ರಾಕೆಟ್ ಸ್ಪೋಟ; ದಿಗ್ಭ್ರಮೆಗೊಳಿಸುವ ನಾಸಾ ಚಿತ್ರಗಳು ಬಿಡುಗಡೆ
ಉಡಾವಣೆಗೊಂಡ ಕೆಲವೇ ಕ್ಷಣಗಳಲ್ಲಿ ರಾಕೆಟ್‌ವೊಂದು ಸ್ಪೋಟಗೊಂಡಲ್ಲಿ ಪರಿಸ್ಥಿತಿ ಹೇಗಿರಬಹುದು? ಅತಿ ಸುರಕ್ಷಾ ವಲಯದಿಂದ ಮಾತ್ರ ರಾಕೆಟ್ ಉಡಾವಣೆ ಮಾಡುವುದು ಸಾಮಾನ್ಯ. ಇದಕ್ಕಾಗಿ ಬಹುತೇಕ ಸಂದರ್ಭಗಳಲ್ಲಿ ಸಮುದ್ರ ಪ್ರದೇಶವನ್ನೇ ಆಯ್ಕೆ ಮಾಡಲಾಗುತ್ತದೆ. ಏನಾದರೂ ಹೆಚ್ಚು ಕಡಿಮೆಯಾದ್ದಲ್ಲಿ ರಾಕೆಟ್ ನೇರವಾಗಿ ಸಾಗರದಲ್ಲಿ ಲೀನವಾಗುತ್ತದೆ.
Also Read: ಭಾರತದ ಐತಿಹಾಸಿಕ ಮಂಗಳಯಾನ
ಇಂತಹದೊಂದು ದಿಗ್ಭ್ರಮೆಗೊಳಿಸುವ ಚಿತ್ರಗಳನ್ನು ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಬಿಡುಗಡೆಗೊಳಿಸಿದೆ. ಈ ದುರಂತ ಘಟನೆಯ ಸಮಗ್ರ ಮಾಹಿತಿಗಾಗಿ ಚಿತ್ರಪುಟದತ್ತ ಮುಂದುವರಿಯಿರಿ.

ಅಂದ ಹಾಗೆ ಕಳೆದ ವರ್ಷ ವರ್ಜಿನಿಯಾದ ಬಾಹ್ಯಾಕಾಶ ಕೇಂದ್ರದಲ್ಲಿ ನಡೆದ ಘಟನೆಯಿದು. ಎಲ್ಲ ಪೂರ್ವ ತಯಾರಿಗಳೊಂದಿಗೆ ಆಂಟೆರಸ್ ರಾಕೆಟ್ ಉಡಾವಣೆಗೆ (Antares rocket) ಸಿದ್ಧಗೊಂಡಿತ್ತು.

ಆದರೆ ತಾಂತ್ರಿಕ ದೋಷಗಳಿಂದಾಗಿ ರಾಕೆಟ್ ಎಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬೆನ್ನಲ್ಲೇ ಮಹಾ ವಿಸ್ಪೋಟ ಸಂಭವಿಸಿತ್ತು. ಕ್ಷಣಾರ್ಧದಲ್ಲಿ ಬೆಂಕಿ ಜ್ವಾಲೆಗಳು ಇಡೀ ಪ್ರದೇಶವನ್ನೇ ಆವರಿಸ್ಪಟ್ಟಿತ್ತು.

ಇದರೊಂದಿಗೆ ಹಲವಾರು ಕನಸು ಕಟ್ಟಿಕೊಂಡು ಗಗನಕ್ಕೆ ಹಾರಿದ ರಾಕೆಟ್ ದೊಪ್ಪನೆ ಕೆಳಕ್ಕೆ ಬಿದ್ದಿತ್ತು.

ಇದೀಗ ಒಂದು ವರ್ಷದ ಬಳಿಕ ಬೆರಗುಗೊಳಿಸುವ ಚಿತ್ರಗಳನ್ನು ನಾಸಾ ಬಿಡುಗಡೆ ಮಾಡಿದೆ. ರಾಕೆಟ್ ದುರಂತ ಘಟನೆಯ ತೀವ್ರತೆಯು ಎಷ್ಟರ ಮಟ್ಟಿನಲ್ಲಿತ್ತು ಎಂಬುದಕ್ಕೆ ನಾಸಾ ರವಾನಿಸಿರುವ ಚಿತ್ರಗಳು ಜೀವಂತ ಸಾಕ್ಷಿಯಾಗಿ ಉಳಿದಿದೆ.

ನಾಸಾ ಪ್ರಾಥಮಿಕ ತನಿಖೆಯ ಪ್ರಕಾರ ಲಿಕ್ವಿಡ್ ಓಕ್ಸಿಜನ್ ಟರ್ಬೊ ಪಂಪ್ ಗಳಲ್ಲಿ ಸಂಭವಿಸಿರುವ ಘರ್ಷಣೆಯಿಂದಾಗಿ ಬೆಂಕಿಯ ಕಿಡಿಗಳು ಕಾಣಲಾರಂಭಿಸಿತ್ತು.

ಬಳಿಕ ಟರ್ಬೊ ಪಂಪ್ ಸ್ಪೋಟಗೊಂಡಿರುವುದರಿಂದ ಬೆಂಕಿ ಜ್ವಾಲೆಗಳು ಇಡೀ ರಾಕೆಟನ್ನು ಆವರಿಸಿತ್ತು.

ಪರಿಸ್ಥಿತಿ ಕೈ ಮೀರಿ ಹೋಗಿರುವುದರಿಂದ ರಾಕೆಟ್ ಕಂಟ್ರೋಲ್ ರೂಂನಲ್ಲಿದ್ದ ವಿಜ್ಞಾನಿಗಳು ಕೈಕಟ್ಟಿ ಕುಳಿತುಕೊಳ್ಳುವುದಲ್ಲದೆ ಅನ್ಯ ದಾರಿಯಿರಲಿಲ್ಲ.

ಈ ರಾಕೆಟ್ ದುರಂತ ಘಟನೆಯು ಕಳೆದ ವರ್ಷ ಅಕ್ಟೋಬರ್ 28ರಂದು ನಡೆದಿತ್ತು ಎಂಬುದನ್ನು ನಾಸಾ ಬಹಿರಂಗಪಡಿಸಿದೆ.

ಅಮೆರಿಕ ವಿಜ್ಞಾನ ಪ್ರಯೋಗಗಳಿಗೆ ಆಂಟೆರಸ್ ರಾಕೆಟ್ ಬಾಹ್ಯಾಕಾಶಕ್ಕೆ ಒಟ್ಟು 2293 ಕೆ.ಜಿ. (5,055 ಪೌಂಡು) ಉಪಕರಣಗಳನ್ನು ಹೊತ್ತೊಯ್ಯುವ ಗುರಿ ಹೊಂದಿತ್ತು.

ಈ ಎಲ್ಲದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಿರಿ.

ಅಗ್ನಿ ಕ್ಷಿಪಣಿ: ಪ್ರತಿಯೊಬ್ಬ ಭಾರತೀಯನೂ ತಿಳಿದಿರಬೇಕಾದ ಅಂಶಗಳು


Click it and Unblock the Notifications








