ನಟಿ ನಯನತಾರಾಗೆ ದುಬಾರಿ ಮರ್ಸಿಡಿಸ್ ಮೇಬ್ಯಾಕ್... 39ರ ಬ್ಯೂಟಿಗೆ 3.40 ಕೋಟಿ ರೂ. ಕಾರು ಗಿಫ್ಟ್
ಬಾಲಿವುಡ್ ಸೆಲೆಬ್ರಿಟಿಗಳಿಗಿಂತ ಸೌತ್ ಲೆಡಿ ಸೂಪರ್ ನಯನತಾರಾ ಅವರು ಭಾರೀ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಪ್ರೈವೇಟ್ ಜೆಟ್ ಖರೀದಿಸಿ ಸುದ್ದಿಯಾಗಿದ್ದ ಅವರು, ಇದೀಗ ದುಬಾರಿ ಮರ್ಸಿಡಿಸ್ ಮೇಬ್ಯಾಕ್ ಕಾರನ್ನು ಉಡುಗೊರೆಯಾಗಿ ಪಡೆದು ಮತ್ತೊಮ್ಮೆ ಸುದ್ದಿಯಾಗಿದ್ದರೆ. ಏಕೆಂದರೆ ಕಾರಿನ ಬೆಲೆ ಬರೋಬ್ಬರಿ 3.40 ಕೋಟಿ ರೂ.
ಶಾರುಖ್ ಖಾನ್ ಅವರ 'ಜವಾನ್' ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿಕೊಟ್ಟ ನಯನತಾರಾ ಅವರು, ನವೆಂಬರ್ 18 ರಂದು ತಮ್ಮ 39ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ ಉಡುಗೊರೆಯಾಗಿ, ಅವರ ಪತಿ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಹೊಚ್ಚ ಹೊಸ ಮರ್ಸಿಡಿಸ್ ಮೇಬ್ಯಾಕ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಕಾರಿನ ಕೆಲವು ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ನಟಿ ಹಂಚಿಕೊಂಡಿದ್ದಾರೆ.

ತಮ್ಮ ಮುಂಬರುವ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ವಿಘ್ನೇಶ್ ಶಿವನ್, ತಡವಾಗಿ ಹುಟ್ಟುಹಬ್ಬದ ಉಡುಗೊರೆಯೊಂದಿಗೆ ತಮ್ಮ ಪತ್ನಿಯನ್ನು ಆಚ್ಚರಿಗೊಳಿಸಿದ್ದಾರೆ. ನವೆಂಬರ್ 29 ರಂದು, ನಯನತಾರಾ ತಮ್ಮ ಹೊಸ ಮರ್ಸಿಡಿಸ್ ಮೇಬ್ಯಾಕ್ ಫೋಟೋಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ಕಾರಿನ ಯಾವ ರೂಪಾಂತರವನ್ನು ಉಡುಗೊರೆಯಾಗಿ ಪಡೆದಿದ್ದಾರೆ ಎಂಬುದರ ಬಗ್ಗೆ ಮಾಹಿತಿಯಿಲ್ಲ.
ಆದರೆ ಈ ಐಷಾರಾಮಿ ಮರ್ಸಿಡಿಸ್ ಮೇಬ್ಯಾಕ್ ಮೂಲ ಬೆಲೆಯು ರೂ. 2.69 ಕೋಟಿಯಿಂದ ಆರಂಭವಾಗುತ್ತದೆ, ಇದರ ಟಾಪ್ ಎಂಡ್ ವೇರಿಯೆಂಟ್ ಬೆಲೆ ರೂ 3.40 ಕೋಟಿವರೆಗೆ ಇದೆ. ಫೋಟೋಗಳನ್ನು ಹಂಚಿಕೊಂಡು "ವೆಲ್ಕಮ್ ಹೋಮ್ ಯೂ ಬ್ಯೂಟಿ @wikkiofficial ನನ್ನ ಪ್ರೀತಿಯ ಪತಿ, ಅತ್ಯಂತ ಸಿಹಿಯಾದ ಜನ್ಮದಿನದ ಉಡುಗೊರೆಗೆ ಧನ್ಯವಾದಗಳು ಲವ್ ಯು (sic)," ಎಂದು ಬರೆದುಕೊಂಡಿದ್ದಾರೆ.

ದುಬಾರಿ ವಿಮಾನ ಖರೀದಿ: ಇತ್ತೀಚೆಗೆ ನಯನತಾರಾ ಅವರು ಪ್ರೈವೇಟ್ ಜೆಟ್ ಖರೀದಿಸಿದ್ದಾರೆ ಎನ್ನಲಾಗಿದೆ. ಈ ಕುರಿತ ಫೋಟೋಗಳು ಕೂಡ ಆನ್‌ಲೈನ್‌ನಲ್ಲಿ ವೈರಲ್ ಆಗಿವೆ. ಬಾಲುವುಡ್‌ನಲ್ಲಿಯೇ ಕಲವೇ ಮಂದಿ ಮಾತ್ರ ಪ್ರೈವೇಟ್ ಜೆಟ್ ಹೊಂದಿದ್ದಾರೆ. ಇದೀಗ ದಕ್ಷಿಣ ಭಾರತದಲ್ಲಿ ಪ್ರೈವೇಟ್ ಜೆಟ್ ಖರೀದಿಸಿದ ಮೊದಲ ನಟಿ ಎಂದು ಗುರ್ತಿಸಿಕೊಂಡಿದ್ದಾರೆ.
ನಮಗಿರುವ ಮಾಹಿತಿಯ ಪ್ರಕಾರ ಬಾಲಿವುಡ್ ನಟಿಯರಾದ ಶಿಲ್ಪಾ ಶೆಟ್ಟಿ, ಪ್ರಿಯಾಂಕಾ ಚೋಪ್ರಾ ಮತ್ತು ಮಾಧುರಿ ದೀಕ್ಷಿತ್ ಸೇರಿದಂತೆ ಇತರ ಕೆಲವೇ ನಟಿಯರು ಖಾಸಗಿ ಜೆಟ್‌ಗಳನ್ನು ಹೊಂದಿದ್ದಾರೆ. ಈಗ ಆ ಬಾಲಿವುಡ್ ನಟಿಯರ ಸಾಲಿಗೆ ನಯನತಾರಾ ಅವರು ಸೇರಿಕೊಂಡಿದ್ದಾರೆ. ಜೊತೆಗೆ ನಯನತಾರಾ ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಖಾಸಗಿ ಜೆಟ್ ಅನ್ನು ಹೊಂದಿರುವ ಏಕೈಕ ನಟಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಈ ಪ್ರೈವೇಟ್ ಜೆಟ್ ಅನ್ನು ನಯನತಾರಾ-ವಿಘ್ನೇಶ್ ಶಿವನ್ ದಂಪತಿ ಖರೀದಿಸಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ, ವಿಘ್ನೇಶ್ ಶಿವನ್ ಮತ್ತು ನಯನತಾರಾ ಬಿಳಿ-ನೀಲಿ ಜೆಟ್‌ನಿಂದ ಹೊರಬರುವ ಚಿತ್ರಗಳು ಮತ್ತು ವೀಡಿಯೊ ವೈರಲ್ ಆಗಿವೆ. ಜೆಟ್ ಒಳಭಾಗವು ಸಂಪೂರ್ಣವಾಗಿ ಐಷಾರಾಮಿಯಾಗಿ ಕಾಣುತ್ತಿದ್ದು, ಕ್ಯಾಬಿನ್ ಒಳಗೆ ಒರಗಿಕೊಳ್ಳುವ ಮತ್ತು ಮಸಾಜ್ ಸೌಲಭ್ಯಗಳೊಂದಿಗೆ ಐಷಾರಾಮಿ ಆಸನಗಳಿವೆ.
ಇವುಗಳ ಹೊರತಾಗಿ ಹೆಚ್ಚುವರಿ ಪ್ರಯಾಣಿಕರು ಬಂದರೆ ಅವರಿಗೂ ಆಸನದ ವ್ಯವಸ್ಥೆ ಮಾಡಬಹುದು. ಶೌಚಾಲಯ ಮತ್ತು ಕೈ ತೊಳೆಯುವ ಬೇಸಿನ್‌ಗಳನ್ನು ಪ್ರತ್ಯೇಕವಾಗಿ ಒದಗಿಸಲಾಗಿದೆ. ವಿಶ್ರಾಂತಿಗಾಗಿ ಮಲಗುವ ಕೋಣೆ ಕೂಡ ಇದೆ. ಇವಿಷ್ಟೆ ಅಲ್ಲದೇ ಪ್ರಯಾಣದ ವೇಳೆ ವಿಮಾನದಲ್ಲಿ ಅವರಿಗೆ ಸೇವೆ ಒದಗಿಸಲು ಗಗನ ಸಖಿಯರನ್ನು ಕೂಡ ನೇಮಿಸಿಕೊಳ್ಳಬಹುದಂತೆ.

ಐಷಾರಾಮಿ ಕಾರುಗಳ ಒಡತಿ: ನಟಿ ನಯನತಾರಾ 1.76 ಕೋಟಿ ರೂ. ಮೌಲ್ಯದ ಬಿಎಂಡಬ್ಲ್ಯು 7 ಸಿರೀಸ್ ಕಾರು ಹೊಂದಿದ್ದಾರೆ. ಹಾಗೆಯೇ 1 ಕೋಟಿ ರೂ. ಮೌಲ್ಯದ ಮರ್ಸಿಡಿಸ್ ಜಿಎಲ್‌ಎಸ್ 350 ಟಿ ಮತ್ತು ಬಿಎಂಡಬ್ಲ್ಯು 5 ಸಿರೀಸ್ ಸೇರಿದಂತೆ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಸದ್ಯ, ನಟಿ ನಯನತಾರಾ ತಮ್ಮ ಪತಿ ವಿಘ್ನೇಶ್ ಶಿವನ್ ಅವರೊಂದಿಗೆ 50 ಕೋಟಿ ರೂ. ಮೌಲ್ಯದ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.


Click it and Unblock the Notifications








