ರೈಲು ಹಳಿಯಲ್ಲಿ ಸಿಲುಕಿದ ಲಿಮೊ ಕಾರಿಗೆ ಗೂಡ್ಸ್ ಗಾಡಿ ಢಿಕ್ಕಿ
ಅಪಘಾತವನ್ನು ದೂರದಿಂದ ನೋಡುವುದು ಒಂಥರ ಮಜಾ ಕೊಡುತ್ತದೆ. ಇನ್ನು ಸಾವು-ನೋವು ಸಂಭವಿಸಿಲ್ಲ ಅಂದ ಮೇಲೆ ರೋಚಕತೆ ಸೃಷ್ಟಿ ಮಾಡುವ ಇಂತಹ ವೀಡಿಯೋಗಳು ಮತ್ತಷ್ಟು ರೋಮಾಂಚಕ ಕ್ಷಣಗಳಿಗೆ ಸಾಕ್ಷಿಯಾಗುತ್ತದೆ.
ಇದಕ್ಕೊಂದು ತಾಜಾ ಉದಾಹರಣೆಯೆಂಬಂತೆ ಅಲ್ಲಿ ದೂರದ ಅಮೆರಿಕದಲ್ಲಿ ನಡೆದ ಅಪಘಾತ ಘಟನೆಯನ್ನು ನಾವಿಲ್ಲಿ ವರದಿ ಮಾಡಲಿದ್ದೇವೆ. ಈ ರೋಚಕ ಚಿತ್ರಗಳು ಹಾಗೂ ವೀಡಿಯೋ ವೀಕ್ಷಣೆಗಾಗಿ ಫೋಟೊ ಸ್ಲೈಡ್ ನತ್ತ ಮುಂದುವರಿಯಿರಿ.

ಅಮೆರಿಕದಲ್ಲಿ ಲಿಮೊ ಎಂಬ ಅಕ್ಕರೆಯ ಹೆಸರಿನಿಂದ ಕರೆಯಲ್ಪಡುವ ಲಿಮೊಸಿನ್ ಕಾರುಗಳು ಹೆಚ್ಚು ಜನಪ್ರಿಯವೆನಿಸಿದೆ. ಅತಿ ಉದ್ದದ ಇಂತಹ ಐಷಾರಾಮಿ ಕಾರುಗಳನ್ನು ನೋಡುವುದೇ ಬಲು ಚೆಂದ.

ಇಂತಹದೊಂದು ಲಿಮೊ ಕಾರು ಅಮೆರಿಕದ ಇಂಡಿಯಾನಾದ ನ್ಯೂ ಪ್ಯಾರಿಸ್ ಬಳಿ ರೈಲು ಹಳಿ ದಾಟುತ್ತಿದ್ದ ವೇಳೆ ಚಕ್ರಗಳು ಸಿಲುಕಿದ್ದವು. ಚಾಲಕ ಏನೇ ಪ್ರಯತ್ನ ಪಟ್ಟರೂ ಕಾರನ್ನು ಹೊರತೆಗೆಯುವುದು ಕಷ್ಟದ ಮಾತಾಗಿತ್ತು.

ಇನ್ನೇನು ತಡ ಅತ್ತ ಬರುತ್ತಿದ್ದ ಗೂಡ್ಸ್ ರೈಲು ಲಿಮೊ ಕಾರಿಗೆ ಢಿಕ್ಕಿಯಾಗಿತ್ತು. ತಕ್ಷಣ ಕಾರ್ಯ ಪ್ರವೃತ್ತರಾದ ಸ್ಥಳೀಯರು ದೃಶ್ಯವನ್ನು ಸೇರಿ ಹಿಡಿಯುವುದನ್ನು ಮಾತ್ರ ಮರೆಯಲಿಲ್ಲ.

ಸಾಮಾನ್ಯ ಸರಾಸರಿ ವೇಗದಲ್ಲಿದ್ದ ಗೂಡ್ಜ್ ರೈಲು, ಹಳಿ ಮೇಲೆ ಹಾಯಾಗಿ ಮಲಗಿದ್ದ ಲಿಮೊ ಕಾರಿಗೆ ಬಲವಾಗಿ ಬಂದಪ್ಪಳಿಸಿತ್ತು.

ವಿಶೇಷವೆಂದರೆ ಹಿರಿಯ ನಾಗರಿಕನೊಬ್ಬ ಕೆಂಪು ಪಟ್ಟಿ ತೋರಿಸಿ ರೈಲು ಚಾಲಕನಿಗೆ ಎಚ್ಚರಿಕೆಯ ಕರೆಗಂಟೆ ಬಾರಿಸಲು ಪ್ರಯತ್ನಿಸಿದರೂ ಯಾವುದೇ ಫಲವುಂಟಾಗಲಿಲ್ಲ.

ಪರಿಣಾಮವಾಗಿ ಕೊನೆಗೂ ರೈಲಿನ ಶಕ್ತಿಗೆ ಲಿಮೊ ಕಾರು ಶರಣಾಗಲೇ ಬೇಕಾಯಿತು. ಅಂದ ಹಾಗೆ 2015 ಜುಲೈ 19ರಂದು ಈ ಘಟನೆ ನಡೆದಿದೆ.

ರೈಲು ಹಾಗೂ ಲಿಮೊ ಕಾರಿನ ಢಿಕ್ಕಿಯ ಈ ರೋಚಕ ವೀಡಿಯೋಗಾಗಿ ಮುಂದಿನ ಪುಟ ಕ್ಲಿಕ್ಕಿಸಿರಿ.
ಲಿಮೊ ಕಾರಿಗೆ ಗೂಡ್ಸ್ ರೈಲು ಢಿಕ್ಕಿ


Click it and Unblock the Notifications








