ಜಗತ್ತಿನ ಅತಿದೊಡ್ಡ ಪ್ರಯಾಣಿಕ ವಿಮಾನ - ಏರ್‌ಬಸ್ ಎ380
ಹತ್ತು ದಿನಗಳೇ ಕಳೆದರೂ ಮಲೇಷ್ಯಾದಿಂದ ಬೀಜಿಂಗ್‌ನತ್ತ ಪಯಣ ಆರಂಭಿಸಿದ್ದ ವಿಮಾನ ಇನ್ನೂ ಪತ್ತೆಯಾಗಿಲ್ಲ. ಭಾರತ ಸೇರಿದಂತೆ ಜಗತ್ತಿನ ಅಗ್ರಗಣ್ಯ ರಾಷ್ಟ್ರಗಳು ಮಲೇಷ್ಯಾ ಜೊತೆ ಶೋಧ ಕಾರ್ಯದಲ್ಲಿ ತೊಡಗಿದ್ದರೂ ಇದುವರೆಗೆ ಯಾವುದೇ ಪ್ರಯೋಜನವುಂಟಾಗಲಿಲ್ಲ.
ಇನ್ನಷ್ಟು ಸುದ್ದಿ: ಜಗತ್ತಿನ ಅತಿದೊಡ್ಡ ಬೋಯಿಂಗ್ ವಿಮಾನ
ಅಂದ ಹಾಗೆ ಕೆಲವು ತಿಂಗಳುಗಳ ಹಿಂದೆ ನಾವು ವಿಶ್ವದ ಅತಿದೊಡ್ಡ ಪ್ರಯಾಣಿಕ ವಿಮಾನ ಏರ್‌ಬಸ್ ಬಗ್ಗೆ ಲೇಖನವೊಂದನ್ನು ಬರೆದಿದ್ದೆವು. ಇದೀಗ ಏರ್‌ಬಸ್ ಎ380 ಮತ್ತೆ ಸುದ್ದಿ ಗಿಟ್ಟಿಸಿಕೊಂಡಿದೆ. ಯಾಕೆಂದರೆ ಇತ್ತೀಚೆಗಷ್ಟೇ ಹೈದರಾಬಾದ್‌ನಲ್ಲಿ ನಡೆದ ಐದು ದಿನಗಳ ಪರ್ಯಂತದ ಭಾರತೀಯ ವ್ಯೋಮಯಾನ ಪ್ರದರ್ಶನ ಮೇಳದಲ್ಲಿ ಏರ್‌ಬಸ್ ಎ380 ಭರ್ಜರಿ ಪ್ರದರ್ಶನ ಕಂಡಿದೆ. ಕೇವಲ ಏರ್‌ಬಸ್ ಮಾತ್ರವಲ್ಲ. ಇದೇ ಸಂದರ್ಭದಲ್ಲಿ ಜಗತ್ತಿನ ಅತಿದೊಡ್ಡ ಡ್ರೀಮ್ ಲೈನರ್ ವಿಮಾನ ಕೂಡಾ ಆಗಿರುವ ಬೋಯಿಂಗ್ 787 ಕೂಡಾ ಪ್ರದರ್ಶನಗೊಂಡಿತ್ತು.

ನೀವು ಏರ್‌ಬಸ್ ಎಂಬ ಪದವನ್ನು ಮೊದಲು ಆಲಿಸುವುದಾದರೆ ಕೆಲವೊಂದು ಮಹತ್ವಪೂರ್ಣ ಮಾಹಿತಿಗಳನ್ನು ನಿಮ್ಮ ಮುಂದಿಡಲು ನಾವು ಬಯಸಲಿದ್ದೇವೆ. ಏರ್‌ಬಸ್ ಪ್ರಮುಖವಾಗಿಯೂ ಅಮೆರಿಕದ ಬೋಯಿಂಗ್ ವಿಮಾನಗಳಿಗೆ ಪ್ರತಿಸ್ಪರ್ಧಿಯಾಗಿ ಗುರುತಿಸಿಕೊಂಡಿದೆ.

ಫ್ರಾನ್ಸ್‌ನ ಏರ್‌ಬಸ್ ಸಂಸ್ಥೆಯ ಭಾಗವಾಗಿರುವ ಈ ಏರ್‌ಬಸ್ ಎಲ್ಲ ಆರ್ಥಿಕ ಸಂರಚನೆಯಲ್ಲಿ ಏಕಕಾಲಕ್ಕೆ 850ರಷ್ಟು ಪ್ರಯಾಣಿಕರನ್ನು ಹೊತ್ಯೊಯ್ಯುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ತ್ರಿ ಕ್ಲಾಸ್ ಸಂರಚನೆಯಲ್ಲಿ 550ರಿಂದ 600ರಷ್ಟು ಪ್ರಯಾಣಿಕರನ್ನು ಸಾಗಿಸಲಿದೆ.

ಸಾಮಾನ್ಯ ವಿಮಾನಗಳಿಗೆ ಸಿಂಗಲ್ ಡೆಕ್ ಸೌಲಭ್ಯವಿರುತ್ತದೆ. ಆದರೆ ಏರ್‌ಬಸ್ ಎ380 ಎಂಬುದು ಡಬಲ್ ಡೆಕ್, ವಿಶಾಲವಾದ ದೇಹವನ್ನು ಹೊಂದಿರುವ ನಾಲ್ಕು ಎಂಜಿನ್ ಜೆಟ್ ಏರ್‌ಲೈನರ್ ಆಗಿದೆ.

2005 ಎಪ್ರಿಲ್ 27ರಂದು ಮೊದಲ ಹಾರಾಟ ಆರಂಭಿಸಿದ್ದ ಏರ್‌ಬಸ್ ಎ380, 2007ನೇ ಇಸವಿಯಲ್ಲಿ ಸಿಂಗಾಪುರ ಏರ್‌ಲೈನ್ಸ್‌ಗೆ ಸೇರುವ ಮೂಲಕ ಮೊದಲ ವಾಣಿಜ್ಯ ಪಯಣ ಆರಂಭಿಸಿತ್ತು.

ನಿರೀಕ್ಷೆಯಂತೆಯೇ ಭಾರತೀಯ ವ್ಯೋಮಯಾನ ಪ್ರದರ್ಶನ ಮೇಳದಲ್ಲಿ ಏರ್‌ಬಸ್ ಎ380 ಪ್ರಮುಖ ಆಕರ್ಷಣೆಯಾಗಿತ್ತು.

ಇದೇ ಮೊದಲ ಬಾರಿಗೆ ಸಂಪೂರ್ಣ ಸುಸಜ್ಜಿತವಾದ ಏರ್‌ಬಸ್ ಎ380 ವಾಣಿಜ್ಯ ವಿಮಾನವನ್ನು ಭಾರತದಲ್ಲಿ ಪ್ರದರ್ಶಿಸಲಾಗಿತ್ತು.

ಇದು ಒಂದೇ ಹಾರಾಟದಲ್ಲಿ ಗರಿಷ್ಠ 850 ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿದೆ.

ಹಲವಾರು ವರ್ಷಗಳ ಬೇಡಿಕೆಯ ಬಳಿಕ ಭಾರತದಲ್ಲೂ ಏರ್‌ಬಸ್ ಎ380 ಹಾರಾಟಕ್ಕೆ ನಾಗರಿಕ ವ್ಯೋಮಯಾನ ಸಚಿವಾಲಯದಿಂದ ಹಸಿರು ನಿಶಾನೆ ದೊರಕಿತ್ತು.

ಹೈದರಾಬಾದ್‌ನಲ್ಲಿ ನಡೆದ ವ್ಯೋಮಯಾನ ಶೋದಲ್ಲಿ ಎಮಿರೇಟ್ಸ್ ಏರ್‌ಬಸ್ ಪ್ರದರ್ಶಿಸಲಾಗಿತ್ತು. ಇದು ಅತ್ಯಾಕರ್ಷಕ ಇಂಟಿರಿಯರ್ ಫೀಚರುಗಳನ್ನು ಪಡೆದುಕೊಂಡಿದೆ.

ಹಾಗಿದ್ದರೂ ಅಗತ್ಯ ಮೂಲಸೌಕರ್ಯಗಳನ್ನು ಹೊಂದಿರುವ ನವದೆಹಲಿ, ಮುಂಬೈ, ಹೈದರಾಬಾದ್ ಹಾಗೂ ಬೆಂಗಳೂರು ವಿಮಾನ ನಿಲ್ದಾಣಗಳಲ್ಲಿ ಮಾತ್ರ ಏರ್‌ಬಸ್ ಟೇಕ್ ಆಫ್ ಮಾಡಲಿದೆ.

ಇದೀಗ ಪ್ರಯಾಣಿಕರ ಬೇಡಿಕೆಯ ಅನುಗುಣವಾಗಿ ವಿವಿಧ ದೇಶಗಳಿಗೆ ಏರ್‌ಬಸ್ ಹಾರಾಟ ನಡೆಸಲಿದೆ. ಅಂದ ಹಾಗೆ ಸಿಂಗಾಪುರ ಏರ್‌ಲೈನ್ಸ್ ಹಾಗೂ ಎಮಿರೇಟ್ಸ್‌ನ ಈ ಸೂಪರ್ ಜಂಬೋ, ಭಾರತಕ್ಕೆ ಪಯಣಿಸುವುದು ಬಹುತೇಕ ಖಚಿತವಾಗಿದೆ.

ನೂತನ ಏರ್ ಬಸ್ ಎ350 ಹಗುರ ಭಾರದ ಪರಿಕರಗಳಿಂದ ತಯಾರಿಸಿರುವುದರಿಂದ ಇಂಧನ ವೆಚ್ಚ ಕಡಿಮೆ ಮಾಡಲು ನೆರವಾಗಲಿದೆ.

ಪ್ರಸ್ತುತ ಏರ್ ಬಸ್ ಇಡೀ ವಿಶ್ವದ ವಿಮಾನ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳುವ ಗುರಿಯಿರಿಸಿಕೊಂಡಿದೆ.

ಇದೀಗ ಜಗತ್ತಿನ ಅತಿದೊಡ್ಡ ವಾಣಿಜ್ಯ ವಿಮಾನ ಏರ್‌ಬಸ್ ಎ380 ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ.


Click it and Unblock the Notifications








