ದುಬಾರಿ ಸೆಕೆಂಡ್ ಹ್ಯಾಂಡ್ ಕಾರಿನಲ್ಲಿ ಬಂದಿಳಿದ ಮಂಗಳೂರು ಬ್ಯೂಟಿ ಶಿಲ್ಪಾ ಶೆಟ್ಟಿ

ಬಾಲಿವುಡ್‌ನ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರಾದ ಶಿಲ್ಪಾ ಶೆಟ್ಟಿ ಇತ್ತೀಚೆಗೆ ಮಿನುಗುವ ಕ್ರೋಮ್ ಬಣ್ಣದ ಬೆಂಟ್ಲಿ ಫ್ಲೈಯಿಂಗ್ ಸ್ಪರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವೇ ದಿನಗಳ ಹಿಂದೆ ಈವೆಂಟ್ ಒಂದರಲ್ಲಿ ಭಾಗವಹಿಸಲು ಈ ದುಬಾರಿ ಬೆಂಟ್ಲಿ ಕಾರಿನಲ್ಲಿ ಆಗಮಿಸಿ ಅಚ್ಚರಿಗೊಳಿಸಿದ್ದಾರೆ. ಏಕೆಂದರೆ ಇದು ದುಬಾರಿಯಾದ್ರು ಸೆಕೆಂಡ್‌ ಹ್ಯಾಂಡ್ ಕಾರು.

ಶಿಲ್ಪಾ ಶೆಟ್ಟಿ ಉನ್ನತ-ಮಟ್ಟದ ಐಷಾರಾಮಿ ಕಾರುಗಳಿಗೆ ಹೆಸರುವಾಸಿಯಾಗಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಅವರು ಹಲವಾರು ದುಬಾರಿ ಐಷಾರಾಮಿ ಕಾರುಗಳನ್ನು ಖರೀದಿಸಿದ್ದಾರೆ. ಇಷ್ಟು ಕಾರುಗಳಿದ್ದರೂ ಮತ್ತೊಮ್ಮೆ ಈ ದುಬಾರಿ ಸೆಕೆಂಡ್‌ ಹ್ಯಾಂಡ್ ಕಾರಿನಲ್ಲಿ ಕಾಣಿಸಿರುವುದು ಬಾಲಿವುಡ್ ಸ್ಟಾರ್‌ ನಟರಿಗಿಂತ ತಾನು ಕಡಿಮೆಯಿಲ್ಲ ಎಂದು ಸೂಚಿಸುತ್ತಿದೆ. ಬಾಲಿವುಡ್‌ನಲ್ಲಿ ಸದ್ಯ ಈ ಕುರಿತ ವಿಡಿಯೋ ಸಖತ್ ಸದ್ದು ಮಾಡುತ್ತಿದೆ.

actress-shilpa-shetty-bentley-flying-spur-spotted

ಶಿಲ್ಪಾ ಶೆಟ್ಟಿ ಇತ್ತೀಚೆಗೆ ಮಾಮಾಅರ್ಥ್ ಕಾಸ್ಮೆಟಿಕ್ ಬ್ರಾಂಡ್‌ನ ಮೂಲ ಕಂಪನಿಯಾದ ಹೊನಾಸಾ ಕನ್ಸ್ಯೂಮರ್ ಲಿಮಿಟೆಡ್‌ನ ಬೆಲ್ ರಿಂಗಿಂಗ್ ಸಮಾರಂಭಕ್ಕೆ ಈ ಕಾರಿನಲ್ಲಿ ಆಗಮಿಸಿದ್ದರು. ಈ ವರ್ಷದ ಆರಂಭದಲ್ಲಿ ಶಿಲ್ಪಾ ಶೆಟ್ಟಿ ಅವರು ಬಳಸಿದ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಅನ್ನು ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ. ಅವರು ಬಿಳಿ ಬಣ್ಣದಲ್ಲಿ ಈ ಸೆಡಾನ್ ಅನ್ನು ಖರೀದಿಸಿ, ಈಗ ಕ್ರೋಮ್ ಬಣ್ಣಕ್ಕೆ ಮಾಡಿಫೈಗೊಳಿಸಿದ್ದಾರೆ.

ಕ್ರೋಮ್ ಮಾಡಿಫೈ ಬಲು ಕಷ್ಟ: ಶಿಲ್ಪಾ ಶೆಟ್ಟಿಯವರ ಕ್ರೋಮ್ ಬಣ್ಣವು ಎಲ್ಲಿದ್ದರು ಎದ್ದುಕಾಣುತ್ತದೆ. ತಿಳಿದಿಲ್ಲದವರಿಗೆ, ಕ್ರೋಮ್ ಬಣ್ಣವನ್ನು ಕಾರಿಗೆ ನೀಡುವುದು ಅತ್ಯಂತ ಕಷ್ಟಕರ. ಎಚ್ಚರಿಕೆ ವಹಿಸದಿದ್ದರೇ, ಅದಕ್ಕೆ ಸಣ್ಣ ಗೀರುಗಳು ಬಿದ್ದರೂ ಎದ್ದುಕಾಣುತ್ತವೆ. ಅಲ್ಲದೇ ಹೊಳಪನ್ನು ಕಡಿಮೆ ಮಾಡುತ್ತದೆ. ಈ ಕಾರಣಕ್ಕಾಗಿ, ಕ್ರೋಮ್ ಬಣ್ಣವು ಇತರ ಪ್ರಮಾಣಿತ ಬಣ್ಣಗಳಿಗಿಂತ ಹೆಚ್ಚು ದುಬಾರಿ.

actress-shilpa-shetty-bentley-flying-spur-spotted

ಬೆಂಟ್ಲಿ ಫ್ಲೈಯಿಂಗ್ ಸ್ಪರ್: ಶಿಲ್ಪಾ ಶೆಟ್ಟಿ ಓಲ್ಡ್ ಜನ್ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಅನ್ನು ಖರೀದಿಸಿದ್ದಾರೆ. ಆದರೆ ಯಾರ ಬಳಿ ಖರೀದಿಸಿದ್ದಾರೆ ಎಂಬುದರ ಬಗ್ಗೆ ಸರಿಯಾದ ಮಾಹಿತಿ ಲಭ್ಯವಿಲ್ಲ. ಕಾರು ಕಂಪನಿಗಳು ಕೂಡ ದುಬಾರಿ ಕಾರುಗಳ ಮಾಲೀಕರ ಹೆಸರುಗಳನ್ನು ಗೌಪ್ಯವಾಗಿ ಇಡುತ್ತವೆ. ಸದ್ಯ ಅವರ ಬಳಿಯಿರುವ ಕಾರು ವೈಶಿಷ್ಟ್ಯ, ಸೌಕರ್ಯ, ಕಾರ್ಯಕ್ಷಮತೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ.

ಈ ಬ್ರಿಟಿಷ್ ಐಷಾರಾಮಿ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಸೆಡಾನ್ ಬೃಹತ್ 4.0-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ V8 ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು ಗರಿಷ್ಠ 500 PS ಪವರ್ ಮತ್ತು 650 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಎಂಜಿನ್ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮತ್ತು ಆಲ್-ವೀಲ್-ಡ್ರೈವ್ ಸಿಸ್ಟಮ್‌ನೊಂದಿಗೆ ಬರುತ್ತದೆ.

actress-shilpa-shetty-bentley-flying-spur-spotted

ಶಿಲ್ಪಾ ಶೆಟ್ಟಿ ಇತರ ಕಾರುಗಳು: ಶಿಲ್ಪಾ ಶೆಟ್ಟಿ ಗ್ಯಾರೇಜ್‌ನಲ್ಲಿ ಬೆಂಟ್ಲಿ ಕಾಂಟಿನೆಂಟಲ್ GT, Mercedes-Maybach GLS600, Mercedes Benz G63 AMG, BMW X5, BMW 7-ಸರಣಿ, ರೇಂಜ್ ರೋವರ್ ವೋಗ್ ಮತ್ತು Mercedes-Benz V-Class ಅನ್ನು ಹೊಂದಿದ್ದಾರೆ. ಇವುಗಳಲ್ಲಿ ಶಿಲ್ಪಾ ಶೆಟ್ಟಿ ದಂಪತಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ.

ಅತಿ ವಿರಳವಾಗಿ ಶಿಲ್ಪಾ ಶೆಟ್ಟಿ ದಂಪತಿ ಕಾಣಿಸಿಕೊಳ್ಳುವ ಕಾರುಗಳೆಂದರೆ ಲ್ಯಾಂಬೋರ್ಘಿನಿ ಅವೆಂಟಡಾರ್, ಲಂಬೋರ್ಘಿನಿ ಗಲ್ಲಾರ್ಡೊ, BMW i8, ಮತ್ತು ಪೋರ್ಷೆ ಕಯೆನ್ನೆ GTS ಸ್ಪೋರ್ಟ್ಸ್ SUV ನಂತಹ ಕೆಲವು ಸ್ಪೋರ್ಟ್ಸ್ ಕಾರುಗಳಾಗಿವೆ. ನಟಿ ಮತ್ತು ಅವರ ಪತಿ ಹೊಂದಿರುವ ಅನೇಕ ಕಾರುಗಳು ಸೆಕೆಂಡ್‌ ಹ್ಯಾಂಡ್ ಕಾರುಗಳು ಎಂದು ಹೇಳಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Wednesday, November 8, 2023, 17:49 [IST]
English summary
Actress shilpa shetty bentley flying spur spotted
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+