ಹಿಗ್ಗುವ ಕಾರು, ಕುಗ್ಗುವ ಕಾರು; ಇದೆಂಥ ಮಾಯೆ?
ಸದಾ ಹೊಸತನದ ತಂತ್ರಗಾರಿಕೆಗೆ ಪ್ರೋತ್ಸಾಹ ತುಂಬುತ್ತಿರುವ ಆಟೋಮೊಬೈಲ್ ಕ್ಷೇತ್ರದಲ್ಲಿ ನೂತನ ಕಾರಿನ ಪರಿಕಲ್ಪನೆಯೊಂದು ತಲೆದೋರಿದೆ. ಅದರ ವಿಶೇಷವೆಂದರೆ ಹಿಗ್ಗುತ್ತೇ, ಕುಗ್ಗತ್ತೇ! ಹೌದು, ಇದನ್ನು ಕೇಳಿದಾಕ್ಷಣ ಸಹಜವಾಗಿಯೇ ನಮ್ಮಲ್ಲೂ ಆಶ್ಚರ್ಯಕ್ಕೆ ಕಾರಣವಾಗಿತ್ತು.
4 ಪ್ಲಸ್ 2 ಸೀಟು ವ್ಯವಸ್ಥೆಯನ್ನು ಹೊಂದಿರುವ ಅಪೆಂಡಿಕ್ಸ್ (Apendix) ಕಾನ್ಸೆಪ್ಟ್ ಕ್ರಾಸೋವರ್ ಹಿಂದುಗಡೆ ಮರ್ಸಿಡಿಸ್ ಬೆಂಝ್ ಎಸ್‌ಎಲ್‌ಎಸ್ ಎಎಂಜಿ ತರಹನೇ ಬಾಗಿಲು ತೆರೆಯುತ್ತೇ ಎಂಬುದು ಮಗದೊಂದು ವೈಶಿಷ್ಟ್ಯವಾಗಿದೆ.

ಹಿಗ್ಗುವಂತಹ ದೇಹ ರಚನೆಯನ್ನು ಪಡೆದುಕೊಂಡಿರುವ ಅಪೆಂಡಿಕ್ಸ್ ಕಾನ್ಸೆಪ್ಟ್ ಕಾರಿನಲ್ಲಿ ಮೂರು ಸಾಲಿನ ಆಸನ ವ್ಯವಸ್ಥೆಯನ್ನು ಕೊಡಲಾಗಿದೆ. ಮಾಲಿಕರಿಗೆ ಇದು ಅಗತ್ಯವಿಲ್ಲದಿದ್ದಲ್ಲಿ ಎರಡು ಸಾಲುಗಳಾಗಿ ಕುಗ್ಗಿಸಬಹುದಾಗಿದೆ.

ವಾಹನ ಪ್ರೇಮಿಗಳಿಗೆ ಅರ್ಥವಾಗುವ ರೀತಿಯಲ್ಲಿ ಇದನ್ನು ಹಂಚಿಕೊಳ್ಳಲಾಗಿದೆ. ಇನ್ನು ಕೊನೆಯ ಸಾಲಿನಲ್ಲಿ ಮೇಲಕ್ಕೆ ತೆರೆಯಬಹುದಾದ ಬಾಗಿಲನ್ನು ಆಳವಡಿಸಲಾಗಿದೆ.

ಭವಿಷ್ಯತ್ತಿನ ಕಾರಿಗೆ ಪರಿಪೂರ್ಣ ಉದಾಹರಣೆಯಾಗಿರುವ ಅಪೆಂಡಿಕ್ಸ್, ವಿವಿಧ ವಿಭಾಗದ ಗ್ರಾಹಕರನ್ನು ಗುರಿಯಾಗಿರಿಸಿಕೊಂಡು ರಚಿಸಲಾಗಿದೆ. ಕೆಲವರು ಸಣ್ಣ ಕಾರನ್ನು ಇಷ್ಟಪಟ್ಟರೆ, ಫ್ಯಾಮಿಲಿ ಅಥವಾ ಕುಟಂಬ ಜೊತೆಗಿನ ಪಯಣದ ವೇಳೆ ದೊಡ್ಡ ಕಾರಿನ ಸೇವೆಯನ್ನು ಬಯಸುತ್ತಾರೆ.

ಹೀಗೆ ಕಾರು ಕೊಂಡುಕೊಂಡ ಬಳಿಕ ಬೇಸರಪಡುವ ಬದಲು ಇಂತಹದೊಂದು ಕಾರು ನಿಮ್ಮ ಬಳಿ ಸೇರಿದರೆ ನಿಮ್ಮ ಬಯಕೆಗೆ ಅನುಸಾರವಾಗಿ ಬಳಕೆ ಮಾಡಬಹುದಾಗಿದೆ.

ಇಷ್ಟೆಲ್ಲ ಆದರೂ ಇದರಲ್ಲಿ ಯಾವ ವಿಧದ ಸಸ್ಪೆನ್ಷನ್ ವ್ಯವಸ್ಥೆ ಆಳವಡಿಸಲಾಗಿದ್ದು, ಪ್ರಾಯೋಗಿಕವಾಗಿಯೂ ಇದರ ಯಶಸ್ಸು ಎಷ್ಟರ ಮಟ್ಟಿಗಿರಲಿದೆ ಎಂಬುದು ಬಹಳ ಆಸಕ್ತಿ ಕೆರಳಿಸಿದೆ.

ಏನೇ ಆದರೂ ಇದರ ಯಶಸ್ಸು ಅಥವಾ ವೈಫಲ್ಯ ಆಮೇಲಿನ ವಿಚಾರ. ಇಂತಹದೊಂದು ನಾವೀನ್ಯ ತಂತ್ರಗಾರಿಕೆಗೆ ಮೊರೆ ಹೋಗಿರುವ ಎಂಜಿನಿಯರ್ ಗಳ ಪ್ರಯತ್ನವನ್ನು ಮೆಚ್ಚಲೇಬೇಕು.


Click it and Unblock the Notifications








