ಅಮೆರಿಕ ನಟನ 13 ಕೋಟಿಯ ಲಗ್ಷುರಿ ಮೊಬೈಲ್ ಹೋಮ್
ದುಡ್ಡಿದ್ದವನೇ ದೊಡ್ಡಪ್ಪ! ಎನ್ನುವ ರೀತಿಯಲ್ಲಿ ಸೆಲೆಬ್ರಿಟಿಗಳು ವಿಶೇಷವಾಗಿ ಹಾಲಿವುಡ್ ನಟ, ನಟಿಯರು ತಮ್ಮದೇ ಆದ ಮೋಟಾರು ಹೋಮ್ ಅಥವಾ ಮೊಬೈಲ್ ಹೋಮ್ ಹೊಂದಿರುತ್ತಾರೆ.
ಸಕಲ ರೀತಿಯ ಆಡಂಬರ ಸೌಲಭ್ಯಗಳನ್ನು ಹೊಂದಿರುವ ಇಂತಹ ಮೊಬೈಲ್ ಎಸ್ಟೇಟುಗಳು ಹಾಲಿವುಡ್‌ನಲ್ಲಿ ಭಾರಿ ಜನಪ್ರಿಯತೆ ಗಿಟ್ಟಿಸಿಕೊಂಡಿದೆ. ಇದಕ್ಕೊಂದು ಸೇರ್ಪಡೆಯೆಂಬಂತೆ ಅಮೆರಿಕದ ಜನಪ್ರಿಯ ನಟ ಆಸ್ಟನ್ ಕುಚ್ಚರ್ (Ashton Kutcher) 13 ಕೋಟಿಗಿಂತಲೂ ದುಬಾರಿಯೆನಿಸಿರುವ ಮೊಬೈಲ್ ಎಸ್ಟೇಟ್ ತಮ್ಮದಾಗಿಸಿಕೊಂಡಿದ್ದಾರೆ.

ಜನಪ್ರಿಯತೆ
ಅಮೆರಿಕ, ಬ್ರಿಟನ್ ಹಾಗೂ ಕೆನಡಾ ದೇಶಗಳಲ್ಲಿ ಮೋಟಾರು ಹೋಮ್‌ಗಳು ಜನಪ್ರಿಯವೆನಿಸಿದೆ. ಸದ್ಯ ಅಮೆರಿಕ ನಟ ಆಸ್ಟನ್ ಬಳಿಯಿರುವ ದುಬಾರಿ ಮೊಬೈಲ್ ಎಸ್ಟೇಟ್ ಐಷಾರಾಮಿ ಸೌಲಭ್ಯಗಳನ್ನು ಹೊಂದಿದೆ.

ಸುತ್ತಳತೆ
ಈ ಲಗ್ಷುರಿ ಮೊಬೈಲ್ ಎಸ್ಟೇಟ್, 53 ಫೀಟ್ ಉದ್ದ, 30 ಟನ್ ಭಾರವನ್ನು ಹೊಂದಿದೆ. ಹಾಗೆಯೇ ಒಟ್ಟು 1,100 ಚದರ ಅಡಿ ಸುತ್ತಳತೆಯನ್ನು ಪಡೆದಿದೆ.

ಲಿವಿಂಗ್ ಪ್ರದೇಶ
ಮೋಟಾರು ಹೋಮ್ ಒಳಗಡೆ ವಿಶಾಲವಾದ ಲಿವಿಂಗ್ ಪ್ರದೇಶ, ಎರಡು ಸ್ನಾನಗೃಹಗಳು, ಗ್ರಾನೈಟ್ ಮೇಲ್ಮೈಯ ಅಡುಗೆ ಕೋಣೆ ಹಾಗೂ ಕಾನ್ಫೆರನ್ಸ್ ರೂಮ್ ಪಡೆದಿದೆ.

ವಿನ್ಯಾಸ
ಆಂಡ್ರೆಸನ್ ಮೊಬೈಲ್ ಎಸ್ಟೇಟ್‌ನ ರಾನ್ ಆಂಡ್ರೆಸನ್ ಈ ಆಡಂಬರದ ಲಗ್ಷುರಿ ವಿಲ್ಲಾವನ್ನು ವಿನ್ಯಾಸಗೊಳಿಸಿದ್ದಾರೆ.

ಪೀಠೋಪಕರಣ
ಪೀಠೋಪಕರಣ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದು, ಅಗತ್ಯಕ್ಕೆ ಅನುಸಾರವಾಗಿ ಮಡಚಬಹುದಾಗಿದೆ.

ವಿಂಡ್ ಸೆನ್ಸಾರ್
ಅತ್ಯಾಧುನಿಕ ತಂತ್ರಜ್ಞಾನ ಆಳವಡಿಸಲಾಗಿದ್ದು, ಇದರಲ್ಲಿ ಗಾಳಿ ಸೆನ್ಸಾರ್‌ಗಳಿದ್ದು, ಹವಾಮಾನ ವೈಪರೀತದಲ್ಲಿ ಸ್ವಯಂಚಾಲಿತವಾಗಿ ಹಿಂದೆ ಸರಿದುಕೊಳ್ಳುತ್ತದೆ.

ವೈಶಿಷ್ಟ್ಯ
ಮೊಬೈಲ್ ಹೋಮ್ ಒಳಗಡೆ ವೈರ್‌ಲೆಸ್ ಟಚ್‌ಸ್ಕ್ರೀನ್, ಎಸಿ ಮುಂತಾದ ಸೌಲಭ್ಯಗಳಿವೆ.

ಸುರಕ್ಷತೆ
ಇನ್ನು ಸುರಕ್ಷತೆಗೂ ಹೆಚ್ಚಿನ ಮಹತ್ವ ಕೊಡಲಾಗಿದ್ದು, ಮೋಟಾರ್ ಹೋಮ್ ಹೊರಗಡೆ 360 ಡಿಗ್ರಿಯಲ್ಲಿ ತಿರುಗುವ ಕ್ಯಾಮೆರಾಗಳನ್ನು ಆಳವಡಿಸಲಾಗಿದೆ.

ಶ್ರೀಮಂತರಿಗಾಗಿ
ಜಗತ್ತಿನ ಅತಿ ಶ್ರೀಮಂತ ವ್ಯಕ್ತಿಗಳಿಗೆ ಮಾತ್ರ ಆಂಡ್ರೆಸನ್ ಇಂತಹ ವಿಶೇಷ ಮೋಟಾರು ಹೋಮ್‌ಗಳನ್ನು ವಿನ್ಯಾಸಗೊಳಿಸುತ್ತಿದ್ದಾರೆ. ಅಲ್ಲದೆ ತಮ್ಮ ಈ ಮೊಬೈಲ್ ಎಸ್ಟೇಟ್‌ಗಳಿಗೆ ವಿಶೇಷ ನಾಮಕರಣದಿಂದ ಗುರುತಿಸಲಾಗುತ್ತದೆ.

ವಿಶೇಷ ಹೆಸರು
ಬೇಬಿ ಗರ್ಲ್, ದಿ ಹೀಟ್, ಸ್ಟುಡಿಯೋ ಒನ್ ಹಾಗೂ ಆಸ್ಪೆನ್ ಸೇರಿದಂತೆ ಒಂಬತ್ತು ಮೊಬೈಲ್ ಯುನಿಟ್‌ಗಳನ್ನು ಈ ವರೆಗೆ ಮಾರಾಟ ಮಾಡಲಾಗಿದೆ.

ದಿ ಹೀಟ್
ಅಂದ ಹಾಗೆ ಅಮೆರಿಕ ನಟ ಆಸ್ಟನ್ ಎರಡು ಮಹಡಿಯ ದಿ ಹೀಟ್ ತಮ್ಮದಾಗಿಸಿಕೊಂಡಿದ್ದಾರೆ.


Click it and Unblock the Notifications








