ಶಬ್ದ ಮಾಲಿನ್ಯವನ್ನುಂಟು ಮಾಡುವ ವಾಹನಗಳ ವಿರುದ್ಧ ಕಠಿಣ ಕೈಗೊಳ್ಳಲು ಆದೇಶ ನೀಡಿದ ಹೈ ಕೋರ್ಟ್

ಮಾಡಿಫೈ ಮಾಡಿದ ಸೈಲೆನ್ಸರ್ ಅಳವಡಿಸಿಕೊಳ್ಳುವ ಮೂಲಕ ಶಬ್ದ ಮಾಲಿನ್ಯಕ್ಕೆ ಕಾರಣವಾಗುವ ದ್ವಿಚಕ್ರ ವಾಹನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠ ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಶಬ್ದ ಮಾಲಿನ್ಯವನ್ನುಂಟು ಮಾಡುವ ವಾಹನಗಳ ವಿರುದ್ಧ ಕಠಿಣ ಕೈಗೊಳ್ಳಲು ಆದೇಶ ನೀಡಿದ ಹೈ ಕೋರ್ಟ್

ಈ ಆದೇಶಕ್ಕೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳ ಬಗ್ಗೆ ಅಫಿಡವಿಟ್ ಸಲ್ಲಿಸಬೇಕು ಎಂದು ಹೈ ಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ. ಮುಂದಿನ ವಿಚಾರಣಾ ದಿನದಂದು ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಲಯವು ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಶಬ್ದ ಮಾಲಿನ್ಯವನ್ನುಂಟು ಮಾಡುವ ವಾಹನಗಳ ವಿರುದ್ಧ ಕಠಿಣ ಕೈಗೊಳ್ಳಲು ಆದೇಶ ನೀಡಿದ ಹೈ ಕೋರ್ಟ್

ಮಾಡಿಫೈ ಮಾಡಲಾದ ಸೈಲೆನ್ಸರ್‌ಗಳನ್ನು ಅಳವಡಿಸಿಕೊಂಡು ನಿಗದಿ ಪಡಿಸಿರುವುದಕ್ಕಿಂತ ಹೆಚ್ಚು ಶಬ್ದವನ್ನುಂಟು ಮಾಡುವ ದ್ವಿಚಕ್ರ ವಾಹನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶಿಸಲಾಗಿದೆ.

ಶಬ್ದ ಮಾಲಿನ್ಯವನ್ನುಂಟು ಮಾಡುವ ವಾಹನಗಳ ವಿರುದ್ಧ ಕಠಿಣ ಕೈಗೊಳ್ಳಲು ಆದೇಶ ನೀಡಿದ ಹೈ ಕೋರ್ಟ್

ನ್ಯಾಯಮೂರ್ತಿ ಅಬ್ದುಲ್ ಮೊಯಿನ್ ಅವರನ್ನೊಳಗೊಂಡ ನ್ಯಾಯಪೀಠ ಈ ಆದೇಶ ನೀಡಿದೆ. ಮಾಡಿಫೈ ಮಾಡಲಾದ ಸೈಲೆನ್ಸರ್‌ಗಳು ಹೆಚ್ಚು ಶಬ್ದವನ್ನುಂಟು ಮಾಡುತ್ತವೆ. ಇದರಿಂದ ವಾಹನಗಳು ದೂರದಲ್ಲಿದ್ದರೂ ಶಬ್ದವನ್ನು ಕೇಳಬಹುದು.

ಶಬ್ದ ಮಾಲಿನ್ಯವನ್ನುಂಟು ಮಾಡುವ ವಾಹನಗಳ ವಿರುದ್ಧ ಕಠಿಣ ಕೈಗೊಳ್ಳಲು ಆದೇಶ ನೀಡಿದ ಹೈ ಕೋರ್ಟ್

ಇದು ಮಕ್ಕಳು, ವೃದ್ಧರು ಹಾಗೂ ದೈಹಿಕ ಅಸ್ವಸ್ಥರ ಮೇಲೆ ಗಂಭೀರ ಪರಿಣಾಮ ಬಿರುತ್ತದೆ ಎಂದು ನ್ಯಾಯ ಪೀಠ ಹೇಳಿದೆ. ಸ್ಕೂಟರ್‌ ಹಾಗೂ ಬೈಕ್'ಗಳಿಗೆ 75 ರಿಂದ 80 ಡೆಸಿಬಲ್‌ ಶಬ್ದ ಮಟ್ಟವನ್ನು ನಿಗದಿ ಪಡಿಸಲಾಗಿದೆ.

ಶಬ್ದ ಮಾಲಿನ್ಯವನ್ನುಂಟು ಮಾಡುವ ವಾಹನಗಳ ವಿರುದ್ಧ ಕಠಿಣ ಕೈಗೊಳ್ಳಲು ಆದೇಶ ನೀಡಿದ ಹೈ ಕೋರ್ಟ್

ಈ ವಾಹನಗಳನ್ನು ಉತ್ಪಾದಿಸುವಾಗ ಇದನ್ನು ಗಮನದಲ್ಲಿಟ್ಟುಕೊಂಡು ಉತ್ಪಾದಿಸಲಾಗುತ್ತದೆ. ಆದರೆ ಸೈಲೆನ್ಸರ್‌ಗಳನ್ನು ಮಾಡಿಫೈ ಮಾಡಿದ ನಂತರ ಈ ಪ್ರಮಾಣವು 80 ಡೆಸಿಬಲ್‌ಗಳನ್ನು ಮೀರುತ್ತದೆ.

ಶಬ್ದ ಮಾಲಿನ್ಯವನ್ನುಂಟು ಮಾಡುವ ವಾಹನಗಳ ವಿರುದ್ಧ ಕಠಿಣ ಕೈಗೊಳ್ಳಲು ಆದೇಶ ನೀಡಿದ ಹೈ ಕೋರ್ಟ್

ಅಧಿಕಾರಿಗಳು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ನ್ಯಾಯಾಲಯ ತಿಳಿಸಿದೆ. ನಿಜಕ್ಕೂ ಈ ಸಮಸ್ಯೆಗೆ ಪರಿಹಾರ ನೀಡಬೇಕಾಗಿದೆ. ಭಾರತದಲ್ಲಿ ಹಲವಾರು ಜನರು ದ್ವಿಚಕ್ರ ವಾಹನಗಳಲ್ಲಿ ಶಬ್ದ ಮಾಲಿನ್ಯಕ್ಕೆ ಕಾರಣವಾಗುವಂತಹ ಮಾಡಿಫೈ ಮಾಡಲಾದ ಅಥವಾ ಆಫ್ಟರ್ ಮಾರ್ಕೆಟ್ ಸೈಲೆನ್ಸರ್‌ಗಳನ್ನು ಬಳಸುತ್ತಾರೆ.

ಶಬ್ದ ಮಾಲಿನ್ಯವನ್ನುಂಟು ಮಾಡುವ ವಾಹನಗಳ ವಿರುದ್ಧ ಕಠಿಣ ಕೈಗೊಳ್ಳಲು ಆದೇಶ ನೀಡಿದ ಹೈ ಕೋರ್ಟ್

ಸಂಚಾರ ಪೊಲೀಸರು ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಮಾಡಿಫೈ ಮಾಡಲಾದ ಸೈಲೆನ್ಸರ್‌ಗಳನ್ನು ಹೊಂದಿರುವ ವಾಹನಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಲೇ ಇರುತ್ತಾರೆ.

ಶಬ್ದ ಮಾಲಿನ್ಯವನ್ನುಂಟು ಮಾಡುವ ವಾಹನಗಳ ವಿರುದ್ಧ ಕಠಿಣ ಕೈಗೊಳ್ಳಲು ಆದೇಶ ನೀಡಿದ ಹೈ ಕೋರ್ಟ್

ಈ ಹಿಂದೆ ಮಾಡಿಫೈ ಮಾಡಲಾದ ಹಲವಾರು ಸೈಲೆನ್ಸರ್‌ಗಳನ್ನು ವಶಕ್ಕೆ ಪಡೆದು ರೋಡ್ ರೋಲರ್‌ನಿಂದ ನಾಶ ಪಡಿಸಿದ ಪ್ರಕರಣಗಳು ವರದಿಯಾಗಿದ್ದವು. ರೋಡ್ ರೋಲರ್‌ ಬಳಸಿ ನಿಯಮಬಾಹಿರವಾಗಿ ಅಳವಡಿಸಿದ್ದ ಸೈಲೆನ್ಸರ್‌ಗಳನ್ನು ಪೊಲೀಸರು ನಾಶಪಡಿಸಿದ ಹಲವಾರು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

ಶಬ್ದ ಮಾಲಿನ್ಯವನ್ನುಂಟು ಮಾಡುವ ವಾಹನಗಳ ವಿರುದ್ಧ ಕಠಿಣ ಕೈಗೊಳ್ಳಲು ಆದೇಶ ನೀಡಿದ ಹೈ ಕೋರ್ಟ್

ಆದರೂ ಹಲವು ವಾಹನ ಸವಾರರು ಈ ತಪ್ಪನ್ನು ಮಾಡುತ್ತಲೇ ಇದ್ದಾರೆ. ಈಗ ಅಲಹಾಬಾದ್ ಹೈ ಕೋರ್ಟ್ ಕಠಿಣ ಕ್ರಮಕ್ಕೆ ಆದೇಶಿಸಿದೆ. ಈ ಆದೇಶದ ಹಿನ್ನೆಲೆಯಲ್ಲಿ, ಅಧಿಕಾರಿಗಳು ಕಠಿಣ ಕ್ರಮಗಳನ್ನು ಕೈಗೊಳ್ಳುವ ನಿರೀಕ್ಷೆಗಳಿವೆ. ಇದರಿಂದ ಶಬ್ದ ಮಾಲಿನ್ಯ ಸಮಸ್ಯೆ ನಿಯಂತ್ರಣಕ್ಕೆ ಬರುವ ಸಾಧ್ಯತೆಗಳಿವೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Allahabad High court orders to take action against noisy two wheelers. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X