ಕೋವಿಡ್ 19 ರೋಗಿಗಳನ್ನು ಆಸ್ಪತ್ರೆಗೆ ಸೇರಿಸಲು ನೆರವಾಗಲಿದೆ ಈ ಏರ್ ಆಂಬ್ಯುಲೆನ್ಸ್
ಇತ್ತೀಚೆಗೆ ಕರ್ನಾಟಕದಲ್ಲಿ ಏರ್ ಆಂಬ್ಯುಲೆನ್ಸ್ ಸೇವೆಯನ್ನು ಆರಂಭಿಸಲಾಗಿದೆ. ಇದರಿಂದಾಗಿ ಕೋವಿಡ್ 19 ರೋಗಿಗಳನ್ನು ಶೀಘ್ರವಾಗಿ ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗಲಿದೆ. ಈ ಏರ್ ಆಂಬ್ಯುಲೆನ್ಸ್, ಲ್ಯಾಂಡ್ ಆಂಬ್ಯುಲೆನ್ಸ್ ಸೇವೆಯೊಂದಿಗೆ ಸಂಪರ್ಕ ಹೊಂದಿರಲಿದೆ.

ಈ ಸೇವೆಯು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ದೊರೆಯಲಿ ಎಂಬ ಉದ್ದೇಶವನ್ನು ಹೊಂದಲಾಗಿದೆ. ಈ ಸೇವೆ ಮೂಲಕ ದೂರದ ಪ್ರದೇಶಗಳನ್ನು ಸುಲಭವಾಗಿ ತಲುಪಬಹುದು. ಇಂಟರ್ ನ್ಯಾಷನಲ್ ಕ್ರಿಟಿಕಲ್ ಏರ್ ಟ್ರಾನ್ಸ್ಫರ್ ಟೀಂ ಹಾಗೂ ಏವಿಯೆಷನ್ ಟೆಕ್ನಾಲಜಿ ಕಂಪನಿಯಾದ ಕ್ಯಾತಿ ಜತೆಗೂಡಿ ಈ ಸೇವೆಯನ್ನು ಆರಂಭಿಸಿವೆ. ಈ ಎರಡು ಕಂಪನಿಗಳು ಒಟ್ಟಾಗಿ ಕರ್ನಾಟಕದಲ್ಲಿರುವ ದೂರದ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲಿವೆ.

ಈ ಏರ್ ಆಂಬ್ಯುಲೆನ್ಸ್ ಅನ್ನು ಬೆಂಗಳೂರಿನ ಹೆಚ್‌ಎಎಲ್ ವಿಮಾನ ನಿಲ್ದಾಣದಲ್ಲಿರಿಸಲಾಗುವುದು, ಈ ಹೆಲಿಕಾಪ್ಟರ್ ವೈದ್ಯಕೀಯ ಸೌಲಭ್ಯಗಳನ್ನು ಹತ್ತಿರದ ಪ್ರದೇಶಗಳಿಗೆ ಸಮಯಕ್ಕೆ ಸರಿಯಾಗಿ ತಲುಪಿಸಲು ಪ್ರಯತ್ನಿಸಲಿದೆ.
MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ನಗರದ ಟ್ರಾಫಿಕ್ ಪರಿಸ್ಥಿತಿಗೆ ಅನುಗುಣವಾಗಿ ಇದನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತಲುಪಿಸಲಾಗುವುದು. ಈ ಏರ್ ಆಂಬುಲೆನ್ಸ್‌ನಲ್ಲಿ ಅತ್ಯುತ್ತಮ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗಿದೆ.

ಈ ಸೌಲಭ್ಯಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸುವಾಗ ಬಳಸಬಹುದು ಎಂದು ಹೇಳಲಾಗಿದೆ. ಜರ್ಮನ್ ಐಸೊಲೇಷನ್ ಪಾಡ್ ಇದಕ್ಕೆ ಉದಾಹರಣೆಯಾಗಿದೆ. ಜರ್ಮನ್ ಐಸೊಲೇಷನ್ ಪಾಡ್ ಮೇಲೆ ರೋಗಿಯನ್ನು ಸುಲಭವಾಗಿ ಸಾಗಿಸಬಹುದು.
MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಈ ಪಾಡ್ ಅನ್ನು ಕೋವಿಡ್ 19 ಸೇರಿದಂತೆ ಸಾಂಕ್ರಾಮಿಕ ರೋಗ ಹೊಂದಿರುವ ರೋಗಿಗಳನ್ನು ಸಾಗಿಸಲು ಸಹ ಬಳಸಬಹುದು. ಈ ಪಾಡ್‌ನಲ್ಲಿ, ಸೋಂಕು ಪ್ರವೇಶಿಸದಂತೆ ತಡೆಯಲು ನೆಗೆಟಿವ್ ಪ್ರೆಷರ್ ಅನ್ನು ಬಳಸಲಾಗುತ್ತದೆ.

ಮಾಧ್ಯಮ ವರದಿಗಳ ಪ್ರಕಾರ, ಈ ಸೌಲಭ್ಯದ ವೆಚ್ಚ ಸುಮಾರು ರೂ.20 ಲಕ್ಷಗಳಾಗಿದೆ. ಕರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಈ ಸಮಯದಲ್ಲಿ ಈ ಸೇವೆಯನ್ನು ಆರಂಭಿಸಲಾಗಿದೆ. ಇದಕ್ಕಿಂತ ಒಳ್ಳೆಯ ಸಮಯ ಮತ್ತೊಂದಿಲ್ಲ.
MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಈ ಸೇವೆಯನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು, ಕೋವಿಡ್ 19 ಸಾಂಕ್ರಾಮಿಕದ ಈ ಸಮಯದಲ್ಲಿ ಈ ರೀತಿಯ ಆರೋಗ್ಯ ಸೌಲಭ್ಯವನ್ನು ಆರಂಭಿಸಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ ಎಂದು ಹೇಳಿದರು. ಐಸಿಎಟಿಟಿ ಏರ್ ಆಂಬ್ಯುಲೆನ್ಸ್ ಹಾಗೂ ಬೆಂಗಳೂರು ಮಿರರ್ ಇದರ ಚಿತ್ರಗಳನ್ನು ಪ್ರಕಟಿಸಿವೆ.

ಈ ಸೌಲಭ್ಯವನ್ನು ಆರಂಭಿಸಿರುವ ಕಂಪನಿಯು ಈ ವರ್ಷ 63 ಸ್ಥಳೀಯ, 10 ಅಂತರರಾಷ್ಟ್ರೀಯ ಹಾಗೂ ಏಳು ಅಂಗಾಂಗಗಳನ್ನು ಈ ಸೇವೆಯ ಮೂಲಕ ಸಾಗಿಸಲಾಗಿದೆ ಎಂದು ಹೇಳಿದೆ. ಇತ್ತೀಚೆಗಷ್ಟೇ ಈ ಕಂಪನಿಯು ಕೋವಿಡ್ 19 ರೋಗಿಯನ್ನು ಚೆನ್ನೈನಿಂದ ಕೋಲ್ಕತ್ತಾಗೆ ಸಾಗಿಸಿತ್ತು.
MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಕೋಲ್ಕತ್ತಾಗೆ ಸಾಗಿಸುವ ಸಮಯದಲ್ಲಿ ಐಸೋಲೇಷನ್ ಪಾಡ್‌ಗಳನ್ನು ಬಳಸಲಾಗಿತ್ತು. ಈ ಸಾಂಕ್ರಾಮಿಕ ಸಮಯದಲ್ಲಿ ಇದು ಬಹಳ ಮುಖ್ಯವಾದ ಸೌಲಭ್ಯವಾಗಿದೆ. ಈ ಏರ್ ಆಂಬುಲೆನ್ಸ್ ಮೂಲಕ ರೋಗಿಯನ್ನು ಚಿಕಿತ್ಸೆಗಾಗಿ ಅಗತ್ಯವಾದ ಸ್ಥಳಕ್ಕೆ ಸಾಧ್ಯವಾದಷ್ಟು ಬೇಗ ಕರೆದೊಯ್ಯಬಹುದು.


Click it and Unblock the Notifications