ಪತಿಯ ಹುಟ್ಟುಹಬ್ಬಕ್ಕೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ ಜನಪ್ರಿಯ ನಟಿ

ಮಲಯಾಳಂ ಚಿತ್ರರಂಗದ ಜನಪ್ರಿಯ ನಟಿ ಶ್ವೇತಾ ಮೆನನ್ ತನ್ನ ಪತಿಯ ಹುಟ್ಟುಹಬ್ಬದಂದು ಜೀಪ್ ಮೆರಿಡಿಯನ್ ಎಸ್‍ಯುವಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಜೀಪ್ ಮೆರಿಡಿಯನ್ ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.32.40 ಲಕ್ಷವಾಗಿದೆ.

ಪತಿಯ ಹುಟ್ಟುಹಬ್ಬಕ್ಕೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ ಜನಪ್ರಿಯ ನಟಿ

ನಟಿ ಶ್ವೇತಾ ಮೆನನ್ ಹಾಗೂ ಅವರ ಪತಿ ಇಬ್ಬರೂ ಒಟ್ಟಿಗೆ ಕೊಚ್ಚಿಯಲ್ಲಿರುವ ಪಿನಾಕಲ್ ಜೀಪ್ ಡೀಲರ್‌ಶಿಪ್‌ಗೆ ತೆರಳಿ ಜೀಪ್ ಮೆರಿಡಿಯನ್ ಎಸ್‍ಯುವಿಯ ವಿತರಣೆಯನ್ನು ಪಡೆದಿದ್ದಾರೆ. ಈ ಹೊಸ ಕಾರು ಖರೀದಿಸಿದ ಸಂತಸದ ಸುದ್ದಿಯನ್ನು ನಟಿ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಶ್ವೇತಾ ಮೆನನ್ ಅವರು ಸಿಗ್ನೇಚರ್ ವೆಲ್ವೆಟ್ ರೆಡ್ ಬಣ್ಣದ ಜೀಪ್ ಮೆರಿಡಿಯನ್‌ ಎಸ್‍ಯುವಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಪತಿಯ ಹುಟ್ಟುಹಬ್ಬಕ್ಕೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ ಜನಪ್ರಿಯ ನಟಿ

ಶ್ವೇತಾ ಮೆನನ್ ಅವರು ಮಲಯಾಳಂ ಚಿತ್ರರಂಗದ ಜನಪ್ರಿಯ ನಟಿ. ಹಿಂದಿ,ತಮಿಳು ,ತೆಲುಗು ಮತ್ತು ತಮಿಳು ಚಿತ್ರಗಳಲ್ಲಿಯೂ ನಟಿಸಿರುವ ಇವರು ಕನ್ನಡದಲ್ಲಿ ಉಪೇಂದ್ರ ಅಭಿನಯದ ಓಂಕಾರ' ಚಿತ್ರದಲ್ಲಿ ನಟಿಸಿದ್ದಾರೆ.

ಪತಿಯ ಹುಟ್ಟುಹಬ್ಬಕ್ಕೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ ಜನಪ್ರಿಯ ನಟಿ

ನಟಿ ಖರೀದಿಸಿದ ಜೀಪ್ ಮೆರಿಡಿಯನ್ ಎಸ್‍ಯುವಿಯ ಬಗ್ಗೆ ಹೇಳುವುದಾದರೆ, ಇದು ಜನಪ್ರಿಯ ಎಸ್‌ಯುವಿ ಮಾದರಿಯಾದ ಕಂಪಾಸ್ ಆಧರಿಸಿದೆ. ಈ ಮೆರಿಡಿಯನ್ ಮೂರು ಸಾಲಿನ ಸಿಟ್ ಸೌಲಭ್ಯದೊಂದಿಗೆ 7 ಸೀಟರ್ ಸೌಲಭ್ಯವನ್ನು ಪಡೆದುಕೊಂಡಿದೆ.

ಪತಿಯ ಹುಟ್ಟುಹಬ್ಬಕ್ಕೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ ಜನಪ್ರಿಯ ನಟಿ

ಈ ಎಸ್‍ಯುವಿಯು ವಿವಿಧ ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ಮೆರಿಡಿಯನ್ ಮಾದರಿಯನ್ನು ಲಿಮಿಟೆಡ್ ಮ್ಯಾನುವಲ್, ಲಿಮಿಟೆಡ್(ಆಪ್ಷನ್) ಮ್ಯಾನುವಲ್, ಲಿಮಿಟೆಡ್ ಆಟೋಮ್ಯಾಟಿಕ್, ಲಿಮಿಟೆಡ್(ಆಪ್ಷನ್) ಆಟೋಮ್ಯಾಟಿಕ್ ಮತ್ತು ಲಿಮಿಟೆಡ್(ಆಪ್ಷನ್) ಆಟೋಮ್ಯಾಟಿಕ್ 4x4 ವೆರಿಯೆಂಟ್ ಹೊಂದಿದೆ

ಪತಿಯ ಹುಟ್ಟುಹಬ್ಬಕ್ಕೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ ಜನಪ್ರಿಯ ನಟಿ

ಫುಲ್ ಸೈಜ್ ಎಸ್‌ಯುವಿಯಲ್ಲಿ ಹೆಚ್ಚಿನ ಬೇಡಿಕೆ ಹೊಂದಿದ್ದ ಫೋರ್ಡ್ ಎಂಡೀವರ್ ಮಾದರಿಯು ಮಾರಾಟಕ್ಕೆ ಲಭ್ಯವಿಲ್ಲದಿರುವುದು ಜೀಪ್ ಮೆರಿಡಿಯನ್ ಮಾದರಿಗೆ ಅನುಕೂಲಕರವಾಗಿದೆ. ಆಟೋಮ್ಯಾಟಿಕ್ 4x4 ಆಫ್ ರೋಡ್ ಎಸ್‌ಯುವಿ ಕಾರು ಬಯಸುವ ಗ್ರಾಹಕರಿಗೆ ಇದು ಪ್ರತಿಸ್ಪರ್ಧಿ ಮಾದರಿಗಿಂತಲೂ ಕಡಿಮೆ ಬೆಲೆಗೆ ಲಭ್ಯವಿದೆ.

ಪತಿಯ ಹುಟ್ಟುಹಬ್ಬಕ್ಕೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ ಜನಪ್ರಿಯ ನಟಿ

ಹೊಸ ಮೆರಿಡಿಯನ್‌ ಎಸ್‍ಯುವಿಯಲ್ಲಿ ಜೀಪ್ ಕಂಪನಿಯು ಕಂಪಾಸ್ ಮಾದರಿಯಲ್ಲಿರುವ 2.0 ಲೀಟರ್ ನಾಲ್ಕು-ಸಿಲಿಂಡರ್ ಮಲ್ಟಿಜೆಟ್ ಟರ್ಬೊ ಡೀಸೆಲ್ ಎಂಜಿನ್‌ ಅನ್ನು ಹೊಸ ಮಾದರಿಗಾಗಿ ಟ್ಯೂನ್ ಮಾಡಿದೆ. ಈ ಎಂಜಿನ್ 6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 9-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 168 ಬಿಹೆಚ್‍ಪಿ ಮತ್ತು 350 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಪತಿಯ ಹುಟ್ಟುಹಬ್ಬಕ್ಕೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ ಜನಪ್ರಿಯ ನಟಿ

ಟ್ಯೂನ್ ಮಾಡಲಾದ ಎಂಜಿನ್‌ನಲ್ಲಿ ಕಂಪನಿಯು ಮೈಲ್ಡ್-ಹೈಬ್ರಿಡ್ ಸಿಸ್ಟಂ ಅನ್ನು ಜೋಡಣೆ ಮಾಡಿದೆ. ಈ ಎಸ್‍ಯುವಿಯಲ್ಲಿ ಫ್ರಂಟ್ ವ್ವೀಲ್ ಡ್ರೈವ್ ಮಾದರಿಯಲ್ಲಿ ಮ್ಯಾನುವಲ್ ಮತ್ತು ಆಟೋ ಮ್ಯಾಟಿಕ್ ಮಾದರಿಗಳಿದ್ದರೆ ಆಲ್ ವ್ಹೀಲ್ ಡ್ರೈವ್ ಮಾದರಿಯಲ್ಲಿ ಕೇವಲ ಆಟೋಮ್ಯಾಟಿಕ್ ಮಾದರಿಯನ್ನು ಮಾತ್ರ ಬಿಡುಗಡೆ ಮಾಡಲಾಗಿದೆ.

ಪತಿಯ ಹುಟ್ಟುಹಬ್ಬಕ್ಕೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ ಜನಪ್ರಿಯ ನಟಿ

ಈ ಜೀಪ್ ಎಸ್‍ಯುವಿಯು 4,769 ಎಂಎಂ ಉದ್ದ, 1,859 ಅಗಲ, 1,682 ಎಂಎಂ ಎತ್ತರ ಮತ್ತು 2,794 ಎಂಎಂ ವ್ಹೀಲ‌್‌ಬೆಸ್ ಹೊಂದಿದೆ, ಇದು ಸ್ಟ್ಯಾಂಡರ್ಡ್ ಕಂಪಾಸ್ ಮಾದರಿಗಿಂತ ಸುಮಾರು 364 ಎಂಎಂ ಉದ್ದ, 41 ಎಂಎಂ ಅಗಲ ಮತ್ತು 42 ಎಂಎಂ ಎತ್ತರವನ್ನು ಹೊಂದಿದೆ.

ಪತಿಯ ಹುಟ್ಟುಹಬ್ಬಕ್ಕೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ ಜನಪ್ರಿಯ ನಟಿ

ಜೀಪ್ ಮೆರಿಡಿಯನ್ ಮೂಲತಃ ಕಂಪಾಸ್‌ 7-ಸೀಟರ್ ಆವೃತ್ತಿಯಾಗಿದ್ದು, ಇದು ಈಗಾಗಲೇ ಕಮಾಂಡರ್ ಹೆಸರಿನಲ್ಲಿ ಆಯ್ದ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿದೆ. ಭಾರತದಲ್ಲಿ ಇದೀಗ ಮೆರಿಡಿಯನ್ ಹೆಸರಿನಲ್ಲಿ ಲಗ್ಗೆಯಿಟ್ಟಿದ್ದು, ಹೊಸ ಸಂಪೂರ್ಣವಾಗಿ 'ಮೇಡ್-ಇನ್-ಇಂಡಿಯಾ' ಮಾದರಿಯಾಗಿ ಅಭಿವೃದ್ದಿಗೊಂಡು ಮಾರಾಟಗೊಳ್ಳಲಿದೆ. ಈ ಹೊಸ ಎಸ್‌ಯುವಿಯಲ್ಲಿ ಜೀಪ್ ಕಂಪನಿಯು ತನ್ನ ಸಾಂಪ್ರದಾಯಿಕ 7 ಸ್ಲಾಟ್ ಫ್ರಂಟ್ ಗ್ರಿಲ್ ಜೊತೆಗೆ ಸ್ಲಿಕ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು, ಬಲಿಷ್ಠ ಬಂಪರ್, ದೊಡ್ಡ ವಿನ್ಯಾಸದ ಏರ್‌ಇನ್‌ಟೆಕ್, ವ್ಹೀಲ್ ಆರ್ಚ್, 18 ಇಂಚಿನ ಅಲಾಯ್ ವ್ಹೀಲ್, ಸ್ಲಿಡ್ ಎಲ್ಇಡಿ ಟೈಲ್‌ಲೈಟ್ ಮತ್ತು ಸೈಡ್ ಸಿಲ್ಲ್ ಜೊತೆಗೆ ಸ್ಪೋರ್ಟಿ ರಿಯರ್ ಬಂಪರ್ ಹೊಂದಿದೆ.

ಪತಿಯ ಹುಟ್ಟುಹಬ್ಬಕ್ಕೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ ಜನಪ್ರಿಯ ನಟಿ

ಮೆರಿಡಿಯನ್ ಎಸ್‍ಯುವಿಯ ಒಳಭಾಗವು ಬ್ರೌನ್ ಥೀಮ್ ಅನ್ನು ಹೊಂದಿದ್ದು, 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಇದು ಕನೆಕ್ಟ್ ಟೆಕ್ನಾಲಜಿಯೊಂದಿಗೆ ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ, ಆಲ್-ಡಿಜಿಟಲ್ ಇನ್ಸ್‌ಟ್ರೂಮೆಂಟ್ ಕನ್ಸೋಲ್, ಸನ್‌ರೂಫ್, ಲೆದರ್ ಅಪ್ಹೋಲ್ಸ್ಟರಿ, ಅಡ್ಜೆಸ್ಟ್ ಮಾಡಬಹುದಾದ ಹೆಡ್‌ರೆಸ್ಟ್‌ಗಳು, ಮೆಟಾಲಿಕ್ ಆಕ್ಸೆಂಟ್‌ಗಳೊಂದಿಗೆ ಲೇಯರ್ಡ್ ಡ್ಯಾಶ್‌ಬೋರ್ಡ್ ಹೊಂದಿದೆ.

ಪತಿಯ ಹುಟ್ಟುಹಬ್ಬಕ್ಕೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ ಜನಪ್ರಿಯ ನಟಿ

ಇದರೊಂದಿಗೆ ಈ ಜೀಪ್ ಮೆರಿಡಿಯನ್ ಎಸ್‍ಯುವಿಯಲ್ಲಿ ಕಾರಿನಲ್ಲಿ 8 ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, 360 ಡಿಗ್ರಿ ಕ್ಯಾಮೆರಾ, ಟ್ರಾಕ್ಷನ್ ಕಂಟ್ರೊಲ್, ಹಿಲ್ ಹೋಲ್ಡ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್ ಸೇರಿದಂತೆ 60ಕ್ಕೂ ಹೆಚ್ಚು ಸುರಕ್ಷಾ ಫೀಚರ್ಸ್ ನೀಡಲಾಗಿದೆ. ಹೊಸ ಜೀಪ್ ಮೆರಿಡಿಯನ್ 7-ಸೀಟರ್ ಪ್ರೀಮಿಯಂ ಎಸ್‍ಯುವಿ ಭಾರತದಲ್ಲಿ ಟೊಯೊಟಾ ಫಾರ್ಚೂನರ್, ಫೋಕ್ಸ್‌ವ್ಯಾಗನ್ ಟಿಗ್ವಾನ್ ಆಲ್‌ಸ್ಪೇಸ್ ಮತ್ತು ಮಹೀಂದ್ರಾ ಅಲ್ತುರಾಸ್ ಜಿ4 ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

ಪತಿಯ ಹುಟ್ಟುಹಬ್ಬಕ್ಕೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ ಜನಪ್ರಿಯ ನಟಿ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ನಟಿ ಶ್ವೇತಾ ಮೆನನ್ ಅವರು ಅತ್ಯುತ್ತಮ ಎಸ್‍ಯುವಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಜೀಪ್ ಮೆರಿಡಿಯನ್ ಐಷಾರಾಮಿ ಕಾರು ಚಾಲನಾ ಅನುಭವದೊಂದಿಗೆ ಕಠಿಣವಾದ ಆಫ್ ರೋಡ್ ಪ್ರಯಾಣ ನಡೆಸಬಹುದು.

Most Read Articles

Kannada
English summary
Actress shwetha menon gifts jeep meridian suv to husband sreevalsan details
Story first published: Monday, June 27, 2022, 15:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X