಕ್ರ-ಡ್ರೈವ್ ಸೆಟಪ್ ಅನ್ನು ಹೊಂದಿದೆ.

actor-saravanan-car-collection-luxury-cars-as-ambani

ಆಸ್ಟನ್ ಮಾರ್ಟಿನ್ DB11: ಆಸ್ಟನ್ ಮಾರ್ಟಿನ್ DB11, ಎರಡು-ಬಾಗಿಲಿನ ಕೂಪ್ ಪ್ರಪಂಚದ ಅತ್ಯಂತ ಐಷಾರಾಮಿ ಗ್ರ್ಯಾಂಡ್ ಟೂರ್‌ಗಳಲ್ಲಿ ಒಂದೆಂದು ಹೆಸರುವಾಸಿಯಾಗಿದೆ. ಇದು ಭಾರತೀಯ ಬೀದಿಗಳಲ್ಲಿ ಅಪರೂಪದ ಕಾರಾಗಿದೆ. ಕೆಲವು ಅದೃಷ್ಟಶಾಲಿಗಳ ಮಾಲೀಕತ್ವದಲ್ಲಿದ್ದು, ಅವರಲ್ಲಿ ಸರವಣನ್ ಕುಡ ಒಬ್ಬರು. ಇದು ರಸ್ತೆಯಲ್ಲಿ ಗಮನಾರ್ಹ ಉಪಸ್ಥಿತಿಯಾಗಿದೆ.

ರೋಲ್ಸ್ ರಾಯ್ಸ್ ಫ್ಯಾಂಟಮ್ VII: ಈ ಭವ್ಯವಾದ ವಾಹನವು ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಂತ ದುಬಾರಿ ಕಾರುಗಳಲ್ಲಿ ಒಂದಾಗಿ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಈ ವಾಹನವು ಯಾವುದೇ ಐಷಾರಾಮಿ ಸೌಕರ್ಯಕ್ಕೂ ಕಮ್ಮಿ ಇಲ್ಲ. ಅದ್ದೂರಿ ವೈಶಿಷ್ಟ್ಯಗಳ ಒಂದು ಶ್ರೇಣಿಯನ್ನು ಒಳಗೊಂಡಿದೆ. ನಿಜವಾದ ಐಷಾರಾಮಿ ಅನುಭವಕ್ಕಾಗಿ ಸೀಟ್ ಮಸಾಜ್ ಅನ್ನು ಸಹ ಒಳಗೊಂಡಿದೆ. ಇದು ಸರವಣನ್ ಗ್ಯಾರೇಜ್‌ನ ದುಬಾರಿ ಕಾರು.

actor-saravanan-car-collection-luxury-cars-as-ambani

ಫೆರಾರಿ 488: ಭಾರತದಲ್ಲಿ ಕೆಲವೇ ಕಾರುಗಳಿದ್ದು, ಇದರ ಎಂಜಿನ್ 3.9-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ V8 ಪೆಟ್ರೋಲ್ ಎಂಜಿನ್ ಹೊಂದಿದೆ. 670 Bhp ಗರಿಷ್ಠ ಪವರ್ ಮತ್ತು 760 Nm ಗರಿಷ್ಠ ಟಾರ್ಕ್ ಅನ್ನು ಹೊರಹಾಕುತ್ತದೆ. 7-ಸ್ಪೀಡ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದ್ದು, ಇದು ಕೇವಲ 3 ಸೆಕೆಂಡುಗಳಲ್ಲಿ 0-100 ಕಿ.ಮೀ/ಗಂ ವೇಗವನ್ನು ಸಾಧಿಸುತ್ತದೆ.

ರೋಲ್ಸ್ ರಾಯ್ಸ್ ವ್ರೈತ್: ಇದು ಅತ್ಯಂತ ಸ್ಪೋರ್ಟಿ ರೋಲ್ಸ್ ರಾಯ್ಸ್ ಆಗಿದೆ. 6.6-ಲೀಟರ್ V12 ಎಂಜಿನ್‌ನಿಂದ 623 BHP ಪವರ್ ಹೊರಹಾಕುತ್ತದೆ. ಕುತೂಹಲಕಾರಿಯಾಗಿ, ವ್ರೈತ್‌ನ ಒಳಭಾಗವು ರೋಲ್ಸ್ ರಾಯ್ಸ್ ಕ್ಷೇತ್ರದಲ್ಲಿ ಅತ್ಯಂತ ಪ್ರಶಾಂತವಾಗಿರುತ್ತದೆ ಎಂದು ಪ್ರಶಂಸಿಸಲ್ಪಟ್ಟಿದೆ. ಈ ಕಾರಿಗೆ ಹಲವು ಪ್ರಶಸ್ತಿಗಳು ಕೂಡ ಸಿಕ್ಕಿವೆ. ಇದು ಕೂಡ ಸರವಣನ್ ಗ್ಯಾರೇಜ್‌ನ ದುಬಾರಿ ಕಾರು.

actor-saravanan-car-collection-luxury-cars-as-ambani

ಬೆಂಟ್ಲಿ ಕಾಂಟಿನೆಂಟಲ್ ಜಿಟಿ: ಭಾರತದಲ್ಲಿ ಬೆಂಟ್ಲಿ ಕಾಂಟಿನೆಂಟಲ್ ಜಿಟಿ ನಾಲ್ಕು ವಿಭಿನ್ನ ರೂಪಾಂತರಗಳು ಹಾಗೂ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಒಂದು 4.0-ಲೀಟರ್ V8 ಪೆಟ್ರೋಲ್ ಎಂಜಿನ್, 500 Bhp ಮತ್ತು 660 Nm ಟಾರ್ಕ್‌ನ ಗರಿಷ್ಠ ಪವರ್ ಹೊರಹಾಕುತ್ತದೆ. ನವೀಕರಿಸಿದ 6.0-ಲೀಟರ್ ಪೆಟ್ರೋಲ್ ಎಂಜಿನ್ ಸಹ ಕೊಡುಗೆಯಲ್ಲಿದ್ದು, ಇದು 567 Bhp ಮತ್ತು 700 Nm ಟಾರ್ಕ್ ಹೊರಹಾಕುತ್ತದೆ.

ರೋಲ್ಸ್ ರಾಯ್ಸ್ ಘೋಸ್ಟ್: ಸುಮಾರು 2.5 ಟನ್ ತೂಕದ, ರೋಲ್ಸ್ ರಾಯ್ಸ್ ಘೋಸ್ಟ್ ದೃಢವಾದ 6.75-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ V12 ಎಂಜಿನ್ ಅನ್ನು ಹೊಂದಿದೆ. 571 Bhp ಗರಿಷ್ಠ ಪವರ್ ಮತ್ತು 850 Nm ಟಾರ್ಕ್ ಹೊರಹಾಕುತ್ತದೆ. ಆರಂಭಿಕ ಬೆಲೆ INR 6.95 ಕೋಟಿ ರೂ. ಹಾಗೆಯೇ ಇದರ ದೊಡ್ಡ ವೀಲ್‌ಬೇಸ್ ಯಾವುದೇ ಕಸ್ಟಮೈಸೇಶನ್ ವೆಚ್ಚಗಳನ್ನು ಹೊರತುಪಡಿಸಿದ್ರೂ, INR 7.95 ಕೋಟಿ ರೂ. ಬೆಲೆಯಿದೆ.

actor-saravanan-car-collection-luxury-cars-as-ambani

ಲಂಬೋರ್ಗಿನಿ ಉರುಸ್: 5 ಕೋಟಿಗಳಿಂದ ಆರಂಭವಾಗಿ, ಈ ಸೊಗಸಾದ ಇಟಾಲಿಯನ್ ಸಮಕಾಲೀನ SUV ಯ ಆರಂಭಿಕ ವೆಚ್ಚವು ಕಸ್ಟಮೈಸೇಷನ್ ಆಧರಿಸಿ ಏರಿಳಿತಗೊಳ್ಳುತ್ತದೆ. ಇದು 4.0-ಲೀಟರ್ ಟರ್ಬೋಚಾರ್ಜ್ಡ್ V8 ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, 641 Bhp ಪವರ್ ಮತ್ತು ಪ್ರಭಾವಶಾಲಿ 850 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

More from DriveSpark

Article Published On: Thursday, August 17, 2023, 17:04 [IST]
English summary
Actor saravanan car collection luxury cars as ambani
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+