ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
ಸಿನಿಮಾ ನಟರು ಮಾತ್ರವಲ್ಲದೇ ನಟಿಯರು ಕೂಡ ಕಾರುಗಳ ಮೇಲೆ ಕ್ರೇಜ್ ಹೊಂದಿದ್ದಾರೆ. ಸಿನಿಮಾ ನಟಿಯರು ತಾವು ಹೆಚ್ಚಾಗಿ ಐಷಾರಾಮಿ ಕಾರುಗಳಲ್ಲಿ ಓಡಾಡಲು ಇಷ್ಟ ಪಡುತ್ತಾರೆ. ಇತ್ತೀಚೀಗೆ ಖ್ಯಾತ ಮಲಯಾಳಂ ಸೀರಿಯಲ್ ನಟಿ ಪ್ರಿಯಾ ಮೋಹನ್ (Priya mohan) ಅವರು ಐಷಾರಾಮಿ ಕಾರನ್ನು ಖರೀದಿಸಿದ್ದಾರೆ. ಇವರು ಹೊಸ ಕಾರಿನ ವಿತರಣೆ ಪಡೆದುಕೊಳ್ಳುವ ಚಿತ್ರಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ನಟಿ ಪ್ರಿಯಾ ಮೋಹನ್ ಅವರು ಪ್ರಿಯಾ, ಪಾರಿಜಾತಂ ಮುಂತಾದ ಜನಪ್ರಿಯ ಮಲಯಾಳಂ ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಪ್ರಿಯಾ ಮೋಹನ್ ಅವರು ಮಲಯಾಳಂ ಚಿತ್ರರಂಗದ ನಟ ಇಂದ್ರಜಿತ್ ಪತ್ನಿ ಪೂರ್ಣಿಮಾ ಇಂದ್ರಜಿತ್ ಅವರ ಸಹೋದರಿ ಆಗಿದ್ದಾರೆ. ಪೂರ್ಣಿಮಾ ಕೂಡ ಒಂದು ಕಾಲದಲ್ಲಿ ಧಾರಾವಾಹಿ ನಟನೆಯಲ್ಲಿ ಸಕ್ರಿಯರಾಗಿದ್ದ ನಟಿ ಈಗ ನಟನೆಗೆ ಬ್ರೇಕ್ ಹಾಕಿದ್ದಾರೆ. ಬದಲಾಗಿ, ಪ್ರೇಕ್ಷಕರ ಮನಸ್ಸಿನಿಂದ ಮರೆಯಾಗುವುದನ್ನು ತಪ್ಪಿಸಲು ನಟ ಸೋಷಿಯಲ್ ಮೀಡಿಯಾ ಮತ್ತು ಯೂಟ್ಯೂಬ್‌ನಲ್ಲಿ ಬ್ಯುಸಿಯಾಗಿದ್ದಾರೆ.

ಎ ಹ್ಯಾಪಿ ಫ್ಯಾಮಿಲಿ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಿಯಾ ಮತ್ತು ಅವರ ಪತಿ ನಿಹಾಲ್ ಕೂಡ ಒಟ್ಟಿಗೆ ವ್ಲಾಗ್ ಮಾಡಿದ್ದಾರೆ. ಸುಮಾರು 3.74 ಲಕ್ಷ ಫಾಲವರ್ಸ್ ಹೊಂದಿರುವ ಚಾನೆಲ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ನಿಹಾಲ್ ಮತ್ತು ಪ್ರಿಯಾ ಹೆಚ್ಚಾಗಿ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಪ್ರಯಾಣದ ಕಥೆಗಳನ್ನು ಹಂಚಿಕೊಳ್ಳುತ್ತಾರೆ. ಇನ್ನು ನಟಿ ಪ್ರಿಯಾ ಮೋಹನ್ ಅವರು ಹೊಸದಾಗಿ ಖರೀದಿಸಿದ ಕಾರು ಹ್ಯುಂಡೈ ಐಯೋನಿಕ್ 5 ಪ್ರೀಮಿಯಂ ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ.
ನಟಿ ಟೈಟಾನ್ ಗ್ರೇ ಎಂಬ ಬಣ್ಣದ ಮಾದರಿಯನ್ನು ಪ್ರಿಯಾ ಆಯ್ಕೆ ಮಾಡಿಕೊಂಡಿರುವುದು ಕೂಡ ಗಮನಾರ್ಹ. ಎಲೆಕ್ಟ್ರಿಕ್ ಕಾರ್ ಕಂಪ್ಲೀಟ್ಲಿ ನಾಕ್ಡ್ ಡೌನ್ (CKD) ಮಾರ್ಗದ ಮೂಲಕ ಭಾರತಕ್ಕೆ ಬರುತ್ತಿರುವ ಮಾದರಿಯಾಗಿದ್ದು, ಇದರ ಬೆಲೆ ಎಕ್ಸ್ ಶೋ ರೂಂ ಪ್ರಕಾರ ರೂ. 46 ಲಕ್ಷವಾಗಿದೆ. ಈ ಹ್ಯುಂಡೈ Ioniq 5 ಎಲೆಕ್ಟ್ರಿಕ್ ಎಸ್‍ಯುವಿ ಹ್ಯುಂಡೈ ಮೋಟಾರ್ ಗ್ರೂಪ್‌ನ ಎಲೆಕ್ಟ್ರಿಕ್-ಗ್ಲೋಬಲ್ ಮಾಡ್ಯುಲರ್ ಪ್ಲಾಟ್‌ಫಾರ್ಮ್ (E-GMP) ಅನ್ನು ಆಧರಿಸಿದೆ.

ಅದು ಕಿಯಾ EV6 ಎಲೆಕ್ಟ್ರಿಕ್ ಕಾರಿಗೂ ಸಹ ಆಧಾರವಾಗಿದೆ. ಹ್ಯುಂಡೈ ಎಲೆಕ್ಟ್ರಿಕ್ ಮಾದರಿಯು ಆಗಿದ್ದು, ಹೊರಭಾಗದಲ್ಲಿ ಭವಿಷ್ಯದ ವಿನ್ಯಾಸವನ್ನು ಹೊಂದಿದೆ. ಇದು ಪಿಕ್ಸಲೇಟೆಡ್ LED ಟೈಲ್-ಲೈಟ್‌ಗಳು, ಫ್ಲಶ್-ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳು ಮತ್ತು ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ಗಳೊಂದಿಗೆ ಡ್ಯುಯಲ್ LED ಹೆಡ್‌ಲ್ಯಾಂಪ್‌ಗಳನ್ನು ಒಳಗೊಂಡಿದೆ.
ಈ ಎಲೆಕ್ಟ್ರಿಕ್ ಕಾರಿನಲ್ಲಿ ಡ್ಯುಯಲ್ ಫ್ಲೋಟಿಂಗ್ ಸ್ಕ್ರೀನ್ ಮತ್ತು 2-ಸ್ಪೋಕ್ ಸ್ಟೀರಿಂಗ್ ವೀಲ್‌ನೊಂದಿಗೆ ಆಕರ್ಷಕ ಒಳಾಂಗಣದೊಂದಿಗೆ ಬರುತ್ತದೆ. ಈ ಕಾರಿನಲ್ಲಿ 12.3-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ನೀಡಲಾಗಿದೆ. ಈ ಹ್ಯುಂಡೈ ಕಾರಿನಲ್ಲಿ ಡ್ರೈವರ್ ಡಿಸ್‌ಪ್ಲೇಗಳು, 360 ಡಿಗ್ರಿ ಕ್ಯಾಮೆರಾ, ಪನೋರಮಿಕ್ ಸನ್‌ರೂಫ್, V2L ಮತ್ತು ಇತರವುಗಳೊಂದಿಗೆ ಸುಸಜ್ಜಿತವಾಗಿರುತ್ತದೆ.

ಹ್ಯುಂಡೈ Ioniq 5 ಎಲೆಕ್ಟ್ರಿಕ್ ಎಸ್‍ಯುವಿ 4,635 ಎಂಎಂ ಉದ್ದ, 1,890 ಎಂಎಂ ಅಗಲ ಮತ್ತು 1,625 ಎಂಎಂ ಎತ್ತರವಿದೆವನ್ನು ಹೊಂದಿದೆ. ಇನ್ನು ಈ ಎಲೆಕ್ಟ್ರಿಕ್ ಎಸ್‍ಯುವಿ 3,000mm ವೀಲ್‌ಬೇಸ್ ಅನ್ನು ಹೊಂದಿದೆ. ಈ ಹ್ಯುಂಡೈ ಐಯಾನಿಕ್ 5 ಎಲೆಕ್ಟ್ರಿಕ್ ಕಾರಿನಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಎಮರ್ಜನ್ಸಿ ಬ್ರೇಕಿಂಗ ಅನ್ನು ಹೊಂದಿದೆ.
ಇದರೊಂದಿಗೆ ಲೇನ್ ಕೀಪ್ ಮತ್ತು ಡಿಪಾರ್ಚರ್ ಏಡ್ ಮತ್ತು ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಸಿಸ್ಟಮ್‌ನಂತಹ ಫೀಚರ್ಸ್ ಗಳೊಂದಿಗೆ ADAS (ಅಡ್ವಾನ್ಸ್ಡ್ ಡ್ರೈವರ ಅಸಿಸ್ಟ್ ಸಿಸ್ಟಂ) ನೊಂದಿಗೆ ಬರುತ್ತದೆ. ಈ ಹ್ಯುಂಡೈ ಐಯಾನಿಕ್ 5 ಎಲೆಕ್ಟ್ರಿಕ್ ಕಾರಿನಲ್ಲಿ 72.6kWh ಬ್ಯಾಟರಿ ಪ್ಯಾಕ್ ಅನ್ನು ನೀಡಲಾಗಿದೆ. ಇನ್ನು ಈ ಹ್ಯುಂಡೈ Ioniq ಎಲೆಕ್ಟ್ರಿಕ್ ಕಾರು 5 ಕೇವಲ 18 ನಿಮಿಷಗಳಲ್ಲಿ 10% ರಿಂದ 80% ವರೆಗೆ ಚಾರ್ಜ್ ಮಾಡಲು ಸಾಧ್ಯವಾಗುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








