ಅಣ್ಣಾ ಕಾರು ಹರಾಜಿಗಿದೆ, ಬಿಡ್ ಮಾಡಬರುವಿರಾ?
ಜನ ಲೋಕಪಾಲ ಮಸೂದೆ ಜಾರಿಗೆ ತರುವ ನಿಟ್ಟಿನಲ್ಲಿ ನಡೆಸಿದ ಹೋರಾಡಕ್ಕೆ ಮುಂದಾಳತ್ವ ನೀಡಿರುವ ನಾಯಕರಲ್ಲಿ ಓರ್ವರಾಗಿರುವ ಜೀವಂತ ದಿಗ್ಗಜ ಹಾಗೂ ಗಾಂಧಿವಾದಿ ಅಣ್ಣಾ ಹಜಾರೆ ಬಳಕೆ ಮಾಡಿರುವ ಕ್ರೀಡಾ ಬಳಕೆಯ ವಾಹನವೊಂದು ಮಾರಾಟಕ್ಕಿಡಲಾಗಿದೆ. ಅಷ್ಟಕ್ಕೂ ನೀವು ಬಿಡ್ ಮಾಡಬಯಸುವೀರಾ?
ಹೌದು, ಜನ ಲೋಕಪಾಲ ಮಸೂದೆ ಜಾರಿಗೆ ಸಂಬಂಧಪಟ್ಟಂತೆ ಇದೇ ಕಾರಿನಲ್ಲಿ ಹಜಾರೆ ಅವರು ಪ್ರಚಾರ ನಡೆಸಿ ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸಿದ್ದರು. ಅಷ್ಟಕ್ಕೂ ಹಜಾರೆ ಬಳಕೆ ಮಾಡಿರುವ ಕಾರು ಯಾವುದು ಗೊತ್ತೇ? ಬನ್ನಿ ನೋಡೋಣ.

2011ರಲ್ಲಿ ಭ್ರಷ್ಟ ರಾಜಕಾರಣಿಗಳನ್ನು ಸದೆಬಡಿಯಲು ಎದೆ ತಟ್ಟಿ ನಿಂತಿದ್ದ ಅಣ್ಣಾ ಹಜಾರೆ ಅವರು ಮಹೀಂದ್ರ ಸ್ಕಾರ್ಪಿಯೊ ಕ್ರೀಡಾ ಬಳಕೆಯ ವಾಹನದಲ್ಲಿ ಜನ ಲೋಕಪಾಲ ಮಸೂದೆಗೆ ಸಂಬಂಧಪಟ್ಟಂತೆ ಪ್ರಚಾರ ನಡೆಸಿದ್ದರು.

ಇದನ್ನವರು ಅವರು ನಡೆಸುಕೊಂಡು ಬರುತ್ತಿರುವ ಸ್ವಾಮಿ ವಿವೇಕಾನಂದ ಕೃತುದಂತ ನಿಧಿ ಟ್ರಸ್ಟ್ ನಿಂದ ಖರೀದಿಸಿದ್ದರು.

ನಿರಂತರ ಪಯಣದಿಂದಾಗಿ ಅಣ್ಣಾ ಹಜಾರೆಗೆ ಬೆನ್ನು ನೋವು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ 77ರ ಹರೆಯದ ಈ ಹಿರಿಯ ಸಾಮಾಜಿಕ ಕಾರ್ಯಕರ್ತನ ಕಾರೀಗ ಹರಾಜಿಗಿಡಲಾಗಿದೆ.

ಇದೀಗ ಇದರಲ್ಲಿ ಸಂಗ್ರಹಿಸಲಾಗುವು ಹರಾಜಿನ ಮೊತ್ತದಿಂದ ಹೆಚ್ಚು ಸೌಲಭ್ಯದ ಇನ್ನೋವಾ ಕಾರನ್ನು ಖರೀದಿಸುವ ಯೋಜನೆಯಿದೆ.

ಪ್ರಸ್ತುತ ಸ್ಕಾರ್ಪಿಯೊ ಕಾರನ್ನು ಮೇ17ರಂದು ಅಣ್ಣಾ ಅವರ ಹುಟ್ಟೂರಾದ ಮಹಾರಾಷ್ಟ್ರ ರಾಲೇಗಾಂವ್ ಸಿದ್ಧಿಯಲ್ಲಿ ಹರಾಜಿಗಿಡಲಾಗುವುದು.

ದೇಶದ ಪ್ರಧಾನಿ ನರೇಂದ್ರ ಮೋದಿ ಕೂಡಾ ಪ್ರಧಾನ ಮಂತ್ರಿ ಪಟ್ಟಕ್ಕೇರುವ ಮುನ್ನ ತಮ್ಮ ಚಟುವಟಿಕೆಗಳಿಗಾಗಿ ಮಹೀಂದ್ರ ಸ್ಕಾರ್ಪಿಯೊ ಕಾರನ್ನೇ ಬಳಕೆ ಮಾಡುತ್ತಿದ್ದರು.


Click it and Unblock the Notifications








