ನಟಿ ಶಿಲ್ಪಾ ಶೆಟ್ಟಿಗೆ ಮತ್ತೊಂದು ಸಮಸ್ಯೆ ತಂದಿಟ್ಟ ಪತಿ: ಐಷಾರಾಮಿ ಕಾರುಗಳು ಸೀಜ್!
ಬಹುಭಾಷಾ ನಟಿ ಶಿಲ್ಪಾ ಶೆಟ್ಟಿಯವರ ಪತಿ ರಾಜ್ ಕುಂದ್ರಾ ಮತ್ತೊಮ್ಮೆ ಸಮಸ್ಯೆಗೆ ಸಿಲುಕಿದ್ದಾರೆ. ರಾಜ್ ಕುಂದ್ರಾ, ಕ್ರಿಪ್ಟೋಕರೆನ್ಸಿ ಮನಿ ಲಾಂಡರಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎಂದು ವರದಿಯಾಗಿದೆ. ಈ ಪ್ರಕರಣದಡಿ ಬರೋಬ್ಬರಿ 97.79 ಕೋಟಿ ರೂ.ಗಳ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡಿದೆ.
ರಾಜ್ ಕುಂದ್ರಾ ಶ್ರೀಮಂತ ಉದ್ಯಮಿಯಾಗಿದ್ದು, ಹಲವಾರು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಈ ನಿರ್ದಿಷ್ಟ ಪ್ರಕರಣದಡಿ ಅವರ ಪೋರ್ಷೆ ಕೇಯೆನ್ನೆ ಎಸ್‌ಯುವಿ ಮತ್ತು ಬೆಂಟ್ಲೆ ಫ್ಲೈಯಿಂಗ್ ಸ್ಪರ್ ಸೆಡಾನ್ ಅನ್ನು ಇಡಿ ವಶಪಡಿಸಿಕೊಂಡಿದೆ. ಇವಿಷ್ಟೆ ಅಲ್ಲದೇ ಜಾರಿ ನಿರ್ದೇಶನಾಲಯವು ಪ್ರಸ್ತುತ ರಾಜ್ ಕುಂದ್ರಾ ಅವರ ಜುಹು ಫ್ಲಾಟ್ ಮತ್ತು ಇತರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಇನ್ನೂ ಹಲವರನ್ನು ಬಂಧಿಸಿದೆ. ವರದಿಗಳ ಪ್ರಕಾರ, ಈ ಆಸ್ತಿಗಳನ್ನು ಪಿಎಂಎಲ್ (ಮನಿ ಲಾಂಡರಿಂಗ್ ತಡೆಗಟ್ಟುವಿಕೆ) ಕಾಯ್ದೆಯಡಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಕಾರ್ಸ್ ಫಾರ್ ಯು ಯೂಟ್ಯೂಬ್‌ನಲ್ಲಿ ವರದಿಯನ್ನು ಹಂಚಿಕೊಂಡಿದೆ.

2017 ರಲ್ಲಿ, ಈ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳಾದ ಅಮೀರ್ ಭಾರದ್ವಾಜ್ ಮತ್ತು ಮಹೇಂದ್ರ ಭಾರದ್ವಾಜ್ ಕ್ರಿಪ್ಟೋ ಪೊಂಜಿ ಸ್ಕೀಮ್ ಅನ್ನು ಪ್ರಾರಂಭಿಸಿದ್ದರು. ಈ ಆರೋಪಿಗಳು ತಮ್ಮ ಹೂಡಿಕೆದಾರರಿಗೆ ಪ್ರತಿ ತಿಂಗಳು ಶೇ10 ರಷ್ಟು ಆದಾಯವನ್ನು ನೀಡುವುದಾಗಿ ಭರವಸೆ ನೀಡಿದ್ದರು. ಒಟ್ಟಾರೆಯಾಗಿ, ಅವರು 6,600 ಕೋಟಿ ರೂ.ಗಳ ಹೂಡಿಕೆಯನ್ನು ಸಂಗ್ರಹಿಸಿದ್ದರು ಎಂದು ಹೇಳಲಾಗಿದೆ.
ಈ ಬಿಟ್ ಕಾಯಿನ್‌ಗಳನ್ನು ಮುಖ್ಯ ಆರೋಪಿ ಭಾರದ್ವಾಜ್ ಲಾಂಡರಿಂಗ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇದರಲ್ಲಿ 285 ಬಿಟ್‌ಕಾಯಿನ್‌ಗಳನ್ನು ಸ್ವೀಕರಿಸಿ ಪ್ರಕರಣದಲ್ಲಿ ರಾಜ್‌ಕುಂದ್ರಾ ಭಾಗಿಯಾಗಿರುವುದಾಗಿ ಮೂಲಗಳು ಹೇಳುತ್ತಿವೆ. ಜಾರಿ ನಿರ್ದೇಶನಾಲಯವು ರಾಜ್ ಕುಂದ್ರಾ ಅವರಿಂದ ಈ ಎಲ್ಲಾ ಆಸ್ತಿಗಳನ್ನು ವಶಪಡಿಸಿಕೊಂಡು ಹರಾಜು ಹಾಕಲಿದೆ.

ಇವು ಶಿಲ್ಪಾ ಶೆಟ್ಟಿ ಕಾರುಗಳು: ಶಿಲ್ಪಾ ಶೆಟ್ಟಿ ಗ್ಯಾರೇಜ್‌ನಲ್ಲಿ ಬೆಂಟ್ಲಿ ಕಾಂಟಿನೆಂಟಲ್ GT, Mercedes-Maybach GLS600, Mercedes Benz G63 AMG, BMW X5, BMW 7-ಸರಣಿ, ರೇಂಜ್ ರೋವರ್ ವೋಗ್ ಮತ್ತು Mercedes-Benz V-Class ಅನ್ನು ಹೊಂದಿದ್ದಾರೆ. ಇವುಗಳ ಜೊತೆಗೆ ಲ್ಯಾಂಬೋರ್ಘಿನಿ ಅವೆಂಟಡಾರ್, ಲಂಬೋರ್ಘಿನಿ ಗಲ್ಲಾರ್ಡೊ, BMW i8, ಮತ್ತು ಪೋರ್ಷೆ ಕಯೆನ್ನೆ GTS ಸ್ಪೋರ್ಟ್ಸ್ SUV ನಂತಹ ಕೆಲವು ಸ್ಪೋರ್ಟ್ಸ್ ಕಾರುಗಳಾಗಿವೆ. ನಟಿ ಮತ್ತು ಅವರ ಪತಿ ರಾಜ್ ಕುಂದ್ರಾ ಹೊಂದಿರುವ ಅನೇಕ ಕಾರುಗಳು ಸೆಕೆಂಡ್ ಹ್ಯಾಂಡ್ ಕಾರುಗಳು ಎನ್ನಲಾಗಿದೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಮೇಲಿನ ಈ ಕಾರುಗಳಲ್ಲಿ ಅವರ ಪೋರ್ಷೆ ಕಯೆನ್ನೆ GTS SUV ಮತ್ತು ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಸೆಡಾನ್ ಅನ್ನು ಮಾತ್ರ ವಶಪಡಿಸಿಕೊಂಡಿವೆ. ಉಳಿದಂತೆ ಅವರ ಆಸ್ತಿಗಳಲ್ಲಿ 80 ಕೋಟಿಗೂ ಹೆಚ್ಚು ಮೌಲ್ಯದ ಜುಹುದಲ್ಲಿ ಅವರ ಪ್ರಸ್ತುತ ನಿವಾಸವನ್ನು ವಶಪಡಿಸಿಕೊಂಡಿದ್ದಾರೆ.

ಈ ಎರಡು ಕಾರುಗಳಲ್ಲದೆ, ಪ್ರಸ್ತುತ ಅವರು ಹಳದಿ ಲ್ಯಾಂಬೊರ್ಘಿನಿ ಉರುಸ್ ಮತ್ತು ಹಿಂದಿನ ತಲೆಮಾರಿನ ಬಿಳಿ ರೇಂಜ್ ರೋವರ್ ವೋಗ್ ಅನ್ನು ಸಹ ಹೊಂದಿದ್ದಾರೆ. ಅವರು ಹಿಂದಿನ ತಲೆಮಾರಿನ ಬಿಳಿ ಬೆಂಟ್ಲೆ ಕಾಂಟಿನೆಂಟಲ್ ಜಿಟಿ ಕೂಪೆಯನ್ನು ಸಹ ಹೊಂದಿದ್ದು, ಕೆಲವು ವರದಿಗಳ ಪ್ರಕಾರ ಅದನ್ನು ಇತ್ತೀಚೆಗೆ ಮಾರಾಟ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.Source: CarBlogIndia
Source: CarBlogIndia


Click it and Unblock the Notifications








