ಕೋಟಿ ಬೆಲೆಯ ಐಷಾರಾಮಿ ಕಾರಿನಲ್ಲಿ ಕಾಣಿಸಿಕೊಂಡ 'ಜವಾನ್’ ಚಿತ್ರದ ನಟಿ ಸಾನ್ಯಾ ಮಲ್ಹೋತ್ರಾ
ಭಾರತದಲ್ಲಿನ ಸೆಲೆಬ್ರಿಟಿಗಳ ಬಗ್ಗೆ ಯೋಚಿಸಿದಾಗ, ಅವರು ಬಳಸುವ ಐಷಾರಾಮಿ ಕಾರುಗಳು ನಮ್ಮ ಮನಸ್ಸಿಗೆ ಬರುತ್ತದೆ. ಬಾಲಿವುಡ್ ಸೆಲಬ್ರಿಟಿಗಳು ಆಗಾಗ ತಮ್ಮ ದುಬಾರಿ ಕಾರುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗೆ . ಇತ್ತೀಚೆಗಷ್ಟೇ, ಶಾರುಖ್ ಖಾನ್ ಅವರ "ಜವಾನ್" (Jawan) ಚಿತ್ರದಲ್ಲಿ ನಟಿಸಿದ ಜನಪ್ರಿಯ ನಟಿ ಸನ್ಯಾ ಮಲ್ಹೋತ್ರಾ ಅವರ ಹೊಚ್ಚ ಹೊಸ ಆಡಿ ಕ್ಯೂ8 ಕೂಪೆ ಎಸ್‌ಯುವಿಯಲ್ಲಿ ಕಾಣಿಸಿಕೊಂಡಿದ್ದಾರೆ.
ನಟಿ ಸನ್ಯಾ ಮಲ್ಹೋತ್ರಾ (Sanya Malhotra) ಅವರು ತಮ್ಮ ಎಸ್‍ಯುವಿಯಲ್ಲಿ ಸಿಬ್ಬಂದಿಯೊಂದಿಗೆ ಕಚೇರಿಯ ಹೊರಗೆ ಕಾಣಿಸಿಕೊಂಡರು. ಸನ್ಯಾ ಮಲ್ಹೋತ್ರಾ ಮತ್ತು ಅವರ ಹೊಸ ಆಡಿ ಎಸ್‌ಯುವಿಯ ವೀಡಿಯೊವನ್ನು ಕಾರ್ಸ್ ಫಾರ್ ಯೂ ತಮ್ಮ ಚಾನಲ್‌ನಲ್ಲಿ ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದಾರೆ. ನಟಿ ತಮ್ಮ ಅಂಗರಕ್ಷಕರ ಜೊತೆ ಬಂದು ಆಡಿ ಕ್ಯೂ8 ಕೂಪೆ ಎಸ್‌ಯುವಿ ಹಿಂಭಾಗದ ಡೋರ್ ಓಪನ್ ಮಾಡಿ ಇಳಿಯುದರಿಂದ ವೀಡಿಯೊ ಪ್ರಾರಂಭವಾಗುತ್ತದೆ.

ನಂತರ ಹಲವಾರು ಪಾಪರಾಜಿಗಳು ನಟಿಯ ಹೊಚ್ಚಹೊಸ ಕಾರಿನೊಂದಿಗೆ ಪೋಸ್ ನೀಡುವಂತೆ ವಿನಂತಿಸುತ್ತಾರೆ. ನಟಿಯು ತನ್ನ ಕಾರಿನ ಮುಂಭಾಗದಲ್ಲಿ ನಿಂತು ಪೋಸ್ ನೀಡುತ್ತಾರೆ. ನಂತರ ಅಂಗರಕ್ಷಕರ ಜೊತೆ ತಮ್ಮ ಕಚೇರಿಯೊಳಗೆ ತೆರಳುತ್ತಾರೆ. 'ದಂಗಲ್' ಸಿನಿಮಾದಿಂದ ಭಾರಿ ಜನಪ್ರಿಯತೆ ಪಡೆದವರು ನಟಿ ಸಾನ್ಯಾ ಮಲ್ಹೋತ್ರಾ. 'ಜವಾನ್' ಸಿನಿಮಾದಲ್ಲಿ ಅವರು ಮಿಂಚಿದ್ದಾರೆ. ಎಲ್ಲ ಕಡೆಗಳಲ್ಲಿ 'ಜವಾನ್' ಸಿನಿಮಾ ಅಬ್ಬರಿಸಿದೆ.
ಹೊಸದಾಗಿ ಬಿಡುಗಡೆಯಾದ ಆಕ್ಷನ್-ಪ್ಯಾಕ್ಡ್ ಚಲನಚಿತ್ರ "ಜವಾನ್" ದೇಶದ ಅತ್ಯಂತ ನಿರೀಕ್ಷಿತ ಚಲನಚಿತ್ರಗಳಲ್ಲಿ ಒಂದಾಗಿದೆ. ಈ ಚಿತ್ರದ ನಾಯಕ ಶಾರುಖ್ ಖಾನ್, ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಶಾರುಖ್ ಖಾನ್ ಆಜಾದ್ ರಾಥೋಡ್, ಜೈಲು ವಾರ್ಡನ್ ಮತ್ತು ಅವರ ತಂದೆ ವಿಕ್ರಮ್ ರಾಥೋಡ್, ಮಾಜಿ ಕಮಾಂಡೋ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ಸನ್ಯಾ ಮಲ್ಹೋತ್ರಾ ಡಾ.ಈರಂ ಪಾತ್ರದಲ್ಲಿ ನಟಿಸಿದ್ದಾರೆ.

ಸೆಪ್ಟೆಂಬರ್ 7ರಂದು ಬಿಡುಗಡೆ ಆಗಿರುವ ಈ ಸಿನಿಮಾ ವಿಶ್ವಾದ್ಯಂತ ಕೋಟಿ ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಇನ್ನೂ ಹಲವು ದಿನಗಳ ಕಾಲ ಈ ಚಿತ್ರದ ಹವಾ ಮುಂದುವರಿಯಲಿದೆ. ಇನ್ನು ನಟಿ ಸನ್ಯಾ ಮಲ್ಹೋತ್ರಾ ಅವರ ಆಡಿ ಕ್ಯೂ8 ಕೂಪೆ ಎಸ್‌ಯುವಿ ಬಗ್ಗೆ ಹೇಳುವುದಾದರೆ, ಇದು ಆಡಿ ಕ್ಯೂ8 ಎಸ್‌ಯುವಿಯಾಗಿದ್ದು, ಅವರು 2022 ರಲ್ಲಿ ಡೆಲಿವರಿಯನ್ನು ಪಡೆದುಕೊಂಡಿದ್ದಾರೆ.
ಆಡಿ ಕ್ಯೂ8, ಆಡಿ ಕ್ಯೂ7 ಗಿಂತ ಮೇಲಿರುವ ಭಾರತದಲ್ಲಿ ಆಡಿಯ ಸರಣಿಯಲ್ಲಿರುವ ಪ್ರಮುಖ ಎಸ್‌ಯುವಿಯಾಗಿದೆ. ಇದು ಸ್ಟ್ರೈಕಿಂಗ್ ಕೂಪ್ ತರಹದ ವಿನ್ಯಾಸ, ಪ್ರಭಾವಶಾಲಿ ರಸ್ತೆ ಉಪಸ್ಥಿತಿ ಮತ್ತು ಉನ್ನತ ದರ್ಜೆಯ ವೈಶಿಷ್ಟ್ಯಗಳೊಂದಿಗೆ ಐಷಾರಾಮಿ ಕ್ಯಾಬಿನ್ ಅನ್ನು ಹೊಂದಿದೆ. ಈ ಎಸ್‍ಯುವಿಯು 3.0-ಲೀಟರ್ TFSI V6 ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 335 bhp ಮತ್ತು 500 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಎಂಜಿನ್ ಅನ್ನು 8-ಸ್ಪೀಡ್ ಸಆಟೋ ಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಇನ್ನು ವೈಶಿಷ್ಟ್ಯಗಳ ವಿಷಯದಲ್ಲಿ, ಇದು ಮ್ಯಾಟ್ರಿಕ್ಸ್ LED ಹೆಡ್‌ಲ್ಯಾಂಪ್‌ಗಳು, ಮಸಾಜ್‌ನೊಂದಿಗೆ ಲೆದರ್ ಸೀಟ್‌ಗಳು, 12.3-ಇಂಚಿನ ವರ್ಚುವಲ್ ಕಾಕ್‌ಪಿಟ್ ಡಿಸ್ಪ್ಲೇ, 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಹೆಚ್ಚಿನವುಗಳಂತಹ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿದೆ
ಆಡಿ ಕ್ಯೂ8, ಭಾರತೀಯ ಮಾರುಕಟ್ಟೆಯಲ್ಲಿ ರೇಂಜ್ ರೋವರ್ ಸ್ಪೋರ್ಟ್, BMW X6, Lexus RX 450hL, Maserati Levante ಮತ್ತು Porsche Cayenne ನಂತಹ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ. ಈ ಆಡಿ ಕ್ಯೂ8, ಎಸ್‍ಯುವಿಯು ಬೆಲೆಯು 1.38 ಕೋಟಿ ಆಗಿದೆ. ಈ ಕ್ಯೂ8, ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








