ಸೂರ್ಯ ಶಿಕಾರಿಗೆ ಇಸ್ರೋ ಮಾಸ್ಟರ್ ಪ್ಲಾನ್ 'ಆದಿತ್ಯ'

By Nagaraja

ತನ್ನ ಚೊಚ್ಚಲ ಪ್ರಯತ್ನದಲ್ಲೇ ಮಂಗಳಯಾನದ ಯಶಸ್ಸಿನಲ್ಲಿರುವ ಇಸ್ರೋ ವಿಜ್ಞಾನಿಗಳು ಈಗ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯೊಂದನ್ನು ಕೈಗೆತ್ತಿಗೊಂಡಿದ್ದು, 2019-2020ರ ವೇಳೆಯಾಗುವಾಗ ಸೂರ್ಯನನ್ನೇ ಶಿಕಾರಿ ಮಾಡಲಿದೆ.

2017ರಲ್ಲಿ ಭೂಮಿಯ ಉಪಗ್ರಹವಾದ ಚಂದ್ರನ ನೆಲಕ್ಕೆ ಚಂದ್ರಯಾನ-2 ಇಳಿಯಲಿದೆ. ಇಲ್ಲಿ ಜೀವವಾಸದ ಬಗ್ಗೆ ಆಳವಾದ ಅಧ್ಯಯನ ನಡೆಸಲಿದೆ. ಭಾರತದ ಮೊದಲ ಚಂದ್ರಯಾನ ಪ್ರಯತ್ನದಲ್ಲಿ ನೀರಿನ ಕುರುಹುಗಳನ್ನು ಪತ್ತೆ ಹಚ್ಚಲಾಗಿತ್ತು. ಈಗ ಸೂರ್ಯನ ಮೇಲೆ ಕಣ್ಣಿಟ್ಟಿರುವ ಇಸ್ರೋ, 2019-20ರ ವೇಳೆಯಾಗುವಾಗ 'ಆದಿತ್ಯ- ಎಲ್1' ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಬಿಡಲಿದೆ. ಇದು ಸೂರ್ಯನ ಕುರಿತು ಸಂಶೋಧನೆ ನಡೆಸಲಿದೆ.

ಸೂರ್ಯ ಶಿಕಾರಿಗೆ ಇಸ್ರೋ ಮಾಸ್ಟರ್ ಪ್ಲಾನ್ 'ಆದಿತ್ಯ'

ಬಾಹ್ಯಾಕಾಶ ಸಂಶೋಧನೆಯಲ್ಲಿ ಅಮೆರಿಕದ ನಾಸಾ ಮುಂಚೂಣಿಯಲ್ಲಿದ್ದು, ಹಾಗಿರುವಾಗ ಇಸ್ರೋದ ಬೆಳವಣಿಗೆಯು ಇಡೀ ದೇಶಕ್ಕೆ ಹೆಮ್ಮೆ ತರುವಂತಾಗಿದೆ. ಇದಕ್ಕಾಗಿ ಸೂರ್ಯನ ಹೊರ ವಲಯವನ್ನು ಸಮೀಪಿಸುವಂತಹ ಉಪಗ್ರಹವನ್ನು ವಿನ್ಯಾಸಗೊಳಿಸಲಾಗುತ್ತಿದೆ.

ಸೂರ್ಯ ಶಿಕಾರಿಗೆ ಇಸ್ರೋ ಮಾಸ್ಟರ್ ಪ್ಲಾನ್ 'ಆದಿತ್ಯ'

ಭೂಮಿಯಿಂದ 15 ಲಕ್ಷ ಕೀ.ಮೀಗಳಷ್ಟು ದೂರದಲ್ಲಿರುವ ಲಾಗ್ರೇಂಜೀಯನ್ ಪಾಯಿಂಟ್ ಎಲ್1 ಕಕ್ಷೆಯಲ್ಲಿ ಆದಿತ್ಯ ಉಪಗ್ರಹವನ್ನು ನಿಯೋಜಿಸಲಾಗುವುದು. ಇಲ್ಲಿಂದ ಸೂರ್ಯನ ಮೇಲೆ ನಿಗಾ ವಹಿಸಲಿದೆ.

ಸೂರ್ಯ ಶಿಕಾರಿಗೆ ಇಸ್ರೋ ಮಾಸ್ಟರ್ ಪ್ಲಾನ್ 'ಆದಿತ್ಯ'

ಬಾಹ್ಯಾಕಾಶ ಇತಿಹಾಸ ಪುಟವನ್ನು ತೆರೆದು ನೋಡಿದಾಗ ಅಮೆರಿಕದ ನಾಸಾ ಹಾಗೂ ಯುರೋಪ್ ನ ಬಾಹ್ಯಕಾಶ ಸಂಸ್ಥೆಗಳು ಮಾತ್ರ ಇದುವರೆಗೆ ಲಾಗ್ರೇಂಜೀಯನ್ ಪಾಯಿಂಟ್ ಎಲ್1 ಕಕ್ಷೆಯಲ್ಲಿ ಉಪಗ್ರಹವನ್ನು ಸೇರಿಸುವಲ್ಲಿ ಯಶಸ್ವಿಯಾಗಿದೆ.

ಸೂರ್ಯ ಶಿಕಾರಿಗೆ ಇಸ್ರೋ ಮಾಸ್ಟರ್ ಪ್ಲಾನ್ 'ಆದಿತ್ಯ'

378.53 ಕೋಟಿ ವೆಚ್ಚದ ಆದಿತ್ಯ ಸೌರ ಮಿಷನ್, ಪ್ರಮುಖವಾಗಿಯೂ ಸೂರ್ಯ ಪ್ರಭಾವಲಯದ (Corona) ಬಗ್ಗೆ ಸಮಗ್ರವಾದ ಅಧ್ಯಯನವನ್ನು ನಡೆಸಲಿದೆ.

ಸೂರ್ಯ ಶಿಕಾರಿಗೆ ಇಸ್ರೋ ಮಾಸ್ಟರ್ ಪ್ಲಾನ್ 'ಆದಿತ್ಯ'

ಸೂರ್ಯನ ಉಷ್ಣ ವಲಯದಲ್ಲಿ ಉಂಟಾಗುವ ಬದಲಾವಣೆಗಳು ಹೇಗೆ ಭೂಮಿಯ ಹವಾಮಾನ ಹಾಗೂ ಬಾಹ್ಯಾಕಾಶದ ಮೇಲೆ ಪ್ರಭಾವ ಬೀರಲಿದೆ ಎಂಬುದರ ಬಗ್ಗೆ ಆದಿತ್ಯ-ಎಲ್1 ನಿಖರವಾಗಿ ಸಂಶೋಧನೆ ನಡೆಸಲಿದೆ.

ಸೂರ್ಯ ಶಿಕಾರಿಗೆ ಇಸ್ರೋ ಮಾಸ್ಟರ್ ಪ್ಲಾನ್ 'ಆದಿತ್ಯ'

2017ರಲ್ಲಿ ಎರಡನೇ ಚಂದ್ರಯಾನ ಹಮ್ಮಿಕೊಳ್ಳಲಿರುವ ಇಸ್ರೋ, ಬಳಿಕ ವಿಶ್ವದ ಅತ್ಯಂತ ಕ್ಲಿಷ್ಟಕರ ಸೌರ ಅಧ್ಯಯನವನ್ನು ನಡೆಸಲಿದೆ. ಈ ಸಂಬಂಧ ಈಗಿನಿಂದಲೇ ಪ್ರಾಥಮಿಕ ಪ್ರಯತ್ನಗಳನ್ನು ಪ್ರಾರಂಭಿಸಿದೆ.

ಸೂರ್ಯ ಶಿಕಾರಿಗೆ ಇಸ್ರೋ ಮಾಸ್ಟರ್ ಪ್ಲಾನ್ 'ಆದಿತ್ಯ'

ಸೂರ್ಯ ಪರಿಮಂಡಲದಲ್ಲಿ ಉಷ್ಣಾಂಶ ಗರಿಷ್ಠ ಮಟ್ಟದಲ್ಲಿದ್ದು, ಈಗಲೂ ಹಲವಾರು ಪ್ರಶ್ನೆಗಳಿಗೆ ಉತ್ತರವೇ ಸಿಗದಂತಾಗಿದೆ. ಇವೆಲ್ಲದಕ್ಕೂ ಆದಿತ್ಯ ಉಪಗ್ರಹ ಸ್ಪಷ್ಟ ಉತ್ತರವನ್ನು ಹುಡುಕಲಿದೆ.

ವಿಸಿಬಲ್ ಎಮಿಷನ್ ಲೈನ್ ಕೊರೊನಾಗ್ರಾಫ್ (ವಿಇಎಲ್ ಸಿ)

ವಿಸಿಬಲ್ ಎಮಿಷನ್ ಲೈನ್ ಕೊರೊನಾಗ್ರಾಫ್ (ವಿಇಎಲ್ ಸಿ)

ಸೌರ ಪ್ರಭಾವಲಯದ ಉಗಮ ಹಾಗೂ ವಿವಿಧ ಕ್ರಿಯಾತ್ಮಕತೆಗಳ ಬಗ್ಗೆ ವಿಶ್ಲೇಷಣಾತ್ಮಕ ನಿಯತಾಂಕಗಳನ್ನು ಆದಿತ್ಯ ಅಧ್ಯಯನ ನಡೆಸಲಿದೆ. ವಿಸಿಬಲ್ 3 ಹಾಗೂ 1 ಇನ್ಪ್ರಾ ರೆಡ್ ಚಾನೆಲ್ ಉಗಮದ ಬಗ್ಗೆಯೂ ಸಂಶೋಧನೆ ನಡೆಸಲಿದೆ.

More from DriveSpark

Article Published On: Monday, August 22, 2016, 11:55 [IST]
English summary
Aditya - L1 First Indian mission to study the Sun
Read more on ಇಸ್ರೊ isro
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+