30 ವರ್ಷ ತನ್ನೊಂದಿಗೆ ಸೇವೆ ಸಲ್ಲಿಸಿದ ಅಂಬಾಸಿಡರ್‌ಗೆ ಚಾಲಕನಿಂದ ಭಾವಪೂರ್ಣ ಬೀಳ್ಕೊಡುಗೆ

'ಹಿಂದೂಸ್ತಾನ್ ಮೋಟಾರ್ಸ್'ನ 'ಅಂಬಾಸಿಡರ್' ಕಾರು ಒಂದು ಕಾಲದಲ್ಲಿ ಶ್ರೀಮಂತರು ಮತ್ತು ಸರ್ಕಾರಿ ಅಧಿಕಾರಿಗಳು ಬಳಸುವ ವಾಹನ ಎಂದು ಅನೇಕರಿಗೆ ಚಿರಪರಿಚಿತವಾಗಿದೆ. 1990ರ ದಶಕದಲ್ಲಿ ಈ ಕಾರು ಅಪಾರ ಜನಪ್ರಿಯತೆಯನ್ನು ಗಳಿಸುವುದರ ಜೊತೆಗೆ ಅನೇಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದೆ. ಅನೇಕ ಕಾರು ಉತ್ಸಾಹಿಗಳು ಈಗಲೂ ಈ ಅಂಬಾಸಿಡರ್ ಕಾರನ್ನು ಹೊಂದಿದ್ದಾರೆ. ನಾವು ಕೂಡ ಆಗಾಗ ಈ ಕಾರನ್ನು ನೋಡುತ್ತಿರುತ್ತೇವೆ.

30 ವರ್ಷ ತನ್ನೊಂದಿಗೆ ಸೇವೆ ಸಲ್ಲಿಸಿದ ಅಂಬಾಸಿಡರ್‌ಗೆ ಚಾಲಕನಿಂದ ಭಾವಪೂರ್ಣ ಬೀಳ್ಕೊಡುಗೆ

ಬಹುಕಾಲದಿಂದ ಭಾರತದ ಮಾರುಕಟ್ಟೆಯಲ್ಲಿದ್ದ ಈ ಕಾರು 2014ರಲ್ಲಿ ಉತ್ಪಾದನೆಯನ್ನು ನಿಲ್ಲಿಸಬೇಕಾಯಿತು. ಆದರೂ ಹಲವರು ಅಧಿಕಾರಿಗಳು ದೀರ್ಘ ಕಾಲದ ವರೆಗೆ ಈ ವಾಹನವನ್ನು ಬಳಸಿದ್ದರು. ಈ ಕಾರನ್ನು ಮುಂಬೈ ರೈಲ್ವೇಸ್ ಕೂಡ ಸುಮಾರು 35 ವರ್ಷಗಳ ಕಾಲ ಬಳಸಿದೆ. ಆದರೆ ಇತ್ತೀಚೆಗೆ ಈ ಕಾರು ಮುಂಬೈ ರೈಲ್ವೇ ಇಲಾಖೆಗು ಕೂಡ ವಿದಾಯ ಹೇಳಿದೆ.

30 ವರ್ಷ ತನ್ನೊಂದಿಗೆ ಸೇವೆ ಸಲ್ಲಿಸಿದ ಅಂಬಾಸಿಡರ್‌ಗೆ ಚಾಲಕನಿಂದ ಭಾವಪೂರ್ಣ ಬೀಳ್ಕೊಡುಗೆ

ಜನವರಿ 22, 1985 ರಂದು ಮುಂಬೈ ರೈಲ್ವೇ ವಿಭಾಗದಲ್ಲಿ ಅಂಬಾಸಿಡರ್ ಕಾರನ್ನು ವಿವಿಧ ಅಧಿಕಾರಿಗಳಿಗೆ ಸೇವೆ ಮಾಡಲು ತರಲಾಗಿತ್ತು. ಅಂದಿನಿಂದ ಇದು ಬಳಕೆಯಲ್ಲಿದ್ದು ಇದೀಗ ಸೇವೆ ನಿಲ್ಲಿಸಿದೆ. ಆದರೆ ಇಲ್ಲಿ ತಿಳಿಯಬೇಕಾದ ಕುತೂಹಲಕಾರಿ ವಿಷಯವೆಂದರೆ ಕಾರಿನೊಂದಿಗೆ ಕಾರಿನ ಚಾಲಕನೂ ನಿವೃತ್ತಿ ಪಡೆದಿದ್ದಾನೆ. ಇದು ನಿಜಕ್ಕೂ ದೊಡ್ಡ ವಿಷಯ.

30 ವರ್ಷ ತನ್ನೊಂದಿಗೆ ಸೇವೆ ಸಲ್ಲಿಸಿದ ಅಂಬಾಸಿಡರ್‌ಗೆ ಚಾಲಕನಿಂದ ಭಾವಪೂರ್ಣ ಬೀಳ್ಕೊಡುಗೆ

ಭಾರತದಲ್ಲಿ ವಾಹನ ಸ್ಕ್ರ್ಯಾಪಿಂಗ್ ನೀತಿಯನ್ನು ಜಾರಿಗೊಳಿಸಿದ ನಂತರ, ಕೆಲವು ನಿಯಮಗಳನ್ನು ಸೂಚಿಸಲಾಗಿದೆ. ಈ ನಿಯಮಗಳಿಂದ ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡಬೇಕಿದ್ದು, ಈ ಅಂಬಾಸಿಡರ್ ಕಾರನ್ನು ರದ್ದುಗೊಳಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಈ ಕಾರಣಕ್ಕಾಗಿ ಅಂಬಾಸಿಡರ್ ಕಾರಿಗೆ ಮನಸಾರೆ ವಿದಾಯ ಹೇಳಿದ್ದಾರೆ.

30 ವರ್ಷ ತನ್ನೊಂದಿಗೆ ಸೇವೆ ಸಲ್ಲಿಸಿದ ಅಂಬಾಸಿಡರ್‌ಗೆ ಚಾಲಕನಿಂದ ಭಾವಪೂರ್ಣ ಬೀಳ್ಕೊಡುಗೆ

ಅಂಬಾಸಿಡರ್ ಕಾರನ್ನು ಹೂವಿನ ಹಾರಗಳಿಂದ ಅಲಂಕರಿಸಿ ಬೀಳ್ಕೊಟ್ಟರು. ಕಾರಿನ ಚಾಲಕ ಕೂಡ ಸ್ಥಳದಲ್ಲೇ ನಿವೃತ್ತಿ ಹೊಂದಿದ್ದಾನೆ. ಕಾರ್ಯಕ್ರಮದಲ್ಲಿ ಮುಂಬೈ ರೈಲ್ವೇ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

30 ವರ್ಷ ತನ್ನೊಂದಿಗೆ ಸೇವೆ ಸಲ್ಲಿಸಿದ ಅಂಬಾಸಿಡರ್‌ಗೆ ಚಾಲಕನಿಂದ ಭಾವಪೂರ್ಣ ಬೀಳ್ಕೊಡುಗೆ

ಸ್ವಾತಂತ್ರ್ಯದ ನಂತರ ಭಾರತದಲ್ಲಿ ವಾಹನ ಯುಗವನ್ನು ಆರಂಭಿಸಿದ 'ಅಂಬಾಸಿಡರ್' ಕಾರು ಬಿಎಸ್ 6 ಎಮಿಷನ್ ಮಾನದಂಡಗಳನ್ನು ಅನುಸರಿಸದ ಕಾರಣ ಸ್ಥಗಿತಗೊಂಡಿತು. ಹಿಂದೂಸ್ತಾನ್ ಅಂಬಾಸಿಡರ್ ಅನ್ನು ಇನ್ನೂ ಅನೇಕ ಸ್ಥಳಗಳಲ್ಲಿ ಟ್ಯಾಕ್ಸಿ ಮತ್ತು ಕ್ಯಾಬ್ ಆಗಿ ಬಳಸಲಾಗುತ್ತಿದೆ.

30 ವರ್ಷ ತನ್ನೊಂದಿಗೆ ಸೇವೆ ಸಲ್ಲಿಸಿದ ಅಂಬಾಸಿಡರ್‌ಗೆ ಚಾಲಕನಿಂದ ಭಾವಪೂರ್ಣ ಬೀಳ್ಕೊಡುಗೆ

ಸೆಂಟ್ರಲ್ ರೈಲ್ವೇ ಮುಂಬೈ ವಿಭಾಗದ ಕೇಂದ್ರ ವಿಭಾಗದ ಕೊನೆಯ ಅಂಬಾಸಿಡರ್ ಕಾರು, ಚಾಲಕ ಸೇರಿದಂತೆ ಒಟ್ಟು 5 ಜನರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಇದು ಆರಂಭದಲ್ಲಿ 1985 ರಲ್ಲಿ ಕೇಂದ್ರ ರೈಲ್ವೆಯ ಮುಂಬೈ ವಿಭಾಗದ ಇಂಜಿನಿಯರಿಂಗ್ ವಿಭಾಗದಿಂದ ರೂ. 75000 ದರದಲ್ಲಿ ಖರೀದಿಸಲಾಗಿತ್ತು. ನಂತರ ಕಾರನ್ನು 6 ಜೂನ್ 1992 ರಂದು ಸೆಂಟ್ರಲ್ ರೈಲ್ವೇ, ಮುಂಬೈ ವಿಭಾಗದ ವಾಣಿಜ್ಯ ವಿಭಾಗಕ್ಕೆ ವರ್ಗಾಯಿಸಲಾಯಿತು. ಈ ಕಾರು ದೀರ್ಘಕಾಲದವರೆಗೆ ಸೇವೆ ಸಲ್ಲಿಸಿದ್ದರೂ ಯಾವುದೇ ಸಮಸ್ಯೆ ಎದುರಾಗಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

30 ವರ್ಷ ತನ್ನೊಂದಿಗೆ ಸೇವೆ ಸಲ್ಲಿಸಿದ ಅಂಬಾಸಿಡರ್‌ಗೆ ಚಾಲಕನಿಂದ ಭಾವಪೂರ್ಣ ಬೀಳ್ಕೊಡುಗೆ

35 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಈ ಕಾರಿನ ಚಾಲಕ 'ಮುತ್ತು ಪಾಂಡಿ ಆಂಡಿ ನಾಡರ್' ಅವರು, 1992 ರಿಂದ ಈ ಕಾರನ್ನು ಓಡಿಸುತ್ತಿದ್ದಾರೆ. ಆದರೆ, 1984ರಲ್ಲಿ ಖಲಾಸಿಯಾಗಿ ಸೆಂಟ್ರಲ್ ರೈಲ್ವೇ ಸೇರಿದ್ದರು. ನಂತರ ಅವರು 1988 ರಲ್ಲಿ ಚಾಲಕರಾದರು. 1992ರಲ್ಲಿ ಮುತ್ತು ಅವರಿಗೆ ಕಾರು ಚಾಲನೆಯ ಜವಾಬ್ದಾರಿಯನ್ನು ಅಧಿಕಾರಿಗಳು ವಹಿಸಿದ್ದರು.

30 ವರ್ಷ ತನ್ನೊಂದಿಗೆ ಸೇವೆ ಸಲ್ಲಿಸಿದ ಅಂಬಾಸಿಡರ್‌ಗೆ ಚಾಲಕನಿಂದ ಭಾವಪೂರ್ಣ ಬೀಳ್ಕೊಡುಗೆ

ಈ ಕಾರಿಗೆ ವಿದಾಯ ಹೇಳುವ ಸಂದರ್ಭದಲ್ಲಿ ಚಾಲಕ ಮುತ್ತು ನನ್ನ ರಾಜಕುಮಾರಿಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಜೊತೆಗೆ ಚಾಲನೆ ಮಾಡುವಾಗ ಯಾವುದೇ ತೊಂದರೆಗಳು ಮತ್ತು ಅಪಘಾತಗಳನ್ನು ಈವರೆಗೆ ಎದುರಿಸಿರಲಿಲ್ಲ ಎಂದು ಹೇಳಿದರು. ಇಲ್ಲಿಯವರೆಗೆ ಈ ಕಾರಿಗೆ ಎಲ್ಲಿಯೂ ಟ್ರಾಫಿಕ್ ನಿಯಮ ಉಲ್ಲಂಘನೆ ಸಂಬಂಧ ದಂಡ ಕಟ್ಟಿಲ್ಲ ಎಂದು ಅವರು ಹೆಮ್ಮೆಯಿಂದ ಹೇಳಿದರು. ಆದರೆ ಇಂದು ಈ ಕಾರಿನೊಂದಿಗೆ ನನ್ನ ಕೊನೆಯ ಪ್ರಯಾಣವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

Most Read Articles

Kannada
English summary
Ambassador car retired with driver after 35 years of service
Story first published: Monday, April 4, 2022, 19:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X