ವಂದೇ ಭಾರತ್ ಮಿಷನ್‌ಗಾಗಿ ಬುಕ್ಕಿಂಗ್ ಆರಂಭಿಸಿದ ಏರ್ ಇಂಡಿಯಾ
ಹೊರದೇಶಗಳಲ್ಲಿ ಸಿಕ್ಕಿಬಿದ್ದಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ಏರ್ ಇಂಡಿಯಾ ಬುಕ್ಕಿಂಗ್‌ಗಳನ್ನು ಆರಂಭಿಸಿದೆ. ಲಂಡನ್, ಅಮೆರಿಕಾ ಹಾಗೂ ಯುಎಇ ಸೇರಿದಂತೆ ಹಲವು ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ವಿಶೇಷ ವಿಮಾನಯಾನ ವ್ಯವಸ್ಥೆ ಮಾಡಲಾಗುವುದೆಂದು ಏರ್ ಇಂಡಿಯಾ ಗುರುವಾರ ಪ್ರಕಟಿಸಿದೆ.

ಏರ್ ಇಂಡಿಯಾ ವಂದೇ ಭಾರತ್ ಮಿಷನ್ ಅಡಿಯಲ್ಲಿ ಮೇ 8ರಿಂದ ಮೇ 14ರವರೆಗೆ 64 ವಿಮಾನಗಳ ಹಾರಾಟ ನಡೆಸಲಿದೆ. ಕೇಂದ್ರ ಗೃಹ ಇಲಾಖೆಯು ಹೊರಡಿಸಿರುವ ಮಾರ್ಗಸೂಚಿಗಳನ್ನು ಏರ್ ಇಂಡಿಯಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಪ್ರಯಾಣಿಕರು ಅರ್ಹತೆ ಹೊಂದಿದ್ದರೆ ಮಾತ್ರ ವಿಮಾನದ ಟಿಕೆಟ್ ಕಾಯ್ದಿರಿಸಬಹುದು. ಅರ್ಹತೆ ಹೊಂದದ ಪ್ರಯಾಣಿಕರು ಟಿಕೆಟ್ ಬುಕ್ಕಿಂಗ್ ಮಾಡಲು ಸಾಧ್ಯವಿಲ್ಲ. ಇದಕ್ಕೆ ಏರ್ ಇಂಡಿಯಾ ಜವಾಬ್ದಾರನಾಗಿರುವುದಿಲ್ಲ ಎಂದು ಹೇಳಿದೆ.

ತಮ್ಮ ತಮ್ಮ ದೇಶಗಳಿಗೆ ಹೋಗ ಬಯಸುವ ಭಾರತೀಯರು ಹಾಗೂ ಬೇರೆ ದೇಶದ ಪ್ರಜೆಗಳು ಟಿಕೆಟ್ ಕಾಯ್ದಿರಿಸಬಹುದೆಂದು ಏರ್ ಇಂಡಿಯಾ ಹೇಳಿದೆ. ಗ್ರೀನ್ ಕಾರ್ಡ್ ಅಥವಾ ಒಐಸಿ ಕಾರ್ಡ್ ಹೊಂದಿ ವಿದೇಶದಲ್ಲಿ ಸಿಲುಕಿರುವ ನಾಗರಿಕರು ಬುಕ್ಕಿಂಗ್ ಮಾಡಬಹುದು.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಆರೋಗ್ಯವನ್ನು ಪರಿಶೀಲಿಸಲಾಗುವುದೆಂದು ಸಹ ಹೇಳಲಾಗಿದೆ. ವಿಮಾನ ನಿಲ್ದಾಣದಲ್ಲಿ ಥರ್ಮಲ್ ಸ್ಕ್ಯಾನಿಂಗ್ ಕಡ್ಡಾಯವಾಗಿರಲಿದೆ. ಇದರ ನಂತರ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತದೆ.

ಭಾರತಕ್ಕೆ ಮರಳ ಬಯಸುವವರು ಸಂಪೂರ್ಣ ಪ್ರಯಾಣ ವೆಚ್ಚ, 14 ದಿನಗಳ ಆಸ್ಪತ್ರೆ ವೆಚ್ಚ ಅಥವಾ ಇನ್ನ್ಯಾವುದೇ ಕ್ಯಾರೆಂಟೈನ್ ಸೌಲಭ್ಯಗಳ ಹಣವನ್ನು ಪಾವತಿಸಬೇಕಾಗುತ್ತದೆ. ವಂದೇ ಭಾರತ್ ಮಿಷನ್ ಅಡಿಯಲ್ಲಿ ಭಾರತೀಯರನ್ನು ಏರ್ ಇಂಡಿಯಾ ವಿಮಾನಗಳ ಜೊತೆಗೆ ನೌಕಾ ಯುದ್ಧನೌಕೆಗಳ ಮೂಲಕವೂ ಸಹ ಭಾರತಕ್ಕೆ ಕರೆ ತರಲಾಗುವುದು.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕೊಲ್ಲಿ ರಾಷ್ಟ್ರಗಳಲ್ಲದೆ ಅಮೆರಿಕಾ, ಇಂಗ್ಲೆಂಡ್, ಬಾಂಗ್ಲಾದೇಶ, ಮಲೇಷ್ಯಾ, ಸಿಂಗಾಪುರ್ ಹಾಗೂ ಫಿಲಿಪೈನ್ಸ್ ದೇಶಗಳಲ್ಲಿರುವ ಭಾರತೀಯರನ್ನು ಸಹ ಕರೆತರಲಾಗುವುದು. ಈ ಮೊದಲು ಭಾರತವು ವಿವಿಧ ದೇಶಗಳಲ್ಲಿದ್ದ ತನ್ನ ನಾಗರಿಕರನ್ನು ಕರೆತರಲು 30 ಕಾರ್ಯಾಚರಣೆಗಳನ್ನು ನಡೆಸಿತ್ತು. ಈ ಎಲ್ಲಾ ಕಾರ್ಯಾಚರಣೆಗಳನ್ನು ಯುದ್ಧ ಅಥವಾ ನೈಸರ್ಗಿಕ ವಿಪತ್ತುಗಳಿಂದ ಪಾರು ಮಾಡಲು ನಡೆಸಲಾಗಿತ್ತು.

ಈ 64 ವಿಮಾನಗಳಲ್ಲಿ 10 ವಿಮಾನಗಳು ಯುಎಇಯಿಂದ, ಎರಡು ವಿಮಾನಗಳು ಕತಾರ್‌ನಿಂದ, ಸೌದಿ ಅರೇಬಿಯಾದಿಂದ ಐದು, ಇಂಗ್ಲೆಂಡ್‌ನಿಂದ ಏಳು, ಸಿಂಗಾಪುರದಿಂದ ಐದು, ಅಮೆರಿಕಾದಿಂದ ಏಳು, ಫಿಲಿಪೈನ್ಸ್‌ನಿಂದ ಏಳು, ಬಾಂಗ್ಲಾದೇಶದಿಂದ ಏಳು, ಬಹ್ರೇನ್‌ನಿಂದ ಎರಡು, ಮಲೇಷ್ಯಾದಿಂದ ಏಳು, ಕುವೈತ್‌ನಿಂದ ಐದು ವಿಮಾನ ಹಾಗೂ ಒಮಾನ್‌ನಿಂದ ಎರಡು ವಿಮಾನಗಳು ಬರಲಿವೆ.


Click it and Unblock the Notifications