ಬಹುಕೋಟಿ ಬೆಲೆಯ ಐಷಾರಾಮಿ ಮರ್ಸಿಡಿಸ್ ಬೆಂಝ್ ಕಾರಿನಲ್ಲಿ ಬಂದಿಳಿದ ಖ್ಯಾತ ನಟಿ
ವಾಹನಗಳ ಬಗ್ಗೆ ಕ್ರೇಜ್ ಅನ್ನೋದು ಯಾರಿಗೆ ಇರಲ್ಲ ಹೇಳಿ, ಅದರಲ್ಲಿಯು ಸಿನಿಮಾ ಸೆಲಬ್ರಿಟಿಗಳಿಗೆ ಮತ್ತು ಕ್ರಿಕೆಟಿಗರಿಗೆ ಈ ಕ್ರೇಜ್ ಸ್ವಲ್ಪ ಹೆಚ್ಚು ಇರುತ್ತದೆ. ತಾವು ಹೆಚ್ಚಾಗಿ ಐಷಾರಾಮಿ ಕಾರುಗಳಲ್ಲಿ (Luxury Cars) ಓಡಾಡಲು ಇಷ್ಟ ಪಡುತ್ತಾರೆ. ಇದರಿಂದ ಮಾರುಕಟ್ಟೆಗೆ ಲಗ್ಗೆ ಇಡುವ ಹೊಸ ಐಷಾರಾಮಿ ಕಾರುಗಳನ್ನು ಖರೀದಿಸುವುದು ಸೆಲಬ್ರಿಟಿಗಳಿಗೆ ಒಂದು ಟ್ರೆಂಡ್ ಆಗಿದೆ.
ಬಾಲಿವುಡ್‌ನ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರಾಗಿರುವ ಕರೀನಾ ಕಪೂರ್ ಕೂಡ ಅತಿ ದುಬಾರಿ ಮತ್ತು ಐಷಾರಾಮಿ ಸೆಡಾನ್‌ಗಳಲ್ಲಿ ಸುತ್ತಾಡಲು ಇಷ್ಟ ಪಡುತ್ತಾರೆ. ಇತ್ತೀಚೆಗೆ, ನಟಿ ತನ್ನ ಮುಂಬರುವ ಚಲನಚಿತ್ರ "ಜಾನೆ ಜಾನ್ಸ್" ಟ್ರೈಲರ್‌ನಲ್ಲಿ ತನ್ನ ಅಲ್ಟ್ರಾ-ಐಷಾರಾಮಿ ಮರ್ಸಿಡಿಸ್ ಬೆಂಝ್ ಎಸ್ -350d (Mercedes Benz S-350d) ಸೆಡಾನ್‌ನಲ್ಲಿ ಆಗಮಿಸುತ್ತಿರುವುದನ್ನು ಕಾಣಿಸಿಕೊಂಡಿದ್ದಾರೆ. ಚಿತ್ರದ ನಟ ವಿಜಯ್ ವರ್ಮಾ ಕೂಡ ಟ್ರೇಲರ್ ಬಿಡುಗಡೆಗೆ ತಮ್ಮ ಜೀಪ್ ಕಂಪಾಸ್‌ನಲ್ಲಿ ಆಗಮಿಸಿದ್ದರು.

ನಟಿ ಕರೀನಾ ಕಪೂರ್ (Kareena Kapoor) ತನ್ನ ಮರ್ಸಿಡಿಸ್-ಬೆಂಝ್ ಎಸ್-ಕ್ಲಾಸ್ ಕಾರಿನಲ್ಲಿ ಆಗಮಿಸಿದ ವೀಡಿಯೊವನ್ನು ಯೂಟ್ಯೂಬ್‌ನಲ್ಲಿ ಕಾರ್ಸ್ ಫಾರ್ ಯೂ ತಮ್ಮ ಚಾನಲ್‌ನಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ, ನಟಿ ತನ್ನ ಬಿಳಿ ಮರ್ಸಿಡಿಸ್-ಬೆಂಝ್ ಎಸ್-350d ಐಷಾರಾಮಿ ಸೆಡಾನ್‌ನಿಂದ ನಿರ್ಗಮಿಸುತ್ತಿರುವುದನ್ನು ಕಾಣಬಹುದು. ನಟಿ ತಮ್ಮ ಹೊಸ ಚಿತ್ರ "ಜಾನೆ ಜಾನ್" ನ ಟ್ರೈಲರ್ ಬಿಡುಗಡೆಗೆ ಆಗಮಿಸಿದರು. ನಟ ವಿಜಯ್ ವರ್ಮಾ ಹೊಸ ತಲೆಮಾರಿನ ಜೀಪ್ ಕಂಪಾಸ್‌ನಲ್ಲಿ ಟ್ರೇಲರ್ ಬಿಡುಗಡೆಗೆ ಆಗಮಿಸಿದರು.
ನಟ ತನ್ನ ಕಾರಿನ ಮುಂದೆ ಪೋಸ್ ನೀಡಿದ್ದು, ನಂತರ ಟ್ರೇಲರ್ ವೀಕ್ಷಣೆಗೆ ತೆರಳಿದ್ದಾರೆ. ಕರೀನಾ ಕಪೂರ್ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ತಮ್ಮ ಹೊಸ ಮರ್ಸಿಡಿಸ್-ಬೆಂಝ್ ಎಸ್-ಕ್ಲಾಸ್ ಕಾರನ್ನು ಖರೀದಿಸಿದ್ದರು. ಬಾಲಿವುಡ್ ಸೆಲಬ್ರಿಟಿಗಳಿಗೆ ಮರ್ಸಿಡಿಸ್ ಬೆಂಝ್ ಕಾರುಗಳ ಮೇಲೆ ಪ್ರೀತಿ ಹೆಚ್ಚು. ಕರೀನಾ ಕಪೂರ್ ಖಾನ್ ಅವರು ಕೂಡ ಮರ್ಸಿಡಿಸ್ ಬೆಂಝ್ ಕಾರುಗಳ ಅಭಿಮಾನಿಯಾಗಿದ್ದಾರೆ.

ಸೈಫ್ ಅಲಿ ಖಾನ್-ಕರೀನಾ ಕಪೂರ್ ದಂಪತಿ ಖರೀದಿಸಿದ ಈ ಕಾರು ಮರ್ಸಿಡಿಸ್ ಎಸ್-ಕ್ಲಾಸ್ S350d ಆಗಿದೆ, ಈ ಕಾರಿನ ಆನ್-ರೋಡ್ ಬೆಲೆಯು ಮುಂಬೈನಲ್ಲಿ ಸುಮಾರು ರೂ 1.95 ಕೋಟಿ ಆಗಿದೆ. ಈ ಐಷಾರಾಮಿ ಸೆಡಾನ್ ಕಾರ್ ಅನ್ನು S Class 350 D ಹಾಗೂ S Class S 450 ಎಂಬ ಎರಡು ಮಾದರಿಗಳಲ್ಲಿ ಲಭ್ಯವಿದೆ. ಈ ಮರ್ಸಿಡಿಸ್ ಎಸ್-ಕ್ಲಾಸ್ ಕಾರು ಆಕರ್ಷವಾಗಿದ್ದು, ಹೆಚ್ಚು ಫೀಚರ್ ಗಳನ್ನು ಹೊಂದಿದೆ.
ಜೊತೆಗೆ ಹಳೆಯ ಮಾದರಿಗಿಂತ ಹೆಚ್ಚು ಸುರಕ್ಷಿತವಾಗಿದೆ. ವಿನ್ಯಾಸ ಹಾಗೂ ಸ್ಟೈಲಿಂಗ್ ಬಗ್ಗೆ ಹೇಳುವುದಾದರೆ ಈ ಕಾರಿನ ಮುಂಭಾಗದ ಗ್ರಿಲ್ ಕಪ್ಪು ಬಣ್ಣವನ್ನು ಹೊಂದಿದ್ದು, ಹಲವು ಭಾಗಗಳಲ್ಲಿ ನಯವಾದ ರೇಖೆ ಹಾಗೂ ಕ್ರೋಮ್ ಅಂಶಗಳನ್ನು ನೀಡಲಾಗಿದೆ. ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರು ಹೊಸ ಡಿಜಿಟಲ್ ಎಲ್ಇಡಿ ಹೆಡ್‌ಲೈಟ್ ಹಾಗೂ 20 ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ.
ಈ ಕಾರಿನಲ್ಲಿರುವ ಫ್ಲಶ್ ಅಳವಡಿಸಿದ ಡೋರ್ ಹ್ಯಾಂಡಲ್, ಕಾರಿನ ಬಳಿ ಕೀಲಿಯನ್ನು ಚಲಿಸಿದ ನಂತರವೇ ಹೊರ ಬರುತ್ತದೆ. ಇದರ ಜೊತೆಗೆ ಈ ಫೀಚರ್ ಕಾರಿನ ಏರೋ ಡೈನಾಮಿಕ್ ಸಾಮರ್ಥ್ಯವನ್ನು ಸುಧಾರಿಸುತ್ತದೆ. ಇನ್ನು ಈ ಕಾರಿನ ಇಂಟಿರಿಯರ್ ಬಗ್ಗೆ ಹೇಳುವುದಾದರೆ, ಈ ಕಾರಿನಲ್ಲಿ - ವೈಟ್, ಸಿಯೆನ್ನಾ ಬ್ರೌನ್ ಹಾಗೂ ಬ್ಲಾಕ್ ಎಂಬ ಮೂರು ಅಪ್ ಹೊಲೆಸ್ಟರಿ ಆಯ್ಕೆಗಳನ್ನು ನೀಡಲಾಗಿದೆ.
ಈ ಕಾರಿನಲ್ಲಿ 12.8-ಇಂಚಿನ ಒಎಲ್‌ಇಡಿ ಟಚ್‌ಸ್ಕ್ರೀನ್, 12.3 ಇಂಚಿನ ಡಿಜಿಟಲ್ ಎಂಐಡಿ ಹಾಗೂ ಎರಡನೇ ತಲೆಮಾರಿನ MBUX ವಾಯ್ಸ್ ಕಂಟ್ರೋಲ್ ಗಳನ್ನು ಹೊಂದಿದೆ. ಇದರ ಜೊತೆಗೆ ಫಿಂಗರ್ ಪ್ರಿಂಟ್ ಐಡೆಂಟಿಫಿಕೇಶನ್, ಎರಡನೇ ಸಾಲಿನಲ್ಲಿ ವೆಂಟಿಲೇಟೆಡ್ ಸೀಟ್, ಮಸಾಜ್ ಫಂಕ್ಷನ್, ಸೆಂಟ್ರಲ್ ಆರ್ಮ್ ರೆಸ್ಟ್ ಮೇಲೆ ಟ್ಯಾಬ್ಲೆಟ್, 64 ಕಲರ್ ಆಂಬಿಯೆಂಟ್ ಲೈಟಿಂಗ್ ಹಾಗೂ ಬರ್ಮಿಸ್ಟರ್ 4 ಡಿ ಸರೌಂಡ್ ಸೌಂಡ್ ಸಿಸ್ಟಂ ಸೇರಿದಂತೆ ಹಲವಾರು ಫೀಚರ್ಸ್ ನೀಡಲಾಗಿದೆ.
ಮರ್ಸಿಡಿಸ್ ಬೆಂಝ್ ಕಂಪನಿಯು ಈ ಎಸ್-ಕ್ಲಾಸ್ ಕಾರಿನಲ್ಲಿ ಹಲವು ಸುರಕ್ಷತಾ ಫೀಚರ್ ಗಳನ್ನು ನೀಡಲಾಗಿದೆ. ಇವುಗಳಲ್ಲಿ 10 ಏರ್‌ಬ್ಯಾಗ್‌ಗಳು, ಫ್ರಂಟ್ ಹಾಗೂ ರೇರ್ ಪಾರ್ಕಿಂಗ್ ಸೆನ್ಸಾರ್, 360 ಡಿಗ್ರಿ ಕ್ಯಾಮೆರಾ, ಸ್ಟೆಬಿಲಿಟಿ ಕಂಟ್ರೋಲ್, ಎಮರ್ಜೆನ್ಸಿ ಬ್ರೇಕ್ ಅಸಿಸ್ಟ್, ಟ್ರಾಕ್ಷನ್ ಕಂಟ್ರೋಲ್, ಸೈಡ್ ಡಿಕ್ಕಿಂಗ್ ಮಾನಿಟರಿಂಗ್ ಹಾಗೂ ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಸೇರಿದಂತೆ ಹಲವಾರು ಫೀಚರ್ ಗಳು ಒಳಗೊಂಡಿವೆ.
ಮರ್ಸಿಡಿಸ್-ಬೆಂಝ್ ಎಸ್-ಕ್ಲಾಸ್ 3.0 ಲೀಟರ್ ಪೆಟ್ರೋಲ್ ಹಾಗೂ 3.0 ಲೀಟರ್ ಡೀಸೆಲ್ ಎಂಜಿನ್ ಎಂಬ ಎರಡು ಎಂಜಿನ್ ಆಯ್ಕೆಗಳೊಂದಿಗೆ ಹೊಂದಿದೆ. ಪೆಟ್ರೋಲ್ ಎಂಜಿನ್ 367 ಬಿಹೆಚ್‌ಪಿ ಪವರ್ ಹಾಗೂ 500 ಎನ್ಎಂ ಟಾರ್ಕ್ ಉತ್ಪಾದಿಸಿದರೆ, ಡೀಸೆಲ್ ಎಂಜಿನ್ 286 ಬಿಹೆಚ್‌ಪಿ ಪವರ್ ಹಾಗೂ 600 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಪೆಟ್ರೋಲ್ ಎಂಜಿನ್‌ನೊಂದಿಗೆ 48 ವೋಲ್ಟ್ ಮೈಲ್ಡ್ ಹೈಬ್ರಿಡ್ ಸಿಸ್ಟಂ ನೀಡಲಾಗಿದೆ.


Click it and Unblock the Notifications








