3 ಕಿ.ಮೀ ಕಾಲುವೆ ತೊಡಿ ಊರಿಗೆ ನೀರು ತಂದ ಆಧುನಿಕ ಭಗೀರಥನಿಗೆ ಟ್ರಾಕ್ಟರ್ ನೀಡಿದ ಆನಂದ್ ಮಹೀಂದ್ರಾ

ಇತ್ತೀಚೆಗೆ ವಯೋವೃದ್ಧರೊಬ್ಬರು ಹೆಚ್ಚು ಸುದ್ದಿಯಾಗಿದ್ದರು. ಆ ವೃದ್ದರು ಸುಮಾರು 3 ಕಿ.ಮೀ ದೂರ ಕಾಲುವೆ ನಿರ್ಮಿಸಿ ತಮ್ಮ ಊರಿಗೆ ನೀರು ಬರುವಂತೆ ಮಾಡಿದ ಕಾರಣ ಅವರ ಬಗ್ಗೆ ಹೆಚ್ಚು ಸುದ್ದಿಯನ್ನು ಬಿತ್ತರಿಸಲಾಯಿತು.

3 ಕಿ.ಮೀ ಕಾಲುವೆ ತೊಡಿ ಊರಿಗೆ ನೀರು ತಂದ ಆಧುನಿಕ ಭಗೀರಥನಿಗೆ ಟ್ರಾಕ್ಟರ್ ನೀಡಿದ ಆನಂದ್ ಮಹೀಂದ್ರಾ

ಈ ಮೂಲಕ ಆ ವಯೋವೃದ್ದರು ತಮ್ಮ ಹಳ್ಳಿಯಲ್ಲಿ ಮಾತ್ರವಲ್ಲದೆ ಇಂಟರ್ ನೆಟ್ ಮೂಲಕ ದೇಶಾದ್ಯಂತ ಸುದ್ದಿಯಾದರು. ವಿವಿಧ ಸುದ್ದಿ ಮಾಧ್ಯಮಗಳು ಅವರ ಬಗ್ಗೆ ಸುದ್ದಿಯನ್ನು ಪ್ರಕಟಿಸಿದವು. ಈ ಸುದ್ದಿಗೆ ಸ್ಪಂದಿಸಿರುವ ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಈ ರೈತನಿಗೆ ನೆರವಾಗಲು ಮುಂದೆ ಬಂದಿದ್ದಾರೆ. ಆ ವಯೋವೃದ್ಧ ರೈತನಿಗೆ ಟ್ರಾಕ್ಟರ್ ಅನ್ನು ಉಡುಗೊರೆಯಾಗಿ ನೀಡುವುದಾಗಿ ಆನಂದ್ ಮಹೀಂದ್ರಾ ತಮ್ಮ ಟ್ವಿಟರ್ ಮೂಲಕ ತಿಳಿಸಿದ್ದಾರೆ.

3 ಕಿ.ಮೀ ಕಾಲುವೆ ತೊಡಿ ಊರಿಗೆ ನೀರು ತಂದ ಆಧುನಿಕ ಭಗೀರಥನಿಗೆ ಟ್ರಾಕ್ಟರ್ ನೀಡಿದ ಆನಂದ್ ಮಹೀಂದ್ರಾ

ಟ್ರಾಕ್ಟರ್ ಅನ್ನು ಉಡುಗೊರೆಯಾಗಿ ನೀಡುವುದು ಪುಣ್ಯದ ಕೆಲಸವೆಂದು ನಾನು ಭಾವಿಸುತ್ತೇನೆ ಎಂದು ಅವರು ತಮ್ಮ ಪೋಸ್ಟ್ ನಲ್ಲಿ ತಿಳಿಸಿದ್ದಾರೆ. ಜೊತೆಗೆ ರೈತ ಆ ರೈತ ನಿರ್ಮಿಸಿದ ಕಾಲುವೆ ಈಜಿಪ್ಟಿನ ಪಿರಮಿಡ್ ಅಥವಾ ತಾಜ್ ಸ್ಮಾರಕಗಳಷ್ಟೇ ಮೌಲ್ಯಯುತವಾಗಿದೆ. ಈ ಗೌರವದ ಸಂಕೇತವಾಗಿ ನಾವು ಅವರಿಗೆ ಟ್ರಾಕ್ಟರ್ ಅನ್ನು ಉಡುಗೊರೆಯಾಗಿ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

3 ಕಿ.ಮೀ ಕಾಲುವೆ ತೊಡಿ ಊರಿಗೆ ನೀರು ತಂದ ಆಧುನಿಕ ಭಗೀರಥನಿಗೆ ಟ್ರಾಕ್ಟರ್ ನೀಡಿದ ಆನಂದ್ ಮಹೀಂದ್ರಾ

ಲಾಂಗಿ ಬುಯಾನ್ ಬಿಹಾರದ ಕಾಯಾ ಜಿಲ್ಲೆಗೆ ಸೇರಿದವರು. ಅವರು ಕೋತಿಲಾವಾ ಎಂಬ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಅವರು ಜಾನುವಾರುಗಳನ್ನು ಸಾಕುವ ಮೂಲಕ ಜೀವನ ಸಾಗಿಸುತ್ತಿದ್ದಾರೆ. ಅವರು ಹತ್ತಿರದಲ್ಲಿರುವ ಅರಣ್ಯ ಪ್ರದೇಶದಲ್ಲಿ ಜಾನುವಾರುಗಳಿಗೆ ನೀರುಣಿಸುತ್ತಾರೆ.

3 ಕಿ.ಮೀ ಕಾಲುವೆ ತೊಡಿ ಊರಿಗೆ ನೀರು ತಂದ ಆಧುನಿಕ ಭಗೀರಥನಿಗೆ ಟ್ರಾಕ್ಟರ್ ನೀಡಿದ ಆನಂದ್ ಮಹೀಂದ್ರಾ

ಕುಡಿಯುವ ನೀರಿಗಾಗಿ ತುಂಬಾ ದೂರ ಹೋಗಬೇಕಾದ ಕಾರನ್ನು ನೀರನ್ನು ತಮ್ಮ ಊರಿಗೆ ತರಲು ಬಯಸಿದರು. ಹೆಚ್ಚಿನ ನೀರು ನದಿಯಲ್ಲಿ ವ್ಯರ್ಥವಾಗುತ್ತಿತ್ತು. ಲಾಂಗಿ ಬುಯಾನ್ ಈ ಬಗ್ಗೆ ತಮ್ಮ ಗ್ರಾಮಸ್ಥರೊಂದಿಗೆ ಮಾತನಾಡಿದಾಗ, ಯಾರೂ ಸಹಾಯ ಮಾಡಲು ಮುಂದೆ ಬರಲಿಲ್ಲ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

3 ಕಿ.ಮೀ ಕಾಲುವೆ ತೊಡಿ ಊರಿಗೆ ನೀರು ತಂದ ಆಧುನಿಕ ಭಗೀರಥನಿಗೆ ಟ್ರಾಕ್ಟರ್ ನೀಡಿದ ಆನಂದ್ ಮಹೀಂದ್ರಾ

ಈ ಕಾರಣಕ್ಕೆ ಸ್ವತಃ ತಾವೇ ಯಾವುದೇ ಯಂತ್ರದ ನೆರವಿಲ್ಲದೇ ನೀರನ್ನು ತರಲು ಮುಂದಾದರು. ಸುಮಾರು 30 ವರ್ಷಗಳ ಪ್ರಯತ್ನದ ನಂತರ ಲಾಂಗಿ ಬುಯಾನ್ ರವರ ಪ್ರಯತ್ನವು ಫಲ ನೀಡಿದೆ. ಈಗ ಅವರ ಊರಿಗೂ ನೀರು ಹರಿದು ಬರುತ್ತಿದೆ.

3 ಕಿ.ಮೀ ಕಾಲುವೆ ತೊಡಿ ಊರಿಗೆ ನೀರು ತಂದ ಆಧುನಿಕ ಭಗೀರಥನಿಗೆ ಟ್ರಾಕ್ಟರ್ ನೀಡಿದ ಆನಂದ್ ಮಹೀಂದ್ರಾ

ಲಾಂಗಿ ಬುಯಾನ್ ವಾಸಿಸುವ ಗ್ರಾಮವು ಕೇವಲ ಕೃಷಿ ಹಾಗೂ ಪಶುಸಂಗೋಪನೆಯನ್ನು ಅವಲಂಬಿಸಿದೆ. ಆದರೆ ನೀರಿನ ಸೌಲಭ್ಯಗಳ ಕೊರತೆಯಿಂದಾಗಿ ಹೆಚ್ಚಿನ ಜನರು ಕೆಲಸದ ಹುಡುಕಿಕೊಂಡು ಹೊರ ರಾಜ್ಯಗಳು ಹಾಗೂ ಹೊರ ಊರುಗಳಿಗೆ ವಲಸೆ ಹೋಗಿದ್ದಾರೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

3 ಕಿ.ಮೀ ಕಾಲುವೆ ತೊಡಿ ಊರಿಗೆ ನೀರು ತಂದ ಆಧುನಿಕ ಭಗೀರಥನಿಗೆ ಟ್ರಾಕ್ಟರ್ ನೀಡಿದ ಆನಂದ್ ಮಹೀಂದ್ರಾ

ಈ ಪರಿಸ್ಥಿತಿಯಲ್ಲಿ ಛಲ ಬಿಡದೇ ಸುಮಾರು 30 ವರ್ಷಗಳ ಕಾಲ 3 ಕಿ.ಮೀ ದೂರದಲ್ಲಿ ಏಕಾಂಗಿಯಾಗಿ ಭೂಮಿಯನ್ನು ಅಗೆದು ಕಾಲುವೆ ಮಾಡಿ ತಮ್ಮ ಗ್ರಾಮಕ್ಕೆ ನೀರು ತಂದಿದ್ದಾರೆ. ದೇಶಾದ್ಯಂತ ಲಾಂಗಿ ಬುಯಾನ್ ರವರ ಈ ನಿಸ್ವಾರ್ಥ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ.

3 ಕಿ.ಮೀ ಕಾಲುವೆ ತೊಡಿ ಊರಿಗೆ ನೀರು ತಂದ ಆಧುನಿಕ ಭಗೀರಥನಿಗೆ ಟ್ರಾಕ್ಟರ್ ನೀಡಿದ ಆನಂದ್ ಮಹೀಂದ್ರಾ

ಈ ಕಾರಣಕ್ಕೆ ಮಹೀಂದ್ರಾ ಅಂಡ್ ಮಹೀಂದ್ರಾ ಅಧ್ಯಕ್ಷರಾದ ಆನಂದ್ ಮಹೀಂದ್ರಾ ಲಾಂಗಿ ಬುಯಾನ್ ರವರಿಗೆ ಟ್ರ್ಯಾಕ್ಟರ್ ಅನ್ನು ಗಿಫ್ಟ್ ಆಗಿ ನೀಡುತ್ತಿದ್ದಾರೆ. ಲಾಂಗಿ ಬುಯಾನ್ ರವರ ಪ್ರಯತ್ನದಿಂದಾಗಿ ಅವರ ಹಳ್ಳಿಯಲ್ಲಿ ಕೃಷಿಗಾಗಿ ಹಾಗೂ ಜಾನುವಾರುಗಳಿಗಾಗಿ ನಿರಂತರ ನೀರು ಲಭ್ಯವಾಗುವ ವಾತಾವರಣ ನಿರ್ಮಾಣವಾಗಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

3 ಕಿ.ಮೀ ಕಾಲುವೆ ತೊಡಿ ಊರಿಗೆ ನೀರು ತಂದ ಆಧುನಿಕ ಭಗೀರಥನಿಗೆ ಟ್ರಾಕ್ಟರ್ ನೀಡಿದ ಆನಂದ್ ಮಹೀಂದ್ರಾ

ಸಂದರ್ಶನವೊಂದರಲ್ಲಿ ಮಾತನಾಡಿದ್ದ ಲಾಂಗಿ ಬುಯಾನ್ ತಮಗೆ ಟ್ರಾಕ್ಟರ್ ಹೊರತುಪಡಿಸಿ ಬೇರೆ ಯಾವುದೇ ಗಿಫ್ಟ್ ಬೇಡ. ನನಗೆ ಟ್ರಾಕ್ಟರ್ ಸಿಕ್ಕರೆ ತುಂಬಾ ಒಳ್ಳೆಯದು ಎಂದು ಹೇಳಿದ್ದರು. ಸಂದರ್ಶದ ಮಾಡಿದ್ದ ವರದಿಗಾರ ಇದನ್ನು ತನ್ನ ಟ್ವಿಟರ್ ಖಾತೆಯ ಮೂಲಕ ಆನಂದ್ ಮಹೀಂದ್ರಾ ಅವರಿಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದ.

3 ಕಿ.ಮೀ ಕಾಲುವೆ ತೊಡಿ ಊರಿಗೆ ನೀರು ತಂದ ಆಧುನಿಕ ಭಗೀರಥನಿಗೆ ಟ್ರಾಕ್ಟರ್ ನೀಡಿದ ಆನಂದ್ ಮಹೀಂದ್ರಾ

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಆನಂದ್ ಮಹೀಂದ್ರಾ ಲಾಂಗಿ ಬುಯಾನ್ ರವರಿಗೆ ತಾವು ಟ್ರ್ಯಾಕ್ಟರ್ ನೀಡಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ. ಸದಾ ಕಾಲ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಆನಂದ್ ಮಹೀಂದ್ರಾ ಈ ರೀತಿಯ ಒಳ್ಳೆಯ ಕೆಲಸಗಳನ್ನು ಮಾಡುತ್ತಿರುವುದು ಶ್ಲಾಘನೀಯ.

Most Read Articles

Kannada
English summary
Anand Mahindra gifts tractor to farmer who dug canal. Read in Kannada.
Story first published: Monday, September 21, 2020, 10:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X