ಕೈಕೊಟ್ಟ ಪ್ರೀತಿ, ಆಟೋ ಡ್ರೈವರ್‌ಗಳ ಮೇಲೆ ವಿಲಕ್ಷಣ ರೀತಿಯಲ್ಲಿ ಸೇಡು ತೀರಿಸಿಕೊಂಡ ಭಗ್ನ ಪ್ರೇಮಿ

ಕರೋನಾ ವೈರಸ್ ಹರಡುವುದನ್ನು ನಿಯಂತ್ರಿಸಲು ಜಾರಿಗೊಳಿಸಲಾದ ಲಾಕ್‌ಡೌನ್ ಅನೇಕ ಜನರ ಜೀವನವನ್ನು ತಲೆಕೆಳಗು ಮಾಡಿದೆ. ಲಾಕ್‌ಡೌನ್ ಕಾರಣದಿಂದಾಗಿ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಇನ್ನೂ ಕೆಲವರಿಗೆ ಸಂಬಳವನ್ನು ಕಡಿತಗೊಳಿಸಲಾಗಿದೆ.

ಕೈಕೊಟ್ಟ ಪ್ರೀತಿ, ಆಟೋ ಡ್ರೈವರ್‌ಗಳ ಮೇಲೆ ವಿಲಕ್ಷಣ ರೀತಿಯಲ್ಲಿ ಸೇಡು ತೀರಿಸಿಕೊಂಡ ಭಗ್ನ ಪ್ರೇಮಿ

ಲಾಕ್‌ಡೌನ್ ನಿಂದ ಹೆಚ್ಚು ತೊಂದರೆಗೆ ಒಳಗಾದವರಲ್ಲಿ ಆಟೋ ಡ್ರೈವರ್ ಗಳೂ ಸಹ ಸೇರಿದ್ದಾರೆ. ಲಾಕ್‌ಡೌನ್ ಜಾರಿಯಾದ ನಂತರ ಆಟೋ ಸೇರಿದಂತೆ ಎಲ್ಲಾ ಸಾರಿಗೆ ಸೇವೆಗಳ ಕಾರ್ಯಾಚರಣೆಗಳ ಮೇಲೆ ನಿರ್ಬಂಧ ವಿಧಿಸಲಾಯಿತು. ಇದರಿಂದಾಗಿ ಆಟೋ ಚಾಲಕರು ಆದಾಯವನ್ನು ಕಳೆದುಕೊಂಡು ಕುಟುಂಬ ನಿರ್ವಹಣೆಗೆ ಪರದಾಡುವಂತಾಯಿತು. ಲಾಕ್‌ಡೌನ್ ನಿಂದ ವಿನಾಯಿತಿ ನೀಡಲಾಗಿರುವ ಹಿನ್ನೆಲೆಯಲ್ಲಿ ಆಟೋಗಳ ಕಾರ್ಯಾಚರಣೆಗೆ ಅನುಮತಿ ನೀಡಲಾಗಿದೆ.

ಕೈಕೊಟ್ಟ ಪ್ರೀತಿ, ಆಟೋ ಡ್ರೈವರ್‌ಗಳ ಮೇಲೆ ವಿಲಕ್ಷಣ ರೀತಿಯಲ್ಲಿ ಸೇಡು ತೀರಿಸಿಕೊಂಡ ಭಗ್ನ ಪ್ರೇಮಿ

ಆದರೆ ಕರೋನಾ ವೈರಸ್ ಹರಡಬಹುದೆಂಬ ಆತಂಕದಿಂದಾಗಿ ಜನರು ಆಟೋ ಹಾಗೂ ಬಸ್ ಗಳಲ್ಲಿ ಸಂಚರಿಸುವ ಬದಲು ತಮ್ಮ ಸ್ವಂತ ಕಾರು ಹಾಗೂ ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಇದರಿಂದಾಗಿ ಆಟೋ ಚಾಲಕರ ಆದಾಯವು ಮತ್ತಷ್ಟು ಕುಸಿದಿದೆ.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಕೈಕೊಟ್ಟ ಪ್ರೀತಿ, ಆಟೋ ಡ್ರೈವರ್‌ಗಳ ಮೇಲೆ ವಿಲಕ್ಷಣ ರೀತಿಯಲ್ಲಿ ಸೇಡು ತೀರಿಸಿಕೊಂಡ ಭಗ್ನ ಪ್ರೇಮಿ

ಮೊದಲೇ ಆದಾಯವಿಲ್ಲದೇ ಕಂಗೆಟ್ಟಿರುವ ಆಟೋ ಚಾಲಕರನ್ನೇ ಗುರಿಯಾಗಿಸಿಕೊಂಡು ಖದೀಮನೊಬ್ಬ ಅವರ ಸೆಲ್ ಫೋನ್ ಗಳನ್ನೇ ಕದ್ದಿದ್ದಾನೆ. ಒಟ್ಟು 70 ಆಟೋ ಡ್ರೈವರ್‌ಗಳ ಸ್ಮಾರ್ಟ್‌ಫೋನ್‌ಗಳನ್ನು ಕಳವು ಮಾಡಲಾಗಿದೆ. ಆಟೋ ಚಾಲಕರಿಂದ ಸೆಲ್ ಫೋನ್ ಗಳನ್ನು ಕದ್ದ ವ್ಯಕ್ತಿಯನ್ನು ಸುದೀರ್ಘ ಹುಡುಕಾಟದ ನಂತರ ಬಂಧಿಸಲಾಗಿದೆ.

ಕೈಕೊಟ್ಟ ಪ್ರೀತಿ, ಆಟೋ ಡ್ರೈವರ್‌ಗಳ ಮೇಲೆ ವಿಲಕ್ಷಣ ರೀತಿಯಲ್ಲಿ ಸೇಡು ತೀರಿಸಿಕೊಂಡ ಭಗ್ನ ಪ್ರೇಮಿ

36 ವರ್ಷದ ಭೂರಾಬಾಯಿ ಆರಿಫ್ ಶೇಖ್ ಅಲಿಯಾಸ್ ಆಸೀಫ್ ಬಂಧಿತ. ಆಟೋ ಡ್ರೈವರ್‌ಗಳನ್ನು ಮಾತ್ರ ಯಾವ ಕಾರಣಕ್ಕೆ ಗುರಿಯಾಗಿಸಿಕೊಂಡಿದ್ದ ಎಂಬ ವಿಲಕ್ಷಣ ಸಂಗತಿಯನ್ನು ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಕೈಕೊಟ್ಟ ಪ್ರೀತಿ, ಆಟೋ ಡ್ರೈವರ್‌ಗಳ ಮೇಲೆ ವಿಲಕ್ಷಣ ರೀತಿಯಲ್ಲಿ ಸೇಡು ತೀರಿಸಿಕೊಂಡ ಭಗ್ನ ಪ್ರೇಮಿ

ಗುಜರಾತ್‌ನ ಅಹಮದಾಬಾದ್‌ನಲ್ಲಿ ಪೊಲೀಸರು ಆಸೀಫ್ ನನ್ನು ಬಂಧಿಸಿದ್ದಾರೆ. ಮಹಾರಾಷ್ಟ್ರದ ಪುಣೆಯ ಕತ್ರಜ್-ಕೊಂಡ್ವಾ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಟೋಗಳನ್ನು ಗುರಿಯಾಗಿಸಿಕೊಂಡು ಆ ಆಟೋ ಚಾಲಕರಿಂದ ಸ್ಮಾರ್ಟ್ ಫೋನ್ ಗಳನ್ನು ಕದ್ದಿದ್ದಾನೆ. ಹಣಕಾಸಿನ ಬಿಕ್ಕಟ್ಟಿನ ಕಾರಣಕ್ಕೆ ಆತ ಸ್ಮಾರ್ಟ್ ಫೋನ್ ಗಳನ್ನು ಕದ್ದಿಲ್ಲ.

ಕೈಕೊಟ್ಟ ಪ್ರೀತಿ, ಆಟೋ ಡ್ರೈವರ್‌ಗಳ ಮೇಲೆ ವಿಲಕ್ಷಣ ರೀತಿಯಲ್ಲಿ ಸೇಡು ತೀರಿಸಿಕೊಂಡ ಭಗ್ನ ಪ್ರೇಮಿ

ಬದಲಿಗೆ ಆಟೋ ಡ್ರೈವರ್‌ಗಳ ಮೇಲೆ ಸೇಡು ತೀರಿಸಿಕೊಳ್ಳಲು ಸ್ಮಾರ್ಟ್‌ಫೋನ್‌ಗಳನ್ನು ಕದ್ದಿದ್ದಾನೆ. ಇದರ ಹಿಂದೆ ಒಂದು ಪ್ರೇಮಕಥೆ ಇದೆ. ಪೊಲೀಸರಿಂದ ಬಂಧನಕ್ಕೊಳಗಾಗಿರುವ ಆಸೀಫ್ ಹಿಂದೆ ಅಹಮದಾಬಾದ್‌ನಲ್ಲಿ ರೆಸ್ಟೋರೆಂಟ್ ನಡೆಸುತ್ತಿದ್ದ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಕೈಕೊಟ್ಟ ಪ್ರೀತಿ, ಆಟೋ ಡ್ರೈವರ್‌ಗಳ ಮೇಲೆ ವಿಲಕ್ಷಣ ರೀತಿಯಲ್ಲಿ ಸೇಡು ತೀರಿಸಿಕೊಂಡ ಭಗ್ನ ಪ್ರೇಮಿ

ಪ್ರೀತಿಯಲ್ಲಿ ಬಿದ್ದ ನಂತರ ತನ್ನ ಎಲ್ಲಾ ಹಣವನ್ನು ಕಳೆದುಕೊಂಡು ಈ ಸ್ಥಿತಿಗೆ ತಲುಪಿದ್ದಾನೆ. ಆಸೀಫ್ 27 ವರ್ಷದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಆಸೀಫ್ ಪೋಷಕರು ಈ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಕೈಕೊಟ್ಟ ಪ್ರೀತಿ, ಆಟೋ ಡ್ರೈವರ್‌ಗಳ ಮೇಲೆ ವಿಲಕ್ಷಣ ರೀತಿಯಲ್ಲಿ ಸೇಡು ತೀರಿಸಿಕೊಂಡ ಭಗ್ನ ಪ್ರೇಮಿ

ತಾನು ಪ್ರೀತಿಸಿದವಳನ್ನೇ ಮದುವೆಯಾಗಬೇಕೆಂದು ಆಸೀಫ್ ತೀರ್ಮಾನಿಸಿದ್ದ. ಈ ಕಾರಣಕ್ಕೆ 2019ರ ಜೂನ್ ತಿಂಗಳಿನಲ್ಲಿ ತನ್ನ ಬಳಿ ಇದ್ದ ಹಣವನ್ನೆಲ್ಲಾ ತೆಗೆದುಕೊಂಡು ತಾನು ಪ್ರೀತಿಸಿದವಳೊಂದಿಗೆ ಅಹಮದಾಬಾದ್‌ನಿಂದ ಪುಣೆಗೆ ಬಂದಿದ್ದಾನೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಕೈಕೊಟ್ಟ ಪ್ರೀತಿ, ಆಟೋ ಡ್ರೈವರ್‌ಗಳ ಮೇಲೆ ವಿಲಕ್ಷಣ ರೀತಿಯಲ್ಲಿ ಸೇಡು ತೀರಿಸಿಕೊಂಡ ಭಗ್ನ ಪ್ರೇಮಿ

ಆಕೆಯನ್ನು ಮದುವೆಯಾಗಿ ಹೊಸ ಜೀವನವನ್ನು ಆರಂಭಿಸುವುದು ಆತನ ಉದ್ದೇಶವಾಗಿತ್ತು. ಆದರೆ ಪುಣೆಗೆ ಆಗಮಿಸಿದ ಎರಡೇ ದಿನಗಳಲ್ಲಿ ಆಕೆ ಆಸೀಫ್ ಬಳಿ ಇದ್ದ ಹಣವನ್ನೆಲ್ಲಾ ತೆಗೆದುಕೊಂಡು ಪರಾರಿಯಾಗಿದ್ದಾಳೆ.

ಕೈಕೊಟ್ಟ ಪ್ರೀತಿ, ಆಟೋ ಡ್ರೈವರ್‌ಗಳ ಮೇಲೆ ವಿಲಕ್ಷಣ ರೀತಿಯಲ್ಲಿ ಸೇಡು ತೀರಿಸಿಕೊಂಡ ಭಗ್ನ ಪ್ರೇಮಿ

ಆತ ತನ್ನ ಪ್ರೇಯಸಿಯನ್ನು ಹುಡುಕಲು ಮುಂದಾದ. ಆದರೆ ಆಸೀಫ್ ನ ಹಣದೊಂದಿಗೆ ಪರಾರಿಯಾಗಿದ್ದ ಆಕೆ ಆಟೋ ಡ್ರೈವರ್‌ವೊಬ್ಬನನ್ನು ಮದುವೆಯಾಗಿದ್ದಳು. ವಿಷಯ ತಿಳಿದು ಆಸೀಫ್ ಹೃದಯ ಚೂರುಚೂರಾಗಿದೆ. ಪುಣೆಗೆ ಮರಳಿದ ಆಸೀಫ್ ತನ್ನ ದೂರದ ಸಂಬಂಧಿಯೊಬ್ಬರ ಬಳಿ ಕೆಲಸಕ್ಕೆ ಸೇರಿಕೊಂಡಿದ್ದಾನೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಕೈಕೊಟ್ಟ ಪ್ರೀತಿ, ಆಟೋ ಡ್ರೈವರ್‌ಗಳ ಮೇಲೆ ವಿಲಕ್ಷಣ ರೀತಿಯಲ್ಲಿ ಸೇಡು ತೀರಿಸಿಕೊಂಡ ಭಗ್ನ ಪ್ರೇಮಿ

ತಾನು ಪ್ರೀತಿಸಿದವಳು ಆಟೋ ಡ್ರೈವರ್‌ನೊಂದಿಗೆ ಓಡಿಹೋದ ವಿಷಯ ತಿಳಿದ ನಂತರ ಆಸೀಫ್ ಗೆ ಆಟೋ ಡ್ರೈವರ್‌ಗಳ ವಿರುದ್ಧ ದ್ವೇಷ ಭಾವನೆ ಬೆಳೆದಿದೆ. ಆಟೋ ಚಾಲಕರು ನೋವು ಅನುಭವಿಸುವುದನ್ನು ನೋಡಿ ತಾನು ಖುಷಿ ಪಡಬೇಕು ಎಂಬ ಭಾವನೆ ಆತನ ಮನದಲ್ಲಿ ಬೇರೂರಿದೆ.

ಕೈಕೊಟ್ಟ ಪ್ರೀತಿ, ಆಟೋ ಡ್ರೈವರ್‌ಗಳ ಮೇಲೆ ವಿಲಕ್ಷಣ ರೀತಿಯಲ್ಲಿ ಸೇಡು ತೀರಿಸಿಕೊಂಡ ಭಗ್ನ ಪ್ರೇಮಿ

ಈ ಕಾರಣಕ್ಕೆ ಆಸೀಫ್ ಕೇವಲ ಆಟೋ ಡ್ರೈವರ್‌ಗಳನ್ನು ಮಾತ್ರ ಟಾರ್ಗೆಟ್ ಮಾಡಿ ಅವರ ಸೆಲ್ ಫೋನ್ ಗಳನ್ನು ಕದ್ದಿದ್ದಾನೆ. ಕತ್ರಜ್-ಕೊಂಡ್ವಾ ಮಾರ್ಗದಲ್ಲಿ ಆಟೋದಲ್ಲಿ ಪ್ರಯಾಣಿಸುವಾಗ ಆಟೋ ಚಾಲಕರ ಗಮನವನ್ನು ಬೇರೆಡೆಗೆ ತಿರುಗಿಸಿ ಅವರ ಸೆಲ್ ಫೋನ್ ಗಳನ್ನು ಕದ್ದಿದ್ದಾನೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಕೈಕೊಟ್ಟ ಪ್ರೀತಿ, ಆಟೋ ಡ್ರೈವರ್‌ಗಳ ಮೇಲೆ ವಿಲಕ್ಷಣ ರೀತಿಯಲ್ಲಿ ಸೇಡು ತೀರಿಸಿಕೊಂಡ ಭಗ್ನ ಪ್ರೇಮಿ

ಇದರಲ್ಲಿಯೇ ಆತ ವಿಕೃತ ಆನಂದವನ್ನು ಅನುಭವಿಸಿದ್ದಾನೆ. ತನಗೆ ಮೋಸ ಮಾಡಿ ಓಡಿ ಹೋದ ಆತನ ಪ್ರೇಯಸಿಯ ಬಗ್ಗೆ ಅವನಿಗೆ ಯಾವುದೇ ಅಸಮಾಧಾನವಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ತನಿಖೆಯ ವೇಳೆ 70ಕ್ಕೂ ಹೆಚ್ಚು ಆಟೋ ಚಾಲಕರಿಂದ ಸೆಲ್ ಫೋನ್ ಕದ್ದಿದ್ದಾಗಿ ಆಸೀಫ್ ಒಪ್ಪಿಕೊಂಡಿದ್ದಾನೆ.

ಕೈಕೊಟ್ಟ ಪ್ರೀತಿ, ಆಟೋ ಡ್ರೈವರ್‌ಗಳ ಮೇಲೆ ವಿಲಕ್ಷಣ ರೀತಿಯಲ್ಲಿ ಸೇಡು ತೀರಿಸಿಕೊಂಡ ಭಗ್ನ ಪ್ರೇಮಿ

ಆಟೋ ಡ್ರೈವರ್‌ಗಳ ಸೆಲ್ ಫೋನ್ ಕಳುವಾಗುತ್ತಿದೆ ಎಂಬ ದೂರುಗಳು ನಿರಂತರವಾಗಿ ಬರುತ್ತಿದ್ದ ಹಿನ್ನೆಲೆಯಲ್ಲಿ ತನಿಖೆಯನ್ನು ಆರಂಭಿಸಿದ ಪೊಲೀಸರು ಆಸೀಫ್ ನನ್ನು ಬಂಧಿಸಿದ್ದಾರೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಕೈಕೊಟ್ಟ ಪ್ರೀತಿ, ಆಟೋ ಡ್ರೈವರ್‌ಗಳ ಮೇಲೆ ವಿಲಕ್ಷಣ ರೀತಿಯಲ್ಲಿ ಸೇಡು ತೀರಿಸಿಕೊಂಡ ಭಗ್ನ ಪ್ರೇಮಿ

ಆಸೀಫ್ ಆಟೋ ಏರಿದ ನಂತರ ತುರ್ತಾಗಿ ಕರೆ ಮಾಡಬೇಕು ಎಂದು ಆಟೋ ಚಾಲಕರಿಂದ ಸ್ಮಾರ್ಟ್ ಫೋನ್ ಗಳನ್ನು ಪಡೆದು ಅವರ ಗಮನವನ್ನು ಬೇರೆಡೆ ಸೆಳೆದು ಫೋನ್ ಗಳನ್ನು ಕಳುವು ಮಾಡುತ್ತಿದ್ದನು. ಆತನ ಶೈಲಿ, ಉಡುಗೆ, ಭಾಷೆ ನೋಡಿದ ನಂತರ ಆಟೋ ಚಾಲಕರಿಗೆ ಆತನ ಮೇಲೆ ಯಾವುದೇ ಅನುಮಾನ ಬರುತ್ತಿರಲಿಲ್ಲ.

ಕೈಕೊಟ್ಟ ಪ್ರೀತಿ, ಆಟೋ ಡ್ರೈವರ್‌ಗಳ ಮೇಲೆ ವಿಲಕ್ಷಣ ರೀತಿಯಲ್ಲಿ ಸೇಡು ತೀರಿಸಿಕೊಂಡ ಭಗ್ನ ಪ್ರೇಮಿ

ಆಸೀಫ್ ದುಬಾರಿ ಸ್ಮಾರ್ಟ್‌ಫೋನ್‌ಗಳನ್ನು ಹೊಂದಿರುವ ಚಾಲಕರನ್ನು ಮಾತ್ರ ಗುರಿಯಾಗಿಸಿಕೊಳ್ಳುತ್ತಿದ್ದ. ಗೆಳತಿ ಆಟೋ ಡ್ರೈವರ್‌ನೊಂದಿಗೆ ಓಡಿಹೋಗಿದ್ದರಿಂದ, ಆಟೋ ಡ್ರೈವರ್‌ಗಳನ್ನು ಮಾತ್ರ ಗುರಿಯಾಗಿಸಿಕೊಂಡು ಸ್ಮಾರ್ಟ್‌ಫೋನ್‌ಗಳನ್ನು ಕಳವು ಮಾಡಿದ ವಿಲಕ್ಷಣ ಘಟನೆಯ ಬಗ್ಗೆ ಮುಂಬೈ ಮಿರರ್ ವರದಿ ಮಾಡಿದೆ.

Most Read Articles

Kannada
English summary
Ahmedabad man steals smartphones from auto drivers to take revenge. Read in Kannada.
Story first published: Thursday, August 27, 2020, 12:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X