ಆಕಾಶದಲ್ಲೂ ಮೋದಿ ಸೇಫ್; 'ಏರ್ ಇಂಡಿಯಾ ಒನ್' ಸರ್ಪಗಾವಲು

By Nagaraja

'ಏರ್ ಇಂಡಿಯಾ ಒನ್' ( AI-1 ಅಥವಾ AIC001) ಆಕಾಶ ಮಾರ್ಗದಲ್ಲಿ ಭಾರತ ಪ್ರಧಾನ ಮಂತ್ರಿ ಮತ್ತು ರಾಷ್ಟ್ರಪತಿ ಸಂಚರಿಸುವಾಗ ಗರಿಷ್ಠ ಭದ್ರತೆಯನ್ನು ಒದಗಿಸುವ ವಿಮಾನವಾಗಿದೆ. ಏರ್ ಇಂಡಿಯಾ ಭಾರತದ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾಗಿದೆ. ಭಾರತೀಯ ವಾಯು ಸೇನೆಯು ಗಣ್ಯ ವ್ಯಕ್ತಿಗಳ ವಿಮಾನಯಾನಗಳ ಕಾರ್ಯಾಚರಣೆಯನ್ನು ಮಾಡುತ್ತಿದೆ.

Also Read: ಸ್ಕಾರ್ಪಿಯೊಗೆ ಕೈಕೊಟ್ಟ ಮೋದಿ; ಬಿಎಂಡಬ್ಲ್ಯು ಅಧಿಕೃತ ವಾಹನ

ನವದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಭಾರತೀಯ ವಾಯುಸೇನೆಯ 'ಏರ್ ಹೆಡ್ ಕ್ವಾರ್ಟರ್ಸ್ ಕಮ್ಯುನಿಕೇಶನ್ ಸ್ಕ್ವಾಡ್ರನ್' ತಳಹದಿಯಲ್ಲಿ ಈ ಎಲ್ಲ ವಿಮಾನಗಳನ್ನು ನಿಯಂತ್ರಿಸಲಾಗುತ್ತಿದೆ.

ಆಕಾಶದಲ್ಲೂ ಮೋದಿ ಸೇಫ್; 'ಏರ್ ಇಂಡಿಯಾ ಒನ್' ಸರ್ಪಗಾವಲು

ಅಂತರಾಷ್ಟ್ರೀಯ ರಾಷ್ಟ್ರಗಳ ಭೇಟಿಗಾಗಿ ಏರ್ ಇಂಡಿಯಾ ಸ್ವಾಮ್ಯದ ಬೋಯಿಂಗ್ 747-400 ವಿಮಾನಗಳ ಹೊರತಾಗಿ ಭಾರತೀಯ ವಾಯುಸೇನೆಯು ಪ್ರಸ್ತು 14 ಸೀಟುಗಳ ಎಬ್ರೇಸರ್ 135, 20 ಸೀಟುಗಳ ಎಬ್ರೇಸರ್ 145 ಮತ್ತು ಮೂರು ಕಸ್ಟಮೈಸ್ಡ್ 46 ಸೀಟುಗಳ ಬೋಯಿಂಗ್ ಬ್ಯುಸಿನೆಸ್ ಜೆಟ್ (ಬಿಬಿಜೆ) ಗಳನ್ನು ವಿಐಪಿಗಳ ಆಕಾಶ ಮಾರ್ಗದ ಪಯಣಕ್ಕಾಗಿ ಬಳಕೆ ಮಾಡಲಾಗುತ್ತದೆ.

ಆಕಾಶದಲ್ಲೂ ಮೋದಿ ಸೇಫ್; 'ಏರ್ ಇಂಡಿಯಾ ಒನ್' ಸರ್ಪಗಾವಲು

ಇವುಗಳ ಪೈಕಿ ಭಾರತ ಪ್ರಧಾನ ಮಂತ್ರಿ, ರಾಷ್ಟ್ರಪತಿ, ಉಪರಾಷ್ಟ್ರಪತಿಗಳ ವಿದೇಶ ಭೇಟಿಗಾಗಿ ಬೋಯಿಂಗ್ 747 ವಿಮಾನಗಳನ್ನು ಬಳಕೆ ಮಾಡಲಾಗುತ್ತದೆ.

ಆಕಾಶದಲ್ಲೂ ಮೋದಿ ಸೇಫ್; 'ಏರ್ ಇಂಡಿಯಾ ಒನ್' ಸರ್ಪಗಾವಲು

ಉಗ್ರರ ದಾಳಿ ಭೀತಿ ಇರುವುದರಿಂದಲೇ ಗರಿಷ್ಠ ಭದ್ರತೆಯನ್ನು ಈ ಎಲ್ಲ ವಿಮಾನಗಳಲ್ಲಿ ನೀಡಲಾಗಿದೆ. ಇವುಗಳಲ್ಲಿ ಮಿಸೈಲ್ ದಾರಿ ತಪ್ಪಿಸುವ ವ್ಯವಸ್ಥೆ ಮತ್ತು ಜಿಪಿಎಸ್ ಒಳಗೊಂಡಿರುವ ಆಧುನಿಕ ವಿಮಾನ ನಿರ್ವಹಣಾ ವ್ಯವಸ್ಥೆಯೂ ಇರುತ್ತದೆ.

ಆಕಾಶದಲ್ಲೂ ಮೋದಿ ಸೇಫ್; 'ಏರ್ ಇಂಡಿಯಾ ಒನ್' ಸರ್ಪಗಾವಲು

ವಿಭಾಗ II ಇನ್ಸ್ಟ್ರುಮೆಂಟ್ ಲ್ಯಾಂಡಿಂಗ್ ವ್ಯವಸ್ಥೆಯನ್ನು ಹೊಂದಿರುವ ಈ ಎಲ್ಲ ವಿಮಾನಗಳ ವೆಚ್ಚ ತಲಾ 140 ಕೋಟಿ ರುಪಾಯಿಗಳಾಗಿದೆ.

ಆಕಾಶದಲ್ಲೂ ಮೋದಿ ಸೇಫ್; 'ಏರ್ ಇಂಡಿಯಾ ಒನ್' ಸರ್ಪಗಾವಲು

ಈ ಪೈಕಿ ರಾಜದೂತ್, ರಾಜ್ ಹ್ಯಾನ್ಸ್ ಮತ್ತು ರಾಜ್ ಕಮಾಲ್ ಗಳೆಂಬ ಮೂರು ಬೋಯಿಂಗ್ ಬ್ಯುಸಿನೆಸ್ ಜೆಟ್ ವಿಮಾನಗಳು ತಲಾ 934 ಕೋಟಿಗಳಷ್ಟು ದುಬಾರಿಯೆನಿಸುತ್ತದೆ. ಇವುಗಳಲ್ಲಿ 734 ಕೋಟಿ ರುಪಾಯಿ ವಿಮಾನ ವೆಚ್ಚವಾದರೆ ಸ್ವಯಂ ರಕ್ಷಣಾ ವ್ಯವಸ್ಥೆಗಾಗಿ 200 ಕೋಟಿ ವ್ಯಯ ಮಾಡಲಾಗಿದೆ.

ಆಕಾಶದಲ್ಲೂ ಮೋದಿ ಸೇಫ್; 'ಏರ್ ಇಂಡಿಯಾ ಒನ್' ಸರ್ಪಗಾವಲು

ಸ್ವಯಂ ರಕ್ಷಣಾ ವ್ಯವಸ್ಥೆಯು ( Self-protection suites) ರಾಡಾರ್ ವಾರ್ನಿಂಗ್ ರಿಸೀವರ್ ಹೊಂದಿರಲಿದ್ದು, ಉನ್ನತ ಮಟ್ಟದ ಕಠಿಣ ತರಬೇತಿ ಪಡೆದ ಕಮಾಂಡೊಗಳು ಪ್ರಧಾನಿ ಮತ್ತು ರಾಷ್ಟ್ರಪತಿಗಳಿಗೆ ಭದ್ರತೆ ಒದಗಿಸಲಿದ್ದಾರೆ.

ಆಕಾಶದಲ್ಲೂ ಮೋದಿ ಸೇಫ್; 'ಏರ್ ಇಂಡಿಯಾ ಒನ್' ಸರ್ಪಗಾವಲು

ಕ್ಷಿಪಣಿ ದಾಳಿ ಎಚ್ಚರಿಕೆ ಮತ್ತು ಪ್ರತಿ ದಾಳಿ ವ್ಯವಸ್ಥೆಯನ್ನು ಇದೂ ಪಡೆದಿದೆ. ಅಲ್ಲದೆ ರಾಡಾರ್ ಗಳನ್ನು ನಿಷ್ಕ್ರಿಯಗೊಳಿಸಲು ಅಥವಾ ಧ್ವಂಸ ಮಾಡಲು ಹಲವು ಅತ್ಯಾಧುನಿಕ ಉಪಕರಣಗಳು ಇರಲಿದೆ. ಭದ್ರತಾ ಕಾರಣಗಳಿಂದಾಗಿ ಸುರಕ್ಷಾ ಉಪಕರಣಗಳನ್ನು ಗೌಪ್ಯವಾಗಿಡಲಾಗಿದೆ.

ಆಕಾಶದಲ್ಲೂ ಮೋದಿ ಸೇಫ್; 'ಏರ್ ಇಂಡಿಯಾ ಒನ್' ಸರ್ಪಗಾವಲು

ರಕ್ಷಣಾ ದೃಷ್ಟಿಕೋನದಿಂದಾಗಿ ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಯರನ್ನು ಅನುಕ್ರಮವಾಗಿ ವಿಐಪಿ1, ವಿಐಪಿ2 ಮತ್ತು ವಿಐಪಿ3 ಗಳೆಂದು ಗುರುತಿಸಲಾಗಿದೆ. ಇವರಿಗೆ ಪ್ರತ್ಯೇಕ ಕಚೇರಿ ಮತ್ತು ಬೆಡ್ ರೂಂಗಳನ್ನು ಒದಗಿಸಲಾಗಿದೆ.

ಆಕಾಶದಲ್ಲೂ ಮೋದಿ ಸೇಫ್; 'ಏರ್ ಇಂಡಿಯಾ ಒನ್' ಸರ್ಪಗಾವಲು

ಏರ್ ಇಂಡಿಯಾ ಒನ್ ನಲ್ಲಿರುವ ಎಲ್ಲ ಭದ್ರತಾ ಸಿಬ್ಬಂದಿಗಳು ವಿಶಿಷ್ಟ ಕೋಡ್ ಹೊಂದಿರುವ ಬಣ್ಣದ ಗುರುತು ಕಾರ್ಡ್ ಧರಿಸಬೇಕಾಗಿರುವುದು ಅತ್ಯಗತ್ಯವಾಗಿದೆ. ಜಂಟಿ ಕಾರ್ಯದರ್ಶಿ ಮಟ್ಟ ಮತ್ತು ಮೇಲ್ಪಟ್ಟ ದರ್ಜೆಯ ಅಧಿಕೃತ ಪ್ರತಿನಿಧಿಗಳ ತಂಡದ ಸದಸ್ಯರು ನೇರಳೆ ಬಣ್ಣದ ಟ್ಯಾಗ್ ನಿಂದ ಗುರುತಿಸಿಕೊಳ್ಳಲಿದ್ದಾರೆ.

ಆಕಾಶದಲ್ಲೂ ಮೋದಿ ಸೇಫ್; 'ಏರ್ ಇಂಡಿಯಾ ಒನ್' ಸರ್ಪಗಾವಲು

ಪ್ರಸ್ತುತ ಬೋಯಿಂಗ್ 747 ಬದಲಿಯಾಗಿ ಏರ್ ಇಂಡಿಯಾದಿಂದ ಎರಡು ಬೋಯಿಂಗ್ 777-330ಇಆರ್ ಖರೀದಿಸಲು ರಕ್ಷಣಾ ಸಚಿವಾಲಯ ಆದೇಶಿಸಿದೆ. ಇದನ್ನು ಯಾವುದೇ ಕಾರಣಕ್ಕೂ ವಾಣಿಜ್ಯ ಬಳಕೆಗಾಗಿ ಬಳಕೆ ಮಾಡಲಾಗುವುದಿಲ್ಲ. ಅತಿ ವಿಶಿಷ್ಟ ಗಣ್ಯ ವ್ಯಕ್ತಿಗಳಿಗೆ ಇದು ಮೀಸಲಾಗಿರಲಿದೆ.

ಆಕಾಶದಲ್ಲೂ ಮೋದಿ ಸೇಫ್; 'ಏರ್ ಇಂಡಿಯಾ ಒನ್' ಸರ್ಪಗಾವಲು

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಬಳಿಕ ಅತಿ ಹೆಚ್ಚು ಅಪಾಯ ಆಹ್ವಾನಿತ ಭಾರತ ಪ್ರಧಾನಿ ಎನಿಸಿಕೊಂಡಿರುವ ನರೇಂದ್ರ ಮೋದಿ ಅವರನ್ನು ವಿಶೇಷ ರಕ್ಷಣಾ ತಂಡದ (Special Protection Group) ಹೈ ಸೆಕ್ಯೂರಿಟಿ ವಲಯ ಆವರಿಸಿಕೊಂಡಿದೆ.

ಆಕಾಶದಲ್ಲೂ ಮೋದಿ ಸೇಫ್; 'ಏರ್ ಇಂಡಿಯಾ ಒನ್' ಸರ್ಪಗಾವಲು

ಅಮೆರಿಕ ಅಧ್ಯಕ್ಷೀಯ ವಿಮಾನಕ್ಕೆ(ಏರ್ ಫೋರ್ಸ್ ಒನ್) ಸಮಾನವಾಗಿ ಅತಿ ವಿಶಿಷ್ಟ ದೇಸಿ ಏರ್ ಫೋರ್ಸ್ ಒನ್ ಎಂದು ಗುರುತಿಸಿಕೊಳ್ಳಲಿದೆ. ಇದು ಪ್ರಧಾನಿ ಅವರ ಆಕಾಶದಲ್ಲಿ ತಿರುಗಾಡುವ ಕಚೇರಿಯಾಗಿರಲಿದ್ದು, ಸ್ಯಾಟಲೈಟ್ ಫೋನ್, ಫಾಕ್ಸ್, ಇಂಟರ್ ನೆಟ್ ಸೇವೆಗಳು ಲಭ್ಯವಾಗಲಿದೆ.

ಆಕಾಶದಲ್ಲೂ ಮೋದಿ ಸೇಫ್; 'ಏರ್ ಇಂಡಿಯಾ ಒನ್' ಸರ್ಪಗಾವಲು

ರಾಡಾರ್ ವಾರ್ನಿಂಗ್ ರಿಸೀವರ್, ಸೌಂಡ್ ಅಲರ್ಟ್, ಹೀಟ್ ಸೀಕಿಂಗ್ ಮಿಸೈಲ್, ಮಿಸೈಲ್ ದಾಳಿ ಎಚ್ಚರಿಕೆ, ಡೈರೆಕ್ಷನಲ್ ಎಲೆಕ್ಟ್ರಾನಿಕ್ ಕೌಂಟರ್ ಮೆಶರ್, ಅತ್ಯಾಧುನಿಕ ನೇವಿಗೇಷನ್ ಸಹಾಯ, ಸ್ಯಾಟಲೈಟ್ ಸಂಪರ್ಕದ ಜೊತೆಗೆ ಶತ್ರುವಿನ ರಾಡಾರ್ ಗಳನ್ನು ನಿಷ್ಕ್ರಿಯಗೊಳಿಸುವ ಸಾಮರ್ಥ್ಯ ಹೊಂದಿರುತ್ತದೆ.

ಆಕಾಶದಲ್ಲೂ ಮೋದಿ ಸೇಫ್; 'ಏರ್ ಇಂಡಿಯಾ ಒನ್' ಸರ್ಪಗಾವಲು

ಮೋದಿ ಬಿಎಂಡಬ್ಲ್ಯು vs ಒಬಾಮಾ ಬೀಸ್ಟ್; ಫುಲ್ ಬಾಡಿ ಸ್ಕ್ಯಾನಿಂಗ್

ಆಕಾಶದಲ್ಲೂ ಮೋದಿ ಸೇಫ್; 'ಏರ್ ಇಂಡಿಯಾ ಒನ್' ಸರ್ಪಗಾವಲು

ಐಎನ್‌ಎಸ್ ವಿಕ್ರಮಾದಿತ್ಯ ದೇಶಕ್ಕೆ ಅರ್ಪಿಸಿದ ಮೋದಿ

More from DriveSpark

Article Published On: Friday, May 6, 2016, 11:00 [IST]
English summary
'Air India One' The Official Aircraft of Prime Minister of India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+