ಸೆಲೆಬ್ರಿಟಿಗಳು ಜಾಹಿರಾತಿನಲ್ಲಿ ನಟಿಸಿದ್ರೆ ಸಾಲದೇ... ರಸ್ತೆಯಲ್ಲೂ ಪ್ರಚಾರ ಬೇಕೇ?: ನಟಿಯ ವಿಡಿಯೋ ವೈರಲ್

ಸೆಲೆಬ್ರಿಟಿಗಳು ಸಾಮಾನ್ಯವಾಗಿ ಸಾರ್ವಜನಿಕ ರಸ್ತೆಗಳಲ್ಲಿ ಕಾಣಿಸಿಕೊಳ್ಳುವುದು ತುಂಬಾ ವಿರಳ, ಆದ್ರೆ ಫೇಮಸ್ ನಟಿಯೊಬ್ಬರು ರಾಯಲ್ ಎನ್‌ಫೀಲ್ಡ್‌ನಲ್ಲಿ ಓಡಾಡುತ್ತಾ ರೈಡ್ ಎಂಜಾಯ್ ಮಾಡಿದ್ದಾರೆ. ಇವರು ಇತ್ತೀಚೆಗೆ ರಾಯಲ್ ಎನ್‌ಫೀಲ್ಡ್ ಬೈಕ್‌ಗಾಗಿ ಜಾಹಿರಾತು ಒಂದರಲ್ಲಿ ನಟಿಸಿದ್ದರು. ಇದ್ದಕ್ಕಾಗಿಯೇ ಈ ಗಿಮಿಕ್ ಎಂದು ಹಲವರು ಕಮೆಂಟ್ ಮಾಡುತ್ತಿದ್ದಾರೆ.

ಇತ್ತೀಚೆಗೆ ಬಾಲಿವುಡ್‌ನ "ದಬಾಂಗ್" ಖ್ಯಾತಿಯ ನಟಿ ಸೋನಾಕ್ಷಿ ಸಿನ್ಹಾ ಮುಂಬೈನ ರಸ್ತೆಗಳಲ್ಲಿ ರಾಯಲ್ ಎನ್‌ಫೀಲ್ಡ್ ಮೀಟಿಯೊರ್ 350 ಅನ್ನು ಸವಾರಿ ಮಾಡುತ್ತಿರುವುದು ಕಂಡುಬಂದಿದೆ. ಸೋನಾಕ್ಷಿ ರಾಯಲ್ ಎನ್‌ಫೀಲ್ಡ್ ಬೈಕ್ ಚಲಾಯಿಸುತ್ತಿರುವ ಸಣ್ಣ ವಿಡಿಯೋವನ್ನು ಬಾಲಿವುಡ್ ನ್ಯೂಸ್ ತಮ್ಮ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದೆ. ವೀಡಿಯೊದಲ್ಲಿ, ನಟಿ ಫೈರ್‌ ಬಾಲ್ ಹಳದಿ ಬಣ್ಣದ ರಾಯಲ್ ಎನ್‌ಫೀಲ್ಡ್ ಮೀಟೊಯೊರ್ 350 ಅನ್ನು ಓಡಿಸುತ್ತಿರುವುದನ್ನು ನಾವು ನೋಡಬಹುದು.

ಅವರು ಏಕಾಂಗಿಯಾಗಿ ಸವಾರಿ ಮಾಡುತ್ತಿದ್ದರೂ ಆಕೆಯ ಭದ್ರತಾ ತಂಡವು ಮರ್ಸಿಡಿಸ್ ಬೆಂಝ್ ಸೆಡಾನ್‌ನಲ್ಲಿ ಅನುಸರಿಸುತ್ತಿರುವುದನ್ನು ನಾವು ಗಮನಿಸಬಹುದು. ಇನ್ನು ಜಾಹಿರಾತಿನ ಕುರಿತು ಮಾತನಾಡುವುದಾದರೆ ನಟಿ ಸೊನಾಕ್ಷಿ ರಾಯಲ್ ಎನ್‌ಫೀಲ್ಡ್ ಮೆಟಿಯರ್ 350 ಗಾಗಿ ತನ್ನ ಅಪಾರ್ಟ್‌ಮೆಂಟ್‌ನಿಂದ ಹೊರಬಂದು ಬೈಕ್ ಕಡೆಗೆ ಹೋಗಿ ನಂತರ ರಾಯಲ್ ಎನ್‌ಫೀಲ್ಡ್ ಬ್ರಾಂಡ್ ಹೆಲ್ಮೆಟ್ ಧರಿಸುತ್ತಾರೆ. ಬಳಿಕ ಈಗ ಬೈಕ್ ಓಡಿಸುವ ಸಮಯ ಎಂದು ಬೈಕ್ ಏರಿ ರೈಡ್ ಮಾಡುತ್ತಾರೆ.

ರಾಯಲ್ ಎನ್‌ಫೀಲ್ಡ್ ಮೀಟಿಯೊರ್ 350 ಅನ್ನು ಫೈರ್‌ಬಾಲ್, ಸ್ಟೆಲ್ಲರ್ ಮತ್ತು ಸೂಪರ್‌ನೋವಾ ಎಂಬ ಮೂರು ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಬೈಕ್ ರೂ. 1.75 ಲಕ್ಷ ಎಕ್ಸ್ ಶೋರೂಂ ಬೆಲೆಯಿಂದ ಆರಂಭವಾಗಿ ರೂ. 1.90 ಲಕ್ಷ ಎಕ್ಸ್ ಶೋ ರೂಂ ವೆರೆಗೆ ಹೋಗುತ್ತದೆ. ಮೀಟಿಯೊರ್ 350 ಬ್ರ್ಯಾಂಡ್‌ನ ಹೊಸ "ಜೆ" ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ್ದು, ಹೆಚ್ಚು ಹಗುರವಾಗಿರುತ್ತದೆ. ಎಂಜಿನ್ ಕೌಂಟರ್ ಬ್ಯಾಲೆನ್ಸರ್ ಅನ್ನು ಪಡೆಯುತ್ತದೆ.

ಸೆಲೆಬ್ರಿಟಿಗಳು ಜಾಹಿರಾತಿನಲ್ಲಿ ನಟಿಸಿದ್ರೆ ಸಾಲದೇ... ರಸ್ತೆಯಲ್ಲೂ ಪ್ರಚಾರ ಬೇಕೇ?: ನಟಿಯ ವಿಡಿಯೋ ವೈರಲ್

ಹೊಸ ಮೀಟಿಯೊರ್ 350 ಬೈಕ್ 349 ಸಿಸಿ, ಏರ್ ಕೂಲ್ಡ್ ಎಂಜಿನ್‌ನಿಂದ ಚಾಲಿತವಾಗಿದ್ದು, ಇದು 20.4 ಪಿಎಸ್ ಗರಿಷ್ಠ ಶಕ್ತಿಯನ್ನು ಮತ್ತು 27 ಎನ್‌ಎಂ ಗರಿಷ್ಠ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಸಂಯೋಜಿಸಲ್ಪಟ್ಟಿದೆ. ಮೋಟಾರ್‌ಸೈಕಲ್ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಪ್ರಮಾಣಿತವಾಗಿ ಪಡೆದಿದೆ. ಹಾಗೆಯೇ ಇತ್ತೀಚೆಗೆ ಕಂಪನಿಯು ರಾಯಲ್ ಎನ್‌ಫೀಲ್ಡ್ ಸೂಪರ್ ಮೀಟಿಯರ್ 650 ಎಂಬ ಹೆಚ್ಚು ಶಕ್ತಿಶಾಲಿ ರೂಪಾಂತರವನ್ನು ಬಿಡುಗಡೆ ಮಾಡಿದೆ.

ಈ ಬೈಕ್ ಪ್ರಸ್ತುತ ಪ್ರಮುಖ ರಾಯಲ್ ಎನ್‌ಫೀಲ್ಡ್ ಬೈಕ್ ಆಗಿದೆ. ಆಸ್ಟ್ರಲ್, ಇಂಟರ್ ಸ್ಟೆಲ್ಲರ್ ಮತ್ತು ಸೆಲೆಸ್ಟಿಯಲ್ ಎಂಬ ಮೂರು ರೂಪಾಂತರಗಳಲ್ಲಿ ಈ ಮಾದರಿಯನ್ನು ಬಿಡುಗಡೆ ಮಾಡಲಾಗಿದೆ. ಇದರ ಆರಂಭಿಕ ಬೆಲೆ 3,48,900 ರೂ. ಇದೆ. ಸೆಲೆಸ್ಟಿಯಲ್ ವ್ಯತ್ಯಾಸವು ಟಾಪ್-ಆಫ್-ಲೈನ್ ಟೂರರ್ ಆವೃತ್ತಿಯ ಯೂನಿಕ್ ರೂಪಾಂತರವಾಗಿದೆ. ಆದರೆ ಆಸ್ಟ್ರಲ್ ಮತ್ತು ಇಂಟರ್ ಸ್ಟೆಲ್ಲರ್ ಆವೃತ್ತಿಗಳನ್ನು ಸ್ಟ್ಯಾಂಡರ್ಡ್ ಆವೃತ್ತಿಯ ಅಡಿಯಲ್ಲಿ ಪಟ್ಟಿ ಮಾಡಲಾಗಿದೆ.

ಸ್ಟ್ಯಾಂಡರ್ಡ್ ಆವೃತ್ತಿಗೆ ಹೋಲಿಸಿದರೆ, ಟೂರರ್ ರೂಪಾಂತರವು ಪಿಲಿಯನ್ ಬ್ಯಾಕ್‌ರೆಸ್ಟ್, ಗಾಜಿನ ವಿಂಡ್‌ಸ್ಕ್ರೀನ್ ಮತ್ತು ವಿಶಿಷ್ಟವಾದ ಡ್ಯುಯಲ್-ಟೋನ್ ಸೆಲೆಸ್ಟಿಯಲ್ ಪೇಂಟ್ ಸ್ಕೀಮ್‌ಗಳನ್ನು ಹೊಂದಿವೆ. ಬೇಸ್ ಮಾದರಿಯು ಆಸ್ಟ್ರಲ್ ಆವೃತ್ತಿಯು ಮೂರು ಬಣ್ಣಗಳಲ್ಲಿ ಬರುತ್ತದೆ, ಆದರೆ ಇಂಟರ್ ಸ್ಟೆಲ್ಲರ್ ಮತ್ತು ಸೆಲೆಸ್ಟಿಯಲ್ ರೂಪಾಂತರಗಳು ಪ್ರತಿಯೊಂದೂ ಎರಡು ಬಣ್ಣ ಆಯ್ಕೆಗಳನ್ನು ಹೊಂದಿವೆ. ಪ್ರಸ್ತುತ ಸೂಪರ್ ಮೆಟಿಯರ್ 650 ರಾಯಲ್ ಎನ್‌ಫೀಲ್ಡ್‌ನ ಅತ್ಯಂತ ಭಾರವಾದ ಬೈಕ್ ಆಗಿದ್ದು, 241 ಕೆ.ಜಿ ತೂಕವನ್ನು ಹೊಂದಿದೆ.

ಪವರ್‌ಟ್ರೇನ್‌ಗೆ ಸಂಬಂಧಿಸಿದಂತೆ, ಹೊಸ ರಾಯಲ್ ಎನ್‌ಫೀಲ್ಡ್ ಸೂಪರ್ ಮೀಟಿಯರ್ 650 ಅದರ ನಾಲ್ಕು ಸ್ಟ್ರೋಕ್, ಪ್ಯಾರಲಲ್-ಟ್ವಿನ್, ಏರ್-ಕೂಲ್ಡ್, 648cc ಎಂಜಿನ್ ಅನ್ನು ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ GT650 ಜೊತೆಗೆ ಹಂಚಿಕೊಳ್ಳುತ್ತದೆ. ಪ್ರಮುಖ ವ್ಯತ್ಯಾಸವೆಂದರೆ ಸೂಪರ್ ಮೀಟಿಯರ್ 650, ಈ ಎಂಜಿನ್ ಅನ್ನು ನವೀಕರಿಸಿದ ಮ್ಯಾಪಿಂಗ್ ಮತ್ತು ಗೇರಿಂಗ್‌ನೊಂದಿಗೆ ಬಂದಿರುವುದರಿಂದ ಗರಿಷ್ಠ 47 HP ಮತ್ತು ಗರಿಷ್ಠ 52 Nm ಟಾರ್ಕ್ ಅನ್ನು ಉತ್ಪಾದಿಸಬಲ್ಲದು.

More from DriveSpark

Article Published On: Saturday, March 11, 2023, 15:23 [IST]
English summary
Actress Sonakshi was seen riding a Royal Enfield bike on the road
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+