ಏರ್ ಇಂಡಿಯಾದಿಂದ ಸಿಬ್ಬಂದಿಗಳಿಗೆ ಕನಿಷ್ಠ ಆಭರಣ ಧರಿಸುವಂತೆ ನಿರ್ದೇಶನ
ನಷ್ಟದ ಸುಳಿಯಲ್ಲಿ ಸಿಲುಕಿದ್ದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಟಾಟಾ ಸಮೂಹ ಖರೀದಿ ಮಾಡಿ ತಿಂಗಳುಗಳು ಕಳೆದಿದೆ. 76 ವರ್ಷಗಳ ಬಳಿಕ ಏರ್ ಇಂಡಿಯಾ ಸಂಸ್ಥಾಪಕರ ಮಡಿಲು ಸೇರಿರುವುದು ವಿಶೇಷ. ತನ್ನ ತೆಕ್ಕೆಗೆ ಮರಳುತ್ತಿದ್ದಂತೆಯೇ, ಏರ್ ಇಂಡಿಯಾದ ಸೇವೆಗಳಲ್ಲಿ ಹಲವು ಬದಲಾವಣೆ ತರಲು ಟಾಟಾ ಮುಂದಾಗಿದೆ.

ಈ ಮೂಲಕ ಮತ್ತೆ ಕಳೆಗುಂದಿರುವ ಏರ್ ಇಂಡಿಯಾಗೆ ಹೊಸ ಸ್ಪರ್ಶ ನೀಡಲು ಮುಂದಾಗಿದೆ. ಈಗಾಗಲೇ ಹಲವು ಸೇವೆಗಳು ಆರಂಭವಾಗಿದ್ದು, ಸೇವೆಯ ಗುಣಮಟ್ಟ ಕಾಪಾಡಿಕೊಳ್ಳುವ ಬಗ್ಗೆ ಸಿಬ್ಬಂದಿಗಳಿಗೆ ಟಾಟಾ ಸಂದೇಶ ರವಾನೆ ಮಾಡಿದೆ. ಏರ್‌ಲೈನ್‌ನ ಸೇವೆಯ ಗುಣಮಟ್ಟ ಸುಧಾರಿಸಲು ಏರ್ ಇಂಡಿಯಾ ತನ್ನ ಸಿಬ್ಬಂದಿಗಳಿಗೆ ಹೊಸ ನಿಯಮಗಳನ್ನು ಪ್ರಕಟಿಸಿದೆ. ಪ್ರಯಾಣಿಕರ ಸೇವೆಯ ಬಗ್ಗೆ ಅತೀ ಹೆಚ್ಚು ಗಮನ ವಹಿಸಿರುವ ಏರ್ ಇಂಡಿಯಾ ತನ್ನ ಸಿಬ್ಬಂದಿಗಳಿಗಾಗಿ ಪ್ರಕಟಿಸಿರುವ ಹೊಸ ನಿಯಮಗಳ ಬಗ್ಗೆ ಮಾಹಿತಿ ಇಲ್ಲಿದೆ.

ಕಸ್ಟಮ್ಸ್ ಮತ್ತು ಭದ್ರತಾ ತಪಾಸಣೆ ವೇಳೆ ಸಮಯ ವ್ಯರ್ಥವಾಗುವುದನ್ನು ತಪ್ಪಿಸಲು ಕ್ಯಾಬಿನ್ ಸಿಬ್ಬಂದಿಗಳು ಕನಿಷ್ಟ ಆಭರಣಗಳನ್ನು ಧರಿಸುವುದರ ಮೇಲೆ ಹೆಚ್ಚಿನ ಗಮನ ಹರಿಸುವ ಮೂಲಕ ಏಕರೂಪದ ನಿಯಮಗಳಿಗೆ ಬದ್ಧವಾಗಿರಬೇಕು. ಕ್ಯಾಬಿನ್ ಸಿಬ್ಬಂದಿಗಳು ಡ್ಯೂಟಿ-ಫ್ರೀ ಅಂಗಡಿಗಳಿಗೆ ಭೇಟಿ ನೀಡುವಂತಿಲ್ಲ ಮತ್ತು ವಲಸೆ ಮತ್ತು ಭದ್ರತಾ ತಪಾಸಣೆಗಳನ್ನು ಪೂರ್ಣಗೊಳಿಸಿದ ನಂತರ ಬೋರ್ಡಿಂಗ್ ಗೇಟ್‌ಗೆ ಹೋಗುಭಾರದು.

ಇನ್ನು ಕ್ಯಾಬಿನ್ ಮೇಲ್ವಿಚಾರಕರು ಕ್ಯಾಬಿನ್‌ನಲ್ಲಿ ಎಲ್ಲಾ ಕ್ಯಾಬಿನ್ ಸಿಬ್ಬಂದಿಗಳು ಇರುವುದನ್ನು ಖಚಿತಪಡಿಸಿಕೊಳ್ಳಬೇಕು. ಸಿಬ್ಬಂದಿಗಳು ಯಾವುದೇ ರೀತಿಯ ಪಾನೀಯಗಳನ್ನು ಸೇವಿಸುವಂತಿಲ್ಲ, ಅತಿಥಿಗಳ ಬೋರ್ಡಿಂಗ್ ಸಮಯದಲ್ಲಿ ಆಹಾರ ಸೇವಿಸಬಾರದು ಮತ್ತು ಅತಿಥಿಗಳ ತ್ವರಿತ ಬೋರ್ಡಿಂಗ್, ಸೀಟಿಂಗ್ ನಲ್ಲಿ ಅವರಿಗೆ ಸಹಾಯ ಮಾಡಬೇಕು.

ಬಾಡಿ ಮಾಸ್ ಇಂಡೆಕ್ಸ್ ಮತ್ತು ವಿಮಾನ ಹಾರಾಟಕ್ಕೂ ಮುನ್ನ ಕ್ಯಾಬಿನ್ ಸಿಬ್ಬಂದಿಗೆ ಮಾಡುವ ತೂಕದ ತಪಾಸಣೆಗಳನ್ನು ಏರ್ ಇಂಡಿಯಾದ ಕ್ಯಾಬಿನ್ ಸಿಬ್ಬಂದಿ ಒಕ್ಕೂಟವು ವಿರೋಧಿಸಿದ ವಾರಗಳ ನಂತರ ಇದೀಗ ಏರ್ ಇಂಡಿಯಾ ಹೊಸದಾಗಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.

ಜನವರಿ 20 ರಂದು ನೀಡಿದ ಮಾರ್ಗಸೂಚಿಯಂತೆ ಪ್ರತಿ ಕ್ಯಾಬಿನ್ ಸಿಬ್ಬಂದಿ ಸದಸ್ಯರು ಈಗ ತ್ರೈಮಾಸಿಕ ಆಧಾರದ ಮೇಲೆ ಬಾಡಿ ಮಾಸ್ ಇಂಡೆಕ್ಸ್ ಮತ್ತು ತೂಕದ ತಪಾಸಣೆಗೆ ಒಳಪಡುತ್ತಾರೆ ಎಂದು ಏರ್ ಇಂಡಿಯಾ ಹೇಳಿಕೊಂಡಿದೆ.

ಇನ್ನು ಏಕರೂಪದ ಮಾನದಂಡಗಳು ಮತ್ತು ನಿಬಂಧನೆಗಳ ಪ್ರಕಾರ ಉತ್ತಮವಾಗಿ ಬಟ್ಟೆ ಧರಿಸಿರುವ ಮತ್ತು ಚೆನ್ನಾಗಿ ಮೇಕಪ್ ಮಾಡಿ ಅಂದವಾಗಿರುವ ಕ್ಯಾಬಿನ್ ಸಿಬ್ಬಂದಿಗಳು, ವೃತ್ತಿಪರ ಸೇವೆಯನ್ನು ಪ್ರಸ್ತುತಪಡಿಸುತ್ತಾರೆ ಎಂದು ಏರ್‌ಇಂಡಿಯಾ ತನ್ನ ಸುತ್ತೋಲೆಯಲ್ಲಿ ಹೇಳಿದೆ.

ಟಾಟಾ ಸಮೂಹ ಮುಂಬೈ- ದೆಹಲಿ, ಮುಂಬೈ - ದೆಹಲಿ, ಮುಂಬೈ- ಬೆಂಗಳೂರು, ಮುಂಬೈ - ಲಂಡನ್, ಮುಂಬೈ - ನ್ಯೂಯಾರ್ಕ್, ಮುಂಬೈ - ಅಬುಧಾಬಿ ನಡುವೆ ಕಾರ್ಯನಿರ್ವಹಿಸುವ ವಿಮಾನಗಳಲ್ಲಿ ಊಟದ ವ್ಯವಸ್ಥೆಯನ್ನು ಸುಧಾರಣೆ ಮಾಡಲು ನಿರ್ಧರಿಸಲಾಗಿದೆ. ಇನ್ನು ಟಾಟಾ ವಿಮಾನ ಕ್ಯಾಟೆರಿಂಗ್ ಸೇವೆ ನೀಡುವ ತಾಜ್‌ಸಾಟ್ಸ್‌ನ ನಿರ್ದೇಶನದನ್ವಯ ಈ ಬದಲಾವಣೆ ತರಲಾಗಿದೆ.

ವಿಮಾನ ಪ್ರಯಾಣಿಕರಿಗೆ ಗುಣಮಟ್ಟದ ಊಟ ಹಾಗೂ ಸೇವೆ ಒದಗಿಸಲು ಟಾಟಾ ಸಮೂಜ ಭೋಜನಕ್ಕಾಗಿಯೇ ಮಾರ್ಗಸೂಚಿಯನ್ನು ರಚಿಸಲಾಗಿದೆ. ಪ್ರತೀಯೊಂದು ಊಟದ ವೇಳೆ ನಿರ್ದೇಶಿಸಲಾದ ಮಾರ್ಗಸೂಚಿಯನ್ವಯವೇ ಗ್ರಾಹಕರಿಗೆ ನೀಡಬೇಕು ಎಂದು ಸಿಬ್ಬಂದಿಗಳಿಗೆ ಸೂಚಿಲಾಗಿದೆ. ಬ್ಯುಸಿನೆಸ್ ಕ್ಲಾಸ್ ಹಾಗೂ ಎಕಾನಮಿ ಕ್ಲಾಸ್‌ಗೆ ಪ್ರತ್ಯೇಕ ಮಾರ್ಗಸೂಚಿಗಳನ್ನು ತಯಾರಿಸಲಾಗಿದೆ.

ವಿಮಾನದಲ್ಲಿ ಬ್ಯುಸಿನೆಸ್, ಫಸ್ಟ್ ಕ್ಲಾಸ್ ಹಾಗೂ ಎಕಾನಮಿ ಕ್ಲಾಸ್ ಪ್ರಯಾಣಿಕರಿಗೆ ದಿನ ಪತ್ರಿಕೆ ಹಾಗೂ ನಿಯಾತಕಾಲಿಕೆ ಒದಗಿಸಬೇಕು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ಅಲ್ಲದೇ ಬ್ಯುಸಿನೆಸ್ ಹಾಗೂ ಫಸ್ಟ್ ಕ್ಲಾಸ್ ಪ್ರಯಾಣಿಕರಿಗೆ ತಪ್ಪದೇ ಬ್ಲಾಕೆಂಟ್ ಹಾಗೂ ತಲೆದಿಂಬು ನೀಡುವುದು ಹಾಗೂ ಎಕಾನಮಿ ಕ್ಲಾಸ್ ಪ್ರಯಾಣಿಕರು ಬಯಸಿದರೆ ನೀಡಲು ಪ್ರತೀ ವಿಮಾನದಲ್ಲೂ 50 ಬ್ಲಾಕೆಂಟ್ ಹಾಗೂ ತಲೆದಿಂಬುಗಳನ್ನು ಹೆಚ್ಚುವರಿಯಾಗಿ ಇಟ್ಟುಕೊಳ್ಳಲು ಸೂಚಿಸಿದೆ,

ಪ್ರಯಾಣಿಕರ ಸೇವೆಯ ಬಗ್ಗೆ ಅತೀ ಹೆಚ್ಚು ಗಮನ ವಹಿಸಿರುವ ಟಾಟಾ ಪ್ರತೀ ಪ್ರಯಾಣಿಕರನ್ನೂ ಅತಿಥಿಯಂತೆ ಸ್ವಾಗತಿಸಿ ಎಂದು ತನ್ನ ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ. ಪ್ರತಿಯೊಬ್ಬ ಪ್ರಯಾಣಿಕರ ಸುರಕ್ಷತೆ ಹಾಗೂ ಅವರಿಗೆ ನೀಡುವ ಸೇವೆಯ ಗುಣಮಟ್ಟದ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ಉಲ್ಲೇಖೆಸಿದೆ. ಸಮಯ ಪಾಲನೆಗೆ ಹೆಚ್ಚಿನ ಒತ್ತು ನೀಡಿರುವ ಟಾಟಾ ಸಮೂಹ, ಪ್ರತೀ ವಿಮಾನ ಕಾರ್ಯಾಚರಣೆ ಸಮಯಕ್ಕೆ ಸರಿಯಾಗಿ ಆಗುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದೆ. ಜತೆಗೆ ಹೊರಡುವುದಕ್ಕಿಂತ 10 ನಿಮಿಷ ಮುಂಚೆ ವಿಮಾನದ ಬಾಗಿಲುಗಳನ್ನು ಮುಚ್ಚಬೇಕು ಎಂದು ನಿರ್ದೇಶಿಸಿದೆ.

ಸುಮಾರು ಏಳು ದಶಕಗಳ ನಂತರ ಏರ್ ಇಂಡಿಯಾ ನಿಯಂತ್ರಣ ಕಳೆದುಕೊಂಡಿದ್ದ ಟಾಟಾ ಕಂಪನಿ, ಕಳೆದ ತಿಂಗಳಷ್ಟೇ ಅದರ ಮರಳಿ ಅದನ್ನು ತೆಕ್ಕೆಗೆ ತೆಗೆದುಕೊಂಡು ತಮ್ಮ ಪ್ರಯಾಣಿಕೆರಿಗೆ ಅತ್ಯುತ್ತಮ ಸೇವೆ ನೀಡಲು ಪ್ರಯತ್ನಿಸುತ್ತಿದೆ, ನಷ್ಟದಲ್ಲಿದ್ದ ಏರ್ ಇಂಡಿಯಾ ಮುಂದಿನ ದಿನಗಳಲ್ಲಿ ಉತ್ತಮ ಲಾಭಗಳಿಸುವ ಸಂಸ್ಥೆಯಾಗಿ ಬದಲಾಗಬಹುದು ಎಂದು ನಿರೀಕ್ಷಿಸುತ್ತೇವೆ.
Image Courtesy: Air India


Click it and Unblock the Notifications