ಕುಗ್ರಾಮದ ಜನರಿಗೆ ಆಂಬುಲೆನ್ಸ್ ನೀಡಿ ಪರೋಪಕಾರ ಮೆರೆದ ಖ್ಯಾತ ಟಿವಿ ಸ್ಟಾರ್!

ತಮಿಳು ಕಿರುತೆರೆಯಲ್ಲಿ ಕೆಪಿವೈ ಬಾಲಾ (KPY Bala) ಖ್ಯಾತ ನಿರೂಪಕರಾಗಿ ಗುರುತಿಸಿಕೊಂಡಿದ್ದಾರೆ. ವಿಜಯ್ ಟಿವಿಯ ಜನಪ್ರಿಯ 'ಚಳಕಬ್ ಪೋವಾಟು ಯಾರು' ಶೋನ ವಿನ್ನರ್ ಆದ ಬಳಿಕ, ಬಾಲಾರ ಅದೃಷ್ಟವೇ ಬದಲಾಯಿತು. 'ಕುಕ್ ವಿತ್ ಕೋಮಾಲಿ' ಕಾರ್ಯಕ್ರಮದ ನಂತರ ಸಿನಿಮಾಗಳಲ್ಲಿ ಆಕ್ಟ್ ಮಾಡಲು ಅವಕಾಶವನ್ನು ಪಡೆದರು. ಈಗ ಆ್ಯಂಕರ್ ಆಗಿ ಸಖತ್ ಬ್ಯುಸಿಯಾಗಿದ್ದಾರೆ. ಇದರ ಹೊರತಾಗಿ ಬಾಲಾ ತಮ್ಮ ಸಮಾಜ ಸೇವೆ ಕೆಲಸಗಳಿಂದ ಕೂಡ ಮನೆ ಮಾತಾಗಿದ್ದಾರೆ. ತಾವು ಗಳಿಸುವ ಆದಾಯದ ಬಹುಭಾಗವನ್ನು ಅಗತ್ಯವಿರುವವರಿಗೆ ನೆರವು ನೀಡಲು ಬಳಕೆ ಮಾಡುತ್ತಿದ್ದಾರೆ.

ಈ ಹಿಂದೆ, ಬಾಲಾ ಈರೋಡ್ ಸಮೀಪವಿರುವ ಕಡಂಬೂರು ಜನರಿಗೆ ಆಂಬ್ಯುಲೆನ್ಸ್ (Ambulance) ನೀಡಿದ್ದರು. ಅನಕಾಪುತ್ತೂರು ಗ್ರಾಮದ ಅಂಗವಿಕಲರು & ಗರ್ಭಿಣಿಯರಿಗೆ ಸಹಾಯವಾಗಲು ಆಟೋ ಸೇವೆ ಸಹ ಆರಂಭಿಸಿದ್ದರು. ಹಾಗೆಯೇ ಜೀವ ಸಾಗಿಸಲು ಕಷ್ಟಪಡುತಿದ್ದ ಮಹಿಳೆಗೆ ನಟ ರಾಘವ ಲಾರೆನ್ಸ್ ಅವರ ಜೊತೆಗೂಡಿ ಆಟೋವೊಂದನ್ನು ಗಿಫ್ಟ್ ನೀಡಿದ್ದರು. ಬಡ ಪೆಟ್ರೋಲ್ ಪಂಪ್ ಕೆಲಸಗಾರನೊಬ್ಬನಿಗೆ 'ಟಿವಿಎಸ್ ಸ್ಟಾರ್ ಸಿಟಿ ಪ್ಲಸ್' ಬೈಕ್‌ನ್ನು ಕೊಡಿಸಿದ್ದರು.

Actor Tv Star KPY Bala Donate Maruti Eeco Ambulance For Kalvarayan Hills Village People Details

ಸದ್ಯ ಕೆಪಿವೈ ಬಾಲಾ ಕಲ್ಲಕುರಿಚಿ ಹಾಗೂ ಸೇಲಂ ಜಿಲ್ಲೆಗಳಲ್ಲಿ ಹರಡಿಕೊಂಡುರುವ ಕಲ್ವರಾಯನ್ ಬೆಟ್ಟಗಳ ಸಾಲಿನಲ್ಲಿ ವಾಸಿಸುವ ಕುಗ್ರಾಮವೊಂದರ ನಿವಾಸಿಗಳಿಗೆ ಹೊಚ್ಚ ಹೊಸ 'ಆಂಬುಲೆನ್ಸ್' ಅನ್ನು ದೇಣಿಗೆಯಾಗಿ ನೀಡಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನೊಂದಿಗೆ 'ನನ್ನ 6ನೇ ಆಂಬ್ಯುಲೆನ್ಸ್' ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ಈ ಕಲ್ವರಾಯನ್ ಬೆಟ್ಟಗಳ ಸಾಲಿನ ವಾಸಿಸುವ ಜನರಿಗೆ ಆರೋಗ್ಯ ಏರುಪೇರಾದರೆ ಆಸ್ಪತ್ರೆಗೆ ತಲುಪುವುದು ತುಂಬಾ ದುಸ್ತರವಾದ ಕೆಲಸವಾಗಿತ್ತು. ಒಂದೆರೆಡು ದುರ್ಗಮವಾದ ರಸ್ತೆಗಳು ಹಾಗೂ ದೂರದಲ್ಲಿರುವ ಪ್ರದೇಶ ಎಂಬ ಕಾರಣಕ್ಕೆ 108 ಆಂಬುಲೆನ್ಸ್‌ಗಳು ಸರಿಯಾದ ಸಮಯಕ್ಕೆ ಬರುತ್ತಿರಲಿಲ್ಲ. ಈ ಕುರಿತು ಮಾಹಿತಿ ಕಲೆ ಹಾಕಿದ ಬಾಲ, ಅಲ್ಲಿನ ನಿವಾಸಿಗಳಿಗೆ ನೆರವಾಗುವ ಉದ್ದೇಶದಿಂದ ಆಂಬುಲೆನ್ಸ್‌ನ್ನು ಉಡುಗೊರೆಯಾಗಿ ನೀಡಿದ್ದಾರೆ.

Actor Tv Star KPY Bala Donate Maruti Eeco Ambulance For Kalvarayan Hills Village People Details

ನೂತನ ಆಂಬುಲೆನ್ಸ್‌ ನೆರವಿನಿಂದ ಕುಗ್ರಾಮಗಳ ಜನರು ಸರಿ ಸುಮಾರು 40 ಕಿಲೋಮೀಟರ್ ದೂರದಲ್ಲಿರುವ ಮಾವಡಿಪಟ್ಟುವಿನ ಸರ್ಕಾರಿ ಆಸ್ಪತ್ರೆಗೆ ಸುಲಭವಾಗಿ ತಲುಪಬಹುದಾಗಿದೆ. ಕೆಪಿವೈ ಬಾಲಾ ಅವರ ಈ ಕೆಲಸಕ್ಕೆ ನೆಟ್ಟಿಗರಿಂದಲೂ ಕೂಡ ವ್ಯಾಪಕವಾದ ಮೆಚ್ಚುಗೆ ವ್ಯಕ್ತವಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಬಾಲಾರ ಪೋಸ್ಟ್ 3 ಲಕ್ಷಕ್ಕೂ ಅಧಿಕ ಲೈಕ್ ಪಡೆದುಕೊಂಡಿದೆ.

ಕೆಪಿವೈ ಬಾಲಾ ಅವರು ಮಾರುತಿ ಸುಜುಕಿ ಇಕೋ (Maruti Suzuki Eeco) ವ್ಯಾನ್‌ನ್ನು ಆಂಬುಲೆನ್ಸ್ ಆಗಿ ಪರಿವರ್ತಿಸಿ ಕುಗ್ರಾಮದ ಜನರಿಗೆ ದೇಣಿಗೆಯಾಗಿ ನೀಡಿದ್ದಾರೆ. ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ನೂತನ ಇಕೋ ವ್ಯಾನ್‌ ಕನಿಷ್ಠ ರೂ.5.32 ಲಕ್ಷ ಹಾಗೂ ಗರಿಷ್ಠ ರೂ.6.58 ಲಕ್ಷ (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ.

ಈ ಮಾರುತಿ ಇಕೋ ವ್ಯಾನ್‌ 1.2-ಲೀಟರ್ ಸಾಮರ್ಥ್ಯದ ಪೆಟ್ರೋಲ್ & ಸಿಎನ್‌ಜಿ ಎಂಜಿನ್‌ನ್ನು ಒಳಗೊಂಡಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ ಆಯ್ಕೆಯನ್ನು ಹೊಂದಿದೆ. ರೂಪಾಂತರಗಳಿಗೆ (ವೇರಿಯೆಂಟ್) ಅನುಗುಣವಾಗಿ 19.71 ರಿಂದ 26.78 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. 5/ 7 ಆಸನ (ಸೀಟ್) ಆಯ್ಕೆ ವ್ಯವಸ್ಥೆಯನ್ನು ಪಡೆದಿದೆ.

ಒಟ್ಟಾರೆಯಾಗಿ ಕೆಪಿವೈ ಬಾಲಾ ಆಂಬುಲೆನ್ಸ್ ದೇಣಿಗೆಯಾಗಿ ನೀಡಿರುವುದರಿಂದ ಕಲ್ವರಾಯನ್ ಬೆಟ್ಟಗಳ ಸಾಲಿನಲ್ಲಿ ವಾಸಿಸುವ ಕುಗ್ರಾಮಗಳ ಜನರಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಆದಷ್ಟು ಬೇಗ ಆಸ್ಪತ್ರೆ ತಲುಪಲು ಸಾಧ್ಯವಾಗಲಿದೆ. ಹೀಗೆಯೇ ಕೆಪಿವೈ ಬಾಲಾ ಅವರ ಸಮಾಜ ಸೇವೆ ಕೆಲಸಗಳು ಮತ್ತಷ್ಟು ಮುಂದುವರಿಯಲಿ ಎಂದು ನಾವು-ನೀವು ಆಶಿಸೋಣ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, November 12, 2024, 11:00 [IST]
English summary
Actor tv star kpy bala donate maruti eeco ambulance for kalvarayan hills village people details
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+