ದುಬಾರಿ ಬೆಲೆಯ Audi A8 L ಕಾರು ಖರೀದಿಸಿದ ನಟಿ ಕಿಯಾರಾ ಅಡ್ವಾನಿ

ಸಿನಿಮಾ ನಟರು ಮಾತ್ರವಲ್ಲದೇ ನಟಿಯರು ಕೂಡ ಕಾರುಗಳ ಮೇಲೆ ಕ್ರೇಜ್ ಹೊಂದಿದ್ದಾರೆ. ಸಿನಿಮಾ ನಟಿಯರು ತಾವು ಹೆಚ್ಚಾಗಿ ಐಷಾರಾಮಿ ಕಾರುಗಳಲ್ಲಿ ಓಡಾಡಲು ಇಷ್ಟ ಪಡುತ್ತಾರೆ. ಇದರಿಂದ ನಟಿಯರು ತಮ್ಮ ಮೆಚ್ಚಿನ ಬ್ರ್ಯಾಂಡ್‌ನ ಐಷಾರಾಮಿ ಕಾರುಗಳನ್ನು ಖರೀದಿಸುತ್ತಾರೆ.

ದುಬಾರಿ ಬೆಲೆಯ Audi A8 L ಕಾರು ಖರೀದಿಸಿದ ನಟಿ ಕಿಯಾರಾ ಅಡ್ವಾನಿ

ಇತ್ತೀಚೆಗೆ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ(Kiara Advani) ಐಷಾರಾಮಿ ಆಡಿ ಎ8 ಎಲ್(Audi A8 L) ಕಾರನ್ನು ಖರೀದಿಸಿದ್ದಾರೆ. ಈ ಐಷಾರಾಮಿ ಆಡಿ ಎ8 ಎಲ್ ಕಾರನ್ನು ವಿತರಣೆ ಪಡೆಯುವ ಚಿತ್ರಗಳನ್ನು ನಟಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಬಾಲಿವುಡ್​ನ ಬಹುಬೇಡಿಕೆಯ ನಟಿಯರಲ್ಲಿ ಕಿಯಾರಾ ಅಡ್ವಾನಿ ಕೂಡ ಪ್ರಮುಖರು. ಎಂ.ಎಸ್​. ಧೋನಿ: ಅನ್​ಟೋಲ್ಡ್​ ಸ್ಟೋರಿ, ಕಬೀರ್​ ಸಿಂಗ್, ಗುಡ್​ ನ್ಯೂಸ್​ ಮುಂತಾದ ಹಿಟ್ ಚಿತ್ರಗಳಿಂದ ಅವರಿಗೆ ಖ್ಯಾತಿ ಸಿಕ್ಕಿತ್ತು.

ದುಬಾರಿ ಬೆಲೆಯ Audi A8 L ಕಾರು ಖರೀದಿಸಿದ ನಟಿ ಕಿಯಾರಾ ಅಡ್ವಾನಿ

ಇತ್ತೀಚೆಗೆ ಬಿಡುಗಡೆಯಾದ 'ಶೇರ್ ಷಾ' ಸಿನಿಮಾ ಬಹುದೊಡ್ಡ ಯಶಸ್ಸು ಗಳಿಸಿದ್ದಲ್ಲದ್ದೇ ಇದರಲ್ಲಿ ನಟಿಸಿದ ಕಿಯಾರಾ ಅಡ್ವಾಣಿ ವಿಮರ್ಶಕರಿಂದಲೂ ಮೆಚ್ಚುಗೆಗೆ ಪಾತ್ರವಾಗಿತ್ತು. ಶೇರ್ ಷಾ ಸಿನಿಮಾದಲ್ಲಿ ಸಿದ್ದಾರ್ಥ್ ಮಲ್ಹೋತ್ರಾ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಪಾತ್ರದಲ್ಲಿ ಅಭಿನಯಿಸಿದ್ದು, ವಿಕ್ರಮ್‍ಗೆ ಜೋಡಿಯಾಗಿ ಡಿಂಪಲ್ ಪಾತ್ರದಲ್ಲಿ ಕಿಯಾರಾ ಕಾಣಿಸಿಕೊಂಡಿದ್ದಾರೆ.

ದುಬಾರಿ ಬೆಲೆಯ Audi A8 L ಕಾರು ಖರೀದಿಸಿದ ನಟಿ ಕಿಯಾರಾ ಅಡ್ವಾನಿ

ನಟಿ ಕಿಯಾರಾಗೆ ದಕ್ಷಿಣ ಭಾರತದಲ್ಲೂ ಸಖತ್ ಡಿಮ್ಯಾಂಡ್ ಇದೆ. ಈ ಹಿಂದೆ 'ಭರತ್ ಆನೆ ನೇನು' ಹಾಗೂ 'ವಿನಯ ವಿಧೇಯ ರಾಮ' ಚಿತ್ರದಲ್ಲೂ ಅವರು ಕಾಣಿಸಿಕೊಂಡಿದ್ದರು. ಸದ್ಯ ಕಿಯಾರಾ ಕೈಯಲ್ಲಿ ಬಹುನಿರೀಕ್ಷಿತ 4 ಚಿತ್ರಗಳಿವೆ. ನಟಿ ಕಿಯಾರಾ ಹಾಟ್ ಫೋಟೋಶೂಟ್ ಮಾಡಿಸುವ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ.

ದುಬಾರಿ ಬೆಲೆಯ Audi A8 L ಕಾರು ಖರೀದಿಸಿದ ನಟಿ ಕಿಯಾರಾ ಅಡ್ವಾನಿ

ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಖರೀದಿಸಿದ ಹೊಸ ಆಡಿ ಎ8 ಎಲ್ ಕಾರಿನ ಬಗ್ಗೆ ಹೇಳುವುದಾದರೆ, ಬ್ರ್ಯಾಂಡ್‌ನ ಪ್ರಮುಖ ಐಷಾರಾಮಿ ಸಲೂನ್ ಆಗಿದೆ ಮತ್ತು ಹಲವಾರು ತಂತ್ರಜ್ಞಾನದ ಜೊತೆಗೆ ಪವರ್ ಫುಲ್ ಎಂಜಿನ್ ಮತ್ತು ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿರುವ ಮಾದರಿಯಾಗಿದೆ,

ದುಬಾರಿ ಬೆಲೆಯ Audi A8 L ಕಾರು ಖರೀದಿಸಿದ ನಟಿ ಕಿಯಾರಾ ಅಡ್ವಾನಿ

ಈ ಹೊಸ ಆಡಿ ಎ8 ಎಲ್ ಕಾರು 37 ಎಂಎಂ ಉದ್ದ ಮತ್ತು 17 ಎಂಎಂ ಎತ್ತರವನ್ನು ಹೊಂದಿದೆ. ಹೊಸ ಆಡಿ ಎ8 ಎಲ್ ಕಾರು ಹಿಂದಿನ ಮಾದರಿಗಿಂತ ಆಕರ್ಷಕ ಲುಕ್ ಅನ್ನು ಹೊಂದಿದೆ. ಈ ಹೊಸ ಕಾರಿನ ಮುಂಭಾಗ ಗ್ರಿಲ್ ಅನ್ನು ಹೊಂದಿದೆ, ಸ್ಲಿಕ್ ಹೆಚ್‍ಡಿ ಮ್ಯಾಟ್ರಿಕ್ಸ್ ಎಲ್‍ಇಡಿ ಹೆಡ್‍‍ಲ್ಯಾಂಪ್‍‍ಗಳನ್ನು ಹೊಂದಿದ್ದು, ಇದನ್ನು ಕ್ರೋಮ್‍‍ಗಳಿಂದ ಅಲಂಕರಿಸಲಾಗಿದೆ.

ದುಬಾರಿ ಬೆಲೆಯ Audi A8 L ಕಾರು ಖರೀದಿಸಿದ ನಟಿ ಕಿಯಾರಾ ಅಡ್ವಾನಿ

ಅಂದವಾಗಿ ವಿನ್ಯಾಸಗೊಳಿಸಲಾದ ಸ್ಲಿಮ್ ಎಲ್‍ಇಡಿ ಟೇಲ್ ಲ್ಯಾಂಪ್‍ಗಳನ್ನು ಹಿಂಭಾಗದಲ್ಲಿ ಅಳವಡಿಸಲಾಗಿದೆ. ಕಾರಿನ ಇಂಟಿರಿಯರ್‍‍ನಲ್ಲಿ ವರ್ಚುವಲ್ ಕಾಕ್‍‍ಪಿಟ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮಧ್ಯದ ಕನ್ಸೋಲ್‍ನಲ್ಲಿ 10.1 ಇಂಚಿನ ಇನ್ಫೋಟೇನ್‍‍ಮೆಂಟ್ ಟಚ್‍‍ಸ್ಕ್ರೀನ್ ಮತ್ತು ಕ್ಲೈಮೆಂಟ್ ಕಂಟ್ರೂಲ್ ಮತ್ತು ಮಲ್ಟಿಮೀಡಿಯಾ ಸ್ಕ್ರೀನ್ ಅನ್ನು ಒಳಗೊಂಡಿದೆ.

ದುಬಾರಿ ಬೆಲೆಯ Audi A8 L ಕಾರು ಖರೀದಿಸಿದ ನಟಿ ಕಿಯಾರಾ ಅಡ್ವಾನಿ

ಹೊಸ ಆಡಿ ಎ8 ಎಲ್ ಪ್ರಯಾಣಿಕರ ಸುರಕ್ಷತೆಗಾಗಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಈ ಕಾರಿನಲ್ಲಿ ಸುರಕ್ಷತೆಗಾಗಿ 8 ಏರ್‍‍ಬ್ಯಾಗ್‍‍ಗಳು, ಇಬಿಡಿಯೊಂದಿಗೆ ಎಬಿಎಸ್, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‍‍ಗಳು ಮತ್ತು 360 ಡಿಗ್ರಿ ಕ್ಯಾಮೆರಾ ಜೊತೆಯಲ್ಲಿ 3ಡಿ ವ್ಯೂ ಫೀಚರ್ ಅನ್ನು ನೀಡಲಾಗಿದೆ,

ದುಬಾರಿ ಬೆಲೆಯ Audi A8 L ಕಾರು ಖರೀದಿಸಿದ ನಟಿ ಕಿಯಾರಾ ಅಡ್ವಾನಿ

ಜರ್ಮನ್ ಮಾರ್ಕ್‍ನ ಪ್ರಮುಖ ಸೆಡಾನ್ ಆಗಿರುವುದರಿಂದ ಆಡಿ ಎ8 ಎಲ್ ಕಾರಿನ ರೇರ್ ಸೀಟಿನಲ್ಲಿ ಮನರಂಜನೆಗಾಗಿ ಡ್ಯುಯಲ್ ಟಚ್‍‍ಸ್ಕ್ರೀನ್ ಅನ್ನು ನೀಡಿದೆ. ಫ್ರಂಟ್ ಸೀಟಿನಲ್ಲಿ ಫುಟ್‍ ಮಸಾಜರ್‍‍ಗಳನ್ನು ಹೊಂದಿದೆ. ಆಡಿ ಎ8 ಎಲ್ ಕಾರು ಲಾಂಗ್ ವ್ಹೀಲ್ ಬೇಸ್ ಅನ್ನು ಹೊಂದಿದೆ.

ದುಬಾರಿ ಬೆಲೆಯ Audi A8 L ಕಾರು ಖರೀದಿಸಿದ ನಟಿ ಕಿಯಾರಾ ಅಡ್ವಾನಿ

ಈ ಹೊಸ ಆಡಿ ಎ8 ಎಲ್ ಕಾರು 3.0 ಲೀಟರ್ ವಿ6 ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 336 ಬಿ‍ಹೆಚ್‍‍ಪಿ ಪವರ್ ಮತ್ತು 500 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ, ಈ ಎಂಜಿನ್‍‍ನೊಂದಿಗೆ 8 ಸ್ಫೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಹೊಸ ಆಡಿ ಎ8 ಎಲ್ ಕಾರು ಕೇವಲ 5.7 ಸೆಕೆಂಡು‍‍ಗಳಲ್ಲಿ 0-100 ಕಿ.ಮೀ ಕ್ರಮಿಸುತ್ತದೆ.

ದುಬಾರಿ ಬೆಲೆಯ Audi A8 L ಕಾರು ಖರೀದಿಸಿದ ನಟಿ ಕಿಯಾರಾ ಅಡ್ವಾನಿ

ಇನ್ನು ಆಡಿ ತನ್ನ ಎ4 ಸೆಡಾನ್ ಸರಣಿಗೆ ಹೊಸ ಪ್ರೀಮಿಯಂ ವೆರಿಯೆಂಟ್ ಅನ್ನು ಬಿಡುಗಡೆ ಮಾಡಿದೆ. ಆಡಿ ಕಂಪನಿಯು ತನ್ನ ಎ4 ಸೆಡಾನ್ ಭಾರತದಲ್ಲಿ ಯಶಸ್ವಿಯಾದ ಸಂಭ್ರಮದ ಭಾಗವಾಗಿ ಹೊಸ ಪ್ರೀಮಿಯಂ ವೆರಿಯೆಂಟ್ ಅನ್ನು ಬಿಡುಗಡೆಗೊಳಿಸಲಾಗಿದೆ ಎಂದು ಕಂಪನಿ ಹೇಳಿದೆ. ಈ ಹೊಸ ಆಡಿ ಎ4 ಪ್ರೀಮಿಯಂ ವೆರಿಯೆಂಟ್ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.39.99 ಲಕ್ಷವಾಗಿದೆ. ಈ ಪ್ರೀಮಿಯಂ ಟ್ರಿಮ್ ಮಿಡ್ ಪ್ರೀಮಿಯಂ ಪ್ಲಸ್ ವೆರಿಯೆಂಟ್ ಮತ್ತು ಸರಣಿಯ-ಟಾಪ್ ಟೆಕ್ನಾಲಜಿ ವೆರಿಯೆಂಟ್ ಲೈನ್-ಅಪ್‌ಗೆ ಸೇರುತ್ತದೆ. ಇದರಲ್ಲಿ 2.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿದೆ.

ದುಬಾರಿ ಬೆಲೆಯ Audi A8 L ಕಾರು ಖರೀದಿಸಿದ ನಟಿ ಕಿಯಾರಾ ಅಡ್ವಾನಿ

ಈ ಎಂಜಿನ್ 188 ಬಿಹೆಚ್‍ಪಿ ಪವರ್ ಮತ್ತು 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 7-ಸ್ಪೀಡ್ S-ಟ್ರಾನಿಕ್ ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷನ್‌ನೊಂದಿಗೆ ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗುತ್ತದೆ. ಇನ್ನು ಆಡಿ ಎಲ್8 ಕಾರು ದೇಶಿಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು 7 ಸೀರೀಸ್ ಫೇಸ್‍‍ಲಿಫ್ಟ್, ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್, ಲೆಕ್ಸಕ್ಸ್ ಎಲ್‍ಎಸ್ 500ಹೆಚ್‍ ಮತ್ತು ಎಕ್ಸ್‌ಜೆ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತಿದೆ,

Most Read Articles

Kannada
English summary
Actress kiara advani bought new audi a8 l luxury sedan details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X