ಒಂದರ ಮೇಲೊಂದು ಸಿನಿಮಾ ಹಿಟ್... 3.2 ಕೋಟಿ ರೂ. ಕಾರು ಖರೀದಿಸಿ ಸ್ಟಾರ್ ನಟರಿಗೆ ಷಾಕ್ ಕೊಟ್ಟ ನಟಿ
ಹಲವು ಐಷಾರಾಮಿ ಕಾರುಗಳ ಹೊರತಾಗಿಯೂ ಬಾಲಿವುಡ್ ನಟಿ ಆಲಿಯಾ ಭಟ್ ಹೊಸ ರೇಂಜ್ ರೋವರ್ ಆಟೋಬಯೋಗ್ರಫಿ LWB ಐಷಾರಾಮಿ SUV ಖರೀದಿಸಿದ್ದಾರೆ. ಈ ಕಾರಿನ ಬೆಲೆಯು ಬರೋಬ್ಬರಿ ರೂ. 3.2 ಕೋಟಿ ಎಂದು ತಿಳಿದುಬಂದಿದೆ.
ಕಳೆದ ವರ್ಷ ತೆರೆಕಂಡ ಆರ್‌ಆರ್‌ಆರ್ ಸಿನಿಮಾ ಮೂಲಕ ದಕ್ಷಿಣ ಚಿತ್ರರಂಗಕ್ಕೂ ಲಗ್ಗೆಯಿಟ್ಟ ಅವರು, ಬಳಿಕ ಹಾಲಿವುಡ್ ಸಿನಿಮಾದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಮದುವೆಯ ಬಳಿಕ ಸಿನಿಮಾಗಳನ್ನು ಕಡಿಮೆ ಮಾಡುತ್ತಿದ್ದರೂ ಮಾಡಿದ ಕೆಲವೇ ಸಿನಿಮಾಗಳು ಹೆಚ್ಚು ಸದ್ದು ಮಾಡಿವೆ. ಗಂಗೂ ಬಾಯ್ ಕಾಥಿಯಾವಾಡಿ ಸಿನಿಮಾಗೆ ಉತ್ತಮ ನಟಿ ವರ್ಗದಲ್ಲಿ 2021 ರಾಷ್ಟ್ರ ಪ್ರಶಸ್ತಿ ದಕ್ಕಿಸಿಕೊಂಡಿದ್ದಾರೆ.

ಇನ್ನು ಹೊಸ ಕಾರಿನ ಬಗ್ಗೆ ಹೇಳುವುದಾದ್ರೆ, ರೇಂಜ್ ರೋವರ್ ಆಟೋಬಯೋಗ್ರಫಿ ಎಂಬ ಎಸ್‌ಯುವಿ ಸಿನಿಮಾ ನಟರು, ಕ್ರಿಕೆಟಿಗರು, ಉದ್ಯಮಿಗಳು, ರಾಜಕಾರಣಿಗಳಲ್ಲಿ ಸಾಕಷ್ಟು ಜನಪ್ರಿಯ SUV ಆಗಿದೆ. ಇದೀಗ ಆಲಿಯಾ ಕೂಡ ಲಾಂಗ್ ವೀಲ್‌ಬೇಸ್ ರೂಪಾಂತರದಲ್ಲಿ ಕಾರ್ಪಾಥಿಯನ್ ಗ್ರೇ ಬಣ್ಣದ ರೇಂಜ್ ರೋವರ್ ಆಟೋಬಯೋಗ್ರಫಿ ಎಸ್‌ಯುವಿಯನ್ನು ಖರೀದಿಸಿದ್ದಾರೆ.
ಇತ್ತೀಚೆಗೆ, ಅವರ ಪತಿ ರಣಬೀರ್ ಕಪೂರ್ ಕೂಡ ಬೆಲ್‌ಗ್ರೇವಿಯಾ ಗ್ರೀನ್ ಬಣ್ಣದ ಅದೇ ಎಸ್‌ಯುವಿ ಮಾದರಿಯನ್ನು ಖರೀದಿಸಿದ್ದರು. ಅಲಿಯಾ ಭಟ್ ಬಳಿ ಇತರ ಐಷಾರಾಮಿ ಕಾರುಗಳು ಕೂಡ ಇವೆ. ಅವುಗಳನ್ನು ನೊಡುವುದಾದ್ರೆ, ರೇಂಜ್ ರೋವರ್ ವೋಗ್, ಆಡಿ ಕ್ಯೂ7, ಆಡಿ ಕ್ಯೂ5, ಆಡಿ ಎ6, ಬಿಎಂಡಬ್ಲ್ಯು 7 ಸರಣಿ ಮತ್ತು ಇನ್ನೂ ಹೆಚ್ಚಿನ ಮಾದರಿಗಳನ್ನು ಆಲಿಯಾ ಹೊಂದಿದ್ದಾರೆ.

ರೇಂಜ್ ರೋವರ್ ಆಟೋಬಯೋಗ್ರಫಿ ಬಗ್ಗೆ ಹೇಳುವುದಾದ್ರೆ, ಈ ಐಷಾರಾಮಿ SUV ಅನ್ನು 2022 ರಲ್ಲಿ ಬಿಡುಗಡೆ ಮಾಡಲಾಯಿತು. ಇದು ಮೂರು ಎಂಜಿನ್ ಆಯ್ಕೆಗಳು, ನಾಲ್ಕು ಟ್ರಿಮ್ ಮಾದರಿಗಳಲ್ಲಿ ಲಭ್ಯವಿದೆ. ಹಾಗೆಯೇ ಸ್ಟ್ಯಾಂಡರ್ಡ್ 5 ಸೀಟರ್ ಫಾರ್ಮ್ಯಾಟ್ ಮತ್ತು ಉದ್ದವಾದ ವೀಲ್‌ಬೇಸ್ ರೂಪಾಂತರಗಳಲ್ಲಿ ಲಭ್ಯವಿದ್ದು, ಇದರಲ್ಲಿ ಗ್ರಾಹಕರು ಮೂರನೇ ಸಾಲಿನ ಆಸನವನ್ನು ಪಡೆಯಬಹುದು.
ರೇಂಜ್ ರೋವರ್ ಆಟೋಬಯೋಗ್ರಫಿ ವೈಶಿಷ್ಟ್ಯಗಳನ್ನು ನೊಡುವುದಾದ್ರೆ, 13.7 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಲ್ಯಾಂಡ್ ರೋವರ್‌ನ ಪಿವಿ ಪ್ರೊ ಆಪರೇಟಿಂಗ್ ಸಿಸ್ಟಮ್‌ನೊಂದಿಗೆ 13.1 ಇಂಚಿನ ಫ್ಲೋಟಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 35 ಸ್ಪೀಕರ್, 1,600W ಮೆರಿಡಿಯನ್ ಸಿಗ್ನೇಚರ್ ಸೌಂಡ್ ಸಿಸ್ಟಮ್ ಜೊತೆಗೆ ಬರುತ್ತದೆ.
ಇವಿಷ್ಟೇ ಅಲ್ಲದೇ ಆಲ್-ವೀಲ್- ಸ್ಟೀರಿಂಗ್, 11.4-ಇಂಚಿನಹಿಂಭಾಗದ ಮನರಂಜನಾ ಟಚ್‌ಸ್ಕ್ರೀನ್‌ಗಳು, ಆರು ಡ್ರೈವಿಂಗ್ ಮೋಡ್‌ಗಳೊಂದಿಗೆ ಟೆರೈನ್ ರೆಸ್ಪಾನ್ಸ್ 2 ಸಿಸ್ಟಮ್, ಪನಾರಮಿಕ್ ಸನ್‌ರೂಫ್, 'ಡಿಜಿಟಲ್ ಎಲ್‌ಇಡಿ' ಹೆಡ್‌ಲೈಟ್‌ಗಳು, ವೆಂಟಿಲೇಟೆಡ್ ಸೀಟುಗಳು, ಮಸಾಜ್ ಸೀಟ್‌ಗಳು, ಕ್ಯಾಬಿನ್ ಏರ್ ಪ್ಯೂರಿಫೈಯರ್, 3D ಸರೌಂಡ್ ಕ್ಯಾಮೆರಾ ಸಿಸ್ಟಮ್‌ನಂತಹ ಹೆಚ್ಚಿನವನ್ನು ಒಳಗೊಂಡಿದೆ.
ಇದರ ಎಂಜಿನ್ ಬಗ್ಗೆ ಹೇಳುವುದಾದ್ರೆ, ಮೂರು ಎಂಜಿನ್ ಆಯ್ಕೆಗಳನ್ನು ಪಡೆಯುತ್ತದೆ. ಮೊದಲನೆಯದು 3.3 ಲೀಟರ್, ಆರು-ಸಿಲಿಂಡರ್ ಪೆಟ್ರೋಲ್, 400hp ಪವರ್ ಮತ್ತು 550Nm ಟಾರ್ಕ್ ಅನ್ನು ಹೊರಹಾಕುತ್ತದೆ. ಎರಡೆನೆಯದು 3.0- ಲೀಟರ್, ಆರು-ಸಿಲಿಂಡರ್ ಡೀಸೆಲ್ 350hp ಮತ್ತು 700Nm ಟಾರ್ಕ್ ಅನ್ನು ಹೊರಹಾಕುತ್ತದೆ.
ಮೂರನೇ ಎಂಜಿನ್ ಆಯ್ಕೆಯೆಂದರೆ 4.4-ಲೀಟರ್ ಟ್ವಿನ್ ಟರ್ಬೊ V8 ಪೆಟ್ರೋಲ್ ಎಂಜಿನ್ ಇದು 530hp ಪವರ್ ಮತ್ತು 750Nm ಟಾರ್ಕ್ ಅನ್ನು ಹೊರಹಾಕುತ್ತದೆ. ಎಲ್ಲಾ ಎಂಜಿನ್‌ಗಳು 8-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಯಾಗಿ ಬರುತ್ತದೆ. ಇದು ಎಲ್ಲಾ ನಾಲ್ಕು ಚಕ್ರಗಳಿಗೆ ಪವರ್ ಅನ್ನು ಕಳುಹಿಸುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.
Source: https://www.instagram.com/reel/CynvILASkIH/?igshid=MzRlODBiNWFlZA==


Click it and Unblock the Notifications








