ಪತ್ನಿಯ ಹುಟ್ಟುಹಬ್ಬಕ್ಕೆ ಕೋಟಿ ಬೆಲೆಯ ಮರ್ಸಿಡಿಸ್ ಬೆಂಝ್ ಕಾರು ಗಿಫ್ಟ್ ನೀಡಿದ ಜನಪ್ರಿಯ ಬಾಲಿವುಡ್ ನಟ

ಐಷಾರಾಮಿ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಕಾರು ಅನೇಕ ಸೆಲಬ್ರಿಟಿಗಳ ಮೆಚ್ಚಿನ ಆಯ್ಕೆಯಾಗಿದೆ. ಇದೇ ಐಷಾರಾಮಿ ಕಾರನ್ನು ಬಾಲಿವುಡ್ ಜನಪ್ರಿಯ ನಟ ಅನಿಲ್ ಕಪೂರ್ ತಮ್ಮ ಪತ್ನಿ ಸುನೀತಾ ಕಪೂರ್ ಅವರ ಹುಟ್ಟು ಹಬ್ಬಕ್ಕೆ ಗಿಫ್ಟ್ ನೀಡಿದ್ದಾರೆ.

ಪತ್ನಿಯ ಹುಟ್ಟುಹಬ್ಬಕ್ಕೆ ಕೋಟಿ ಬೆಲೆಯ ಮರ್ಸಿಡಿಸ್ ಬೆಂಝ್ ಕಾರು ಗಿಫ್ಟ್ ನೀಡಿದ ಜನಪ್ರಿಯ ಬಾಲಿವುಡ್ ನಟ

ಅನಿಲ್ ಕಪೂರ್ ಅವರು ತಮ್ಮ ಪತ್ನಿಯ ಹುಟ್ಟುಹಬ್ಬಕ್ಕೆ ಇನ್‌ಸ್ಟಾಗ್ರಾಮ್‌ನಲ್ಲಿ ಭಾವನಾತ್ಮಕವಾಗಿ ಶುಭಾಶಯ ಕೂರಿದ್ದಾರೆ. ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿರುವುದು ಹೀಗೆ, ನಮ್ಮ ಪಯಣ ಥರ್ಡ್ ಕ್ಲಾಸ್ ರೈಲಿನಿಂದ ಲೋಕಲ್ ಬಸ್, ಆಟೋರಿಕ್ಷಾ, ಟ್ಯಾಕ್ಸಿ ವರೆಗೂ ಮತ್ತು ಎಕಾನಮಿ ಯಿಂದ ಬ್ಯುಸಿನೆಸ್ ಫಸ್ಟ್ ಕ್ಲಸ್ ವರೆಗೂ, ಹಳ್ಳಿಯಲ್ಲಿನ ಸಣ್ಣ ಹೋಟೆಲ್‌ನಿಂದ ಲೇಹ್ ಲಡಾಖ್ ಟೆಂಟ್ ನಲ್ಲಿ ಉಳಿಯವವರೆಗೆ ನಮ್ಮ ಹೃದಯದಲ್ಲಿನ ಪ್ರೀತಿಯಿಂದ ಕಳೆದಿದ್ದೇವೆ

ಪತ್ನಿಯ ಹುಟ್ಟುಹಬ್ಬಕ್ಕೆ ಕೋಟಿ ಬೆಲೆಯ ಮರ್ಸಿಡಿಸ್ ಬೆಂಝ್ ಕಾರು ಗಿಫ್ಟ್ ನೀಡಿದ ಜನಪ್ರಿಯ ಬಾಲಿವುಡ್ ನಟ

ನಮ್ಮ ಸಂತೋಷದಿಂದ ಮತ್ತು ಪ್ರೀತಿಯಿಂದ.' ಇವುಗಳು ನಾನು ನಿನ್ನನ್ನು ಪ್ರೀತಿಸುವ ಮಿಲಿಯನ್ ಕಾರಣಗಳಲ್ಲಿ ಕೆಲವು ಮಾತ್ರ. ನನ್ನ ನಗುವಿನ ಹಿಂದಿನ ಕಾರಣ ನೀನು. ನಮ್ಮ ಜೀವನ ತುಂಬಾ ಸಂತೋಷವಾಗಿ ನಡೆದುಕೊಂಡು ಬರಲು ಕಾರಣ ನೀನೆ. ಪ್ರತಿದಿನ ಮತ್ತು ಎಂದೆಂದಿಗೂ ನನ್ನ ಆತ್ಮ ಸಂಗಾತಿಯಾಗಿರುವುದು ನನ್ನ ಪುಣ್ಯ. ಜನ್ಮ ದಿನದ ಶುಭಾಶಯಗಳು' ಎಂದು ದೀರ್ಘವಾಗಿ ಬರೆದುಕೊಂಡಿದ್ದಾರೆ.

MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಪತ್ನಿಯ ಹುಟ್ಟುಹಬ್ಬಕ್ಕೆ ಕೋಟಿ ಬೆಲೆಯ ಮರ್ಸಿಡಿಸ್ ಬೆಂಝ್ ಕಾರು ಗಿಫ್ಟ್ ನೀಡಿದ ಜನಪ್ರಿಯ ಬಾಲಿವುಡ್ ನಟ

ಬಾಲಿವುಡ್ ಜನಪ್ರಿಯ ನಟ ತಮ್ಮ ಪ್ರಿತಿಯ ಮಡದಿಗೆ ಐಷಾರಾಮಿ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಕಾರನ್ನು ಗಿಫ್ಟ್ ಕೊಟ್ಟಿದ್ದಾರೆ. ಇನ್ನು ಅನಿಲ್ ಕಪೂರ್ ಇನ್‌ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಸುನೀತಾ ಅವರು ಧನ್ಯವಾದಗಳನ್ನು ಹೇಳಿದ್ದಾರೆ. ಈ ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಕಾರು ಮನೆ ಮುಂದೆ ಪಾರ್ಕ್ ಮಾಡಿರುವ ಚಿತ್ರವನ್ನು ಕೂಡ ಹಂಚಿಕೊಂಡಿದ್ದಾರೆ.

ಪತ್ನಿಯ ಹುಟ್ಟುಹಬ್ಬಕ್ಕೆ ಕೋಟಿ ಬೆಲೆಯ ಮರ್ಸಿಡಿಸ್ ಬೆಂಝ್ ಕಾರು ಗಿಫ್ಟ್ ನೀಡಿದ ಜನಪ್ರಿಯ ಬಾಲಿವುಡ್ ನಟ

ಇನ್ನು ನಟ ಅನಿಲ್ ಕಪೂರ್ ತಮ್ಮ ಪತ್ನಿ ಸುನೀತಾ ಕಪೂರ್ ಅವರಿಗೆ ಗಿಫ್ಟ್ ಕೊಟ್ಟ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಕಾರಿನ ಬಗ್ಗೆ ಹೇಳುವುದಾದರೆ, ಈ ಕಾರಿನ ಬೆಲೆಯು ರೂ.1 ಕೋಟಿಯಾಗಿದೆ. ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿಯು ಎರಡು ರೂಪಾಂತರಗಳಲ್ಲಿ ಲಭ್ಯವಿದೆ.

MOST READ: ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳಿವು

ಪತ್ನಿಯ ಹುಟ್ಟುಹಬ್ಬಕ್ಕೆ ಕೋಟಿ ಬೆಲೆಯ ಮರ್ಸಿಡಿಸ್ ಬೆಂಝ್ ಕಾರು ಗಿಫ್ಟ್ ನೀಡಿದ ಜನಪ್ರಿಯ ಬಾಲಿವುಡ್ ನಟ

ಆದರೆ ಇದರಲ್ಲಿ ಯಾವ ರೂಪಾಂತರವನ್ನು ನಟ ಅನಿಲ್ ಕಪೂರ್ ಖರೀದಿಸಿರುವುದು ಎಂಬುದು ತಿಳಿದುಬಂದಿಲ್ಲ. ಮರ್ಸಿಡಿಸ್ ಬೆಂಝ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಮೂರನೇ ತಲೆಮಾರಿನ ಮಾದರಿಯಾಗಿದೆ.

ಪತ್ನಿಯ ಹುಟ್ಟುಹಬ್ಬಕ್ಕೆ ಕೋಟಿ ಬೆಲೆಯ ಮರ್ಸಿಡಿಸ್ ಬೆಂಝ್ ಕಾರು ಗಿಫ್ಟ್ ನೀಡಿದ ಜನಪ್ರಿಯ ಬಾಲಿವುಡ್ ನಟ

ಈ ಮರ್ಸಿಡಿಸ್ ಜಿಎಲ್ಎಸ್ ತನ್ನ ಹಿಂದಿನ ಕಾರಿಗಿಂತ 77 ಎಂಎಂ ಮತ್ತು 22 ಎಂಎಂ ಅಗಲವನ್ನು ಹೊಂದಿದೆ. ಹೊಸ ಜಿಎಲ್ಎಸ್ ಕಾರು 60 ಎಂಎಂನಷ್ಟು ವ್ಹೀಲ್ ಬೇಸ್ ಅನ್ನು ಹೊಂದಿದೆ. ಈ ಹೊಸ ಎಸ್‍ಯುವಿ ಐಷಾರಾಮಿ ಆರು ಸೀಟುಗಳ ಕ್ಯಾಬಿನ್ ಅನ್ನು ಹೊಂದಿದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಪತ್ನಿಯ ಹುಟ್ಟುಹಬ್ಬಕ್ಕೆ ಕೋಟಿ ಬೆಲೆಯ ಮರ್ಸಿಡಿಸ್ ಬೆಂಝ್ ಕಾರು ಗಿಫ್ಟ್ ನೀಡಿದ ಜನಪ್ರಿಯ ಬಾಲಿವುಡ್ ನಟ

ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಕಾರಿನ 450 4 ಮ್ಯಾಟಿಕ್ ರೂಪಾಂತರ ಪೆಟ್ರೋಲ್ ಎಂಜಿನ್ ಹೊಂದಿದ್ದರೆ, ಜಿಎಲ್ಎಸ್ 400 ಡಿ 4 ಮ್ಯಾಟಿಕ್ ರೂಪಾಂತರ ಡೀಸೆಲ್ ಎಂಜಿನ್ ಅನ್ನು ಹೊಂದಿದೆ.

ಪತ್ನಿಯ ಹುಟ್ಟುಹಬ್ಬಕ್ಕೆ ಕೋಟಿ ಬೆಲೆಯ ಮರ್ಸಿಡಿಸ್ ಬೆಂಝ್ ಕಾರು ಗಿಫ್ಟ್ ನೀಡಿದ ಜನಪ್ರಿಯ ಬಾಲಿವುಡ್ ನಟ

ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಕಾರಿನ 450 4 ಮ್ಯಾಟಿಕ್ ರೂಪಾಂತರದಲ್ಲಿ 3.0-ಲೀಟರ್ ಇನ್-ಲೈನ್ ಸಿಕ್ಸ್-ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಬ್ರ್ಯಾಂಡ್ ನ ಇಕ್ಯೂ ಬೂಸ್ಟ್ ಸಿಸ್ಟಂಗೆ ಜೋಡಿಸಲಾಗಿದೆ

ಪತ್ನಿಯ ಹುಟ್ಟುಹಬ್ಬಕ್ಕೆ ಕೋಟಿ ಬೆಲೆಯ ಮರ್ಸಿಡಿಸ್ ಬೆಂಝ್ ಕಾರು ಗಿಫ್ಟ್ ನೀಡಿದ ಜನಪ್ರಿಯ ಬಾಲಿವುಡ್ ನಟ

ಈ ಎಂಜಿನ್ 362 ಬಿಹೆಚ್‍ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇನ್ನು ಜಿಎಲ್ಎಸ್ 400 ಡಿ 4 ಮ್ಯಾಟಿಕ್ ರೂಪಾಂತರವು 2.9-ಲೀಟರ್ ಇನ್-ಲೈನ್ ಆರು ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 362 ಬಿಹೆಚ್‍ಪಿ ಪವರ್ ಮತ್ತು 700 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಪತ್ನಿಯ ಹುಟ್ಟುಹಬ್ಬಕ್ಕೆ ಕೋಟಿ ಬೆಲೆಯ ಮರ್ಸಿಡಿಸ್ ಬೆಂಝ್ ಕಾರು ಗಿಫ್ಟ್ ನೀಡಿದ ಜನಪ್ರಿಯ ಬಾಲಿವುಡ್ ನಟ

ಈ ಹೊಸ ಎಸ್‍ಯುವಿಯ ಇಂಟಿರಿಯರ್ ನಲ್ಲಿ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂನೊಂದಿಗೆ ಬ್ರ್ಯಾಂಡ್‌ನ ಎಂಬಿಎಕ್ಸ್ ತಂತ್ರಜ್ಞಾನ, ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಪನೋರಮಿಕ್ ಸನ್‌ರೂಫ್, 64-ಬಣ್ಣದ ಆಂಬಿಯೆಂಟ್ ಲೈಟಿಂಗ್ ಮತ್ತು 5 ಹಂತದ ಕ್ಲೈಮೆಂಟ್ ಕಂಟ್ರೋಲ್ ಅನ್ನು ಹೊಂದಿದೆ.ಈ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಭಾರತೀಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಎಕ್ಸ್7 ಎಸ್‍ಯುವಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
English summary
Anil Kapoor Gifts Mercedes-Benz Gls On Her Birthday. Read In Kannada.
Story first published: Saturday, March 27, 2021, 16:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X