ನಟ ಅಜಿತ್ ಪ್ರೇರಣೆಯಿಂದ ದುಬಾರಿ ಬೆಲೆಯ BMW ಅಡ್ವೆಂಚರ್ ಬೈಕ್ ಖರೀದಿಸಿದ ಲೇಡಿ ಸೂಪರ್‌ಸ್ಟಾರ್

ಸಿನಿಮಾ ರಂಗ ಎಂಬ ಕಲರ್‍‍‍ಫುಲ್ ದುನಿಯಾದಲ್ಲಿ ಇರುವ ಸೆಲಬ್ರಿಟಿಗಳಿಗೆ ವಿಭಿನ್ನ ಕ್ರೇಜ್‍‍ಗಳಿವೆ. ಇದರಲ್ಲಿ ಬಹುತೇಕ ನಟ, ನಟಿಯರಿಗೆ ಕಾರು ಹಾಗೂ ಬೈಕ್ ಗಳ ಬಗ್ಗೆ ಕ್ರೇಜ್ ಹೊಂದಿರುತ್ತಾರೆ. ಇತ್ತೀಚೆಗೆ ನಟರು ಮಾತ್ರವಲ್ಲದೇ ನಟಿಯರು ಕೂಡ ಬೈಕ್ ಗಳನ್ನು ಖರೀದಿಸುತ್ತಿದ್ದಾರೆ. ಮಲಯಾಳಂ ಚಿತ್ರರಂಗದ ಲೇಡಿ ಸೂಪರ್‌ಸ್ಟಾರ್ ಮಂಜು ವಾರಿಯರ್ ಹೊಸ ಐಷಾರಾಮಿ ಬೈಕ್ ಅನ್ನು ಖರೀದಿಸಿದ್ದಾರೆ.

ಲೇಡಿ ಸೂಪರ್‌ಸ್ಟಾರ್ ಮಂಜು ವಾರಿಯರ್ ಖರೀದಿಸಿದ ಬೈಕ್ BMW R 1250 GS ಆಗಿದೆ. ಇದು ಪ್ರೀಮಿಯಂ ಅಡ್ವೆಂಚರ್ ವಿಭಾಗಕ್ಕೆ ಸೇರಿದ ಬೈಕ್ ಆಗಿದೆ. ವರದಿಗಳ ಪ್ರಕಾರ, ಈ ಹೊಸ BMW R 1250 GS ಅಡ್ವೆಂಚರ್ ಬೈಕ್ ಬೆಲೆಯು ಸುಮಾರು 28 ಲಕ್ಷ ರೂಪಾಯಿ ಆಗಿದೆ. ನಟಿ ಮಂಜು ವಾರಿಯರ್ ಮತ್ತು ತಮಿಳು ಸೂಪರ್‌ಸ್ಟಾರ್ ಅಜಿತ್ ಕುಮಾರ್ ಅವರು 2500 ಕಿಮೀ ಲಡಾಖ್ ಪ್ರವಾಸದಲ್ಲಿ ಜೊತೆಗೂಡಿದ್ದರು.

BMW ಅಡ್ವೆಂಚರ್ ಬೈಕ್ ಖರೀದಿಸಿದ ಲೇಡಿ ಸೂಪರ್‌ಸ್ಟಾರ್

ಈ ಪ್ರವಾಸ ಬಳಿಕ ಮಂಜು ವಾರಿಯರ್ ಕೂಡ ಬೈಕ್ ಏಕೆ ಖರೀದಿಸಬಾರದು ಎಂದು ಅಂದುಕೊಂಡರು. ಇದರ ಬಳಿಕ ಅವರು ದ್ವಿಚಕ್ರ ಬಾಹನ ಲೈಸನ್ಸ್ ಅನ್ನು ಪಡೆದುಕೊಂಡರು. ಲೈಸನ್ಸ್ ಪಡೆದ ನಂತರ, ನಟಿ ಸ್ವಂತ ಬೈಕ್ ಅನ್ನು ಖರೀದಿಸಲು ಬಯಸಿದರು. ಇದೀಗ ತಮ್ಮ ಕನಸಿನ ಜರ್ಮನ್ ದ್ವಿಚಕ್ರ ವಾಹನ ತಯಾರಕರಾದ ಬಿಎಂಡಬ್ಲ್ಯುನ R 1250 GS ಐಷಾರಾಮಿ ಅಡ್ವೆಂಚರ್ ಬೈಕ್ ಅನ್ನು ಖರೀದಿಸಿದ್ದಾರೆ. ಈ ಹೊಸ ಬೈಕ್‌ನ ವಿತರಣೆಯನ್ನು ಪಡೆಯುವ ಚಿತ್ರಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಚಿತ್ರದ ಕೆಳಗೆ, ಉತ್ತಮ ರೈಡರ್ ಇನ್ನೂ ಬಹಳ ದೂರ ಸಾಗಬೇಕಾಗಿದೆ. ಆದ್ದರಿಂದ ನೀವು ನನ್ನನ್ನು ರಸ್ತೆಯಲ್ಲಿ ನೋಡಿದರೆ ದಯವಿಟ್ಟು ಶಾಂತಿಯುತವಾಗಿ ಸಹಕರಿಸಿ.ಸ್ಫೂರ್ತಿಯಾಗಿದ್ದಕ್ಕಾಗಿ ಧನ್ಯವಾದಗಳು ಅಜಿತ್ ಕುಮಾರ್ ಸರ ಎಂದು ಬರೆದುಕೊಂಡಿದ್ದಾರೆ. ಸೂಪರ್ ಸ್ಟಾರ್ ಅಜಿತ್ ಕುಮಾರು ಈ ವರ್ಷ 60 ದಿನಗಳ ಬೈಕ್ ಟ್ರಿಪ್ ಪ್ಲಾನ್ ಮಾಡಿದ್ದಾರೆ. ಈ ಟ್ರಿಪ್ ನಲ್ಲಿ ಮಂಜು ವಾರಿಯರ್ ಕೂಡ ಭಾಗವಹಿಸಬಹುದು ಎಂದು ಹೇಳಲಾಗುತ್ತಿದೆ. ಇತ್ತೀಚೆಗಷ್ಟೇ ತೆರೆಕಂಡ ತಮಿಳು ತುನಿವ್ ಚಿತ್ರದಲ್ಲಿ ವರಿಬ್ಬರು ಒಟ್ಟಿಗೆ ನಟಿಸಿದ್ದರು.

ಇನ್ನು ನಟಿ ಮಂಜು ವಾರಿಯರ್ ಬಿಎಂಡಬ್ಲ್ಯು ಬೈಕ್ ಹೊರತುಪಡಿಸಿ, ಮಿನಿ ಕೂಪರ್ ಎಸ್ಇ ಎಲೆಕ್ಟ್ರಿಕ್ ಮತ್ತು ರೇಂಜ್ ರೋವರ್ ನಂತಹ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ನಟಿ ಮಂಜು ವಾರಿಯರ್ ನ್ಯಾಶನಲ್ ಫಿಲ್ಮ್ ಅವಾರ್ಡ್, ಕೇರಳ ರಾಜ್ಯ ಪ್ರಶಸ್ತಿ, ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದಾರೆ. ಇನ್ನು ನಟಿ ಮಂಜು ವಾರಿಯರ್ ಖರೀದಿಸಿದ ಬಿಎಂಡಬ್ಲ್ಯು ಆರ್ 1250 ಜಿಎಸ್ ಬೈಕ್ ಬಗ್ಗೆ ಹೇಳುವುದಾದರೆ, ಈ ಅಡ್ವೆಂಚರ್ ಪ್ರೀಮಿಯಂ ಬೈಕ್ ಸ್ಟ್ಯಾಂಡರ್ಡ್ ಮತ್ತು ಅಡ್ವೆಂಚರ್ ಎಂಬ ಎರಡು ರೂಪಾಂತರಗಳಲ್ಲ ಲಭ್ಯವಿದೆ.

ಹೊಸ ಬಿಎಂಡಬ್ಲ್ಯು ಆರ್ 1250 ಜಿಎಸ್ ಬೈಕಿನ ಸ್ಟ್ಯಾಂಡರ್ಡ್ ರೂಪಾಂತರವು ಟ್ರಿಪಲ್ ಬ್ಲ್ಯಾಕ್, ಲೈಟ್ ವೈಟ್ ಮತ್ತು ರ್ಯಾಲಿ ಬಣ್ಣಗಳ ಆಯ್ಕೆಯನ್ನು ಹೊಂದಿದ್ದರೆ, ಅಡ್ವೆಂಚರ್ ರೂಪಾಂತರವು ಟ್ರಿಪಲ್ ಬ್ಲ್ಯಾಕ್, ಐಸ್ ಗ್ರೇ ಮತ್ತು ರ್ಯಾಲಿ ಎಂಬ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಈ ಹೊಸ ಐಷಾರಾಮಿ ಬೈಕಿನ ಮುಂಭಾಗದಲ್ಲಿ ಅನನ್ಯವಾಗಿ ವಿನ್ಯಾಸಗೊಳಿಸಲಾದ ಹೆಡ್‌ಲ್ಯಾಂಪ್, ಫ್ರಂಟ್ ಬೀಕ್ ಮತ್ತು ಹೊಂದಾಣಿಕೆ ಮಾಡಬಹುದಾದ ವಿಂಡ್‌ಸ್ಕ್ರೀನ್ ಅನ್ನು ಕೂಡ ಹೊಂದಿರಲಿದೆ.

ಈ ಅಡ್ವೆಂಚರ್-ಟೂರರ್ ಬೈಕಿನಲ್ಲಿ ಸಿಂಗಲ್-ಪೀಸ್ ಹ್ಯಾಂಡಲ್‌ಬಾರ್, ಮೆತ್ತನೆಯ ಸೀಟ್, ಆಫ್-ರೋಡ್ ಬಯಾಸ್ಡ್ ಗ್ರಿಪ್ಪಿ ಫುಟ್‌ಪೆಗ್‌ಗಳು ಮತ್ತು ಫ್ಯೂಯಲ್ ಟ್ಯಾಂಕ್ ಸವಾರನಿಗೆ ಎದ್ದು ನಿಂತು ಬೈಕ್ ರೈಡ್ ಮಾಡಲು ಸಾಕಷ್ಟು ಸಹಕಾರಿಯಾಗುವಂತೆ ಫುಟ್ ಪೆಗ್ ಗಳನ್ನು ಕೂಡ ಒಳಗೊಂಡಿರುತ್ತದೆ. ಇದರೊಂದಿಗೆ ಈ ಐಷಾರಾಮಿ ಬಿಎಂಡಬ್ಲ್ಯು ಆರ್ 1250 ಜಿಎಸ್ ಬೈಕಿನಲ್ಲಿ 6.5-ಇಂಚಿನ ಟಿಎಫ್ಟಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಬಿಎಂಡಬ್ಲ್ಯು ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ ಸ್ಟ್ಯಾಂಡರ್ಡ್ ಆಗಿ ಹೊಂದಿರುತ್ತದೆ.

ಇನ್ನು ಈ ಬೈಕಿನಲ್ಲಿ ಯುಎಸ್ಬಿ ಸಾಕೆಟ್, ಇಂಟಿಗ್ರಲ್ ಎಬಿಎಸ್ ಪ್ರೊ, ಹಿಲ್ ಸ್ಟಾರ್ಟ್ ಕಂಟ್ರೋಲ್ (ಎಚ್ಎಸ್ಸಿ), ಡೈನಾಮಿಕ್ ಟ್ರ್ಯಾಕ್ಷನ್ ಕಂಟ್ರೋಲ್ (ಡಿಟಿಸಿ), ಐಎಂಯು ಫುಲ್-ಎಲ್ಇಡಿ ಲೈಟಿಂಗ್ ಮತ್ತು ಇತರ ಫೀಚರ್ಸ್ ಗಳನ್ನು ಹೊಂದಿದೆ. ಈ ಬಿಎಂಡಬ್ಲ್ಯು ಆರ್ 1250 ಜಿಎಸ್ ಬೈಕಿನಲ್ಲಿ ಬಾಕ್ಸರ್ ಕಾನ್ಫಿಗರೇಶನ್‌ನಲ್ಲಿ ಟ್ವಿನ್-ಸಿಲಿಂಡರ್ 1254 ಸಿಸಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7,750 ಆರ್‌ಪಿಎಂನಲ್ಲಿ 134 ಬಿಹೆಚ್‌ಪಿ ಪವರ್ ಮತ್ತು 6,250 ಆರ್‌ಪಿಎಂನಲ್ಲಿ 143 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

More from DriveSpark

Article Published On: Saturday, February 18, 2023, 17:30 [IST]
English summary
Actress manju warrier buys new bmw r 1250 gs bike details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+