ಗೂಗ್ಲಿ ನಟಿ ಮನೆ ಸೇರಿದ ಹೊಸ ರೇಂಜ್ ರೋವರ್ ವೆಲಾರ್ ಐಷಾರಾಮಿ ಎಸ್‌ಯುವಿ
ಕನ್ನಡ ಸಿನಿಮಾ ರಂಗದ ಟಾಪ್ ನಟರ ಜೊತೆಗೆ ಗೂಗ್ಲಿ, ಚಿರು, ಬೆಳ್ಳಿಯಂತಹ ಸಿನಿಮಾಗಳನ್ನು ಮಾಡಿ ಗುರ್ತಿಸಿಕೊಂಡಿರುವ ನಟಿ ಕೃತಿ ಕರಬಂದಾ ಸದ್ಯ ಬಾಲಿವುಡ್‌ನಲ್ಲಿ ಸೆಟಲ್ ಆಗಿದ್ದಾರೆ. ಅವರು ಇತ್ತೀಚೆಗೆ ಲ್ಯಾಂಡ್ ರೋವರ್ ರೇಂಜ್ ರೋವರ್ ವೆಲಾರ್ ಐಷಾರಾಮಿ ಎಸ್‌ಯುವಿಯನ್ನು ಖರೀದಿಸಿದ್ದಾರೆ.
ನಟಿ ಲ್ಯಾಂಡ್ ರೋವರ್ ರೇಂಜ್ ರೋವರ್ ವೆಲಾರ್ 2.0 ಆರ್ ಡೈನಾಮಿಕ್ ಎಸ್ ಡೀಸೆಲ್ ವೇರಿಯೆಂಟ್ ಅನ್ನು ಖರೀದಿಸಿದ್ದಾರೆ. ಇದರ ಬೆಲೆ ಅಂದಾಜು 89.41 ಲಕ್ಷ ರೂಪಾಯಿ (ಎಕ್ಸ್ ಶೋರೂಂ) ಎಂದು ವರದಿಯಾಗಿದೆ. ಲ್ಯಾಂಡ್ ಲ್ಯಾಂಡ್ ರೋವರ್ ರೇಂಜ್ ರೋವರ್ ವೆಲಾರ್ ಆರ್ ಡೈನಾಮಿಕ್ ಪೆಟ್ರೋಲ್ ವೇರಿಯೆಂಟ್ ಆಯ್ಕೆ ಕೂಡ ಇದ್ದು, ಇದು ಕೂಡ 89.41 ಲಕ್ಷ ರೂಪಾಯಿ (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ.

ಕಳೆದ ಕೆಲವು ವರ್ಷಗಳಲ್ಲಿ, ಕೃತಿ ಕರ್ಬಂದಾ ಕೇವಲ ಒಟಿಟಿಯಲ್ಲಿ ಮಾತ್ರ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. "ಪ್ಲಾಟ್‌ಫಾರ್ಮ್ ಅನ್ನು ಲೆಕ್ಕಿಸದೆ ಪ್ರತಿಯೊಂದು ಅವಕಾಶವೂ ಒಂದು ದೊಡ್ಡ ವಿಷಯ ಎಂದು ನಾನು ಭಾವಿಸುತ್ತೇನೆ. ವೈಯಕ್ತಿಕವಾಗಿ, ಪ್ರತಿ ಪ್ರಾಜೆಕ್ಟ್‌ನಲ್ಲಿ ನನ್ನ ಅತ್ಯುತ್ತಮವಾದುದನ್ನು ನಾನು ನಂಬುತ್ತೇನೆ. ನಾನು ಫಲಿತಾಂಶಗಳನ್ನು ಅಥವಾ ಪ್ರತಿಕ್ರಿಯೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ, ಆದರೆ ನಾನು ಖಂಡಿತವಾಗಿಯೂ 100 ರಷ್ಟು ಉತ್ತಮ ನಟನೆಯನ್ನು ನೀಡಬಲ್ಲೆ ಎಂದು ಇತ್ತೀಚೆಗೆ ಹೇಳಿಕೊಂಡಿದ್ದರು.
ಲ್ಯಾಂಡ್ ರೋವರ್ ರೇಂಜ್ ರೋವರ್ ವೆಲಾರ್:
ಹೊಸ ರೇಂಜ್ ರೋವರ್ ವೆಲಾರ್ ಎಸ್‍ಯುವಿಯ ಮುಂಭಾಗದಲ್ಲಿ ಹನಿ ಕೋಂಬ್ ಗ್ರಿಲ್ ಆಕರ್ಷಕ ನೋಟವನ್ನು ನೀಡುತ್ತದೆ. ಹಾಗೆಯೇ ಹಿಂಭಾಗವು ಸ್ಲೋಪಿಂಗ್ ರೂಫ್ ರೈಲ್ ಮತ್ತು ಟೈಲ್ ಲ್ಯಾಂಪ್ ಗಳ ಸುತ್ತಲೂ ಸಿಲ್ವರ್ ಅಕ್ಸೆಂಟ್ ಗಳನ್ನು ಹೊಂದಿವೆ. ಭಾರತೀಯ ಮಾರುಕಟ್ಟೆಯಲ್ಲಿ ರೇಂಜ್ ರೋವರ್ ವೆಲಾರ್ ಎಸ್‍ಯುವಿಯು ನಾಲ್ಕು ಬಣ್ಣಗಳಲ್ಲಿ ಲಭ್ಯವಿರುತ್ತದೆ. ಇದು ಫ್ಯೂಜಿ ವೈಟ್, ಪೋರ್ಟೊಫಿನೊ ಬ್ಲೂ, ಸಾರ್ಟೋರಿನಿ ಬ್ಲ್ಯಾಕ್ ಮತ್ತು ಸಿಲಿಕಾನ್ ಸಿಲ್ವರ್ ಬಣ್ಣಗಳಲ್ಲಿ ಬರುತ್ತದೆ.

ಎಂಜಿನ್ ಬಗ್ಗೆ ಹೇಳುವುದಾದರೆ ಹೊಸ ರೇಂಜ್ ರೋವರ್ ವೆಲಾರ್ ಡೀಸೆಲ್ 2.0-ಲೀಟರ್ ಆಯಿಲ್ ಬರ್ನರ್ ಎಂಜಿನ್ ಆಗಿದೆ. ಈ ಎಂಜಿನ್ 177 ಬಿಹೆಚ್‌ಪಿ ಮತ್ತು 430 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ 2.0-ಲೀಟರ್ ಪೆಟ್ರೋಲ್ ಎಂಜಿನ್ 247 ಬಿಹೆಚ್‍ಪಿ ಪವರ್ ಮತ್ತು 365 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 8-ಸ್ಫೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.
ಇಂಟಿರಿಯರ್ ಬಗ್ಗೆ ಹೇಳುವುದಾದರೆ ಈ ಹೊಸ ಎಸ್‍ಯುವಿಯು ಐಷಾರಾಮಿ ಇಂಟಿರಿಯರ್ ಅನ್ನು ಹೊಂದಿದೆ. ಸ್ಟ್ಯಾಂಡರ್ಡ್ 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10-ಇಂಚಿನ ಕಡಿಮೆ ಟಚ್‌ಸ್ಕ್ರೀನ್, ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋನೊಂದಿಗೆ ಹೊಸದಾಗಿ ವಿನ್ಯಾಸಗೊಳಿಸಲಾದ ಇಂಟರ್ಫೇಸ್ ಅನ್ನು ಹೊಂದಿದೆ. ಸಿಸ್ಟಮ್ ಅನ್ನು ಮೆರಿಡಿಯನ್ ಸೌಂಡ್ ಸಿಸ್ಟಂನೊಂದಿಗೆ ಜೋಡಿಸಲಾಗಿದೆ. 3ಡಿ ಸರೌಂಡ್ ಕ್ಯಾಮೆರಾ, ಎಲೆಕ್ಟ್ರಾನಿಕ್ ಏರ್ ಸಸ್ಪೆಂಕ್ಷನ್, ಪಿಬಿ 2.5 ಫಿಲ್ಟರ್‌ನೊಂದಿಗೆ ಕ್ಯಾಬಿನ್ ಏರ್ ಫೀಚರ್ಸ್ ಗಳನ್ನು ಹೊಂದಿದೆ.

ಭಾರತೀಯ ಸಿನಿಮಾ ರಂಗದ ಬಹುತೇಕ ನಟ-ನಟಿಯರ ಬಳಿ ಈ ರೇಂಜ್ ರೋವರ್ ವೆಲಾರ್ ಮಾದರಿ ಇದೆ. ಕಾರಿನ ವಿನ್ಯಾಸ, ಫೀಚರ್ಸ್, ಪರ್ಫಾಮೆನ್ಸ್ ಸೇರಿದಂತೆ ಎಲ್ಲಾ ವಿಧಗಳಲ್ಲೂ ಐಷಾರಾಮಿತನವನ್ನು ಈ ಮಾದರಿ ಒಳಗೊಂಡಿರುವುದರಿಂದ ಸೆಲೆಬ್ರಿಟಿಗಳು ಸೇರಿದಂತೆ ಉದ್ಯಮಿಗಳಿಗೆ ಈ ಎಸ್‌ಯುವಿ ಫೇವರೆಟ್ ಎಂದೇ ಹೇಳಬಹುದು. ಇನ್ನು ನಟಿ ಕೃತಿ ಖರೀದಿಸಿರುವ ಲ್ಯಾಂಡ್ ರೋವರ್ ರೇಂಜ್ ರೋವರ್ ವೆಲಾರ್ 2.0 ಆರ್ ಡೈನಾಮಿಕ್ ಎಸ್ ಡೀಸೆಲ್ ವೇರಿಯೆಂಟ್ ಕೂಡ ಮೇಲಿನ ಬಹುತೇಕ ಫೀಚರ್‌ಗಳನ್ನು ಒಳಗೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








