ಮತ್ತೊಮ್ಮೆ ಸಂಕಷ್ಟಕ್ಕೆ ಸ್ಪಂದಿಸಿ ಹೀರೋ ಆದ ಖಳನಾಯಕ

ಲಾಕ್ ಡೌನ್ ಅವಧಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ವಲಸೆ ಕಾರ್ಮಿಕರು ಅವರ ಊರುಗಳನ್ನು ತಲುಪಲು ನಟ ಸೋನು ಸೂದ್ ನೆರವಾಗಿದ್ದರು. ಈಗ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು ಆಂಧ್ರಪ್ರದೇಶದ ಬಡ ಕುಟುಂಬವೊಂದಕ್ಕೆ ಟ್ರ್ಯಾಕ್ಟರ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

ಮತ್ತೊಮ್ಮೆ ಸಂಕಷ್ಟಕ್ಕೆ ಸ್ಪಂದಿಸಿ ಹೀರೋ ಆದ ಖಳನಾಯಕ

ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊವೊಂದು ವೈರಲ್ ಆಗಿತ್ತು. ಆ ವೀಡಿಯೊದಲ್ಲಿ ಜಮೀನು ಉಳುಮೆ ಮಾಡಲು ಎತ್ತುಗಳು ಇಲ್ಲದ ಕಾರಣಕ್ಕೆ ಇಬ್ಬರು ಸಹೋದರಿಯರು ನೇಗಿಲನ್ನು ಇಟ್ಟುಕೊಂಡು ಉಳುಮೆ ಮಾಡುತ್ತಿದ್ದರು. ಈ ವೀಡಿಯೊವನ್ನು ಟ್ವಿಟರ್ ನಲ್ಲಿ ನೋಡಿದ ಸೋನು ಸೂದ್ ಆ ಕುಟುಂಬಕ್ಕೆ ಅಂದು ಸಂಜೆ ಟ್ರಾಕ್ಟರ್ ತಲುಪಿಸುವುದಾಗಿ ಮಾಹಿತಿ ನೀಡಿದರು.

ಮತ್ತೊಮ್ಮೆ ಸಂಕಷ್ಟಕ್ಕೆ ಸ್ಪಂದಿಸಿ ಹೀರೋ ಆದ ಖಳನಾಯಕ

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ನಾಗೇಶ್ವರ ರಾವ್ ರವರದ್ದು ಬಡ ಕುಟುಂಬವಾಗಿದ್ದು ಸಣ್ಣ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದಾರೆ. ಅವರ ಹೆಣ್ಣು ಮಕ್ಕಳು ಸಹ ಅವರಿಗೆ ಕೃಷಿಯಲ್ಲಿ ನೆರವಾಗುತ್ತಿದ್ದಾರೆ. ಅವರು ತಮ್ಮ ಹೊಲವನ್ನು ನೇಗಿಲ ಮೂಲಕ ಉಳುಮೆ ಮಾಡುತ್ತಿದ್ದ ವೀಡಿಯೊ ಸಹ ವೈರಲ್ ಆಗಿತ್ತು.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಮತ್ತೊಮ್ಮೆ ಸಂಕಷ್ಟಕ್ಕೆ ಸ್ಪಂದಿಸಿ ಹೀರೋ ಆದ ಖಳನಾಯಕ

ಈ ವೀಡಿಯೊ ನೋಡಿದ ತಕ್ಷಣ ಟ್ರ್ಯಾಕ್ಟರ್ ನೀಡುವುದಾಗಿ ಸೋನು ಸೂದ್‌ ಭರವಸೆ ನೀಡಿದ್ದಾರೆ. ಭರವಸೆ ನೀಡಿ ಸುಮ್ಮನಾಗಿಲ್ಲ, ಬದಲಿಗೆ ಹೇಳಿದಂತೆ ಟ್ರ್ಯಾಕ್ಟರ್ ಅನ್ನು ತಲುಪಿಸಿದ್ದಾರೆ. ಅದೇ ದಿನ ಸಂಜೆ ನಾಗೇಶ್ವರ ರಾವ್ ಅವರ ಕುಟುಂಬಕ್ಕೆ ಸೋನಾಲಿಕಾ ಟ್ರಾಕ್ಟರ್ ತಲುಪಿಸಿದ್ದಾರೆ.

ಮತ್ತೊಮ್ಮೆ ಸಂಕಷ್ಟಕ್ಕೆ ಸ್ಪಂದಿಸಿ ಹೀರೋ ಆದ ಖಳನಾಯಕ

ಈ ಟ್ರ್ಯಾಕ್ಟರ್ ನಿಂದಾಗಿ ನಾಗೇಶ್ವರ ರಾವ್ ಅವರ ಕೃಷಿ ಕೆಲಸ ಸುಲಭವಾಗಲಿದೆ. ಲಾಕ್ ಡೌನ್ ಕಾರಣದಿಂದಾಗಿ ದೇಶದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಹಾರ, ಧಾನ್ಯಗಳ ಬಗ್ಗೆ ಭ್ರಮನಿರಸನಗೊಂಡಿದ್ದಾರೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಮತ್ತೊಮ್ಮೆ ಸಂಕಷ್ಟಕ್ಕೆ ಸ್ಪಂದಿಸಿ ಹೀರೋ ಆದ ಖಳನಾಯಕ

ಲಾಕ್ ಡೌನ್ ಅವಧಿಯಲ್ಲಿ ಸೋನು ಸೂದ್ ಅವರು ಸಾಧ್ಯವಾದಷ್ಟು ಜನರಿಗೆ ನೆರವಾಗುತ್ತಿದ್ದಾರೆ. ಈ ಹಿಂದೆ ಅವರು ಸಾವಿರಾರು ವಲಸೆ ಕಾರ್ಮಿಕರು ತಮ್ಮ ಊರುಗಳನ್ನು ತಲುಪಲು ನೆರವಾಗಿದ್ದರು.

ಮತ್ತೊಮ್ಮೆ ಸಂಕಷ್ಟಕ್ಕೆ ಸ್ಪಂದಿಸಿ ಹೀರೋ ಆದ ಖಳನಾಯಕ

ಈ ಬಡ ಕುಟುಂಬಕ್ಕೆ ಸೋನು ಸೂದ್ ಅವರು ಟ್ರಾಕ್ಟರ್ ನೀಡಿರುವ ವಿಷಯ ಬೆಳಕಿಗೆ ಬಂದ ಕೂಡಲೇ, ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುರವರು ಈ ಕುಟುಂಬದ ಹೆಣ್ಣುಮಕ್ಕಳ ಶಿಕ್ಷಣದ ಜವಾಬ್ದಾರಿ ಹೊತ್ತು ಅವರ ಕನಸುಗಳನ್ನು ಈಡೇರಿಸುವುದಾಗಿ ಭರವಸೆ ನೀಡಿ ಟ್ವೀಟ್ ಮಾಡಿದ್ದಾರೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಈ ಬಗ್ಗೆ ಸೋನು ಸೂದ್ ರವರು ಸಹ ಟ್ವೀಟ್ ಮಾಡಿದ್ದು ಚಂದ್ರಬಾಬು ನಾಯ್ಡುರವರ ಮಾತುಗಳು ಸ್ಪೂರ್ತಿ ನೀಡುತ್ತವೆ ಎಂದು ಹೇಳಿದ್ದಾರೆ. ಸೋನು ಸೂದ್ ರವರ ಈ ಕಾರ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘಿಸಲಾಗುತ್ತಿದೆ. ಸೋನು ಸೂದ್ ರವರು ಇತ್ತೀಚೆಗಷ್ಟೇ ವಿದೇಶದಲ್ಲಿ ಸಿಕ್ಕಿಬಿದ್ದಿರುವ ಭಾರತೀಯ ವಿದ್ಯಾರ್ಥಿಗಳನ್ನು ಮರಳಿ ಕರೆತರಲು ನೆರವಾಗುವುದಾಗಿ ಹೇಳಿದ್ದರು.

ಮತ್ತೊಮ್ಮೆ ಸಂಕಷ್ಟಕ್ಕೆ ಸ್ಪಂದಿಸಿ ಹೀರೋ ಆದ ಖಳನಾಯಕ

ಇನ್ನೂ ಅನೇಕ ಜನ ಭಾರತೀಯರು ವಿಶ್ವದ ಹಲವು ದೇಶಗಳಲ್ಲಿ ಸಿಕ್ಕಿಬಿದ್ದಿದ್ದಾರೆ. ಕೇಂದ್ರ ಸರ್ಕಾರವು ಈಗಾಗಲೇ ಹಲವಾರು ಜನರನ್ನು ಕರೆತಂದಿದೆ. ಸೋನು ಸೂದ್ ಮತ್ತಷ್ಟು ಜನರನ್ನು ಕರೆತರಲು ಮುಂದಾಗಿದ್ದು, ಮತ್ತೊಮ್ಮೆ ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸಿದ್ದಾರೆ. ಸೋನು ಸೂದ್ ರವರು ಕನ್ನಡಲ್ಲಿ ವಿಷ್ಣುವರ್ಧನ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.

Article Published On: Tuesday, July 28, 2020, 14:41 [IST]
English summary
Actor Sonu sood becomes hero of poor people again. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+