ಅರ್ಧದಲ್ಲೇ ಮೊಟಕುಗೊಂಡ ಕಾನ್ಸೆಪ್ಟ್ ಕಾರುಗಳ ಪಟ್ಟಿ

By Nagaraja

ಪ್ರತಿಯೊಂದು ಆಟೋ ಶೋಗಳಲ್ಲಿ ನೂತನ ಕಾನ್ಸೆಪ್ಟ್ ಕಾರುಗಳು ನಮಗೆ ಕಾಣಸಿಗುತ್ತವೆ. ಅದು ಡೆಟ್ರಾಯ್ಟ್ ಆಟೋ ಶೋ ಆಗಿರಬಹುದು ಅಥವಾ ದೆಹಲಿ ಆಟೋ ಎಕ್ಸ್‌ಪೋ ಆಗಿರಬಹುದು, ಭವಿಷ್ಯದ ಕಾರು ಕಾನ್ಸೆಪ್ಟ್ ರಚಿಸುವುದರಲ್ಲಿ ಕಾರು ತಯಾರಕ ಕಂಪನಿಗಳು ತಲ್ಲೀನವಾಗಿರುತ್ತದೆ.

ಆದರೆ ಎಲ್ಲ ಬಾರಿಯೂ ಕಾನ್ಸೆಪ್ಟ್ ಕಾರುಗಳು ಯಶಸ್ವಿಯಾಗುವುದಿಲ್ಲ. ಹಾಗಾಗಿ ಮಾರುಕಟ್ಟೆ ಪ್ರವೇಶಿಸುವಲ್ಲಿ ಎಡವುತ್ತದೆ. ಅಮೆರಿಕದಲ್ಲಿ ವೈಫಲ್ಯ ಅನುಭವಿಸಿದ ಇಂತಹ ಕೆಲವು ಕಾನ್ಸೆಪ್ಟ್ ಕಾರುಗಳನ್ನು ನಾವಿಂದು ಪಟ್ಟಿ ಮಾಡಿ ಕೊಡಲಿದ್ದೇವೆ.

ಕೆಲವು ಕಾನ್ಸೆಪ್ಟ್ ಕಾರುಗಳ ಬಗ್ಗೆ ವಿಶ್ಲೇಷಕರಿಂದ ಭಾರಿ ಟೀಕೆಗಳು ಎದುರಾಗುತ್ತವೆ. ಇದೇ ಕಾರಣದಿಂದಾಗಿ ಉತ್ಪಾದನೆ ರೂಪ ಕಾಣದೇ ಯೋಜನೆ ಅರ್ಧದಲ್ಲೇ ಮೊಟಕುಗೊಳ್ಳುತ್ತದೆ.

Ford Indigo

Ford Indigo

ಟಾಟಾ ಇಂಡಿಕಾ ಸೆಡಾನ್‌ಗಿಂತ ಮೊದಲೇ ಫೋರ್ಡ್ ಇಂಡಿಗೊ ಕಾನ್ಸೆಪ್ಟ್ ತಯಾರುಗೊಂಡಿತ್ತು. 1996ನೇ ಇಸವಿಯಲ್ಲೇ ಜಿಟಿ ಸೂಪರ್ ಕಾರು ಕಾರನ್ನು ಫೋರ್ಡ್ ವಿನ್ಯಾಸಗೊಳಿಸಿತ್ತು. ಆದರೆ ಕಾರಣಾಂತರಗಳಿಂದ ಮೂಲೆಗುಂಪಾಗಿತ್ತು.

Ford Indigo

Ford Indigo

ಫೋರ್ಡ್ ಇಂಡಿಗೊ ವಿ12 ಎಂಜಿನ್‌ನಿಂದ ನಿಯಂತ್ರಿಸಲ್ಪಟ್ಟಿತ್ತು. ಹಾಗೆಯೇ 60 ಮೈಲ್ ವೇಗವನ್ನು ಕೇವಲ 3.9 ಸೆಕೆಂಡುಗಳಲ್ಲಿ ತಲುಪುವ ಸಾಮರ್ಥ್ಯ ಹೊಂದಿತ್ತು.

Buick Blackhawk

Buick Blackhawk

ಪ್ರಮುಖವಾಗಿ ಯುವ ಗ್ರಾಹಕರನ್ನು ಗುರಿಯಾಗಿರಿಸಿಕೊಂಡು ಈ ಕಾನ್ಸೆಪ್ಟ್ ತಯಾರಿಸಲಾಗಿತ್ತು. ಈ ಮೂಲಕ ಆಧುನಿಕ ರೂಪ ನೀಡಲು ಪ್ರಯತ್ನಿಸಲಾಗಿತ್ತು.

Buick Blackhawk

Buick Blackhawk

ಈ ಕಾರಿಗೆ ಸಮಕಾಲೀನ ವಿನ್ಯಾಸದೊಂದಿಗೆ ಕ್ಲಾಸಿಕ್ ಟಚ್ ನೀಡಲಾಗಿತ್ತು. 1970ರ ದಶಕದಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿದ್ದ ಈ ಕಾರು 463 ಬಿಎಚ್‌ಪಿ ಬ್ಯೂಕ್ ಜಿಎಸ್ ವಿ8 ಎಂಜಿನ್ ಹೊಂದಿದೆ.

Jeep Hurricane

Jeep Hurricane

ಆಫ್ ರೋಡಿಂಗ್ ಗುರಿಯಾಗಿರಿಸಿಕೊಂಡು Hurricane ಕಾನ್ಸೆಪ್ಟ್ ತಯಾರಿಸಲಾಗಿತ್ತು. ಆದರೆ ಇದರ 20 ಇಂಚು ವೀಲ್ ಹಾಗೂ 37 ಇಂಚು ಟಯರ್ ಯಶಸ್ವಿ ಗಳಿಸಲು ಸಾಧ್ಯವಾಗಲಿಲ್ಲ.

Jeep Hurricane

Jeep Hurricane

ಇದರ ಪ್ರಮುಖ ವಿಶೇಷತೆ ಏನೆಂದರೆ ನಾಲ್ಕು ವೀಲ್‌ಗಳು ಯಾವ ಕಡೆ ಬೇಕಾದರೂ ಸ್ವತಂತ್ರವಾಗಿ ಚಲಿಸುವ ಸಾಮರ್ಥ್ಯ ಹೊಂದಿದ್ದವು. ಅಂದರೆ ಇದರ ಟರ್ನಿಂಗ್ ರೇಡಿಯಸ್ '0' ಆಗಿತ್ತು.

Chrysler Atlantic

Chrysler Atlantic

ಜಪಾನ್ ಪ್ರೀಮಿಯರ್ ಬ್ರಾಂಡ್ ಡೈಮ್ಲರ್ ಮಾಲಿಕತ್ವ ಹೊಂದಿರುವ ಹೊರತಾಗಿಯೂ ಕ್ರೈಸ್ಲರ್ ಅಂಟ್ಲಾಟಿಕ್ ಕಾನ್ಸೆಪ್ಟ್ ಬಿಡುಗಡೆಯಾಗಿತ್ತು. ಕ್ರೈಸ್ಲರ್ 1995ನೇ ಇಸವಿಯಲ್ಲಿ ಅಂಟ್ಲಾಟಿಂಕ್ ಕಾನ್ಸೆಪ್ಟ್ ಅಭಿವೃದ್ಧಿಪಡಿಸಲಾಗಿತ್ತು.

Chrysler Atlantic

Chrysler Atlantic

ಅಮೆರಿಕದಲ್ಲಿ ಕ್ರೈಸ್ಲರ್ ಅಟ್ಲಾಂಟಿಕ್ ಕೂಡಾ ವೈಫಲ್ಯ ಅನುಭವಿಸಿದ ಕಾರು ಪರಿಕಲ್ಪನೆಯಾಗಿತ್ತು.

Lincoln Continental Concept

Lincoln Continental Concept

2002ನೇ ಇಸವಿಯಲ್ಲೇ ಫೋರ್ಡ್ ಪ್ರೀಮಿಯಂ ಬ್ರಾಂಡ್ ಲಿಂಕನ್ ಅನಾವರಣಗೊಳಿಸಲಾಗಿತ್ತು. ಇದರ 6 ಲೀಟರ್ ವಿ12 ಎಂಜಿನ್ 412 ಬಿಎಚ್‌ಪಿ ಉತ್ಪಾದಿಸುವ ಸಾಮರ್ಥ್ಯ ಹೊಂದಿತ್ತು.

Lincoln Continental Concept

Lincoln Continental Concept

ಲಿಂಕನ್ ಕಾಂಟಿನೆಂಟಲ್ ಕಾನ್ಸೆಪ್ಟ್‌ ಐಷಾರಾಮಿ ಎಕ್ಸ್‌ಟೀರಿಯರ್ ವಿನ್ಯಾಸ ಹೊಂದಿದೆ.

More from DriveSpark

Article Published On: Thursday, February 14, 2013, 6:30 [IST]
English summary
American carmakers Ford, Chrysler and General Motors always had a couple of concept cars on display in all major auto shows. Many of them failed to become production cars despite rave reviews. Here is a look at five American concept cars that remained concepts.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+