ಅಭಿಮಾನಿಯಿಂದ ದುಬಾರಿ ಆಡಿ ಕಾರನ್ನು ಉಡುಗೊರೆಯಾಗಿ ಪಡೆದ ವಿವಾದಾತ್ಮಕ ನಟಿ!

ಬಾಲಿವುಡ್ ಚಲನಚಿತ್ರೋದ್ಯಮದ ನೃತ್ಯಗಾರ್ತಿ ಮತ್ತು ಟಿವಿ ನಿರೂಪಕಿ ರಾಖಿ ಸಾವಂತ್ ಅವರಿಗೆ ಅಭಿಮಾನಿಗಳು ದುಬಾರಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಆಡಿ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಲಾಗಿದ್ದು, ಕಾರು ಮಾದರಿಯ ವಿವರಗಳು ತಿಳಿದುಬಂದಿಲ್ಲ. ವರದಿಗಳ ಪ್ರಕಾರ, ಇದು 11 ವರ್ಷ ಹಳೆಯ ಆಡಿ ಐಷಾರಾಮಿ ಎಸ್‌ಯುವಿ ಎಂದು ತಿಳಿದುಬಂದಿದೆ.

ಇನ್‌ಸ್ಟಾಗ್ರಾಂನಲ್ಲಿ ಪಾಪರಾಜಿಯೊಬ್ಬರ ಖಾತೆಯಿಂದ ಹಂಚಿಕೊಳ್ಳಲಾದ ವೀಡಿಯೊದಲ್ಲಿ, ತನ್ನ ಅಭಿಮಾನಿ ತನಗೆ ಬಿಳಿ ಆಡಿ ಕಾರನ್ನು ಉಡುಗೊರೆಯಾಗಿ ನೀಡಿರುವುದನ್ನು ನೋಡಬಹುದು. ರಾಖಿ ಸಾವಂತ್ ಕ್ಯಾಮೆರಾಗಳಿಗೆ ಕಾರನ್ನು ತೋರಿಸುತ್ತಾ ಮಾಧ್ಯಮಗಳಿಗೆ ಕಾರಿನ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರ ವಿಶಿಷ್ಟ ಶೈಲಿಯಲ್ಲಿ ಹಾಡುತ್ತಾ, ನೃತ್ಯ ಮಾಡುತ್ತಾ ಅಭಿಮಾನಿಗಳಿಂದ ಕಾರನ್ನು ಪಡೆದುಕೊಂಡಿದ್ದಾರೆ. ಕಾರಿನ ಬಾಹ್ಯ ನೋಟವನ್ನು ನೋಡಿದರೆ, ಇದು ಆಡಿ ಕ್ಯೂ 3 ಎಸ್‌ಯುವಿನಂತೆ ಕಾಣುತ್ತಿದೆ. ಪರಿವಾಹನ್ ಸೈಟ್ ಮಾಹಿತಿಯ ಪ್ರಕಾರ, ಇದು HR 51 AU 0939 ನೋಂದಣಿ ಸಂಖ್ಯೆಯನ್ನು ಹೊಂದಿದೆ. ಡಿಸೆಂಬರ್ 2012 ರಲ್ಲಿ ಹರಿಯಾಣದ ಗುರುಗ್ರಾಂನಲ್ಲಿ ನೋಂದಣಿಯಾಗಿದೆ.

actress-rakhi-sawant-received-expensive-audi-car-as-a-gift-from-his-fan

ಅಲ್ಲಿಗೆ ಅಭಿಮಾನಿಯು ಬಳಸಿದ ಕಾರನ್ನು ಉಡುಗೊರೆಯಾಗಿ ನೀಡಿದ್ದಾನೆ ಎಂಬುದು ಸ್ಪಷ್ಟವಾಗಿದೆ. ರಾಖಿ ಸಾವಂತ್ ಅವರ ಕಟ್ಟಾ ಅಭಿಮಾನಿ ಈ ಕಾರನ್ನು ಉಡುಗೊರೆಯಾಗಿ ನೀಡಿದ್ದಾನೆ. ಇದು ಡೀಸೆಲ್ ಎಂಜಿನ್ ಹೊಂದಿರುವ ಕಾರು ಮಾದರಿಯಾಗಿದ್ದು, ಇದರ ಪ್ರಸ್ತುತ ಮೌಲ್ಯ ರೂ. 28.07 ಲಕ್ಷಕ್ಕಿಂತ ಹೆಚ್ಚಾಗಿದೆ. ಇದು ಡೀಸೆಲ್ ಮ್ಯಾನುವಲ್ ರೂಪಾಂತರದ ಬೆಲೆಯಾಗಿದೆ.

ಮಹಿಳೆಯನ್ನು ಗದರಿದ ರಾಖಿ ಸಾವಂತ್: ಕಾರನ್ನು ಉಡುಗೊರೆಯಾಗಿ ನೀಡುವಾಗ ವಿವಾದಾತ್ಮಕ ಘಟನೆಯೂ ನಡೆಯಿತು. ರಾಖಿ ಸಾವಂತ್ ತನ್ನೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಪ್ರಯತ್ನಿಸಿದ ಅಭಿಮಾನಿಯನ್ನು ಗದರಿದರು ಎಂಬ ಆರೋಪಗಳು ಕೇಳಿಬಂದಿವೆ. ಈ ಬಗ್ಗೆಯೂ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ನಟಿ ರಾಖಿ ಸಾವಂತ್ ಅವರನ್ನು ಟೀಕಿಸಲಾಗುತ್ತಿದೆ.

actress-rakhi-sawant-received-expensive-audi-car-as-a-gift-from-his-fan

ಕಡಿಮೆ ಬೆಲೆಗೆ ಆಡಿ: ದೆಹಲಿ ಹಾಗೂ ಹರಿಯಾಣದಲ್ಲಿ ವಾಯುಮಾಲಿನ್ಯವನ್ನು ಕಾಪಾಡುವ ಸಲುವಾಗಿ 10 ರಿಂದ 15 ವರ್ಷ ಹಳೆಯ ಕಾರುಗಳನ್ನು ಬಳಸದಂತೆ ಸರ್ಕಾರ ಕಟ್ಟು ನಿಟ್ಟಾದ ಕ್ರಮ ಕೈಗೊಂಡಿದೆ. ತುಂಬಾ ಹಳೆಯ ಕಾರುಗಳನ್ನು ಸ್ಕ್ರಾಪ್ ಕೂಡ ಮಾಡಲಾಗುತ್ತಿದೆ. ಈ ಕಠಿಣ ನಿಯಮಗಳು ಮತ್ತು ನಿಬಂಧನೆಗಳಿಂದ ಹಳೆಯ ಕಾರು ಮಾದರಿಗಳನ್ನು ಇತರ ರಾಜ್ಯಗಳಲ್ಲಿ ಸ್ವಲ್ಪ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ನಟಿ ರಾಖಿ ಸಾವಂತ್‌ಗೆ ನೀಡಿದ ಆಡಿ ಕಾರನ್ನು ಗಮನಿಸಿದರೆ ಹರಿಯಾಣದ ನೋಂದಣಿ ಸಂಖ್ಯೆಯನ್ನು ಹೊಂದಿದೆ. ಹಾಗಾಗಿ ಇದು ಕಡಿಮೆ ಬೆಲೆಯ ಕಾರು ಮಾದರಿಯಾಗಿರಬಹುದು ಎಂದು ಊಹಿಸಲಾಗಿದೆ.

ದುಬೈನಲ್ಲಿ ವಾಸ್ತವ್ಯವಿರುವ ರಾಖಿ ಸಾವಂತ್ ಹಲವಾರು ತಿಂಗಳುಗಳ ನಂತರ (ಏಪ್ರಿಲ್ 25) ಮುಂಬೈಗೆ ಬಂದಿದ್ದಾರೆ. ರಾಖಿ ಸಾವಂತ್ ತಮ್ಮ ಮಾಜಿ ಪತಿಯೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ನಡೆಯುತ್ತಿರುವ ಪ್ರಕರಣದಿಂದಾಗಿ ಅವರು ಮುಂಬೈಗೆ ಬಂದಿದ್ದರು ಎಂದು ವರದಿಯಾಗಿದೆ. ರಾಖಿ ಸಾವಂತ್ ಸದ್ಯ ಮುಂಬೈನಲ್ಲಿದ್ದು, ಪ್ರಕರಣದ ಸಂಬಂಧ ದುಬೈನಿಂದ ಭಾರತಕ್ಕೆ ಬಂದಿದ್ದಾರೆ.

ಇತ್ತೀಚೆಗೆ ಅವರು ಮುಂಬೈಗೆ ಬರುವುದನ್ನು ತಿಳಿದು, ಅಭಿಮಾನಿಗಳು ಅವರಿಗೆ ದುಬಾರಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಕಾರು ಸೆಕೆಂಡ್‌ಹ್ಯಾಂಡ್ ಆದ್ರೂ, ಪ್ರಿಯ ನಟ-ನಟಿಯರಿಗೆ ಹೀಗೆ ದುಬಾರಿ ಕಾರನ್ನು ನೀಡಿವುದು ತುಂಬಾ ವಿರಳ ಎಂದು ಹೇಳಬಹುದು. ನಟಿ ರಾಖಿ ಸಾವಂತ್‌ಗೆ ದುಬಾರಿ ಆಡಿ ಕಾರನ್ನು ಗಿಫ್ಟ್ ನೀಡಿರುವ ಕುರಿತು ನಿಮ್ಮ ಅನಿಸಿಕೆಯನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, May 6, 2024, 17:56 [IST]
English summary
Actress rakhi sawant received expensive audi car as a gift from his fan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+