'ಕೇರಳ ಸ್ಟೋರಿ' ಹಿಟ್ ಬೆನ್ನಲ್ಲೆ ಹೊಸ ಕಾರಿನಲ್ಲಿ ಎಂಟ್ರಿ... ನಟಿ ಅದಾ ಶರ್ಮಾ ಫುಲ್ ಮಿಂಚಿಂಗ್
ಇತ್ತೀಚೆಗೆ ಬಿಡುಗಡೆಯಾಗಿ ಭಾರೀ ವಿವಾದಕ್ಕೆ ಕಾರಣವಾಗಿದ್ದ "ದಿ ಕೇರಳ ಸ್ಟೋರಿ" ಸಿನಿಮಾ ಹಿಟ್ ಆಗಿರುವ ಬೆನ್ನಲ್ಲೇ ನಟಿ ಅದಾ ಶರ್ಮಾ ಹೊಸ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ ಈ ಕಾರು Mercedes-Benz ML 250 ಐಷಾರಾಮಿ SUV ಎನ್ನಲಾಗಿದೆ.
"ದಿ ಕೇರಳ ಸ್ಟೋರಿ" ಸಿನಿಮಾ ವಿವಿಧ ಕಾರಣಗಳಿಂದಾಗಿ ಸುದ್ದಿಯಲ್ಲಿದೆ. ಕೆಲ ರಾಜ್ಯ ಸರ್ಕಾರಗಳು ಚಲನಚಿತ್ರವನ್ನು ನಿಷೇಧಿಸಿದರೆ, ಇತರರು ಅದನ್ನು ಪ್ರಚಾರ ಮಾಡಿ ಹಿಟ್ ಆಗುವಂತೆ ಮಾಡಿದ್ದಾರೆ. ಈ ಚಿತ್ರವು ಭಾರತದ ವಿವಿಧ ನಗರಗಳಲ್ಲಿ ಇನ್ನೂ ಪ್ರದರ್ಶನಗೊಳ್ಳುತ್ತಿದೆ. ಹೊಸ ದಾಖಲೆಯನ್ನು ಕೂಡ ನಿರ್ಮಿಸಿದ್ದು, 200 ಕೋಟಿ ರೂ. ಕ್ಲಬ್‌ಗೆ ಕೂಡ ಸೇರಿದೆ.

ಇನ್ನು ಚಿತ್ರದ ನಾಯಕಿ ಅದಾಶರ್ಮಾ ಹಾಗೂ ನಿರ್ದೇಶಕ ಸುದೀಪ್ತೋ ಸೇನ್ ಇತ್ತೀಚೆಗೆ ಅಪಘಾತಕ್ಕೀಡಾಗಿ ಗಾಯಗೊಂಡಿದ್ದರು. ಅದೃಷ್ಟವಶಾತ್ ಯಾವುದೇ ಹಾನಿಯಿಲ್ಲದೇ ಪಾರಾಗಿದ್ದಾರೆ. ಇದಾದ ನಂತರ ನಟಿ ಅದಾ ಶರ್ಮಾ ಮೊದಲ ಬಾರಿಗೆ Mercedes-Benz ML 250 ಐಷಾರಾಮಿ SUV ಯಲ್ಲಿ ಕಾಣಿಸಿಕೊಂಡರು. ಈ ಕುರಿತ ವಿಡಿಯೋವನ್ನು ಕಾರ್ಸ್ ಫಾರ್ ಯೂ ಎಂಬ ಯ್ಯೂಟ್ಯೂಬ್ ಚಾನಲ್ ಹಂಚಿಕೊಂಡಿದೆ.
ವಿಡಿಯೋದಲ್ಲಿ ಕಂಡುಬರುವ Mercedes-Benz ML 250 ಐಷಾರಾಮಿ SUV ಆಗಿದ್ದು, ಇದು ಮಾರುಕಟ್ಟೆಯಲ್ಲಿ ಸದ್ಯ ಲಭ್ಯವಿಲ್ಲ. ನಟಿ ಇತ್ತೀಚೆಗೆ ಸೆಕೆಂಡ್ಸ್ ನಲ್ಲಿ ಈ ಕಾರನ್ನು ಖರೀದಿಸಿದ್ದಾರೆ ಎನ್ನಲಾಗಿದೆ. ಭಾರತದಲ್ಲಿ ಐಷಾರಾಮಿ ಕಾರುಗಳ ಬೇಡಿಕೆಯು ಹೆಚ್ಚಾಗಿದೆ. ಮರ್ಸಿಡಿಸ್ ML 250 ನಂತಹ ಕಾರುಗಳು ಅವುಗಳ ಮೂಲ ಬೆಲೆಯ ಅರ್ಧಕ್ಕಿಂತ ಕಡಿಮೆ ಬೆಲೆಗೆ ಈಗ ಲಭ್ಯವಿವೆ.

ಮಾಹಿತಿಯ ಪ್ರಕಾರ, ಅದಾ ಶರ್ಮಾ ಈ ಕಾರಿನ ಎರಡನೇ ಮಾಲೀಕರಾಗಿದ್ದು, ಇದು 2015ರ ಡೀಸೆಲ್ ಆಟೋಮ್ಯಾಟಿಕ್ SUV ಎಂದು ತಿಳಿದುಬಂದಿದೆ. ಅದಾ ಶರ್ಮಾಗೆ ಕಪ್ಪು ಬಣ್ಣದ ಬಗ್ಗೆ ಒಲವು ಇದೆಯಂತೆ. ಹಾಗಾಗಿಯೇ Mercedes-Benz ML 250 ಕೂಡ ಬ್ಲಾಕ್ ಬಣ್ಣದ್ದಾಗಿದೆ. ಈ ಹಿಂದೆಯು ನಟಿ ಕಪ್ಪು ಬಣ್ಣದ ಹುಂಡೈ ಕ್ರೆಟಾವನ್ನು ಹೊಂದಿದ್ದರು.
ಈಗ ಖರೀದಿಸಿರುವ Mercedes-Benz ML 250 SUV ಎಂಜಿನ್ ವಿಶೇಷತೆಗಳನ್ನು ನೋಡುವುದಾದರೆ, ಇದು ಡೀಸೆಲ್ ಆವೃತ್ತಿಯಾಗಿದ್ದು, 2143 cc, 4-ಸಿಲಿಂಡರ್, ಟರ್ಬೋಚಾರ್ಜ್ಡ್ ಎಂಜಿನ್‌ನೊಂದಿಗೆ 203 Bhp ಮತ್ತು 500 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು Mercedes Benz ನ 4ಮ್ಯಾಟಿಕ್ ಆಲ್-ವೀಲ್ ಡ್ರೈವ್ ಸಿಸ್ಟಮ್‌ನೊಂದಿಗೆ ಬರುತ್ತದೆ.
ಇತ್ತಿಚೆಗೆ ನಡೆದ ಅಪಘಾತದ ನಂತರ ಅದಾ ಶರ್ಮಾ ಈ SUV ಅನ್ನು ಖರೀದಿಸಿದ್ದಾರೆಯೇ ಎಂಬುದರ ಬಗ್ಗೆ ನಮಗೆ ಖಚಿತ ಮಾಹಿತಿಯಿಲ್ಲ. ಆದ್ರೆ ಇತ್ತಿಚೆಗೆ Mercedes Benz ML 250 SUV ನಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರುವ ಕಾರಣ ಖರೀದಿಸಿರುವ ಸಾಧ್ಯತೆಯು ಇದೆ. ಈ ಕುರಿತು ಹೆಚ್ಚಿನ ಮಾಹಿತಿ ಶೀಘ್ರದಲ್ಲೇ ಹೊರಬರಲಿದೆ.
ಡ್ರೈವ್ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.


Click it and Unblock the Notifications








