ಸಿಬ್ಬಂದಿಗೆ ದುಬಾರಿ ಬೆಲೆಯ ಕಾರನ್ನು ಗಿಫ್ಟ್ ಆಗಿ ನೀಡಿದ ಬಾಲಿವುಡ್ ನಟಿ

ನಟಿ ಜಾಕ್ವೆಲಿನ್ ಫರ್ನಾಂಡೀಸ್ ಇತ್ತೀಚೆಗೆ ಹೊಸ ಟೊಯೊಟಾ ಇನೋವಾ ಕ್ರಿಸ್ಟಾ ಕಾರನ್ನು ತಮ್ಮ ಸಿಬ್ಬಂದಿಯೊಬ್ಬರಿಗೆ ಉಡುಗೊರೆಯಾಗಿ ನೀಡಿದ್ದರು. ಇದರ ಜೊತೆಗೆ ಈ ಹೊಸ ಕಾರನ್ನು ಪೂಜೆ ಮಾಡುವ ಸಂದರ್ಭದಲ್ಲಿ ಅವರು ತಮ್ಮ ಸಿಬ್ಬಂದಿಯ ಜೊತೆಗಿದ್ದರು.

ಸಿಬ್ಬಂದಿಗೆ ದುಬಾರಿ ಬೆಲೆಯ ಕಾರನ್ನು ಗಿಫ್ಟ್ ಆಗಿ ನೀಡಿದ ಬಾಲಿವುಡ್ ನಟಿ

ಜಾಕ್ವೆಲಿನ್ ಫರ್ನಾಂಡೀಸ್ ಮೊದಲಿನಿಂದಲೂ ತಮ್ಮ ಸಿಬ್ಬಂದಿಗಳಿಗೆ ಉಡುಗೊರೆಗಳನ್ನು ನೀಡುತ್ತಿದ್ದಾರೆ. ಇದಕ್ಕೂ ಮುನ್ನ ಅವರು ತಮ್ಮ ಹೇರ್ ಡಿಸೈನರ್ ಗೆ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದರು. ಜಾಕ್ವೆಲಿನ್ ಫರ್ನಾಂಡೀಸ್ ಹೊಸ ಕಾರಿನ ಪೂಜೆಯಲ್ಲಿ ಭಾಗಿಯಾಗಿರುವ ವೀಡಿಯೊ ಹಾಗೂ ಫೋಟೋಗಳು ಬಹಿರಂಗವಾಗಿವೆ.

ಸಿಬ್ಬಂದಿಗೆ ದುಬಾರಿ ಬೆಲೆಯ ಕಾರನ್ನು ಗಿಫ್ಟ್ ಆಗಿ ನೀಡಿದ ಬಾಲಿವುಡ್ ನಟಿ

ಈ ವೀಡಿಯೊದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಕಾರಿಗೆ ಪೂಜೆ ಮಾಡುತ್ತಿರುವುದನ್ನು ಕಾಣಬಹುದು. ಈ ಸಂದರ್ಭದಲ್ಲಿ ಅವರು ಟ್ರಾಫಿಕ್ ಪೋಲಿಸ್ ಧಿರಿಸಿನಲ್ಲಿದ್ದರು. ಚಿತ್ರವೊಂದರ ಶೂಟಿಂಗ್ ನಲ್ಲಿದ್ದಾಗಲೇ ಕಾರಿನ ಪೂಜೆಯಲ್ಲಿ ಭಾಗಿಯಾಗಿದ್ದರು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಸಿಬ್ಬಂದಿಗೆ ದುಬಾರಿ ಬೆಲೆಯ ಕಾರನ್ನು ಗಿಫ್ಟ್ ಆಗಿ ನೀಡಿದ ಬಾಲಿವುಡ್ ನಟಿ

ತಾವು ಬುಕ್ ಮಾಡಿದ್ದ ಕಾರು ಯಾವಾಗ ವಿತರಣೆಯಾಗಲಿದೆ ಎಂಬುದು ಸ್ವತಃ ಜಾಕ್ವೆಲಿನ್ ಫರ್ನಾಂಡೀಸ್ ಅವರಿಗೆ ತಿಳಿದಿರಲಿಲ್ಲ. ಶೂಟಿಂಗ್ ನಲ್ಲಿ ಭಾಗಿಯಾಗಿದ್ದ ವೇಳೆ ಕಾರಿನ ವಿತರಣೆಯಾದ ಕಾರಣಕ್ಕೆ ಶೂಟಿಂಗ್ ಸೆಟ್ ನಲ್ಲಿಯೇ ಈ ಕಾರನ್ನು ತಮ್ಮ ಸಿಬ್ಬಂದಿಗೆ ನೀಡಿದ್ದಾರೆ.

ಸಿಬ್ಬಂದಿಗೆ ದುಬಾರಿ ಬೆಲೆಯ ಕಾರನ್ನು ಗಿಫ್ಟ್ ಆಗಿ ನೀಡಿದ ಬಾಲಿವುಡ್ ನಟಿ

ಜಾಕ್ವೆಲಿನ್ ಫರ್ನಾಂಡೀಸ್ ತಮ್ಮ ಸಿಬ್ಬಂದಿಗಳನ್ನು ಚೆನ್ನಾಗಿ ನೋಡಿಕೊಳ್ಳುವುದಕ್ಕೆ ಹೆಸರುವಾಸಿಯಾಗಿದ್ದಾರೆ. ಅವರು ತಮ್ಮ ಇನ್ಸ್​ಟಾಗ್ರಾಂ ಖಾತೆಯಲ್ಲಿ ಟ್ರಾಫಿಕ್ ಪೊಲೀಸ್ ಅವತಾರದಲ್ಲಿ ಕಾರಿಗೆ ಪೂಜೆ ಮಾಡುತ್ತಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಸಿಬ್ಬಂದಿಗೆ ದುಬಾರಿ ಬೆಲೆಯ ಕಾರನ್ನು ಗಿಫ್ಟ್ ಆಗಿ ನೀಡಿದ ಬಾಲಿವುಡ್ ನಟಿ

ತಮ್ಮ ಸಿಬ್ಬಂದಿಗೆ ಟೊಯೊಟಾ ಇನೋವಾ ಕ್ರಿಸ್ಟಾ ಕಾರನ್ನು ಉಡುಗೊರೆಯಾಗಿ ನೀಡಿರುವ ಜಾಕ್ವೆಲಿನ್ ಫರ್ನಾಂಡೀಸ್ ಅವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಅವರು ಶೇರ್ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಸಿಬ್ಬಂದಿಗೆ ದುಬಾರಿ ಬೆಲೆಯ ಕಾರನ್ನು ಗಿಫ್ಟ್ ಆಗಿ ನೀಡಿದ ಬಾಲಿವುಡ್ ನಟಿ

ಟೊಯೊಟಾ ಇನೋವಾ ಕ್ರಿಸ್ಟಾ ದೇಶಿಯ ಮಾರುಕಟ್ಟೆಯಲ್ಲಿರುವ ಜನಪ್ರಿಯ ಎಂಪಿವಿಯಾಗಿದೆ. ಈ ಎಂಪಿವಿಯನ್ನು ವಿಐಪಿಗಳು ಮಾತ್ರವಲ್ಲದೇ ಸಾಮಾನ್ಯ ಜನರು ಸಹ ಬಳಸುತ್ತಿದ್ದಾರೆ. ಈಗ ಈ ಎಂಪಿವಿಯ ಫೇಸ್‌ಲಿಫ್ಟ್ ಆವೃತ್ತಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪರಿಚಯಿಸಲಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಸಿಬ್ಬಂದಿಗೆ ದುಬಾರಿ ಬೆಲೆಯ ಕಾರನ್ನು ಗಿಫ್ಟ್ ಆಗಿ ನೀಡಿದ ಬಾಲಿವುಡ್ ನಟಿ

ಕಂಪನಿಯು ಹೊಸ ಟೊಯೊಟಾ ಇನೋವಾ ಕ್ರಿಸ್ಟಾ ಎಂಪಿವಿಯಲ್ಲಿ ಹಲವಾರು ಅಪ್ ಡೇಟ್ ಗಳನ್ನು ಮಾಡಿದೆ. ಇದರಿಂದಾಗಿ ಹೊಸ ತಲೆಮಾರಿನ ಟೊಯೊಟಾ ಇನೋವಾ ಕ್ರಿಸ್ಟಾ ಮೊದಲಿಗಿಂತ ಹೆಚ್ಚಿನ ಫೀಚರ್ ಗಳನ್ನು ಹೊಂದಿದೆ.

ಸಿಬ್ಬಂದಿಗೆ ದುಬಾರಿ ಬೆಲೆಯ ಕಾರನ್ನು ಗಿಫ್ಟ್ ಆಗಿ ನೀಡಿದ ಬಾಲಿವುಡ್ ನಟಿ

ಹೊಸ ಟೊಯೊಟಾ ಇನೋವಾ ಕ್ರಿಸ್ಟಾ ಎಂಪಿವಿಯ ಗಾತ್ರವು ಮಾರುಕಟ್ಟೆಯಲ್ಲಿರುವ ಟೊಯೊಟಾ ಇನೋವಾ ಕ್ರಿಸ್ಟಾ ಗಾತ್ರವನ್ನೇ ಹೋಲುತ್ತದೆ. ಫೇಸ್‌ಲಿಫ್ಟ್ ಆವೃತ್ತಿಯಲ್ಲಿ ದೊಡ್ಡ ಗ್ರಿಲ್ ಅನ್ನು ಅಳವಡಿಸಲಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಸಿಬ್ಬಂದಿಗೆ ದುಬಾರಿ ಬೆಲೆಯ ಕಾರನ್ನು ಗಿಫ್ಟ್ ಆಗಿ ನೀಡಿದ ಬಾಲಿವುಡ್ ನಟಿ

ಹೊಸ ಟೊಯೊಟಾ ಇನೋವಾ ಕ್ರಿಸ್ಟಾ ಎಂಪಿವಿಯು ಡ್ಯುಯಲ್-ಟೋನ್ ಕ್ರೋಮ್ ಹಾಗೂ ಬ್ಲ್ಯಾಕ್ ಫಿನಿಶಿಂಗ್ ಗಳನ್ನು ಹೊಂದಿದೆ. ಈ ಎಂಪಿವಿಯಲ್ಲಿರುವ ಗ್ರಿಲ್ ಅನ್ನು ಸಹ ಮರುವಿನ್ಯಾಸಗೊಳಿಸಲಾಗಿದ್ದು, 5 ಸ್ಲಾಟ್‌ಗಳನ್ನು ನೀಡಲಾಗಿದೆ.

ಗ್ರಿಲ್ ನ ಕೆಳಭಾಗವು ಕ್ರೋಮ್ ಫಿನಿಶಿಂಗ್ ಹೊಂದಿದೆ. ಹೊಸ ಟೊಯೊಟಾ ಇನೋವಾ ಕ್ರಿಸ್ಟಾ ಇಂಡೋನೇಷ್ಯಾ ಮಾರುಕಟ್ಟೆಯಲ್ಲಿರುವ ಕಿಜುಂಗ್ ಇನೋವಾದಂತೆ ಇರಲಿದೆ. ಹೊಸ ಇನೋವಾದ ಇಂಟಿರಿಯರ್ ಮಾರುಕಟ್ಟೆಯಲ್ಲಿರುವ ಇಂಟಿರಿಯರ್ ಅನ್ನು ಹೋಲುತ್ತದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಸಿಬ್ಬಂದಿಗೆ ದುಬಾರಿ ಬೆಲೆಯ ಕಾರನ್ನು ಗಿಫ್ಟ್ ಆಗಿ ನೀಡಿದ ಬಾಲಿವುಡ್ ನಟಿ

ಆದರೆ ಆಂಬಿಯೆಂಟ್ ಲೈಟಿಂಗ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಟಿಎಫ್‌ಟಿ ಸ್ಕ್ರೀನ್ ಸೇರಿದಂತೆ ಕೆಲವು ಹೆಚ್ಚುವರಿ ಫೀಚರ್ ಗಳನ್ನು ಅಳವಡಿಸಲಾಗಿದೆ. ಫೇಸ್‌ಲಿಫ್ಟ್ ಆವೃತ್ತಿಯಲ್ಲಿರುವ ಎಂಜಿನ್‌ನಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ.

Most Read Articles

Kannada
English summary
Actress Jacqueline Fernandez gifts Toyota Innova car to her staff. Read in Kannada.
Story first published: Tuesday, October 27, 2020, 18:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X